Gruhalakshmi application: ಗೃಹಲಕ್ಷ್ಮಿ ಅರ್ಜಿ ಈ ರೀತಿಯಾದಲ್ಲಿ ನಿಮಗೆ ಹಣ ಬರುವುದಿಲ್ಲ!

November 2, 2023 | Siddesh

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಮತ್ತು ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಅರ್ಜಿಯಲ್ಲಿ ಈ ಅಂಕಣದಲ್ಲಿ ವಿವರಿಸಿದ ರೀತಿಯಲ್ಲಿ ಅರ್ಜಿಯಲ್ಲಿ ತೊಂದರೆ ಅಗಿದಲ್ಲಿ ಅಂತವರಿಗೆ ಈ ಯೋಜನೆಯ ಹಣ ಬರುವುದಿಲ್ಲ.

ರಾಜ್ಯದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅರ್ಥಿಕವಾಗಿ ಹಿಂದುಳಿದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತು ಕುಟುಂಬದ ಯಜಮಾನಿ ಮಹಿಳೆಗೆ ಅರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ನೆರವಾಗುವ ದೇಸೆಯಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಈ ಯೋಜನೆಯ ಮೂಲಕ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ 2,000 ಹಣ ನೇರ ನಗದು ವರ್ಗಾವಣೆ(DBT) ಮೂಲಕ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

Gruhalakshmi DBT status- ಗೃಹಲಕ್ಷ್ಮಿ ಅರ್ಜಿ ಈ ರೀತಿಯಾದಲ್ಲಿ ನಿಮಗೆ ಹಣ ಬರುವುದಿಲ್ಲ:

ಈ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದರು ಇನ್ನು ಸಹ ಅನೇಕ ಜನರಿಗೆ ಹಣ ಬಂದಿರುವುದಿಲ್ಲ ಈ ಕುರಿತು ಸಂಬಂದಪಟ್ಟ ಇಲಾಖೆಯಿಂದ ಕಾರಣಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲದವರು, ರೇಷನ್ ಕಾರ್ಡ ಮತ್ತು ಅಧಾರ್ ಕಾರ್ಡ ಹೆಸರು ಹೊಂದಾಣಿಕೆ ಅಗದವರಿಗೆ ಅರ್ಜಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದರು ಹಣ ಬಂದಿರುವುದಿಲ್ಲ.

ಇದರ ಜೊತೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಮತ್ತು ಅರ್ಜಿ ಸಲ್ಲಿಸಲು ಬಾಕಿ ಇರುವವರು ತಮ್ಮ ಆಧಾರ್ ಕಾರ್ಡ ಹೆಸರನ್ನು ತಿದ್ದುಪಡಿ ಮಾಡಿಕೊಂಡು ನಂತರ ತಿದ್ದುಪಡಿ ಹೆಸರನ್ನು ನಿಮ್ಮ ಬ್ಯಾಂಕ್ ಖಾತೆ ಮತ್ತು ಪಡಿತರ ಚೀಟಿಯಲ್ಲಿ ನವೀಕರಿಸದವರಿಗೂ ಸಹ ಗೃಹಲಕ್ಷ್ಮಿ ಹಣ ಬರುವುದಿಲ್ಲ.

ಉದಾಹರಣೆ ಸಹಿತ ಹೇಳುವುದಾದರೆ ಮೊದಲು ನಿಮ್ಮ ಆಧಾರ್ ಕಾರ್ಡ ನಲ್ಲಿ ನಿಮ್ಮ ಹೆಸರು Pushpha H G ಎಂದು ಇರುತ್ತದೆ ಎಂದುಕೊಳ್ಳಿ ನಂತರ ನೀವು ನಿಮ್ಮ ಹೆಸರನ್ನು ಆಧಾರ್ ಕಾರ್ಡನಲ್ಲಿ ಸರಿಯಾಗಿ ನಮೂದಿಸಲು ತಿದ್ದುಪಡಿಗೆ ಅರ್ಜಿ ಸಲ್ಲಿಸಿ Pushpa A G ಎಂದು  ಸರಿಪಡಿಸಿಕೊಳ್ಳುತೀರಿ ಇದಾದ ಬಳಿಕ ನೀವು ಈ ಮೊದಲು ಬ್ಯಾಂಕ್ ಖಾತೆ ತೆರೆಯುವಾಗ ಹಳೆಯ ಆಧಾರ್ ಹೆಸರಿನ ಮೇಲೆ ಬ್ಯಾಂಕ್ ಖಾತೆಯಿರುತ್ತದೆ ಅದನ್ನು ನೀವು ಹೊಸ ತಿದ್ದುಪಡಿ ಆಧಾರ್ ಹೆಸರಿನಂತ ಬದಲಾಹಿಸಬೇಕು ಮತ್ತು ಪಡಿತರ ಚೀಟಿಯಲ್ಲಿಯೂ ಸಹ ನವೀಕರಿಸಿದ ಹೆಸರನ್ನು ಬದಲಿಸಿದ ಬಳಿಕವೇ ನಿಮಗೆ ಗೃಹಲಕ್ಷ್ಮಿ ಹಣ ಬರುತ್ತದೆ.

ಇಲ್ಲವಾದಲ್ಲಿ ನೇರ ನಗದು ವರ್ಗಾವಣೆ ಮಾಡಿದಾಗ "name mismatch" ಎಂದು ಹಣ ವರ್ಗಾವಣೆ ಸ್ಥಗಿತವಾಗುತ್ತದೆ. ಈ ತಾಂತ್ರಿಕ ಸಮಸ್ಯೆಯಿರುವವರಿಗೆ ಅರ್ಜಿ ಸಲ್ಲಿಸಲು ಸಹ ತೊಂದರೆ ಅಗುತ್ತಿದೆ ಎಂದು ನಮ್ಮ ಪುಟದ ಓದುಗರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ganga kalyana application last date-ಗಂಗಾ ಕಲ್ಯಾಣ,ಸ್ವಾವಲಂಬಿ ಸಾರಥಿ ಸೇರಿದಂತೆ ಇತರೆ 6 ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

Gruhalakshmi helplines- ಗೃಹಲಕ್ಷ್ಮಿ ಯೋಜನೆ ಕುರಿತು ವಿಚಾರಣೆಗೆ ಸಹಾಯವಾಣಿ:

ಯಶಸ್ವಿಯಾಗಿ ಅರ್ಜಿ ಸಲ್ಲಿಸಿಯೂ ಇನ್ನು ಅನೇಕ ಜನರಿಗೆ ಹಣ ಬರದಿರುವ ಕಾರಣ ಮತ್ತು ತಾಂತ್ರಿಕ ಸಮಸ್ಯೆಯಿಂದ ಇನ್ನು ಅರ್ಜಿ ಸಲ್ಲಿಸಲು ಅಗದವರು ಇರುವುದರಿಂದ ಇಂತಹ ಜನರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲು ಸಂಬಂಧಪಟ್ಟ ಇಲಾಖೆಯಿಂದ ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದ್ದು ಈ ಸಂಖ್ಯೆಗಳಿಗೆ 08022279954 / 8792662814 / 8792662816 / 1902 ಕರೆ ಮಾಡಿ ಯೋಜನೆಯ ಕುರಿತಾದ ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಳ್ಳಬವುದು.

ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್  ,ಕರ್ನಾಟಕ ಒನ್ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಬವುದು.

Gruhalakshmi scheme Grants- ಗೃಹಲಕ್ಷ್ಮಿ ಯೋಜನೆ ಅನುದಾನದ ವಿವರ:

ಈ ಯೋಜನೆಯನ್ನು ಅನುಷ್ಥಾನ ಮಾಡಲು ಮೊದಲ ಕಂತಿನ ಹಣವನ್ನು ವರ್ಗಾವಣೆ ಮಾಡಲು ಆಗಸ್ಟ್ ತಿಂಗಳಲ್ಲಿ ನೊಂದವಣೆ ಮಾಡಿಕೊಂಡು 1.08 ಕೋಟಿ ಅರ್ಹ ಫಲಾನುಭವಿಗಳಿಗೆ ರೂ 2,000 ಹಣ ವರ್ಗಾವಣೆ ಮಾಡಲು 2,169 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿತ್ತು.

ಅದೇ ರೀತಿ 2ನೇ ಕಂತಿನ ಹಣವನ್ನು ವರ್ಗಾವಣೆ ಮಾಡಲು ಸೆಪ್ಟಂಬರ್ ತಿಂಗಳವರೆಗೆ ನೊಂದಣಿ ಮಾಡಿಕೊಂಡು ಒಟ್ಟು 1.14 ಕೋಟಿ ಫಲಾನುಭವಿಗಳಿಗೆ ರೂ 2,000 ಹಣವನ್ನು ಹಾಕಲು 2,280 ಕೋಟಿ ಹಣವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ.

ಗೃಹಲಕ್ಷ್ಮಿ ಹಣ ಜಮಾ ಅಗದಿರಲು ಕಾರಣಗಳ ಟಿಪ್ಪಣಿ ಪ್ರತಿ:

ಇದನ್ನೂ ಓದಿ: Free CCTV Installation training: ಉಚಿತ ಅಣಬೆ ಬೇಸಾಯ, ಸಿಸಿಟಿವಿ ಕ್ಯಾಮೆರಾ  ಇನ್ಸ್ಟಾಲೇಶನ್ ತರಬೇತಿಗೆ ಅರ್ಜಿ ಆಹ್ವಾನ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: