Land survey chian- ನಿಮ್ಮ ಜಮೀನಿನ ಸರ್ವೆ ಮಾಡಲು ಬಳಕೆ ಮಾಡುವ ಚೈನಿನ ಕುರಿತು ಈ ಮಾಹಿತಿ ನಿಮಗೆ ಗೊತ್ತೇ?

ಸಾಮಾನ್ಯವಾಗಿ ರಾಜ್ಯದ್ಯಂತ ಎಲ್ಲಾ ರೈತರ ಜಮೀನಿನ ಸರ್ವೆ ಮಾಡುವ ಸಂದರ್ಭದಲ್ಲಿ ಭೂಮಿಯ ವಿಸ್ತೀರ್ಣವನ್ನು ಅಳತೆ ಮಾಡಲು ಚೈನ್ ಅನ್ನು ಬಳಕೆ ಮಾಡಲಾಗುತ್ತದೆ, ಈ ಚೈನ್(Land survey chian) ಕುರಿತು ಹಲವು ಜನರಿಗೆ ಗೊತ್ತಿಲ್ಲದೇ ಇರುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಒಂದು ಚೈನ್ ಎಷ್ಟು ಉದ್ದ ಬರುತ್ತದೆ? ಒಂದು ಕೊಂಡಿ ಅಳತೆ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ.

Land survey chian- ನಿಮ್ಮ ಜಮೀನಿನ ಸರ್ವೆ ಮಾಡಲು ಬಳಕೆ ಮಾಡುವ ಚೈನಿನ ಕುರಿತು ಈ ಮಾಹಿತಿ ನಿಮಗೆ ಗೊತ್ತೇ?
agriculture land survey chian details-2024

ಸಾಮಾನ್ಯವಾಗಿ ರಾಜ್ಯದ್ಯಂತ ಎಲ್ಲಾ ರೈತರ ಜಮೀನಿನ ಸರ್ವೆ ಮಾಡುವ ಸಂದರ್ಭದಲ್ಲಿ ಭೂಮಿಯ ವಿಸ್ತೀರ್ಣವನ್ನು ಅಳತೆ ಮಾಡಲು ಚೈನ್ ಅನ್ನು ಬಳಕೆ ಮಾಡಲಾಗುತ್ತದೆ, ಈ ಚೈನ್(Land survey chian) ಕುರಿತು ಹಲವು ಜನರಿಗೆ ಗೊತ್ತಿಲ್ಲದೇ ಇರುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಒಂದು ಚೈನ್ ಎಷ್ಟು ಉದ್ದ ಬರುತ್ತದೆ? ಒಂದು ಕೊಂಡಿ ಅಳತೆ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ.

ಜಮೀನಿನ ಸರ್ವೆಯನ್ನು ಪ್ರತಿಯೊಬ್ಬರೂ ಮಾಡಿಸುತ್ತಾರೆ. ಪ್ರತಿಯೊಂದು ಜಮೀನ ವಿಚಾರದಲ್ಲಿ ಹಿಸ್ಸಾ ಮಾಡುವ ಸಂದರ್ಭದಲ್ಲಿ ಅಥವಾ ಇನ್ನುವುದೇ ಕೆಲವೊಂದು ಜಮೀನಿನ ವಿಸ್ತೀರ್ಣದ ಅಳತೆಯನ್ನು  ತಿಳಿದುಕೊಳ್ಳಲು ಜಮೀನಿನ ಸರ್ವೇಯನ್ನು ಮಾಡಿಸುತ್ತಾರೆ, ಇದಕ್ಕಾಗಿಯೇ ಸರ್ಕಾರದಲ್ಲಿ ಒಂದು ವಿಭಾಗವಿರುತ್ತದೆ. 

ಕರ್ನಾಟಕ ಲ್ಯಾಡ್ ಸರ್ವೆ ವಿಭಾಗ ಈ ಕಾರ್ಯವನ್ನು ನಿರ್ವಹಿಸುತ್ತದೆ. ಕರ್ನಾಟಕದಲ್ಲಿ ಜಮೀನಿನ ಸರ್ವೆ ಮಾಡಲು  ಯಾವ  ಚೈನನ್ನು ಉಪಯೋಗಿಸುತ್ತಾರೆ ಎಂಬುದರ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ವಿವರಿಸುವ ಪ್ರಯನ್ನವನ್ನು ಮಾಡಿದ್ದೇವೆ.  

ಇದನ್ನೂ ಓದಿ: Parihara Payment Failed Cases-ರೈತರ ಖಾತೆಗೆ ಬರ ಪರಿಹಾರ ಜಮಾ ಅಗದಿರಲು ಕಾರಣಗಳ ಪಟ್ಟಿ ಬಿಡುಗಡೆ!         

ಎಲ್ಲಾ ಭೂಮಾಪಕರು ಸರ್ವೇಯನ್ನು  ಮಾಡಲು ಮೆಟ್ರಿಕ್ ಚೈನನ್ನು ಉಪಯೋಗಿಸುತ್ತಾರೆ. ಮೆಟ್ರಿಕ್ ಚೈನನ್ನು ಬಳಕೆ  ಮಾಡಿದರು  ಕೂಡ ಅಳತೆ   ಮಾಡುವುದು ಆಣೆ ಪದ್ಧತಿಯಲ್ಲಾಗಿದೆ. ಸರ್ವೆ ಡಿಪಾರ್ಟ್ಮೆಂಟ್ ನಲ್ಲಿ ಉಪಯೋಗ ಮಾಡುವ  ಚೈನು 10 ಮೀಟರ್ ಅಥವಾ 33 ಅಡಿ ಇರುತ್ತದೆ.10 ಮೀಟರ್ ನ  ಚೈನಿ ನಲ್ಲಿ 50 ಕೊಂಡಿಗಳು ಇರುತ್ತವೆ. ಒಂದು ಲಿಂಕು 20 ಸೆಂಟಿ ಮೀಟರ್ ಇರುತ್ತದೆ. 25 ಲಿಂಕಿನಲ್ಲಿ ಒಂದು ಹಿತ್ತಾಳೆ ಗುರಿ ಇರುತ್ತದೆ. ಅ ಗರಿಯಲ್ಲಿ   ಎಂಟಾಣೆ  ಅಂತ  ಬರೆದಿರುತ್ತಾರೆ. ಒಂದು ಚೈನು  16 ಆಣೆ ಇರುತ್ತದೆ.

ಒಂದು ಆಣೆ ಎಂದರೆ 2.0625 ಅಡಿ ಆಗಿದೆ. ಅ ಚೈನಿನಲ್ಲಿ  ಒಂದು ಆಣೆ ಎಂದರೆ ಮೂರು ಕೊಂಡಿಗಳು  ಹಾಗೂ ಎಂಟಾಣಿ  ಎಂದರೆ 25,26,27,28, ನೆಯ  ಈ ನಾಲ್ಕು ಕೊಂಡಿಗಳನ್ನು ಗಣನೆಗೆ  ತೆಗೆದುಕೊಳ್ಳುತ್ತಾರೆ. ಚೈನಿನ ಅಳತೆ  ಮಾಡುವಾಗ  ಹಿಡಿಕೆಯಾ ಕೊನೆಯ  ಭಾಗದಲ್ಲಿ ಮಾರ್ಕ್ ಇರುತ್ತದೆ. 

ಅ ಮಾರ್ಕಿ ನಲ್ಲಿ ಮೊಳೆಗಳನ್ನು  ಇರಿಸಿ ಒಂದು ಹಿಡಿಕೆಯಿಂದ  ಇನ್ನೊಂದು ಹಿಡಿಕಿಯವರೆಗೊ ಮೊಳೆಯನ್ನು ಹಾಕಬೇಕು . ಒಂದು ಎಕರೆಯಲ್ಲಿ  40 ಗುಂಟೆ ಇರುತ್ತದೆ. ಒಂದು ಗುಂಟೆ ಎಂದರೆ ಒಂದು ಚೌಕಾಕಾರದಲ್ಲಿ ನಾಲ್ಕು ಕಡೆ  ಒಂದು ಚೈನು ಉದ್ದ ಒಂದು ಚೈನು ಅಗಲ  ಹಾಕಿದಾಗ  ಅದು  1 ಗುಂಟೆ ಆಗುತ್ತದೆ.1 ಗುಂಟೆ ಗೆ 1089 ಸ್ಕ್ವರ್ ಪೂಟ್ ಅಗುತ್ತದೆ.

ಇದನ್ನೂ ಓದಿ: Monsoon update 2024-ರಾಜ್ಯದ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ! ಇಲ್ಲಿದೆ ಮುಂಗಾರು ಪ್ರವೇಶ ದಿನಾಂಕ!

1 ಎಕರೆಗೆ 43560 ಸ್ಕ್ವರ್ ಪೂಟ್ ಅಗುತ್ತದೆ.  ಜಮೀನಿನ  ಅಳತೆಯನ್ನು ಅಂದಾಜು ಚೌಕಾಕಾರ ಅಥವಾ ಆಯತಾಕಾರದ ವಿಧದಲ್ಲಿ ಅಳೆಯಲಾಗುತ್ತದೆ. ಪ್ರತಿಯೊಂದು ರೀತಿಯಲ್ಲೂ ಇರುವ  ಜಮೀನನ್ನು ಕೂಡ  ಅಂದರದೇ  ಅದ  ಒಂದು ಫಾರ್ಮೂಲವನ್ನು ಬಳಸಿ  ಲೆಕ್ಕಾಚಾರ ಮಾಡಲಾಗುತ್ತದೆ. 

ಅದನ್ನು ಹೊರತುಪಡಿಸಿ  ಬೇರೆ ರೀತಿಯ  ವೇದದಲ್ಲಿರುವ  ಜಮೀನನ್ನು ಕೂಡ  ಕೆಲವು ಫಾರ್ಮೂಲದ  ಮೂಲಕ ಅಳತೆ ಮಾಡಲಾಗುತ್ತದೆ. ಈ ರೀತಿಯಾಗಿ ಚೈನಿನ  ಮೂಲಕ ಜಮೀನಿನ  ಅಳತೆಯನ್ನು ಕರ್ನಾಟಕ ಸರ್ವೆ ವಿಭಾಗದವರು ಮಾಡುತ್ತಾರೆ.

ಇದನ್ನೂ ಓದಿ: Parihara New order-ರೈತರಿಗೆ ಬರ ಪರಿಹಾರ ವಿತರಣೆ ಕುರಿತು ನೂತನ ಆದೇಶ ಪ್ರಕಟ!

Online Land survey Documents Download link- ಜಮೀನಿನ ಎಲ್ಲಾ ದಾಖಲೆಗಳನ್ನು ಮೊಬೈಲ್ ನಲ್ಲಿ ಪಡೆಯಬವುದು:

ಈ ಲಿಂಕ್ Click here ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ Mojini ತಂತ್ರಾಂಶ ಭೇಟಿ ಮಾಡಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ OTP ಪಡೆದು ಲಾಗಿನ್ ಮಾಡಿಕೊಂಡು, ಜಮೀನಿನ ಸರ್ವೆ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳಬವುದಾಗಿದೆ.

ಯಾವೆಲ್ಲ ದಾಖಲಾತಿಗಳನ್ನು ಡೌನ್ಲೋಡ್ ಮಾಡಬಹುದು?

1. Atlas (ಅಟ್ಲಾಸ್),

2. Survey Pakka Book (ಸರ್ವೆ ಪಕ್ಕಾ ಪುಸ್ತಕ),

3. Tippan (ಟಿಪ್ಪಣಿ),

4. Akarband (ಆಕಾರಬಂದು),

5. FMB (ಎಫ್.ಎಮ್.ಬಿ),

6. Survey Prati Book (ಸರ್ವೆ ಪ್ರತಿ ಪುಸ್ತಕ) ಸೇರಿದಂತೆ 90 ಕ್ಕೂ ಹೆಚ್ಚಿನ ದಾಖಲೆಗಳನ್ನು ಈ ವೆಬ್ಸೈಟ್ ನಲ್ಲಿ ಪಡೆಯಬವುದಾಗಿದೆ.

ಇದನ್ನೂ ಓದಿ: Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!