PM kisan 18th Installment- ಕೇಂದ್ರದಿಂದ ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ!

September 29, 2024 | Siddesh
PM kisan 18th Installment- ಕೇಂದ್ರದಿಂದ ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ!
Share Now:

ಕೇಂದ್ರ ಸರಕಾರ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತಿನ ಹಣವನ್ನು(PM kisan 18th Installment date) ರೈತರ ಖಾತೆಗೆ ಯಾವ ದಿನ ಜಮಾ ಅಗಲಿದೆ ಎನ್ನುವ ಅಧಿಕೃತ ಮಾಹಿತಿಯನ್ನು PM kisan ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.

ದೇಶದ ಎಲ್ಲಾ ರೈತರಿಗೆ ಕೇಂದ್ರದಿಂದ ವರ್ಷಕ್ಕೆ ಕಂತುಗಳಲ್ಲಿ ತಲಾ ರೂ 2,000/-ದಂತೆ ಒಟ್ಟು 6,000/- ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತಿದ್ದು ಇದರಂತೆ ಈ ವರ್ಷದ ಎರಡನೇ ಕಂತಿನ ಹಣ ಯಾವ ದಿನಾಂಕದಂದು ರೈತರ ಖಾತೆ ಸೇರಲಿದೆ ಎನ್ನುವ ಮಾಹಿತಿ ಇಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ ಪಿ ಎಂ ಕಿಸಾನ್ ಯೋಜನೆಯ 18 ನೇ ಕಂತಿನ ಹಣವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು(PM kisan 18th Installment farmer list) ಹೇಗೆ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳುವುದು ಎನ್ನುವ ವಿವರವನ್ನು ಸಹ ತಿಳಿಸಲಾಗಿದೆ.

ಇದನ್ನೂ ಓದಿ: Sambaru mandali subsidy scheme-ಸಾಂಬಾರು ಮಂಡಳಿಯಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

PM kisan 18th Installment date-ಕೇಂದ್ರದಿಂದ ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ:

ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ(kisan samman website) 18ನೇ ಕಂತಿನ ರೂ 2,000/-ಹಣ ದೇಶದ ಎಲ್ಲಾ ರೈತರ ಖಾತೆಗೆ ದಿನಾಂಕ: 05 ಅಕ್ಟೋಬರ್ 2024 ರಂದು ನೇರ ನಗದು ವರ್ಗಾವಣೆ(DBT amount) ಮೂಲಕ ಏಕ ಕಾಲಕ್ಕೆ ವರ್ಗಾವಣೆ ಮಾಡಲಾಗುತ್ತದೆ ಎಂದು ಪ್ರಕಟಿಸಲಾಗಿದೆ. 

ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ದಿನಾಂಕವನ್ನು ತಿಳಿಯುವ ವಿಧಾನ:

ಪ್ರತಿ ಬಾರಿಯು ಪಿ ಎಂ ಕಿಸಾನ್ ಯೋಜನೆಯಡಿ ಯಾವ ದಿನಾಂಕದಂದು ಈ ಯೋಜನೆಯ ಹಣ ರೈತರ ಖಾತೆಗೆ ಜಮಾ ಅಗುತ್ತದೆ ಎಂದು ಮುಂಚಿತವಾಗಿ ಈ ಕೆಳಗೆ ತಿಳಿಸಿರುವ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. 

ಇದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: bagar hukum-ಕಂದಾಯ ಇಲಾಖೆಯಿಂದ ‘ಬಗರ್ ಹುಕುಂ’ ಸಾಗುವಳಿ ರೈತರಿಗೆ ಗುಡ್ ನ್ಯೂಸ್!

Step-1: ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಈ ಪೇಜ್ ನಲ್ಲಿ"Hon'ble Prime Minister will release the 18th Installment of PM KISAN scheme on 05th Oct 2024" ಎಂದು ಮಧ್ಯ ಭಾಗದಲ್ಲಿ ಗೋಚರಿಸುತ್ತದೆ.

ಪ್ರತಿ ಬಾರಿಯು ಈ ಯೋಜನೆಯಡಿ ಹಣ ಸಂದಾಯ ಮಾಡುವಾಗ ಇಲ್ಲಿ ದಿನಾಂಕವನ್ನು ಪ್ರಕಟಿಸಲಾಗುತ್ತದೆ.

PM kisan farmer list-2024: ಈ ಪಟ್ಟಿಯಲ್ಲಿರುವವರಿಗೆ ಸಿಗಲಿದೆ 18ನೇ ಕಂತಿನ ಹಣ:

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜಾಲತಾಣದಲ್ಲಿ ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರೈತರು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ: Atal Pension Yojana-2024: ಅಟಲ್ ಪಿಂಚಣಿ ಯೋಜನೆ ಪ್ರತಿ ತಿಂಗಳಿಗೆ ರೂ 5,000 ಪಿಂಚಣಿ ಪಡೆಯಲು ಅರ್ಜಿ!

Step-1: ಮೊದಲಿಗೆ ಈ PM kisan farmer list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ಈ ಪೇಜ್ ನಲ್ಲಿ ಕೆಳಗೆ ಕಾಣುವ "beneficiary list" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ಇಲ್ಲಿ ರಾಜ್ಯ/ಜಿಲ್ಲೆ/ತಾಲ್ಲೂಕು/ಹಳ್ಳಿ ಹೆಸರನ್ನು ಕ್ಲಿಕ್ ಮಾಡಿಕೊಂಡು "Get report" ಬಟನ್ ಮೇಲೆ ಕ್ಲಿಕ್ ಮಾಡಿದರೆ 18ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೋರಿಸುತ್ತದೆ.

ಅಂಕಿ-ಅಂಶ ವಿವರ ಹೀಗಿದೆ:

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ಒಟ್ಟು 9.5 ಕೋಟಿ ರೈತರ ಖಾತೆಗೆ 18ನೇ ಕಂತಿನ ಒಟ್ಟು 20,000/- ಕೋಟಿ ಹಣವನ್ನು ಜಮಾ ಮಾಡಲಾಗುತ್ತಿದೆ.

ಒಟ್ಟು ರೈತರ ಸಂಖ್ಯೆ- 9.5 ಕೋಟಿ 
ಒಟ್ಟು ಹಣ- 20,000/- ಕೋಟಿ 
ಬಿಡುಗಡೆ ದಿನಾಂಕ- 05 ಅಕ್ಟೋಬರ್ 2024

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: