2023-24 ನೇ ಸಾಲಿನ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಕಾರ್ಯಕ್ರಮದಡಿಯಲ್ಲಿ ಉತ್ಪಾದನ ಮತ್ತು ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯಿಂದ ಹೊರ ಬರಲು ಗ್ರಾಮೀಣ ಮತ್ತು ನಗರ ಭಾಗದ ಯುವಕ-ಯುವತಿಯರು ಸ್ವ-ಉದ್ಯೋಗ ಆರಂಭಿಸಲು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಯೋಜನೆಯಡಿ ಅರ್ಥಿಕ ನೆರವು ಮತ್ತು ನೀವು ಪಡೆದ ಸಾಲಕ್ಕೆ ಸಹಾಯಧನವನ್ನು ಸಹ ಪಡೆಯಬವುದಾಗಿದೆ.
ಸ್ವ-ಉದ್ಯೋಗ ಮಾಡಿಕೊಳ್ಳುವವರಿಗೆ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಟ ಶೇ.25 ರಿಂದ 35% ವರೆಗೆ ಸಹಾಯಧನವನ್ನು ಈ ಯೋಜನೆಯಡಿ ಪಡೆಯಬವುದಾಗಿದೆ.
ಇದನ್ನೂ ಓದಿ: Revenue department- ಸರಕಾರದಿಂದ 11 ಇ , ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಮತ್ತು ಹದ್ದುಬಸ್ತು ಅರ್ಜಿಗೆ ಶುಲ್ಕ ಪಾವತಿ ದರ ಪಟ್ಟಿ ಪ್ರಕಟಿಸಲಾಗಿದೆ!
ಈ ಯೋಜನೆಯಡಿ ಹಸು, ಕುರಿ, ಮೇಕೆ, ಎಮ್ಮೆ, ಕೋಳಿ, ಬಾತು ಕೋಳಿ, ಟರ್ಕಿ ಕೋಳಿ, ಮೀನು ಸಾಕಾಣಿಕೆ ಹಾಗೂ ಹೋಟೆಲ್ ಮತ್ತು ಇತರೆ 250ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲಕ್ಕೆ ಸಹಾಯಧನ ಪಡೆಯಬವುದಾಗಿದೆ.
PMEGP application-ಎಲ್ಲಿ ಅರ್ಜಿ ಸಲ್ಲಿಸಬೇಕು?
ಆಸಕ್ತ ಅರ್ಜಿದಾರರು ಈ ಯೋಜನೆಯ ಪ್ರಯೋಜನ ಪಡೆಯಲು ಈ PMEGP online application ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(PMEGP)ಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ: click here
ಇದನ್ನೂ ಓದಿ: Agri startup scheme-ಕೃಷಿ ಇಲಾಖೆಯಿಂದ ಕೃಷಿ ನವೋದ್ಯಮ ಯೋಜನೆಯಡಿ ಅರ್ಜಿ ಆಹ್ವಾನ! ಶೇ 50% ಸಹಾಯಧನ 50 ಲಕ್ಷದವರೆಗೆ.
Required documents for Pmegp scheme-ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:
- ಅರ್ಜಿದಾರರ ಪೋಟೋ
- ಆಧಾರ್ ಕಾರ್ಡ
- ಗುರುತಿನ ಚೀಟಿ
- ಬ್ಯಾಂಕ್ ಪಾಸ್ ಬುಕ್
- ಪಾನ್ ಕಾರ್ಡ
- ನೀವು ಪ್ರಾರಂಭಿಸಲು ಇಚ್ಚಿಸುವ ಸ್ವ-ಉದ್ಯೋಗದ ಯೋಜನಾ ವರದಿ
ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(PMEGP):
ಕೇಂದ್ರ ಸರಕಾರವು 15 ಆಗಸ್ಟ್ 2008 ರಲ್ಲಿ ದೇಶದ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವ-ಉದ್ಯೋಗ ಪ್ರಾರಂಭಿಸಲು, ಅರ್ಥಿಕ ನೆರವು ನೀಡುವುದಕ್ಕಾಗಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(PMEGP)ಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಪಟ್ಟಣ, ನಗರ, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆ ಘಟಕಗಳನ್ನು ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50. ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಟ ಶೇ 25 ರಿಂದ 35% ವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಹಸು, ಕುರಿ, ಮೇಕೆ, ಎಮ್ಮೆ, ಕೋಳಿ, ಬಾತು ಕೋಳಿ, ಟರ್ಕಿ ಕೋಳಿ, ಮೀನು ಸಾಕಾಣಿಕೆ ಹಾಗೂ ಹೋಟೆಲ್ ಮತ್ತು ಇತರೆ 250ಕ್ಕೂ ಅಧಿಕ ಉದ್ದಿಮೆಗಳಿಗೆ ಸಾಲಕ್ಕೆ ಸಹಾಯಧನ ಪಡೆಯಬವುದಾಗಿದೆ.
ಇದನ್ನೂ ಓದಿ: LPG cylinder ekyc-ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ!
PMEGP ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ:
ಈ ಯೋಜನೆಯಡಿ ಸಹಾಯಧನ ಪಡೆದು ಸ್ವ-ಉದ್ಯೋಗ ಆರಂಭಿಸಿದ ಫಲಾನುಭವಿಗಳ ಮಾಹಿತಿಯ ಕೈಪಿಡಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: Download Now
ಈ ಯೋಜನೆಯ ಅಧಿಕೃತ ಮಾರ್ಗಸೂಚಿ: Download Now
ಯಾವೆಲ್ಲ ಲಾಭದಾಯಕ ಸ್ವ-ಉದ್ಯೋಗವನ್ನು ನೀವು ಆರಂಭಿಸಬವುದು ಎನ್ನುವುದಕ್ಕೆ ಪ್ರಾಜ್ಟೆಕ್ ರಿಪೋರ್ಟ್: Download Now
ಹೆಚ್ಚಿನ ವಿವರಗಳಿಗೆ ನಿಮ್ಮ ಜಿಲ್ಲೆಯ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಕಚೇರಿಯನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: Farm Pond application-ಶೇ 90 ಸಹಾಯಧನದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮಾಡಿಕೊಳ್ಳಲು ರೈತರಿಂದ ಅರ್ಜಿ ಆಹ್ವಾನ!