Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!

ರೈತರು ತಮ್ಮ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಬರ ಪರಿಹಾರದ ಹಣ(Adhar bara parihara status) ತಮ್ಮ ಖಾತೆಗೆ ಜಮಾ ಅಗಿರುವ ವಿವರವನ್ನು ಹೇಗೆ ಮೊಬೈಲ್ ನಲ್ಲಿ ಪಡೆಯಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಕಂದಾಯ ಇಲಾಖೆಯಿಂದ ಜಾರಿಯಲ್ಲಿರುವ ಅಧಿಕೃತ bhoomi online parihara ವೆಬ್ಸೈಟ್ ಭೇಟಿ ಮಾಡಿ ಮುಂಗಾರು ಹಂಗಾಮಿನ ಬರ ಪರಿಹಾರದ ಹಣ ಜಮಾ ವಿವರವನ್ನು ಅರ್ಜಿದಾರ ರೈತರು ತಮ್ಮ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ ಯಾವೆಲ್ಲ ಸರ್ವೆ ನಂಬರ್ ಗಳಿಗೆ ಬರ ಪರಿಹಾರ ಜಮಾ ಅಗಿದೆ ಮತ್ತು ಯಾವೆಲ್ಲ ಸರ್ವೆ ನಂಬರ್ ಗೆ ಬರ ಪರಿಹಾರ ಬಂದಿಲ್ಲ ಎನ್ನುವ ಸಂಪೂರ್ಣ ವಿವರವನ್ನು ಕುಳಿತಲೇ ಮೊಬೈಲ್ ನಲ್ಲಿ ತಿಳಿಯಬಹುದು.

ಈ ಕೆಳಗೆ ನೀಡಿರುವ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ರೈತರು ತಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ ಪರಿಹಾರ ಹಣ ವರ್ಗಾವಣೆಯ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Parihara bank details-ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!

Step-1: ಪ್ರಥಮದಲ್ಲಿ ಈ bhoomi online parihara status ಲಿಂಕ್ ಮೇಲೆ ಕ್ಲಿಕ್ ಮಾಡಿ “Bhoomi Online-Parihara” ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು ಬಳಿಕ ಮೊದಲನೇ ಭಾಗವಾಗಿ”Year/ವರ್ಷ”- 2023-24 ಎಂದು, Season- ಮುಂಗಾರು/Kharif, Calamity/ವಿಪತ್ತಿನ ವಿಧ- Drought/ಬರ ಎಂದು ಕ್ಲಿಕ್ ಮಾಡಿ “Get Data/ಹುಡುಕು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ “Aadhar card/ಆಧಾರ್ ಕಾರ್ಡ” ಬಟನ್ ಮೇಲೆ ಕ್ಲಿಕ್ ಮಾಡಿ ಈ ಕಾಲಂ ನಲ್ಲಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ ಸಂಖ್ಯೆಯನ್ನು ನಮೂದಿಸಿ “Get data/ಹುಡುಕು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Village administrative officer-1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

Step-3: “Get data/ಹುಡುಕು” ಆಯ್ಕೆಯ ಮೇಲೆ ಕ್ಲಿಕ್  ಮಾಡಿದ ನಂತರ ಇಲ್ಲಿ ಎರಡು ವಿಭಾಗಗಳು ತೋರಿಸುತ್ತದೆ ಒಂದನೇ ವಿಭಾಗದಲ್ಲಿ ನಿಮಗೆ ಪರಿಹಾರದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎನ್ನುವ ವಿವರ ತೋರಿಸಿದರೆ ಅದರ ಕೆಳಗಿನ ಕಾಲಂ ನಲ್ಲಿ ಯಾವೆಲ್ಲ ಸರ್ವೆ ನಂಬರ್ ಗೆ ಬರ ಪರಿಹಾರ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿ ತೋರಿಸುತ್ತದೆ.

ವಿಶೇಷ ಸೂಚನೆ: ಮೇಲಿನ ವಿಧಾನವನ್ನು ಅನುಸರಿಸಿ ಪರಿಹಾರದ ವಿವರ ಪಡೆಯಲು ಪ್ರಯತ್ನಿಸಿದಾಗ ಆಧಾರ್ ಕಾರ್ಡ ಹಾಕಿದಾಗ ನಿಮ್ಮ ವಿವರ ಹುಡುಕಲು ಸಾಧ್ಯವಾಗದಿದ್ದಲ್ಲಿ ಮೊಬೈಲ್ ನಂಬರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಯನ್ನು ಹಾಕಿ ನಿಮ್ಮ ವಿವರವನ್ನು ಪಡೆಯಬಹುದು.

“Bhoomi Online-Parihara” ಅಧಿಕೃತ ವೆಬ್ಸೈಟ್- Click here

ಇದನ್ನೂ ಓದಿ: Milk incentive-2024: ಹಾಲಿನ ಪ್ರೋತ್ಸಾಹ ಧನ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!