ರೈತರು ಬೆಳೆದ ಬೆಳೆಗಳಿಗೆ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆನಾಶ ಪ್ರಕರಣಗಳಿಗೆ ನೀಡಲಾಗುತ್ತಿರುವ ದಯಾತ್ಮಕ ಪರಿಹಾರ ಧನವನ್ನು ಪರಿಷ್ಕರಿಸಿರುವ ಆದೇಶದ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಅರಣ್ಯ ಇಲಾಖೆಯಿಂದ ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆನಾಶ, ಮಾನವ ಪ್ರಾಣಹಾನಿ, ಸಾಕು ಪ್ರಾಣಿಗಳ ಪ್ರಾಣಹಾನಿ, ಶಾಶ್ವತ ಅಂಗವಿಕಲತೆ ಗಾಯಗೊಂಡವರಿಗೆ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಪರಿಹಾರ ಮೊತ್ತವನ್ನು ನಿಗಧಿಪಡಿಸಿ, ವಿತರಿಸಲು ಅರಣ್ಯ ಇಲಾಖೆಯ ಕ್ಷೇತ್ರಾಧಿಕಾರಿಗಳಿಗೆ ಆರ್ಥಿಕ ಅಧಿಕಾರಗಳನ್ನು ನೀಡಿ ಮಂಜೂರಾತಿ ನೀಡಲಾಗಿದೆ.
2014-15ನೇ ಸಾಲಿನಿಂದ ಜಾರಿಗೆ ಬರುವಂತೆ ಮಾನವ-ವನ್ಯಜೀವಿ ಸಂಘರ್ಷದಿಂದಾಗಿ ಹಸು, ಎತ್ತು, ಎಮ್ಮೆ, ಕೋಣಗಳು ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ನೀಡಲಾಗುತ್ತಿರುವ ಪರಿಹಾರ ಧನವನ್ನು ರೂ.10,000/- ಕ್ಕೆ ಹೆಚ್ಚಿಸಲು ಹಾಗೂ ಮೇಕೆ, ಕುರಿಗಳು ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ನೀಡಲಾಗುತ್ತಿರುವ ಪರಿಹಾರ ಧನವನ್ನು ರೂ.5,000/- ಗಳಿಗೆ ಹೆಚ್ಚಿಸಲು ಹಾಗೂ ಬೆಳಹಾನಿ ಉಂಟಾದಲ್ಲಿ ಸಂತ್ರಸ ರೈತರಿಗೆ ನೀಡಲಾಗುತ್ತಿರುವ ಪರಿಹಾರ ಧನದ ಗರಿಷ್ಠ ಮಿತಿಯನ್ನು ರೂ.50,000/- ರಿಂದ ರೂ.1,00,000/- ಗಳಿಗೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Purchase of agricultural land: ನೀವು ಕೃಷಿ ಭೂಮಿ ಖರೀದಿಸುವ ಮುಂಚೆ ಯಾವೆಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಬೇಕು?
ವನ್ಯಪ್ರಾಣಿಗಳಿಂದ ಉಂಟಾದ ಬೆಳನಾಶಕ್ಕೆ ದಯಾತ್ಮಕ ದರ, ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಶಾಶ್ವತ ಅಂಗವಿಕಲತೆ ಮತ್ತು ಭಾಗಶಃ ಶಾಶ್ವತ ಅಂಗವಿಕಲತೆ ಹೊಂದುವ ವ್ಯಕ್ತಿಗಳಿಗೆ ಪರಿಹಾರಧನ, ಕಾಡು ಪ್ರಾಣಿಗಳಿಂದ ಗಾಯಗೊಂಡ ಪ್ರತಿ ವ್ಯಕ್ತಿಗೆ ಗರಿಷ್ಠ ಪರಿಹಾರ ಧನ ಹಾಗೂ ಕಾಡಾನೆ ದಾಳಿಯಿಂದ ಉಂಟಾದ ಆಸ್ತಿ ನಷ್ಟ ಪ್ರತಿ ಪ್ರಕರಣಕ್ಕೆ ಆದೇಶದಲ್ಲಿ ನಿಗಧಿಪಡಿಸಲಾಗಿರುವ ದಯಾತ್ಮಕ ದರ ಮತ್ತು ಪರಿಹಾರವನ್ನು ಅನುಬಂಧದಲ್ಲಿರುವಂತೆ ಹೆಚ್ಚಿಸಿ ನಿಗಧಿಪಡಿಸಲಾಗಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಇವರು ಮುಖ್ಯಮಂತ್ರಿಗಳು 2022-23ನೇ ಸಾಲಿನ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಅಧಿವೇಶನದಲ್ಲಿ ದಿನಾಂಕ: 21/09/2022 ರಂದು ವನ್ಯಪ್ರಾಣಿ ದಾಳಿಯಿಂದ ಉಂಟಾದ ಮಾನವ ಪ್ರಾಣ ಹಾನಿ ಹಾಗೂ ಬೆಳೆ ಹಾನಿ ಪ್ರಕರಣಗಳಲ್ಲಿ ಪ್ರಸ್ತುತ ಪಾವತಿಸಲಾಗುತ್ತಿರುವ ಪರಿಹಾರ ಧನವನ್ನು ದುಪ್ಪಟ್ಟ ಮಾಡುವುದಾಗಿ ಘೋಷಿಸಿರುವುರಿಂದ ವನ್ಯಪ್ರಾಣಿ ದಾಳಿಯಿಂದ ಉಂಟಾದ ಬೆಳೆನಾಶಕ, ಪಸ್ತುತ ಪಾವತಿಸುತ್ತಿರುವ ಪರಿಹಾರ ಧನವನ್ನು ಪರಿಷ್ಕರಿಸಿ ದ್ವಿಗುಣಗೊಳಿಸಲು ಹಾಗೂ ಸದರಿ ಪರಿಹಾರ ಮೊತ್ತವನ್ನು ವಿತರಿಸಲು ಅರಣ್ಯ ಇಲಾಖೆಯ ಕ್ಷೇತ್ರಾಧಿಕಾರಿಗಳಿಗೆ ಆರ್ಥಿಕ ಅಧಿಕಾರಗಳನ್ನು ಪ್ರತ್ಯಾಯೋಜಿಸಿ ಮಂಜೂರಾತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ರಾಜ್ಯ ಸರ್ಕಾರದಿಂದ ಈ ಕೆಳಕಂಡಂತೆ ಆದೇಶ ನೀಡಲಾಗಿತ್ತು.
ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆನಾಶ, ಪ್ರಕರಣಗಳಿಗೆ ಪುಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಆದೇಶದನ್ವಯ ಪಾವತಿಸುತ್ತಿರುವ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿ ಹಾಗೂ ಮಾವು, ಸಪೋಟ, ಸೀಬೆ, ಹಲಸು, ದಾಳಿಂಬೆ ಸೀತಾಫಲ ಮತ್ತು ಹಿಪ್ಪುನೇರಳ ಬೆಳೆಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿ ಪರಿಹಾರ ಮೊತ್ತವನ್ನು ನಿಗಧಿಪಡಿಸಲಾಗಿದೆ.
ಈ ಪರಿಹಾರ ಮೊತ್ತದ ಪಾವತಿಗೆ ಸಂಬಂಧಿಸಿದಂತೆ ಷರತ್ತುಗಳ ವಿವರ ಹೀಗಿದೆ:-
1) ಮೇಲಿನ ಪ್ರಕರಣಗಳಲ್ಲಿ ಒತ್ತುವರಿಗೊಂಡ ಅರಣ್ಯ ಭೂಮಿಯಲ್ಲಿ ಬೆಳೆಯಲಾದ ಬೆಳೆಗಳು ಕಾಡು ಪ್ರಾಣಿಗಳಿಂದ ಹಾನಿಗೊಂಡಲ್ಲಿ ಅಂಥ ಬೆಳೆ ನಷ್ಟಕ್ಕೆ ಪರಿಹಾರ ಧನ ನೀಡಲಾಗುವುದಿಲ್ಲ.
2) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅವರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮುಖ್ಯ ಅರಣ ಸಂರಕ್ಷಣಾಧಿಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಹಾರ ಮೊತ್ತವು ಗರಿಷ್ಠವಾಗಿರುವ ಪ್ರಕರಣಗಳಲ್ಲಿ ಪರಿಹಾರ ಧನ ವಿತರಿಸುವ ಸಂದರ್ಭದಲ್ಲಿ ಸಂಬಂಧಿಸಿದ ಕ್ಷೇತ್ರ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಸ್ಥಳ ತಪಾಸಣೆ ಮಾಡಿಸಲಾಗುತ್ತದೆ.
Crop Loss parihara-2023: ಬೆಳೆನಾಶ ಪರಿಹಾರ ಮೊತ್ತ ಪರಿಷ್ಕರಣೆ ದರ ವಿವರ ಹೀಗಿದೆ:
ಯಾವೆಲ್ಲ ಬಗ್ಗೆಯ ಬೆಳೆ ನಾಶಕ್ಕೆ ಎಷ್ಟು ಪರಿಹಾರವನ್ನು ಅರಣ್ಯ ಇಲಾಖೆಯಿಂದ ಪಡೆಯಬವುದು ಎಂದು ಈ ಕೆಳಗಿನ ಚಿತ್ರದಲ್ಲಿ ವಿವರಿಸಲಾಗಿದೆ. ಬೆಳೆನಾಶ ಪರಿಹಾರ ಪಡೆಯಲು ರೈತರು ನಿಮ್ಮ ಹತ್ತಿರದ ಅರಣ್ಯ ಇಲಾಖೆಯನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?