PM-kisan amount date-17ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ಪ್ರಕಟ!

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಉತ್ತಮ ಮುಂಗಾರು ಮಳೆಯಾಗುತ್ತಿದ್ದು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರಿಗೆ ಸಿಹಿ ಸುದ್ದಿ ನೀಡಿರುವ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM-kisan amount) ಅಧಿಕೃತ ಎಕ್ಸಾ ಖಾತೆಯಲ್ಲಿ 17ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡುವ ದಿನಾಂಕವನ್ನು ಪ್ರಕಟಿಸಿದೆ.

PM-kisan amount date-17ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ಪ್ರಕಟ!
PM-kisan amount-2024

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಉತ್ತಮ ಮುಂಗಾರು ಮಳೆಯಾಗುತ್ತಿದ್ದು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರಿಗೆ ಸಿಹಿ ಸುದ್ದಿ ನೀಡಿರುವ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM-kisan amount) ಅಧಿಕೃತ ಎಕ್ಸಾ ಖಾತೆಯಲ್ಲಿ 17ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡುವ ದಿನಾಂಕವನ್ನು ಪ್ರಕಟಿಸಿದೆ.

ಈ ಯೋಜನೆಯಡಿ ಯಾವ ದಿನದಂದು(pm kisan 17th installment date 2024) ರೂ 2,000 ರೈತರ ಖಾತೆಗೆ ಜಮಾ ಅಗಲಿದೆ ಮತ್ತು ಪಿ ಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ಮಾಡಿಕೊಳ್ಳುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇತರ ರೈತರಿಗೂ ಮಾಹಿತಿ ತಿಳಿಯಲು ಸಹಕರಿಸಿ.

ಇದನ್ನೂ ಓದಿ: fasal bima yojana-ಈ ಒಂದು ತಪ್ಪಿನಿಂದ ಅನೇಕ ರೈತರಿಗೆ ಬೆಳೆ ವಿಮೆ ಜಮಾ ಅಗಿಲ್ಲ! ಇಲ್ಲಿದೆ ಸೂಕ್ತ ಪರಿಹಾರ!

pm kisan 17th installment official release date 2024: 17ನೇ ಕಂತಿನ ಕಿಸಾನ್ ಸಮ್ಮಾನ್ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ಪ್ರಕಟ:

ಕೇಂದ್ರ ಕೃಷಿ ಇಲಾಖೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಎಕ್ಸಾ ಖಾತೆಯಲ್ಲಿ 17ನೇ ಕಂತಿನ ಹಣವನ್ನು ರೈತರ ಖಾತೆಗ್ ಜಮಾ ಮಾಡುವ ದಿನಾಂಕವನ್ನು ಪ್ರಕಟಿಸಲಾಗಿದ್ದು, ದಿನಾಂಕ: 18 ಜೂನ್ 2024 ರಂದು ದೇಶದ ಎಲ್ಲಾ ರೈತರ ಖಾತೆಗೆ ಏಕ ಕಾಲಕ್ಕೆ ನೇರ ನಗದು ವರ್ಗಾವಣೆಯ ಮೂಲಕ ರೂ 2,000 ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

PM-kisan e-KYC: 17ನೇ ಕಂತಿನ ಹಣ ಪಡೆಯಲು ತಪ್ಪದೇ ಮಾಡಿಸಿ ಇ-ಕೆವೈಸಿ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕಂತಿನ ಹಣ ಪಡೆಯಲು ಇಲ್ಲಿಯವರೆಗೆ ಇ-ಕೆವೈಸಿ ಮಾಡಿಸದ ರೈತರು ಕೂಡಲೇ ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಈ 18 ಜೂನ್ 2024 ದಿನಾಂಕದ ಒಳಗಾಗಿ ಕಚೇರಿ ಭೇಟಿ ಮಾಡಿ ಇ-ಕೆವೈಸಿ ಮಾಡಿಸಿಕೊಳ್ಳಿ. 

ಇದನ್ನೂ ಓದಿ: SBI Bank Recruitment-2024: SBI ಬ್ಯಾಂಕ್ ನಿಂದ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ! ವೇತನ ₹69,810!

Required Documents for e-KYC: ಇ-ಕೆವೈಸಿ ಮಾಡಿಸಲು ಬೇಕಾಗುವ ದಾಖಲಾತಿಗಳು:

1) ಆಧಾರ್ ಕಾರ್ಡ ಪ್ರತಿ.
2) ಮೊಬೈಲ್ ಮತ್ತು ಮೊಬೈಲ್ ಸಂಖ್ಯೆ(OTP ಪಡೆಯಲು ಬೇಕಾಗುತ್ತದೆ).
3) ಅರ್ಜಿದಾರ.

ಇ-ಕೆವೈಸಿ ಮಾಡಿಸದಿದ್ದರೆ ಹಣ ಜಮಾ ಅಗುವುದಿಲ್ಲ:

ಒಂದೊಮ್ಮೆ ಇ-ಕೆವೈಸಿ ಮಾಡಿಸಿಲ್ಲದ ರೈತರು 18 ಜೂನ್ 2024ರ ಒಳಗಾಗಿ ಇ-ಕೆವೈಸಿ ಮಾಡಿಸದೇ ಇದ್ದರೆ 17ನೇ ಕಂತಿನ ಹಣ ಜಮಾ ಅಗುವುದಿಲ್ಲ.

ಇದನ್ನೂ ಓದಿ: PM-kisan 17th installment-ರೈತರ ಖಾತೆಗೆ ಪಿ ಎಂ ಕಿಸಾನ್ 16ನೇ ಕಂತಿನ ಹಣ! ಈ ರೈತರಿಗೆ ಮಾತ್ರ ಸಿಗಲಿದೆ ರೂ 2,000!

ಇ-ಕೆವೈಸಿ ಏಕೆ ಮಾಡಿಸಬೇಕು?

ಕೃಷಿ ಇಲಾಖೆಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳಬೇಕು ಎಂದು ಈ ಹಿಂದೆಯೇ ಪ್ರಕಟಣೆ ಹೊರಡಿಸಲಾಗಿರುತ್ತದೆ. ಇದನ್ನು ಏಕೆ ಮಾಡಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ವಿವರ ಹೀಗಿದೆ.

ನಕಲಿ ಫಲಾನುಭವಿಗಳಿಗೆ ಈ ಯೋಜನೆಯಡಿ ಹಣ ಸಂದಾಯವಾಗುವುದನ್ನು ತಡೆಯಲು ಇ-ಕೆವೈಸಿ ಸಹಕಾರಿಯಾಗಿದೆ. ಜೊತೆಗೆ ನೈಜ ಅರ್ಹ ಫಲಾನುಭವಿಗಳಿಗೆಯೇ ಈ ಯೋಜನೆಯಡಿ ಹಣ ಸಂದಾಯವಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯ ಮಾಡಲಾಗಿದೆ. 

ಮರಣ ಹೊಂದಿದ ಫಲಾನುಭವಿಗಳನ್ನು ಗುರುತಿಸಿ ಈ ಯೋಜನೆಯ ಹಣ ಅವರ ಖಾತೆಗೆ ಜಮಾ ಅಗುವುದನ್ನು ನಿಲ್ಲಿಸಲು ಇ-ಕೆವೈಸಿ ಮಾಡಲು ಎಲ್ಲಾ ಫಲಾನುಭವಿಗಳಿಗೆ ಸೂಚಿಸಲಾಗಿದೆ.