Parihara Payment Failed Cases-ರೈತರ ಖಾತೆಗೆ ಬರ ಪರಿಹಾರ ಜಮಾ ಅಗದಿರಲು ಕಾರಣಗಳ ಪಟ್ಟಿ ಬಿಡುಗಡೆ!

ಬರ ಪರಿಹಾರ ರೈತರ ಖಾತೆಗೆ ವರ್ಗಾವಣೆ ಅಗದಿರಲು ಕಾರಣಗಳು ಯಾವುವು? ಮತ್ತು ರೈತರು ಯಾವ ಕ್ರಮ ಅನುಸರಿಸಿ ತಮ್ಮ ಅರ್ಜಿಯನ್ನು ಸರಿಪಡಿಸಿಕೊಂಡು ಪರಿಹಾರದ(Bara parihara amount) ಹಣ ಪಡೆಯಬವುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

“ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ”(NDRF) ಮಾರ್ಗಸೂಚಿಯನ್ವಯ ರಾಜ್ಯದ 32.12 ಲಕ್ಷ ರೈತರಿಗೆ 3,454 ಕೋಟಿ ಬರ ಪರಿಹಾರದ 2ನೇ ಕಂತಿನ ಹಣವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಈಗಾಗಲೇ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು,

ಇದರಲ್ಲಿ ಸರಿ ಸುಮಾರು 1.5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 2ನೇ ಕಂತಿನ ಬರ ಪರಿಹಾರದ ಹಣ ವರ್ಗಾವಣೆ ಅಗಿರುವುದಿಲ್ಲ ಈ ರೈತರಿಗೆ ಯಾವ ಕಾರಣಕ್ಕೆ ಪರಿಹಾರದ ಹಣ ಜಮಾ ಅಗಿರುವುದಿಲ್ಲ? ಇದನ್ನು ಸರಿಪಡಿಸಿಕೊಳ್ಳುವ ಕ್ರಮವೇನು? ಪರಿಹಾರ ಜಮಾ ಅಗದೇ ಇರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಹೇಗೆ ನೋಡುವುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Parihara New order-ರೈತರಿಗೆ ಬರ ಪರಿಹಾರ ವಿತರಣೆ ಕುರಿತು ನೂತನ ಆದೇಶ ಪ್ರಕಟ!

Parihara Payment Failed Reason-ರೈತರ ಖಾತೆಗೆ ಬರ ಪರಿಹಾರ ಜಮಾ ಅಗದಿರಲು ಕಾರಣಗಳು:

1) FID ನಂಬರ್ ರಚನೆ ಅಗದಿರುವುದು ಅಥವಾ FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಅಗದಿರುವುದು.
2) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಜೋಡಣೆ(Adhar link/NPCI Mapping) ಅಗದಿರುವುದು.
3) ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ(Bank account close) ರದ್ದುಗೊಂಡಿರುವುದು.
4) ಆಧಾರ್ ಕಾರ್ಡನಲ್ಲಿರುವ ಹೆಸರು ಪಹಣಿಯಲ್ಲಿರುವ ಹೆಸರು ತಾಳೆAdhar-RTC name mismatch) ಅಗದಿರುವುದು.

1) FID ನಂಬರ್ ರಚನೆ ಅಗದಿರುವುದು ಅಥವಾ FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಅಗದಿರುವುದು:
 
ಕೆಲವು ರೈತರ FID ನಂಬರ್ ರಚನೆ ಅಗದಿರುವುದು ಅಥವಾ FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಅಗದಿರುವ ಕಾರಣ ಪರಿಹಾರದ ಹಣ ಜಮಾ ಅಗಿರುವುದಿಲ್ಲ ಇದನ್ನು ಸರಿಪಡಿಸಿಕೊಳ್ಳಲು ರೈತರು ಒಮ್ಮೆ ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!

2) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಜೋಡಣೆ(Adhar link/NPCI Mapping) ಅಗದಿರುವುದು:

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಜೋಡಣೆ(Adhar link/NPCI Mapping) ಅಗದೆ ಇರುವುದರಿಂದ ಅನೇಕ ರೈತರಿಗೆ ಹಣ ಸಂದಾಯವಾಗಿರುವುದಿಲ್ಲ ಇದನ್ನು ಸರಿಪಡಿಸಿಕೊಳ್ಳಲು ರೈತರು ತಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಬ್ಯಾಂಕ್ ಆಕೌಂಟ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು.

3) ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ(Bank account close) ರದ್ದುಗೊಂಡಿರುವುದು.

ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆ(Bank account close) ರದ್ದುಗೊಂಡಿರುವುದು ಅಂದರೆ ಆಧಾರ್ ಕಾರ್ಡ ಲಿಂಕ್ ಇರುವ ಬ್ಯಾಂಕ್ ಅಕೌಂಟ್ ಮೂಲಕ ಯಾವುದೇ ವಹಿವಾಟು ನಡೆಸದೆ ಇದ್ದಲ್ಲ ಅದು ರದ್ದುಗೊಂಡಿರುತ್ತದೆ ಇದನ್ನು ಸರಿಪಡಿಸಿಕೊಂಡರೆ ಪರಿಹಾರದ ಹಣ ಜಮಾ ಅಗುತ್ತದೆ.

ಇದನ್ನೂ ಓದಿ: Parihara bank details-ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

4) ಆಧಾರ್ ಕಾರ್ಡನಲ್ಲಿರುವ ಹೆಸರು ಪಹಣಿಯಲ್ಲಿರುವ ಹೆಸರು ತಾಳೆAdhar-RTC name mismatch) ಅಗದಿರುವುದು.

ಪಹಣಿಯಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ ನಲ್ಲಿರುವ ಹೆಸರು ತಾಳೆ ಅಗದೆ ಇದ್ದ ಪಕ್ಷದಲ್ಲಿ ಪರಿಹಾರದ ಹಣ ವರ್ಗಾವಣೆ ಸ್ಥಗಿತವಾಗಿರುತ್ತದೆ ಇದನ್ನು ಸರಿಪಡಿಸಿಕೊಳ್ಳಲು ಒಮ್ಮೆ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ಮಾಡಿ. ಆಧಾರ್ ಕಾರ್ಡನಲ್ಲಿರುವ ಹೆಸರನ್ನು ಸರಿಪಡಿಸಿಕೊಳ್ಳಲು ನಿಮ್ಮ ಹೋಬಳಿಯ ನಾಡಕಚೇರಿಯನ್ನು ಭೇಟಿ ಮಾಡಬೇಕು.

Parihara payment Failed farmer list- ಪರಿಹಾರ ಜಮಾ ಅಗದ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡುವ ವಿಧಾನ:

ಬರ ಪರಿಹಾರ ಜಮಾ ಅಗದೇ ಇರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡಲು ರೈತರು ಈ Payment Failed farmer list ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ ಪುಟದ ಇನ್ನೊಂದು ಲೇಖನವನ್ನು ಭೇಟಿ ಮಾಡಿ ಪರಿಹಾರ ಜಮಾ ಅಗದ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಹೇಗೆ ನೋಡಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. 

ಬರ ಪರಿಹಾರದ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here