ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM-kisan 17th installment) ದೇಶ 9.3 ಕೋಟಿ ರೈತರಿಗೆ 17ನೇ ಕಂತಿನ ರೂ 2,000 ವನ್ನು ನೇರ ನಗದು ವರ್ಗಾವಣೆ(DBT) ಮೂಲಕ ರೈತರ ಖಾತೆಗೆ ಜಮಾ ಮಾಡಲು ಕೇಂದ್ರದ ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
17 ಕಂತಿನ ಹಣ ಬಿಡುಗಡೆ ಆದೇಶಕ್ಕೆ ಸಹಿ ಹಾಕಿದ ಬಳಿಕ ಈ ಕುರಿತು ಅಧಿಕೃತವಾಗಿ ಬಿಡುಗಡೆಯಾಗಿರುವ ಮಾಹಿತಿಯನ್ವಯ ಒಟ್ಟು ದೇಶದ 9.3 ಕೋಟಿ ರೈತರಿಗೆ 20,000 ಕೋಟಿ ಹಣವನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಯಾವೆಲ್ಲ ರೈತರಿಗೆ 17 ಕಂತಿನ ರೂ 2,000 ಹಣ ಜಮಾ ಅಗಲಿದೆ? 17 ನೇ ಕಂತಿನ ಹಣ ಪಡೆಯಲು ಅರ್ಹ ರೈತರ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡುವುದು ಹೇಗೆ? ಯಾವ ದಿನ ರೈತರ ಖಾತೆ ಹಣ ಸೇರಲಿದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Bele vime-2024: ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಎಷ್ಟು ಜಮಾ ಅಗಿದೆ ಎಂದು ತಿಳಿಯುವುದು ಹೇಗೆ?
PM-kisan 17th installment eligible farmers list: ಈ ರೈತರಿಗೆ ಮಾತ್ರ ಸಿಗಲಿದೆ ರೂ 2,000! ಅರ್ಹ ರೈತರ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡುವುದು ಹೇಗೆ?
ಕೇಂದ್ರದ ಅಧಿಕೃತ ಪಿ ಎಂ- ಕಿಸಾನ್ ಪೋರ್ಟಲ್ ನಲ್ಲಿ ಈಗಾಗಲೇ 17ನೇ ಕಂತಿನ ಅರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಅರ್ಹ ರೈತರ ಪಟ್ಟಿಯನ್ನು ಚೆಕ್ ಮಾಡಬಹುದು.
Step-1: ಮೊದಲಿಗೆ ಈ 17th installment eligible farmers list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿ.ಎಂ-ಕಿಸಾನ್ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ತದನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “beneficiary list” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: adhar update-2024: ಇನ್ನು ಮುಂದೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಹಣ ಪಡೆಯಲು ಈ ಕೆಲಸ ತಪ್ಪದೇ ಮಾಡಿ!
Step-3: ಇದಾದ ಬಳಿಕ ಇಲ್ಲಿ ರಾಜ್ಯ(State),ಜಿಲ್ಲೆ(District),ತಾಲ್ಲೂಕು(Block), ಗ್ರಾಮದ(Village) ಹೆಸರನ್ನು ಆಯ್ಕೆ ಮಾಡಿಕೊಂಡು “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೋರಿಸುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಇಲ್ಲವಾ? ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.
ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವಾದ್ದಲ್ಲಿ ಒಮ್ಮೆ ನಿಮ್ಮೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಈ ಕುರಿತು ವಿಚಾರಿಸಿ.
PM-kisan 17th installment date 2024- ಯಾವ ದಿನ ರೈತರ ಖಾತೆ 17ನೇ ಕಂತಿನ ಹಣ ಸೇರಲಿದೆ!
ನಿನ್ನೆ ಅಂದರೆ 10 ಜೂನ್ 2024 ರಂದು ಪಿ ಎಂ ಕಿಸಾನ್ ಯೋಜನೆಯ ಹಣ ಬಿಡುಗಡೆ ಆದೇಶದ ಕಡತಕ್ಕೆ ಸಹಿ ಹಾಕಲಾಗಿದ್ದು, ರೈತರ ಖಾತೆಗೆ ಈ ಯೋಜನೆಯ 17ನೇ ಕಂತಿನ ಅರ್ಥಿಕ ನೆರವು ಈ ತಿಂಗಳ ಅಂದರೆ ಜೂನ್-2024 ತಿಂಗಳ ಕೊನೆಯ ವಾರ ಜಮಾ ಅಗುವ ನೀರಿಕ್ಷೆ ಇದೆ.
ಇದನ್ನೂ ಓದಿ: Bele vime amount- 2ನೇ ಹಂತದಲ್ಲಿ ಎಕರೆಗೆ 18,000 ರೂ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆ!
PM Modi-ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧ: ಪ್ರಧಾನಿ ನರೇಂದ್ರ ಮೋದಿ
ರೈತರ ಕಲ್ಯಾಣಕ್ಕೆ ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿರುವ ಕಾರಣ, ಅಧಿಕಾರ ವಹಿಸಿಕೊಂಡ ಬಳಿಕ ಮೊದಲು ಕೃಷಿ ಸಂಬಂಧಿತ ಕಡತಕ್ಕೆ ಸಹಿ – ಪ್ರಧಾನ ಮಂತ್ರಿ
ಭವಿಷ್ಯದಲ್ಲಿ ರೈತರು ಮತ್ತು ಕೃಷಿ ವಲಯ ಸಂಬಂಧಿತವಾಗಿ ಇನ್ನೂ ಹೆಚ್ಚು ಕಾರ್ಯೋನ್ಮುಖ – ಪ್ರಧಾನಿ ನರೇಂದ್ರ ಮೋದಿ