- Advertisment -
HomeGovt SchemesMane hani parihara-ಮನೆ ಹಾನಿಗೆ ಪರಿಹಾರ ಬಿಡುಗಡೆಗೆ ಅಧಿಕೃತ ಆದೇಶ ಪ್ರಕಟ!

Mane hani parihara-ಮನೆ ಹಾನಿಗೆ ಪರಿಹಾರ ಬಿಡುಗಡೆಗೆ ಅಧಿಕೃತ ಆದೇಶ ಪ್ರಕಟ!

Last updated on September 25th, 2024 at 12:31 pm

ಕಳೆದ ತಿಂಗಳು ರಾಜ್ಯದಲ್ಲಿ ಅತೀಯಾದ ಮಳೆಯಿಂದ ಉಂಟಾದ ಮನೆ ಹಾನಿಗೆ ಅರ್ಹ ಸಂತ್ರಸ್ತರಿಗೆ ಪರಿಹಾರವನ್ನು(Mane hani parihara-2024) ಒದಗಿಸಲು ರಾಜ್ಯ ಸರಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಆದೇಶದಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ? ಸಂತ್ರಸ್ತರು ಎಲ್ಲಿ ಅರ್ಜಿ ಸಲ್ಲಿಸಬೇಕು? ಎಷ್ಟು ಪರಿಹಾರ ನೀಡಲಾಗುತ್ತದೆ? ಇತ್ಯಾದಿ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ ತಲಾ ₹1.20 ಲಕ್ಷ, ಭಾಗಶಃ ಹಾನಿಯಾಗಿದ್ದರೆ ₹50 ಸಾವಿರ ಪರಿಹಾರ ನೀಡಲಾಗುವುದು. ಪೂರ್ಣ ಮನೆ ನಾಶ ಆದವರಿಗೆ ಮನೆ ಕೂಡ ನಿರ್ಮಿಸಿ ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:  Mini Tractor subsidy- ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಸಹಾಯಧನ ಪಡೆಯಲು ಇಲಾಖೆಯಿಂದ ಅರ್ಜಿ ಆಹ್ವಾನ!

ಘಟಪ್ರಭಾ ನದಿ ಪ್ರವಾಹ ಬಾಧಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಸಿಎಂ, ಪದೇ ಪದೇ ಪ್ರವಾಹಕ್ಕೆ ಸಿಲುಕುವ ಸಂತ್ರಸ್ತರು ಸ್ಥಳಾಂತರಕ್ಕೆ ಒಪ್ಪಿದರೆ, ಬೇರೆ ಕಡೆ ಮನೆ ಕಟ್ಟಿಸಿಕೊಡುತ್ತೇವೆ. ಇಲ್ಲದಿದ್ದರೆ ಮನೆ ಬಿದ್ದ ಜಾಗದಲ್ಲೇ ವಸತಿ ಯೋಜನೆಯಡಿ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ಗೋಕಾಕ, ಚಿಕ್ಕೋಡಿ, ಕಾಗವಾಡ ತಾಲೂಕಿನ ಪ್ರವಾಹ ಪೀಡಿತ ಸ್ಥಳಗಳಿಗೂ ಭೇಟಿ ನೀಡಿದ್ದಾರೆ.

Mane hani parihara order detail-ಮನೆ ಹಾನಿಗೆ ಪರಿಹಾರ ಬಿಡುಗಡೆಗೆ ಅಧಿಕೃತ ಆದೇಶದ ವಿವರ ಹೀಗಿದೆ:

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಉಂಟಾಗುವ ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ / ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರವನ್ನು ನೀಡುವ ಕುರಿತು ಸರ್ಕಾರದ ಆದೇಶ ನಿಗದಿಪಡಿಸಿರುವ ಪರಿಹಾರ ಮೊತ್ತವನ್ನು ಈ ಕೆಳಕಂಡಂತೆ ಪಾವತಿಸಲು ನಿರ್ದೇಶನಗಳನ್ನು ನೀಡಲಾಗಿದೆ.

ಅತಿವೃಷ್ಟಿ/ಪ್ರವಾಹದಿಂದ ಮನೆಯ ಗೋಡೆಗಳೊಂದಿಗೆ ಮೇಲ್ಮಾವಣಿ ಕುಸಿತ (Walls and roof collapse) (8.75% 3 ಹಾನಿಯಾದ ಮನೆಗಳನ್ನು ಸಂಪೂರ್ಣ ಹಾನಿಯಾದ ಮನೆಯೆಂದು ಪರಿಗಣಿಸಲು ಸೂಚಿಸಿದೆ.

ಮನೆಹಾನಿಯ ಪ್ರಮಾಣವನ್ನು ಈ ಮೇಲಿನಂತೆ ಗ್ರಾಮ ಆಡಳಿತಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಇವರುಗಳು ಜಂಟಿಯಾಗಿ ಸ್ಪಷ್ಟವಾಗಿ ನಿರ್ದಿಷ್ಟಪಡಿಸುವುದು.  ಕಾಲಮಿತಿಯೊಳಗೆ ನಿಯಮಾನುಸಾರ ಅರ್ಹ ಸಂತ್ರಸ್ಮರಿಗೆ ಪರಿಹಾರ ಪಾವತಿಸಲು ಕ್ರವಹಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡಬೇಕು!

ಭಾಗಶಃ ಮನೆ ಹಾನಿಗಾಗಿ ರೂ.50,000/- ಗಳ ವರೆಗೆ ಪಾವತಿಸಲಾಗುವ ಮನೆ ಹಾನಿ ಪರಿಹಾರ ಪಡೆಯುವ ಸಂತ್ರಸ್ಥರ ವಿವರಗಳಾದ, ಹಾನಿಯಾದ ಮನೆಯ ಜಿ.ಪಿ.ಎಸ್. ಛಾಯಾಚಿತ್ರ, ಆರ್.ಆರ್. ಸಂಖ್ಯೆ ಮತ್ತು ಆಧಾ‌ರ್ ಸಂಖ್ಯೆಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಜಿಲ್ಲಾಧಿಕಾರಿಗಳು ಕ್ರಮವಹಿಸತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪೂರ್ಣ ಹಾನಿಯಾದ ಮನೆಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ಹಂಚಿಕೆ ಪತ್ರವನ್ನು ಜಿಲ್ಲಾಧೀಕಾರಿಗಳ ಹಂತದಲ್ಲಿಯೇ RGRHCL ತಂತ್ರಾಂಶದ ಮೂಲಕ ವಿತರಿಸಲು ಸೂಚಿಸಿದೆ.

Mane hani parihara amount- ಪ್ರಮಾಣವಾರು ಮನೆ ಹಾನಿಗೆ ಪರಿಹಾರ ಮೊತ್ತದ ವಿವರ:

1) ಅತೀ ಸಣ್ಣ ಪ್ರಮಾಣದ ಹಾನಿ (ಶೇ15% ಕ್ಕಿಂತ ಮೇಲ್ಪಟ್ಟು ಹಾಗೂ ಶೇ 20% ಕ್ಕಿಂತ ಕಡಿಮೆ), ಮನೆಯ ಮೇಲ್ಛಾವಣಿಯ ಹಂಚು/ಶೀಟುಗಳ, ಬಾಗಿಲು & ಕಿಟಕಿಗಳ ಹಾನಿ ಹಾಗೂ ಇನ್ನಿತರ ಸಣ್ಣ ಪುಟ್ಟ ಹಾನಿಗೆ- ರೂ 6,500/-

2) ಮಧ್ಯಮ ಪ್ರಮಾಣ ಮನೆ ಹಾನಿ (ಶೇ 20%ಕ್ಕಿಂತ ಮೇಲ್ಪಟ್ಟು ಹಾಗೂ ಶೇ 50% ಕ್ಕಿಂತ ಕಡಿಮೆ), ಮನೆಯ ಗೋಡೆಗಳಲ್ಲಿ ಬಿರುಕು/ಸಣ್ಣ ಪ್ರಮಾಣದ ಕುಸಿತ- ರೂ 25,000/-

ಇದನ್ನೂ ಓದಿ: HESCOM Job application- ಹೆಸ್ಕಾಂ ನಿಂದ 338 ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನ!

3) ಹೆಚ್ಚು ಪ್ರಮಾಣದ ಮನೆ ಹಾನಿ (ಶೇ 50% ಕ್ಕಿಂತ ಮೇಲ್ಪಟ್ಟು ಆಗೂ ಶೇ 75% ಕ್ಕಿಂತ ಕಡಿಮೆ), ಮನೆಯ ಗೋಡೆಗಳ ಕುಸಿತ ಹಾಗೂ ಮೇಲ್ಚಾವಣೀಯ ಹಾನಿ- ರೂ 50,000/-

How to apply- ಎಲ್ಲಿ ಅರ್ಜಿ ಸಲ್ಲಿಸಬೇಕು?

ಮನೆ ಹಾನಿಯಾದ ಸಂತ್ರಸ್ತರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹಳ್ಳಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

Required documents-ಅರ್ಜಿ ಸಲ್ಲಿಸಲು ದಾಖಲಾತಿಗಳು:

1) ಅರ್ಜಿದಾರರ ಅಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಮನೆ ಹಾನಿ ಪೋಟೊ

- Advertisment -
LATEST ARTICLES

Related Articles

- Advertisment -

Most Popular

- Advertisment -