ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ದೇಶದ ಅರ್ಹ 9 ಕೋಟಿ ರೈತರಿಗೆ 16 ನೇ ಕಂತಿನ ಹಣ ವರ್ಗಾಹಿಸುವ ಅಧಿಕೃತ ದಿನಾಂಕವನ್ನು(PM kisan 16th installment) ಪಿ.ಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಿಂದ ನೇರ ನಗದು ವರ್ಗಾವಣೆ(DBT) ವ್ಯವಸ್ಥೆ ಬಳಕೆ ಮಾಡಿಕೊಂಡು ಈ ಯೋಜನೆಯ ಅರ್ಹ 9 ಕೋಟಿ ರೈತರಿಗೆ ವರ್ಗಾಯಿಸಲು ಸಂಬಂಧಪಟ್ಟ ಕೇಂದ್ರದ ಇಲಾಖೆಯಿಂದ ಈಗಾಗಲೇ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಈ ಕಂತನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ DBT ಮೂಲಕ ತಲುಪಲಿದೆ.
ಯಾವ ದಿನಾಂಕದಂದು ರೈತರ ಖಾತೆಗೆ ಪಿ ಎಂ ಕಿಸಾನ್ ಯೋಜನೆಯ 16 ನೇ ಕಂತು(PM kisan 16th installment date) ರೂ 2,000 ವರ್ಗಾವಣೆಯಾಗಲಿದೆ? ಮತ್ತು ಈ ಅರ್ಥಿಕ ನೆರವನ್ನು ಪಡೆಯಲು ಅರ್ಹ ರೈತ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಹೇಗೆ ನೋಡುವುದು ಎಂದು ಈ ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ.
ಇದನ್ನೂ ಓದಿ: free sewing machine-ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ಮತ್ತುಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!
PM kisan 16th installment date- 28 ಫೆಬ್ರವರಿ 2024 ರಂದು ರೈತರ ಖಾತೆಗೆ 16 ನೇ ಕಂತಿನ ರೂ 2,000 ಜಮಾ ಅಗಲಿದೆ:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಏಕ ಕಾಲಕ್ಕೆ 28 ಫೆಬ್ರವರಿ 2024 ರಂದು ದೇಶ ಒಟ್ಟು 9 ಕೋಟಿ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ರೂ 2,000 ಅರ್ಥಿಕ ನೆರವನ್ನು ವರ್ಗಾವಣೆ ಮಾಡಲಿದ್ದಾರೆ.
Pmkisan farmer list- ಇಲ್ಲಿದೆ ಅರ್ಹ ರೈತರ ಪಟ್ಟಿ ನೋಡಲು ವೆಬ್ಸೈಟ್ ಲಿಂಕ್:
ಈ ಯೋಜನೆಯಡಿ ಮೂರು ತಿಂಗಳಿಗೊಮ್ಮೆ ತಲಾ ರೂ 2,000/- ದಂತೆ ಒಟ್ಟು ಒಂದು ವರ್ಷಕ್ಕೆ ರೂ 6,000/- ವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. 16ನೇ ಕಂತನ್ನು ಪಡೆಯಲು ಅರ್ಹರಿರುವ ಹಳ್ಳಿವಾರು ಪಟ್ಟಿಯನ್ನು ಪಿ ಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ಈಗಾಗಲೇ ಪ್ರಕಟಿಸಲಾಗಿದ್ದು, ರೈತರು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ 16ನೇ ಕಂತನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Yuva nidhi yojana-2024: ಯುವನಿಧಿ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!
Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ pmkisan farmer list ಪಿ ಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ತದನಂತರ “FARMERS CORNER” ನಲ್ಲಿ ಕಾಣುವ “Beneficiary list” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-2: ಇದಾದ ಬಳಿಕ ಇಲ್ಲಿ ರಾಜ್ಯ ಕರ್ನಾಟಕ ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಕಂತನ್ನು ಪಡೆಯಲು ಅರ್ಹರಿರುವ ನಿಮ್ಮ ಹಳ್ಳಿಯ ರೈತರ ಪಟ್ಟಿ ತೋರಿಸುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯೇ ಎಂದು ಚೆಕ್ ಮಾಡಿಕೊಳ್ಳಿ.
ಗಮನಿಸಿ: ಸಂಪೂರ್ಣ ಪಟ್ಟಿಯನ್ನು ನೋಡಲು ಈ ಪುಟದ ಕೆಳಗಡೆ ಕಾಣುವ 1.2.3 ಪುಟದ ಸಂಕ್ಯೆಯ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Parihara payment-ಈ ಕೆಲಸ ಮಾಡಿದ ಬಳಿಕ ನನ್ನ ಖಾತೆಗೆ ಬಂತು ರೂ 2,000 ಬೆಳೆ ನಷ್ಟ ಪರಿಹಾರ!
PM-kisan: ಪಿ ಎಂ ಕಿಸಾನ್ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಭಾಗವಹಿಸಬಹುದು:
ಆಸಕ್ತ ಸಾರ್ವಜನಿಕರು ಈ PM-kisan ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿ ಒಟಿಪಿ ನಮೂದಿಸಿ ನೋಂದಣಿ ಮಾಡಿಕೊಂಡು ಪಿ ಎಂ ಕಿಸಾನ್ ಹಣ ವರ್ಗಾವಣೆ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಭಾಗವಹಿಸಬಹುದು.
Pm kisan status check-2024:
ರೈತರು ಪಿ ಎಂ ಕಿಸಾನ್ ಯೋಜನೆಯಡಿ ರೂ 2,000 ಅರ್ಥಿಕ ನೆರವು ಜಮಾ ಅಗಿರುವ ವಿವರವನ್ನು ಮತ್ತು ನಿಮ್ಮ ಅರ್ಜಿಯ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಈ ಯೋಜನೆಯ PM-kisan ಪೋರ್ಟಲ್ ಭೇಟಿ ಮಾಡಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದು. ಮೊಬೈಲ್ ನಲ್ಲೇ ಪಿ ಎಂ ಕಿಸಾನ್ ಜಮಾ ವಿವರ ತಿಳಿಯುವ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ.
Step-1: ಮೊದಲಿಗೆ ಈ ಲಿಂಕ್ Pm kisan status ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ಇಲ್ಲಿ ನಿಮ್ಮ “Enter Registration No” ವಿಭಾಗದಲ್ಲಿ ನಿಮ್ಮ Registration No ಅನ್ನು ಹಾಕಿ ಪಕ್ಕದಲ್ಲೇ ಕಾಣುವ ಕ್ಯಾಪ್ಚ ಕೋಡ್ ನಮೂದಿಸಿ “Get OTP” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: ತದನಂತರ ನೀವು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ ಅದನ್ನು ನಮೂದಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೆ ಎಷ್ಟು ಬಾರಿ ಪಿ ಎಂ ಕಿಸಾನ್ ಹಣ ಜಮಾ ಅಗಿದೆ? ನಿಮ್ಮ ಅರ್ಜಿ ಸ್ಥಿತಿ ಕುರಿತು ಸಂಪೂರ್ಣ ವಿವರ ತೋರಿಸುತ್ತದೆ.
16ನೇ ಕಂತಿನ ಹಣ ವರ್ಗಾವಣೆ ಕುರಿತು ಟ್ವಿಟರ್ ಪೋಸ್ಟ್:
माननीय प्रधानमंत्री श्री नरेन्द्र मोदी द्वारा पीएम किसान सम्मान निधि योजना की 16वीं क़िस्त का हस्तांतरण 28 फरवरी,2024 को महाराष्ट्र के यवतमाल ज़िले से किया जाएगा। जिसमें किसानों को यह क़िस्त DBT के माध्यम से सीधा उनके बैंक खाते में हस्तांतरित होगी।#PMKisan16Instalment #PMKisan pic.twitter.com/usOVzizRYC — Pradhan Mantri Kisan Samman Nidhi (@pmkisanofficial) February 22, 2024