self employment subsidy-ಸ್ವ-ಉದ್ಯೋಗ ಆರಂಭಿಸಲು 30,000 ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

August 23, 2024 | Siddesh
self employment subsidy-ಸ್ವ-ಉದ್ಯೋಗ ಆರಂಭಿಸಲು 30,000 ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
Share Now:

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಡಿ(karnataka mahila nigama) ಸ್ವ-ಉದ್ಯೋಗ(self employment )ಆರಂಭಿಸಲು ರೂ 30,000 ಸಾವಿರ ಸಹಾಯಧನ ನೀಡಲು ಆಸಕ್ತಿಯಿರುವ ಅರ್ಹ ಅರ್ಜಿದಾರರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳಾ ಫಲಾನುಭವಿಗಳು ಅರ್ಥಿಕವಾಗಿ ಅಭಿವೃದ್ಧಿ ಹೊಂದಲು ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಧನ್ಯಶ್ರೀ(dhanya shree) ಮತ್ತು ಚೇತನ(chenata yojane) ಯೋಜನೆಯಡಿಯಲ್ಲಿ ರೂ 30,000 ಅರ್ಥಿಕ ನೆರವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಲು 21 ಸೆಪ್ಟಂಬರ್ 2024 ಕೊನೆಯ ದಿನಾಂಕವಾಗಿದ್ದು ಅರ್ಹ ಅರ್ಜಿದಾರರು ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: ration card e-KYC-ರೇಷನ್ ಕಾರ್ಡ್ E-KYC ಮಾಡಲು ಕೊನೆಯ ದಿನಾಂಕ ನಿಗದಿ!

Documents for application-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಬ್ಯಾಂಕ್ ಪಾಸ್ ಬುಕ್
4) ರೇಷನ್ ಕಾರ್ಡ್
5) ಸ್ವ-ಉದ್ಯೋಗದ ಪೂರಕ ದಾಖಲೆಗಳು
6) ಚಟುವಟಿಕೆಯ ಯೋಜನಾ ವರದಿ
7) ವಾಸ ದೃಢೀಕರಣ ಪ್ರಮಾಣ ಪತ್ರ

apply method-ಅರ್ಜಿ ಸಲ್ಲಿಕೆ ವಿಧಾನ:

ಅರ್ಹ ಫಲಾನುಭವಿಗಳು ಅಗತ್ಯ ಪೂರಕ ದಾಖಲೆಗಳ ಸಮೇತ ಸೇವಾ ಸಿಂಧು ಪೋರ್ಟಲ್ ಮತ್ತು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು.

How can apply- ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) ಅರ್ಜಿದಾರರು ಕರ್ನಾಟಕ ಖಾಯಂ ನಿವಾಸಿಗಳಾಗಿರಬೇಕು.

2) ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Mahila nigama yojana-ಉದ್ಯೋಗಿನಿ ಯೋಜನೆಯಡಿ 1.5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

seva sindhu application-ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅರ್ಜಿದಾರರು ತಮ್ಮ ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ಮೂಲಕ ಪೂರಕ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ವೆಬ್ಸೈಟ್ ಅನ್ನು ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಮೊದಲ ಬಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡುತ್ತಿದ್ದಲ್ಲಿ "New user ? Register here" ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಂಡು User ID ಮತ್ತು password ಹಾಕಿ ಲಾಗಿನ್ ಅಗಬೇಕು.

ಇದನ್ನೂ ಓದಿ: Krushi Pumpset-ಕೃಷಿ ಪಂಪ್ ಸೆಟ್ ಹೊಂದಿರುವವರು ತಪ್ಪದೇ ಈ ಕೆಲಸವನ್ನು ಮಾಡುವುದು ಕಡ್ಡಾಯ!

Step-3: ಬಳಿಕ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ "submit" ಬಟನ್ ಮೇಲೆ ಕ್ಲಿಕ್ ಮಾಡಬೇಕು.

helpline number-ಸಹಾಯವಾಣಿ: 080-26632973
ಅಧಿಕೃತ ವೆಬ್ಸೈಟ್- Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: