akrama sakrama yojane- ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್

ರಾಜ್ಯ ಸರಕಾರದಿಂದ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ನಡೆದ ಚರ್ಚೆಯಲ್ಲಿ ಈ ಯೋಜನೆಯ ಅನುಷ್ಥಾನದ ಕುರಿತು ನೀಡಿರುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಕಲ್ಪಿಸಲು ರಾಜ್ಯದ ಎಸ್ಕಾಂ ಗಳಲ್ಲಿ ರೈತರಿಗೆ ಅನುಕೂಲವಾಗುವ ಯೋಜನೆ ಎಂದೇ ಹೆಸರಾಗಿರುವ ಅಕ್ರಮ-ಸಕ್ರಮ ಯೋಜನೆಯ ಕುರಿತು ರೈತರಿಗೆ ಇತೀಚೆಗೆ ಅನೇಕ ಗೊಂದಲಗಳು ಉಂಟಾಗಿದ್ದವು ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾದ ಅಧಿಕೃತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು ಈ ವರ್ಷ ನೂತನ ಸರಕಾರ ಆಡಳಿತಕ್ಕೆ ಬಂದ ಬಳಿಕ ಯೋಜನೆಯ ಕುರಿತು ಹೊಸ ಮಾರ್ಗಸೂಚಿಯನ್ನು ಸಂಪುಟ ಸಭಯಲ್ಲಿ ಅನುಮೋದನೆ ಪಡೆದು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Annabhagya amount-ಈ ಪಟ್ಟಿಯಲ್ಲಿರುವವರಿಗೆ ಈ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!

Akrama-sakrama yojane-ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್

ಸರಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಅಕ್ರಮ-ಸಕ್ರಮ ಯೋಜನೆಯಡಿ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಈಗಾಗಲೇ ಇರುವ 4 ಲಕ್ಷ ಕೃಷಿ ಪಂಪ್ ಸೆಟ್ ಗಳಲ್ಲಿ ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ಎಲ್ಲಾ ಪಂಪ್ ಸೆಟ್ ಗಳಿಗೆ ಸರಕಾರದಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ವಿದ್ಯುತ್ ಜಾಲದಿಂದ 500 ಮೀಟರ್ ಗಿಂತ ಮೇಲಿರುವ ಪಂಪ್ ಸೆಟ್ ಗಳಿಗೆ ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಇಂದನ ಸಚಿವ ಕೆ ಜೆ ಚಾರ್ಜ್ ರವರು ಅಧಿವೇಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Akrama sakrama-ಅಕ್ರಮ-ಸಕ್ರಮಕ್ಕೆ 6000 ಕೋಟಿ ವೆಚ್ಚ:

ಈಗಾಗಲೇ ಚಾಲ್ತಿಯಲ್ಲಿರುವ 4 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರಕಾರಕ್ಕೆ ಒಟ್ಟು 6000 ಕೋಟಿ ವೆಚ್ಚವಾಗಲಿದೆ ಎಂದು ಇಂದನ ಸಚಿವ ಕೆ ಜೆ ಚಾರ್ಜ್ ಮಾಹಿತಿ ತಿಳಿಸಿದ್ದು ರಾಜ್ಯ ಎಲ್ಲಾ ಎಸ್ಕಾಂನಿಂದ ಈ ಯೋಜನೆಯನ್ನು ತ್ವರಿತವಾಗಿ ಅನುಷ್ಥಾನ ಮಾಡಲು ಸೂಚಿಸಲಾಗಿದ್ದು ಈ ಯೋಜನೆಯ ಮೊತ್ತವನ್ನು ಸರಕಾರ ಎಲ್ಲಾ ಎಸ್ಕಾಂಗಳಿಗೆ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: Yuva nidhi application-2023: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ದಿನಾಂಕ ನಿಗದಿ! ಎಲ್ಲಿ ಅರ್ಜಿ ಸಲ್ಲಿಸಬೇಕು?

Solar pump set-ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಒಟ್ಟು ಶೇ 80 ಸಹಾಯಧನ: ಶೇ 20 ರಷ್ಟು ಸಬ್ಸಿಡಿ ಏರಿಕೆ

ರಾಜ್ಯ ಮತ್ತು ಕೇಂದ್ರ ಸರಕಾರದಿಂದ ರೈತರಿಗೆ ಸೋಲಾರ್ ಪಂಪ್ ಸೆಟ್ ಅಳವಡಿಕೆ ಮಾಡಿಕೊಳ್ಳಲು ಕೇಂದ್ರದಿಂದ ಶೇ 30  ರಾಜ್ಯ ಸರಕಾರದಿಂದ ಶೇ 50 ರಷ್ಟು ಸಬ್ಸಿಡಿ ನೀಡಲಾಗುತ್ತದೆ ಈ ಹಿಂದೆ ರಾಜ್ಯ ಸರಕಾರದಿಂದ ಸೋಲಾರ್ ಪಂಪ್ ಸೆಟ್ ಗೆ ಶೇ 30 ರಷ್ಟು ಸಬ್ಸಿಡಿ ನೀಡುತ್ತಿತ್ತು ಈಗ ಇದನ್ನು ಶೇ 50% ಗೆ ಏರಿಕೆ ಮಾಡಲಾಗಿದೆ.

ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಪ್ರಸ್ತುತ ಮಾರ್ಗಸೂಚಿ ವಿವರ ಹೀಗಿದೆ:

  • ಈಗಾಗಲೇ ನೋಂದಣಿಗೊಂಡು ಮೂಲಸೌಕರ್ಯ ರಚನೆಗೆ ಕಾಯುತ್ತಿರುವ ಅಥವಾ ಹೊಸದಾಗಿ ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳು, ವಿದ್ಯುತ್ ಜಾಲದಿಂದ 500ಮೀಟರ್‌ಯಿಂದಾಚೆ ಇದ್ದಲ್ಲಿ, stand-alone/off-grid solar ಪಂಪ್‌ಸೆಟ್ ಅಳವಡಿಸಲು ಸೂಚಿಸಿದ. ಸೌರ ಪಂಪ್‌ಸೆಟ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಶೇ.30 ರಷ್ಟು ಸಹಾಯಧನ ಅಲ್ಲದ ರಾಜ್ಯ ಸರ್ಕಾರದಿಂದ ಶೇಕಡ 30 ರಷ್ಟು ಇರುವ ಸಹಾಯಧನವನ್ನು ಶೇಕಡ 50ಕ್ಕೆ ಹೆಚ್ಚಿಸಿ ಸರ್ಕಾರ ಅನುಮೋದಿಸಿದೆ. ರೈತರು ಈಗಾಗಲೇ ವಿದ್ಯುತ್ ಸಂಪರ್ಕಕ್ಕಾಗಿ ಮೊತ್ತವನ್ನು ಪಾವತಿಸಿದರೆ, ಪಾವತಿಸಿದ ಮೊತ್ತವನ್ನು ರೈತರ ವಂತಿಗೆ ಎಂದು ಪರಿಗಣಿಸಿ, ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸುವುದು.

ಇದನ್ನೂ ಓದಿ: Free two wheeler scheme-ರಾಜ್ಯ ಸರಕಾರದಿಂದ 4000 ಸಾವಿರ ಉಚಿತ ಬೈಕ್ ವಿತರಣೆ! ಎಲ್ಲಿ ಅರ್ಜಿ ಸಲ್ಲಿಸಬೇಕು?

  • Stand-alone/off-grid solar ಪಂಪ್ ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರುತು ಮಾಡಿ 10 HP ಸಾಮರ್ಥ್ಯಕ್ಕೆ ಮಿತಿಗೊಳಿಸುವುದು, ಆದಾಗ್ಯೂ MNRE ಷರತ್ತುಗಳ ಪ್ರಕಾರ 7.5 HP ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿ/ಅನುದಾನವು ಸೀಮಿತವಾಗಿರುತ್ತದೆ.
  • ರೈತರು Stand-alone/off-grid solar ಪಂಪ್‌ಸೆಟ್‌ ಅಳವಡಿಸಿಕೊಂಡ ನಂತರ, ಅಂತಹ ಪಂಪ್ ಸೆಟ್ ಗಳನ್ನು GRID POWER ಜಾಲದ ಸಂಪರ್ಕದಿಂದ ಕಡಿತಗೊಳಿಸಲು ಎಲ್ಲಾ ESCOM ಗಳು ಕ್ರಮವಹಿಸುವುದು.
  • ಇಲಾಖೆಯಿಂದ ಇಲಾಖೆಗೆ ಶುಲ್ಕರಹಿತ ವರ್ಗಾವಣೆ ಆಧಾರದ ಮೇಲೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಪಡೆಯುವ ಮೂಲಕ ಸಬ್‌ಸ್ಟೇಷನ್‌ನ ಬಳಿ RESCO ಮಾದರಿಯಡಿಯಲ್ಲಿ KUSUM-C ಪುಕಾರ ಫೀಡರ್ ಸೌರೀಕರಣ ಅನುಷ್ಠಾನಗೊಳಿಸುವುದು.

ಇದನ್ನೂ ಓದಿ: Fruits Id updates: ಪ್ರೂಟ್ಸ್ ಐಡಿಯಲ್ಲಿ ನಮೂದಿಸಿದ ವಿವರದ ಕುರಿತು ರೈತರು ತಪ್ಪದೇ ಈ ಮಾಹಿತಿ ತಿಳಿಯಿರಿ!