loan interest Subsidy-ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

ಪಶುಪಾಲನಾ ಇಲಾಖೆಯಿಂದ ಹೈನುಗಾರಿಕೆ ವೃತ್ತಿಯ ಸಲುವಾಗಿ ರೈತರು ಬ್ಯಾಂಕ್ ಮೂಲಕ ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿ ಸಹಾಯಧನ(loan interest Subsidy) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಈ ಯೋಜನೆಯಡಿ ರೈತ ಮಹಿಳೆಯರು ಬ್ಯಾಂಕ್  ಗಳಲ್ಲಿ ತೆಗೆದುಕೊಂಡಿರುವ ಹೈನುಗಾರಿಕೆ ಮೇಲಿನ ಸಾಲಕ್ಕೆ ಬಡ್ಡಿ  ಸಹಾಯಧನ ಪಡೆಯಬಹುದಾಗಿದ್ದು, ಈ ಸೌಲಭ್ಯ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಪಶುಪಾಲನಾ ಇಲಾಖೆಯಿಂದ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಅರ್ಥಿಕವಾಗಿ ನೆರವು ನೀಡಲು ಈ ಯೋಜನೆಯಡಿ ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹೈನು ರಾಸುಗಳನ್ನು ಖರೀದಿ ಮಾಡಲು ತೆಗೆದುಕೊಂಡಿರುವ ಸಾಲಕ್ಕೆ ಬಡ್ಡಿ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: Anganwadi Recruitment-2024: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗಳ ನೇಮಕಾತಿ!

loan interest Subsidy-ಒಟ್ಟು ಸಾಲಕ್ಕೆ ಎಷ್ಟು ಬಡ್ಡಿ ಸಹಾಯಧನ ನೀಡಲಾಗುತ್ತದೆ?

ರೈತರು ಹಸು, ಎಮ್ಮೆ ಖರೀದಿಗೆ ಬ್ಯಾಂಕ್  ಗಳಿಂದ ಪಡೆದಿರುವ ಸಾಲಕ್ಕೆ  ಹಾಗೂ ಸಕಾಲದಲ್ಲಿ ಮರುಪಾವತಿ ಮಾಡುವ ರೈತರಿಗೆ  ರಾಜ್ಯ ಸರಕಾರದಿಂದ ಪಶುಪಾಲನಾ ಇಲಾಖೆವತಿಯಿಂದ ಶೇ.6 ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

loan interest subsidy yojana-ಬಡ್ಡಿ ಸಹಾಯಧನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಪಶುಪಾಲನಾ ಇಲಾಖೆಯಿಂದ ಹೈನುಗಾರಿಕೆ ಮೇಲಿನ ಸಾಲಕ್ಕೆ ಬಡ್ಡಿ ಸಹಾಯಧನ ಪಡೆಯಲು ಅವಕಾಶ ಮಾಡಿಕೊಡಲಾಗಿದ್ದು, ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹ ರೈತರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ತಾಲೂಕಿನ ಪಶು ಆಸ್ಪತ್ರೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

How can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಪ್ರಸಕ್ತ ಸಾಲಿನಲ್ಲಿ ಹೈನುಗಾರಿಕೆಗಾಗಿ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಹಸು, ಎಮ್ಮೆ ಖರೀದಿ ಸಲುವಾಗಿ ಬ್ಯಾಂಕ್  ಗಳಿಂದ ಸಾಲವನ್ನು ಪಡೆದಿರುವ ರೈತರು ಮತ್ತು ಸಕಾಲದಲ್ಲಿ ಸಾಲವನ್ನು ಮರುಪಾವತಿ  ಮಾಡಿರುವ ರೈತರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Input subsidy amount-ನಿಮ್ಮ ಸರ್ವೆ ನಂಬರ್ ಹಾಕಿ ಬರಪರಿಹಾರದ ಇನ್ಪುಟ್ ಸಬ್ಸಿಡಿ ಎಷ್ಟು ಬಂದಿದೆ ಎಂದು ತಿಳಿಯಿರಿ!

ಹೈನುಗಾರಿಕೆಗಾಗಿ ನಾನಾ ಬ್ಯಾಂಕ್‌ ಗಳಲ್ಲಿ ಸಾಲ ಪಡೆದಿರುವ ಪ್ರತಿ ಫಲಾನುಭವಿಗೆ ಗರಿಷ್ಠ 65 ಸಾವಿರ ರೂ. ಸಾಲದ ಮೊತ್ತಕ್ಕೆ ಶೇ.6 ಬಡ್ಡಿ ಸಹಾಯಧನವನ್ನು ಈ ಯೋಜನೆಯಡಿ ನೀಡಲಾಗುತ್ತದೆ. 

Required Documents for application-ಅಗತ್ಯ ದಾಖಲಾತಿಗಳೇನು?

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
2) ಬ್ಯಾಂಕ್ ಪಾಸ್ ಬುಕ್.
3) ಜಮೀನಿನ ಪಹಣಿ/RTC.
4) ಪೋಟೋ.

ಇದನ್ನೂ ಓದಿ: Pumpset Adhar link-ಕೃಷಿ ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್! ಇಲ್ಲಿದೆ ಸಂಪೂರ್ಣ ಮಾಹಿತಿ!

ಯೋಜನೆಯ ಕುರಿತು ಹಾಗೂ ಅರ್ಜಿ ಸಲ್ಲಿಕೆ ವಿಚಾರಣೆಗಾಗಿ ಸಮೀಪದ ಪಶುವೈದ್ಯ ಸಂಸ್ಥೆಗಳು ಅಥವಾ ಸಂಬಂಧಪಟ್ಟ ತಾಲೂಕು ಪಶು ಆಸ್ಪತ್ರೆಗಳನ್ನು ಸಂಪರ್ಕಿಸುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

karnataka veterinary department website-ಪಶುಪಾಲನಾ ಇಲಾಖೆಯ  ಅಧಿಕೃತ ವೆಬ್ಸೈಟ್: Click here