Kuri shed subsidy-ಕುರಿ,ಹಸು,ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣಕ್ಕೆ ರೂ 57,000 ಸಬ್ಸಿಡಿ ಪಡೆಯಲು ಅರ್ಜಿ!

Facebook
Twitter
Telegram
WhatsApp

ರೈತರಿಗೆ ಅರ್ಥಿಕವಾಗಿ ನೆರವಾಗಲು ಕೃಷಿ ಜೊತೆ ಉಪಕಸುಬುಗಳನ್ನು ಆರಂಭಿಸಲು ಕುರಿ,ಹಸು,ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣಕ್ಕೆ(januvaru shed subsidy-2024) ರೂ 57,000 ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಸ್ತುತ ಹವಾಮಾನ ವೈಪರಿತ್ಯ ಸನ್ನಿವೇಶದಿಂದ ಬೆಳೆಗಳನ್ನು ಸಮರ್ಪಕವಾಗಿ ಬೆಳೆಯಲು ಸಾಧ್ಯವಾಗದೇ ಇರುವ ಪರಿಸ್ಥಿತಿ ರೈತಾಪಿ ವರ್ಗದಲ್ಲಿ ಇದ್ದು ಇಂತಹ ಸನ್ನಿವೇಶದಲ್ಲಿ ರೈತರು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೃಷಿ ಜೊತೆಯಲ್ಲಿ ಕುರಿ,ಕೋಳಿ,ಹಸು,ಹಂದಿ ಸಾಕಾಣಿಕೆಯನ್ನು ಸಹ ಮಾಡಿಕೊಳ್ಳಬೇಕು.

ಕುರಿ,ಕೋಳಿ,ಹಸು,ಹಂದಿ ಸಾಕಾಣಿಕೆಯನ್ನು ಮಾಡಲು ಶೆಡ್ ನಿರ್ಮಾಣಕ್ಕೆ ರೈತರಿಗೆ ಅರ್ಥಿಕವಾಗಿ ನೆರವಾಗಲು ಉದ್ಯೋಗ ಖಾತ್ರಿ ಯೋಜನೆಯಡಿ(mgnreg) ಸಬ್ಸಿಡಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: free mobile repair training-2024: ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

januvaru shed subsidy details-ಉದ್ಯೋಗ ಖಾತ್ರಿ ಯೋಜನೆಯಡಿ ಎಷ್ಟು ಸಹಾಯಧನ ನೀಡಲಾಗುತ್ತದೆ?

ಉದ್ಯೋಗ ಖಾತ್ರಿ ಯೋಜನೆಯಡಿ ಕಟ್ಟುವ ಜಾನುವಾರು ಶೆಡ್ ಅಳತೆ 10 ಅಡಿ ಅಗಲ, 18 ಅಡಿ ಉದ್ದ ಗೋಡೆ, 5 ಅಡಿ ಎತ್ತರದ ಗೋಡೆ ಹಾಗೂ ಗೋದಲಿ/ಮೇವು ತೊಟ್ಟಿ ನಿರ್ಮಾಣಕ್ಕೆ ಮತ್ತು  57,000 ಸಾವಿರ ಸಬ್ಸಿಡಿ ನೀಡಲಾಗುತ್ತದೆ ಇದರಲ್ಲಿ 10,556 ರೂ. ಕೂಲಿ ವೆಚ್ಚವಾಗಿದ್ದು  46,444 ರೂ. ಸಾಮಗ್ರಿ ವೆಚ್ಚಕ್ಕೆ ಒಳಗೊಂಡಿರುತ್ತದೆ. 

Narega Yojana-ಉದ್ಯೋಗ ಖಾತ್ರಿ ಯೋಜನೆಯಡಿ ಶೆಡ್ ಗೆ ಸಹಾಯಧನ ಪಡೆಯಲು ಅರ್ಜಿ ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಯೋಜನೆಯಡಿ ಜಾನುವಾರುಗಳನ್ನು ಸಾಕಾಣಿಕೆ ಮಾಡಲು ಶೆಡ್ ನಿರ್ಮಾಣ ಮಾಡಿಕೊಳ್ಳಲು ಆಸಕ್ತಿಯಿರುವ ರೈತರು ತಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಅಗತ್ಯ ದಾಖಲೆಗಳ ಸಮೇತ ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Zilla Panchayat Recruitment 2024: ಜಿಲ್ಲಾ ಪಂಚಾಯತ್ ಖಾಲಿ ಹುದ್ದೆಗಳ ನೇಮಕಾತಿ!

How can apply for narega shed-ಶೆಡ್ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು ಅರ್ಜಿ ಸಲ್ಲಿಸಲು ಅರ್ಹರು.

2) ಬಿ.ಪಿ.ಎಲ್ ಕಾರ್ಡ ಹೊಂದಿರುವ ರೈತರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

3) ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.

4) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರು.

5) ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಪಡೆಯಲು ಜಾಬ್ ಕಾರ್ಡ ಅನ್ನು ಹೊಂದಿರಬೇಕು.

6) ಅರ್ಜಿದಾರರು ಕನಿಷ್ಟ 4 ಜಾನುವಾರುಗಳನ್ನು ಹೊಂದಿರಬೇಕಾಗುತ್ತದೆ.

7) ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳಿಂದ ಜಾನುವಾರು ಸಾಕಾಣಿಕೆ ಮಾಡಿರುವ ಕುರಿತು ದೃಡೀಕರಣ ಪ್ರಮಾಣ ಪತ್ರ ಪಡೆಯಬೇಕು.

application process- ಅರ್ಜಿ ವಿಲೇವಾರಿ ಪ್ರಕ್ರಿಯೆ:

ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಒಮ್ಮೆ ನಿಮ್ಮ ಗ್ರಾಮ ಪಂಚಾಯತಿ ಭೇಟಿ ಮಾಡಿ ಅರ್ಜಿ ಸಲ್ಲಿಸಿದ ಬಳಿಕ ಇದನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಗ್ರಾಮ ಪಂಚಾಯತಿ ಮಟ್ಟದ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆಯನ್ನು ಮಾಡಿ ಕಾಮಗಾರಿ ಅನುಷ್ಥಾನಕ್ಕೆ ವರ್ಕ್ ಅರ್ಡರ್ ನೀಡಲಾಗುತ್ತದೆ.

ಇದನ್ನೂ ಓದಿ:  Annabhagya rice-2024: ಅನ್ನಭಾಗ್ಯದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿಯಂತಹ ಕಾಳುಗಳು ಇವೆಯೇ? ಅದೇನು ಎಂದು ತಿಳಿಯಬೇಕೇ? ಇಲ್ಲಿದೆ ಸಂಪೂರ್ಣ ವಿವರ.

Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಅರ್ಜಿದಾರರ ಅಧಾರ್ ಕಾರ್ಡ/aadhar card ಪ್ರತಿ.
2) ಕುಟುಂಬದ ರೇಶನ್ ಕಾರ್ಡ/ration card
3) ಜಾಬ್ ಕಾರ್ಡ/job card
4) ಜಾನುವಾರು ಸಾಕಾಣಿಕೆ ಮಾಡಿರುವ ಕುರಿತು ದೃಡೀಕರಣ ಪ್ರಮಾಣ ಪತ್ರ 
5) ಬ್ಯಾಂಕ್ ಪಾಸ್ ಬುಕ್ ಪ್ರತಿ/bank pass book
6) ಜಾತಿ ಮತ್ತು ಆಧಾಯ ಪ್ರಮಾಣ ಪತ್ರ/caste and income certificate

mgnreg website-ಇನ್ನು ಹೆಚ್ಚಿನ ಮಾಹಿತಿ ಪಡೆಯಲು:

ಉದ್ಯೋಗ ಖಾತ್ರಿ ಯೋಜನೆ ಎಕ್ಸ್ ಖಾತೆ: Click here

ಸಹಾಯವಾಣಿ: 1800 425 8666

ವೆಬ್ಸೈಟ್: Click here

Facebook
Twitter
Telegram
WhatsApp
Picture of siddesh

siddesh

Leave a Comment

Top Stories

swavalambi sarati yojana

Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ಮತ್ತು ಸರಕು ವಾಹನ ಖರೀದಿ ಮಾಡಿ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಅರ್ಥಿಕವಾಗಿ(Car loan Subsidy application) ನೆರವಾಗಲು ಸ್ವಾವಲಂಭಿ ಸಾರಥಿ ಯೋಜನೆಯಡಿ ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ

Ganga Kalyana aplication

Ganga Kalyana- ಕೊಳವೆ ಬಾವಿ ಕೊರೆಸಲು 4.25 ಲಕ್ಷ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ರೈತರು ತಮ್ಮ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ(Ganga Kalyana)ಕೊಳವೆ ಬಾವಿಯನ್ನು ಕೊರೆಸಲು 3.75 ಲಕ್ಷ ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸುವ ವಿಧಾನ ಯಾವುದು? ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?(Ganga