ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (ತಾ) ಹಸಿಗಾಳ (ಅಂ) ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ 10 ದಿನಗಳ ಕಾಲಾವಧಿಯ ಉಚಿತ ಅಣಬೆ(Free mashroom training) ಬೇಸಾಯ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಣಬೆ ಕೃಷಿ ಮಾಡಲು ಆಸಕ್ತಿಯಿರುವ ಅಭ್ಯರ್ಥಿಗಳು ಈ ಲೇಖನದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈ ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು.
ಈ ತರಬೇತಿ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: BPNL Recruitment 2024: 10th ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 5250 ಹುದ್ದೆಗಳಿಗೆ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!
mashroom application-ಎಲ್ಲಿ ಅರ್ಜಿ ಸಲ್ಲಿಸಬೇಕು
ಆಸಕ್ತಕರು 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನವರು ಮೇ 27-05-2024 ಸೋಮವಾರದಂದು ತರಬೇತಿ ಸಂಸ್ಥೆಯಲ್ಲಿ ನಡೆಯುವ ನೇರ ಸಂದಶ೯ನದಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್, 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆಗಳು: 9591514154, 8970476050, 8970446644, 9535774621
ಇದನ್ನೂ ಓದಿ: Agriculture land info-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇದನ್ನು ಹೇಗೆ ಸರಿಪಡಿಸಿಕೊಳ್ಳುವುದು?
How can Apply- ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?
1) ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಮಧ್ಯೆ ಇರಬೇಕು.
2) ಅಭ್ಯರ್ಥಿಗೆ ಕನ್ನಡ ಮತ್ತು ಇಂಗ್ಲಿಷ್ ಓದು-ಬರಹ ಬಲ್ಲವರಾಗಿರಬೇಕು.
3) ತರಬೇತಿ ಪಡೆದ ನಂತರ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.
4) ಅಭ್ಯರ್ಥಿಯು ಗ್ರಾಮೀಣ ಭಾಗದರಾಗಿದ್ದು ಬಿಪಿಎಲ್ ಕಾರ್ಡ ಹೊಂದಿರುವವರಿಗೆ ತರಬೇತಿಯಲ್ಲಿ ಭಾಗವಹಿಸಲು ಮೊದಲ ಅದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸಕ್ತರು ಗೂಗಲ್ ಫಾರ್ಮ್ ಮೂಲಕ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು: Apply Now