Vasati Yojane application-2024: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ನೆರವು!

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ಮನೆ ಪಡೆಯಲು ಈ ಯೋಜನೆಯಡಿ(Vasati Yojane application) ನೆರವು ನೀಡಲು ನಿರ್ಣಯ ಕೈಗೊಳ್ಳಲಾಗಿದೆ.

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ ಮನೆ ಇಲ್ಲದ ಅರ್ಹ ಅರ್ಜಿದಾರರಿಗೆ ನಿಗಮದ ಯೋಜನೆಯಡಿ ಮನೆ ನೀಡುವ ಸೌಲಭ್ಯವಿದ್ದು ಈಗಾಗಲೇ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳು ಪಾವತಿ ಮಾಡಬೇಕಾದ ಹಣವನ್ನು ಸರಕಾರ ಭರಿಸಲು ನಿರ್ಣಯ ಕೈಗೊಳ್ಳಲಾಗಿದೆ.

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಿಂದ ಯಾವೆಲ್ಲ ಯೋಜನೆಗಳಿವೆ? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್, ಯೋಜನೆಯ ಮಾರ್ಗಸೂಚಿಯ ಕೈಪಿಡಿ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PM Usha Scholarship 2024: PUC ಪಾಸಾದವರಿಗೆ ಕೇಂದ್ರದಿಂದ 20 ಸಾವಿರ ವಿದ್ಯಾರ್ಥಿವೇತನ!

Vasati Yojane-ಮುಖ್ಯಮಂತ್ರಿಗಳ ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ನೆರವು:

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಅಡಿ ಆಯ್ಕೆಯಾದ 12,153 ಕುಟುಂಬಗಳು ಕಟ್ಟಬೇಕಿದ್ದ ತಲಾ ₹1 ಲಕ್ಷ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ. ಸಿಎಂ ಸಿದ್ದರಾಮಯ್ಯ ಅವರು ಫಲಾನುಭವಿಗಳ ವಂತಿಕೆಯ ಒಟ್ಟು ₹121.53 ಕೋಟಿ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಆಯ್ಕೆಯಾದ 12,153 ಕುಟುಂಬಗಳು ಪಾವತಿ ಮಾಡಬೇಕಾಗಿದ ತಲಾ ರೂ 1 ಲಕ್ಷ ವಂತಿಗೆಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಫಲಾನುಭವಿಗಳ ವಂತಿಕೆಯ ಒಟ್ಟು ₹121.53 ಕೋಟಿ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದು ಜಮೀರ್‌ ಅಹಮದ್‌ ಖಾನ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಸರಕಾರದ ಈ ನಿರ್ಧಾರದಿಂದಾಗಿ ಸಬ್ಸಿಡಿ ಹೊರತುಪಡಿಸಿ ಸಾಮಾನ್ಯ ವರ್ಗದ ಫಲಾನುಭವಿಗಳು 7.50 ಲಕ್ಷ ಅದೇ ರೀತಿ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳು 6.70 ಲಕ್ಷ ಹಣವನ್ನು ಪಾವತಿ ಮಾಡುವಂತಾಗಿದೆ.

ಇದನ್ನೂ ಓದಿ: Krishi mela dharwad-2024: ಧಾರವಾಡ ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ಮಾಹಿತಿ!

ಇದನ್ನೂ ಓದಿ: Parihara amount-2024: ಮಳೆಯಿಂದ ಉಂಟಾದ ನಷ್ಟಕ್ಕೆ ರಾಜ್ಯ ಸರಕಾರದಿಂದ 775 ಕೋಟಿ ಅನುದಾನ!ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ!

How can apply for vasati yojana-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ನಮ್ಮ ರಾಜ್ಯದ ಅಂದರೆ ಕರ್ನಾಟಕದ ನಾಗರಿಕರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಬಡತನ ರೇಖೆಗಿಂತ ಕೆಳ ವರ್ಗ/ಬಿ.ಪಿ.ಎಲ್ ಕಾರ್ಡದಾರರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯವು ರೂ 87,000 ಕ್ಕಿಂತ ಕಡಿಮೆ ಇರಬೇಕು.
  • ಅರ್ಜಿದಾರರು ಬೆಂಗಳೂರಿನಲ್ಲಿ ಕನಿಷ್ಟ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ವಾಸವಾಗಿರಬೇಕು.
  • ಅರ್ಜಿದಾರನಿಗೆ ಸ್ವಂತ ಮನೆ ಇರಬಾರದು.
  • ಅರ್ಜಿದಾರನು ಬೇರೆ ಯಾವುದೇ ವಸತಿ ಯೋಜನೆಯಡಿ ಪ್ರಯೋಜನ ಪಡೆದಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:

1) ಅರ್ಜಿದಾರನ ವಾಸಸ್ಥಳ ಪ್ರಮಾಣ ಪತ್ರ(ಬೆಂಗಳೂರಿನಲ್ಲಿ 5 ವರ್ಷಗಳಿಂದ ವಾಸವಾಗಿರುವ ಬಗ್ಗೆ)

2) ಆಧಾರ್ ಕಾರ್ಡ ಪ್ರತಿ

3) ಆದಾಯ ಪ್ರಮಾಣ ಪತ್ರ.

ಇದನ್ನೂ ಓದಿ: Southern Railway Recruitment-2024: ದಕ್ಷಿಣ ರೈಲ್ವೆ ಇಲಾಖೆಯಿಂದ 2438 ಹುದ್ದೆಗಳ ನೇಮಕಾತಿ!


 
Online application link-ಅನ್ಲೈನ್ ಮೂಲಕ ಹೊಸ ಅರ್ಜಿ ಸಲ್ಲಿಸಲು ಲಿಂಕ್:

ಅರ್ಹ ಅರ್ಜಿದಾರರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Application link- ಹೊಸ ಅರ್ಜಿ ಸಲ್ಲಿಸಲು ಲಿಂಕ್: Apply Now

vasati yojane application status-ಈಗಾಗಲೇ ಸಲ್ಲಿಸಿರುವ ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:

application status check ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಸಂಖ್ಯೆಯನ್ನು ಹಾಕಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಚೆಕ್ ಮಾಡಿಕೊಳ್ಳಬಹುದು.

for more information-ವಸತಿ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ:

vasati yojane booklet- ವಸತಿ ಯೋಜನೆಯ ಸಂಪೂರ್ಣ ಮಾಹಿತಿಯ ಕೈಪಿಡಿ ಡೌನ್ಲೋಡ್ ಲಿಂಕ್: Download Now

ಕಾವೇರಿ ಭವನ, 9ನೇ ಮಹಡಿ, ಸಿ & ಎಫ್ ಬ್ಲಾಕ್, ಕೆ. ಜಿ . ರೋಡ್, ಬೆಂಗಳೂರು – 560009. ಫೋನ್ : 91-080-22106888, 91-080-23118888, 
vasati yojane website-ವೆಬ್ ಸೈಟ್: Click here
ಇಮೇಲ್: rgrhcl@nic.in