Jamininna Ottuvari- 1.41 ಕೋಟಿ ಸರಕಾರಿ ಜಮೀನು ಭೂ ಒತ್ತುವರಿ ತೆರವು ಮಹತ್ವದ ಯೋಜನೆ ಜಾರಿ!

ರಾಜ್ಯದ್ಯಂತ ಸರಕಾರಿ ಜಮೀನನ್ನು ಸಮರ್ಪಕವಾಗಿ ರಕ್ಷಣೆ ಮಾಡಲು ಕಂದಾಯ ಇಲಾಖೆಯಿಂದ ಕೆಲವು ದಿನಗಳ ಹಿಂದೆ "ಲ್ಯಾಂಡ್ ಬೀಟ್"(land beat app)ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿ ಡಿಜಿಟಲ್ ವ್ಯವಸ್ಥೆಯಲ್ಲಿ ಸರಕಾರಿ ಜಮೀನಿನ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು, ಈಗ ಇದರ ಮುಂದಿನ ಕ್ರಮ ಒತ್ತುವರಿ ತೆರವು ಕುರಿತು ಕಂದಾಯ ಸಚಿವರು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. land beat app, Jamininna Ottuvari teravu, Jamininna Ottuvari mahiti, how to link rtc aadhar, pahani, revenue department, kandaya elake, rtc aadhr link, aadhar rtc link, rtc aadhar link, bhoomi rtcrtc, rtc aadhar link status, aadhar rtc link, aadhar link rtc online status, ಪಹಣಿ, ಆಧಾರ್ ಲಿಂಕ್, ಜಮೀನಿನ ಒತ್ತುವರಿ, ಕಂದಾಯ ಇಲಾಖೆ, ಪಹಣಿ ಆಧಾರ್ ಲಿಂಕ್

Jamininna Ottuvari- 1.41 ಕೋಟಿ ಸರಕಾರಿ ಜಮೀನು ಭೂ ಒತ್ತುವರಿ ತೆರವು ಮಹತ್ವದ ಯೋಜನೆ ಜಾರಿ!
land beat app

ರಾಜ್ಯದ್ಯಂತ ಸರಕಾರಿ ಜಮೀನನ್ನು ಸಮರ್ಪಕವಾಗಿ ರಕ್ಷಣೆ ಮಾಡಲು ಕಂದಾಯ ಇಲಾಖೆಯಿಂದ ಕೆಲವು ದಿನಗಳ ಹಿಂದೆ "ಲ್ಯಾಂಡ್ ಬೀಟ್"(land beat app)ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿ ಡಿಜಿಟಲ್ ವ್ಯವಸ್ಥೆಯಲ್ಲಿ ಸರಕಾರಿ ಜಮೀನಿನ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು, ಈಗ ಇದರ ಮುಂದಿನ ಕ್ರಮ ಒತ್ತುವರಿ ತೆರವು ಕುರಿತು ಕಂದಾಯ ಸಚಿವರು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದರೊಟ್ಟಿಗೆ ಲ್ಯಾಂಡ್ ಬೀಟ್ ಅಪ್ಲಿಕೇಶನ್ ಹೇಗೆ ಬಳಕೆ ಮಾಡಲಾಗುತ್ತದೆ? ಪಹಣಿಗೆ ಆಧಾರ್ ಲಿಂಕ್ ಯೋಜನೆ ಮಾಹಿತಿ, ಒತ್ತುವರಿ ತೆರವು ರೈತರ ಮೇಲೆ ಪರಿಣಾಮ ಬೀರಲಿದೆಯೇ? ಪೋಡಿ ಅಭಿಯಾನದ ಕುರಿತು ಸಹ ಈ ಲೇಖನದಲ್ಲಿ ತಿಳಿಸಲಾಗಿದೆ.

ಕಂದಾಯ ಇಲಾಖೆಯು ಕಳೆದ ಅನೇಕ ವರ್ಷಗಳಿಂದ ಹಳೆಯ ವ್ಯವಸ್ಥೆಯನ್ನೆ ಆಧಾರಿಸಿ ತನ್ನ ಇಲಾಖೆಯ ಯೋಜನೆಗಳನ್ನು/ಕಾರ್ಯಕ್ರಮಗಳನ್ನು ಅನುಷ್ಥಾನ ಮಾಡುತ್ತಿತ್ತು ಅದರೆ ಈಗ ಕೆಲವು ಕೆಲಸಗಳಿಗೆ ಡಿಜಿಟಲ್ ರೂಪವನ್ನು ನೀಡಲಾಗುತ್ತಿದ್ದು ಇದರಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗುವುದರ ಜೊತೆಗೆ ಕಂದಾಯ ಇಲಾಖೆಯ ಕೆಲಸ ತುಂಬಾ ವಿಳಂಬ ಎನ್ನುವ ಅಪಾದನೆಯಿಂದ ಸಲ್ಪ ಪ್ರಮಾಣದಲ್ಲಿ ವಿಮುಖವಾದಂತಾಗುತ್ತದೆ.

ಇದನ್ನೂ ಓದಿ: pm kisan 18th installment date- ಪಿ ಎಂ ಕಿಸಾನ್ 18ನೇ ಕಂತಿನ ಹಣ ಈ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ! ಹಣ ಪಡೆಯಲು ಇ-ಕೆವೈಸಿ ಮಾಡಿ!

land beat app- ಏನಿದು ಲ್ಯಾಂಡ್ ಬೀಟ್ ಆ್ಯಪ್?

ಒಂದು ಹಳ್ಳಿ ವ್ಯಾಪ್ತಿಯಲ್ಲಿ ಸರಕಾರಿ ಜಮೀನು ಎಷ್ಟಿದೆ ಎಂದು ಲೋಕೆಶನ್ ಆಧಾರಿತ ಜಮೀನಿನ ವಿಸ್ತೀರ್ಣ ಇತ್ಯಾದಿ ವಿವರವನ್ನು ಸಂಗ್ರಹಣೆಯನ್ನು ಈ ಅಪ್ಲಿಕೇಶನ್ ಮೂಲಕ ಮಾಡಲಾಗುತ್ತದೆ.

Jamininna Ottuvari teravu-ಒತ್ತುವರಿ ತೆರವು ಕಾರ್ಯಚರಣೆ ಹೇಗೆ ನಡೆಯಲಿದೆ?

ಲ್ಯಾಂಡ್ ಬಿಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಿಕೊಂಡು ಪ್ರಸ್ತುತ ಕಳೆದ 8 ತಿಂಗಳಿಂದ ಗ್ರಾಮ ಆಡಳಿತ ಅಧಿಕಾರಿ/ಗ್ರಾಮ ಲೆಕ್ಕಾಧಿಕಾರಿಗಳಿಂದ ತಮ್ಮ ವೃತ್ತ ವ್ಯಾಪ್ತಿ ಅಂದರೆ ಅವರ ಕೆಲಸ ಮಾಡುವ ಹಳ್ಳಿಯ ವ್ಯಾಪ್ತಿಯಲ್ಲಿ ಸರಕಾರದ ಎಲ್ಲಾ ಇಲಾಖೆಯ ಸರಕಾರಿ ಜಮೀನು ಎಷ್ಟಿದೆ ಎನ್ನುವ ವಿವರವನ್ನ್ಯ್ ಲ್ಯಾಂಡ್ ಬೀಟ್ ಮೊಬೈಲ್ ಅಪ್ಲಿಕೇಶನ್ ನಲ್ಲಿ ಲೊಕೇಷನ್ ಮತ್ತು ವಿಸ್ತೀರ್ಣ ಸೇರಿದಂತೆ ಇತ್ಯಾದಿ ಮಾಹಿತಿಯನ್ನು ಅಪ್ಲೋಡ್ ಮಾಡಲಾಗಿದ್ದು,

ಈ ಕಾರ್ಯವು ರಾಜ್ಯಾದ್ಯಂತ ಮುಕ್ತಾಯವಾಗಿದ್ದು ಒಟ್ಟು ರಾಜ್ಯದಲ್ಲಿ ಸಂಗ್ರಹಣೆ ಮಾಡಿರುವ ಮಾಹಿತಿಯನ್ವಯ ಜಿಲ್ಲಾವಾರು, ತಾಲ್ಲೂಕವಾರು ಹಾಗೂ ಗ್ರಾಮವಾರು ಮಾಹಿತಿಯನ್ನು ಸೇರಿಸಿ 1.41 ಕೋಟಿ ಎಕರೆ ಸರಕಾರಿ ಜಮೀನು ಇದೆ ಎಂದು ಗುರುತಿಸಲಾಗಿದೆ 13,04,885 ಜಾಗಗಳಿಗೆ ಖುದ್ದು ಭೇಟಿ ಮಾಡಿ ಈ ಮಾಹಿತಿಯನ್ನು ಸಂಗ್ರಹಣೆ ಮಾಡಲಾಗಿರುತ್ತದೆ. 

ಇದನ್ನೂ ಓದಿ:  bele hani parihara-80 ಸಾವಿರ ಹೆಕ್ಟೇರ್ ಬೆಳೆ ನಾಶಕ್ಕೆ ಒಂದು ವಾರದೊಳಗಾಗಿ ರೈತರ ಖಾತೆಗೆ ಬೆಳೆ ಪರಿಹಾರ: ಸಚಿವ ಕೃಷ್ಣ ಬೈರೇಗೌಡ!

ಇದರಲ್ಲಿ ಹಲವೆಡೆ ಸರಕಾರಿ ಜಮೀನು ಒತ್ತುವರಿಯಾಗಿರುವುದು ಪತ್ತೆ ಹಚ್ಚಲಾಗಿದ್ದು ಇದೆ ಸೆಪ್ಟಂಬರ್-2024 ತಿಂಗಳಿಂದ ರೈತರ ಭೂಮಿ ಬಿಟ್ಟು ಉಳಿದೆಲ್ಲಾ ಒತ್ತುವರಿ ಸರಕಾರಿ ಜಮೀನುಗಳನ್ನು ತಹಶೀಲ್ದಾರರ ಮೂಲಕ ತೆರವುಗೊಳಿಸಲಾಗುವುದು ಎಂದು ಕಂದಾಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

jamininna ottuvari-ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಕೃಷ್ಣಬೈರೇಗೌಡ

ಲ್ಯಾಂಡ್ ಬೀಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಆಧಾರಿಸಿ ಪ್ರಸ್ತುತ ಸರಕಾರಿ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಕಂದಾಯ ಇಲಾಖೆಯಿಂದ ಸೆಪ್ಟಂಬರ್ ನಲ್ಲಿ ಕೈಗೆತ್ತಿಗೊಳ್ಳುವುದರಿಂದ ಈ ಕಾರ್ಯಕ್ರಮದಿಂದಾಗಿ ರೈತರಿಗೆ ಯಾವುದೆ ಬಗ್ಗೆಯ ತೊಂದರೆಯಾಗುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದು, ಒತ್ತುವರಿ ತೆರವಿನಿಂದ ಕೃಷಿ ಸಾಗುವಳಿ ರೈತರಿಗೆ ಬಾಧಕವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Aadhar rtc link-2.12 ಕೋಟಿ ರೈತರ ಖಾತೆಗಳಿಗೆ ಆಧಾರ್ ಸೀಡಿಂಗ್ ಬಾಕಿ:

ಕಂದಾಯ ಇಲಾಖೆಯಿಂದ ರೈತರ ಜಮೀನಿನ ಖಾತೆಗಳಿಗೆ/ಪಹಣಿ/RTCಗೆ ಆಧಾರ್ ಲಿಂಕ್ ಮಾಡುವ ಕಾರ್ಯವನ್ನು ಸರಕಾರದಿಂದ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ಒಟ್ಟು 4.8 ಕೋಟಿ ಜಮೀನಿನ ಮಾಲೀಕತ್ವದ ಪಹಣಿಗಳಿದ್ದು ಇದರಲ್ಲಿ ಇಲ್ಲಿಯವರೆಗೆ 2.68 ಕೋಟಿ ರೈತರ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡಲಾಗಿದ್ದು ಉಳಿದ 2.12 ಕೋಟಿ ರೈತರ ಖಾತೆಗಳಿಗೆ ಇನ್ನು ಒಂದು ತಿಂಗಳ ಒಳಗಾಗಿ ಆಧಾರ್ ಲಿಂಕ್ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ:  karmika elake yojane-ತಾಯಿ ಮಗು ಸಹಾಯ ಹಸ್ತ ಯೋಜನೆ, ರೂ 6,000 ಅರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ!

RTC-adhar link-ರೈತರ ಖಾತೆಗಳಿಗೆ ಆಧಾರ್ ಸೀಡಿಂಗ್  ಪ್ರಯೋಜನಗಳೇನು?

1) ರೈತರ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವುದರಿಂದ ಫಲಾನುಭವಿಯ ನೈಜತೆಯನ್ನು ಖಚಿತಪಡಿಸಿಕೊಳ್ಳಬಹುದು?

2) ಆಧಾರ್ ಸೀಡಿಂಗ್ ನಿಂದಾಗಿ ನಕಲಿ ವ್ಯಕ್ತಿ ಸೃಷ್ಟಿಸಿ ಅಕ್ರಮವಾಗಿ ಜಮೀನು ಮಾರಾಟ ಮಾಡುವುದು ಸಂಪೂರ್ಣ ನಿಲ್ಲಲಿದೆ. ಮುಖ್ಯವಾಗಿ, ದಾಖಲೆಗಳಲ್ಲಿ ಕೈಬಿಟ್ಟು ಹೋಗಿದ್ದ ಮತ್ತು ಒತ್ತುವರಿಯಾಗಿದ್ದ ಸರಕಾರದ ಜಮೀನುಗಳ ವಿವರಗಳು ಲಭ್ಯವಾಗಿದ್ದು ರಾಜ್ಯಾದ್ಯಂತ ಒಟ್ಟು 2.20 ಲಕ್ಷ ಎಕರೆ ಸರಕಾರಿ ಜಮೀನು ಎಂದು ಗುರುತಿಸದ ಆಸ್ತಿ ಪತ್ತೆಯಾಗಿದ್ದು ಆಧಾರ್ ಲಿಂಕ್ ಮಾಡುವುದರಿಂದ 3-3.5 ಲಕ್ಷ ಎಕರೆ ಹೆಚ್ಚುವರಿ ಸರಕಾರಿ ಭೂಮಿ ಪತ್ತಿಯಾಗುವ ನಿರೀಕ್ಷೆಯಿದೆ ಎಂದು ಕಂದಾಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Marriage incentive yojana-ಈ ಯೋಜನೆಯಡಿ ಹೊಸದಾಗಿ ಮದುವೆಯಾಗುವವರಿಗೆ ಸರ್ಕಾರದಿಂದ 2.50 ಲಕ್ಷ ರೂ.ಪ್ರೋತ್ಸಾಹ ಧನ!

how to link rtc aadhar- ಮೊಬೈಲ್ ನಲ್ಲಿ RTC/ಪಹಣಿ ಮತ್ತು ಆಧಾರ್ ಲಿಂಕ್ ಮಾಡುವ ವಿಧಾನ:

RTC Aadhar link ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಹೇಗೆ ಮಾಡುವುದು ಎನ್ನುವ ಮಾಹಿತಿಯನ್ನು ತಿಳಿಯಬಹುದು.