tmc water means- ಒಂದು ಟಿಎಂಸಿ ನೀರು ಎಂದರೆ ಎಷ್ಟು? TB Dam ಕುರಿತು ಇಲ್ಲಿದೆ ಮಾಹಿತಿ!

ಪ್ರಸ್ತುತ ರಾಜ್ಯದಲ್ಲಿ ರೈತಾಪಿ ವರ್ಗದಲ್ಲಿ ತೀರ್ವ ಚರ್ಚೆಯಲ್ಲಿರುವ ವಿಷಯವೇಂದರೆ ಅದು ತುಂಗಭದ್ರಾ(tungabhadra dam) ಡ್ಯಾಮ್ ನ 19 ನೇ ಗೇಟ್ ಮುರಿದು ದೊಡ್ಡ ಮಟ್ಟದ ನೀರುವ ಡ್ಯಾಮ್ ನಿಂದ ಹರಿದು ಹೋಗುತ್ತಿರುವುದು. tungabhadra dam, tungabhadra dam information, tungabhadra dam news, tb dam news today, tungabhadra dam tmc, tungabhadra dam gate broken, one tmc how many litres, one tmc details, tmc water, tb dam news, tmc water means, , tungabhadra dam news

tmc water means- ಒಂದು ಟಿಎಂಸಿ ನೀರು ಎಂದರೆ ಎಷ್ಟು? TB Dam ಕುರಿತು ಇಲ್ಲಿದೆ ಮಾಹಿತಿ!
tungabhadra dam

ಪ್ರಸ್ತುತ ರಾಜ್ಯದಲ್ಲಿ ರೈತಾಪಿ ವರ್ಗದಲ್ಲಿ ತೀರ್ವ ಚರ್ಚೆಯಲ್ಲಿರುವ ವಿಷಯವೇಂದರೆ ಅದು ತುಂಗಭದ್ರಾ(tungabhadra dam) ಡ್ಯಾಮ್ ನ 19 ನೇ ಗೇಟ್ ಮುರಿದು ದೊಡ್ಡ ಮಟ್ಟದ ನೀರುವ ಡ್ಯಾಮ್ ನಿಂದ ಹರಿದು ಹೋಗುತ್ತಿರುವುದು.

ಟಿವಿ ನ್ಯೂಸ್ ಚಾನಲ್ ನಲ್ಲಿ ಕೆಲವೇ ಗಂಟೆಗಳಲ್ಲಿ ಇಷ್ಟು ಪ್ರಮಾಣದ ನೀರುವ ಅಂದರೆ ಇಷ್ಟು ಟಿ ಎಂ ಸಿ ನೀರುವ ಜಲಾಶಯದಿಂದ ಹರಿದು ಹೋಗುತ್ತಿದೆ ಎಂದು ಹೇಳುತ್ತಿದ್ದಾರೆ.

ಒಂದು ಟಿ ಎಂ ಸಿ ನೀರು ಎಂದರೆ ಎಷ್ಟು ಪ್ರಮಾಣದ ನೀರು ಎಂದು ಅನೇಕ ಜನರಿಗೆ ಅಧಿಕೃತ ಮಾಹಿತಿ ಇಲ್ಲದಿರುವ ಕಾರಣ ಈ ಲೇಖನದಲ್ಲಿ ಒಂದು ಟಿ ಎಂ ಸಿ ನೀರು ಎಂದರೆಷ್ಟು ಪ್ರಮಾಣದ ನೀರು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಸಾಮಾನ್ಯವಾಗಿ ನೀರನ್ನು ಅಳೆಯುವ ಮಾಪಕಗಳು ಎಲ್ಲರಿಗೂ ತಿಳಿದಿರುವುದು 'ಲೀಟರ್' ಪದ. ಅದೇ ನೀರಿನ ಪ್ರಮಾಣ ದೊಡ್ಡದಿರುವಾಗ ಅಳೆಯುವ ಮಾಪಕವೂ ಬದಲಾಗುತ್ತದೆ. ಈ ಬಗ್ಗೆ ಜಾಲತಾಣದಲ್ಲಿ ಹುಡುಕಿದಾಗ ಜನರಿಗೆ ಉತ್ತರ ಸಿಗುತ್ತದೆ. ಇದರ ವಿವರ ಹೀಗಿದೆ.

ಇದನ್ನೂ ಓದಿ: bele vime last date- ಬೆಳೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

one tmc how many litres-ಒಂದು ಟಿಎಂಸಿ ನೀರು ಎಂದರೆಷ್ಟು? 

ಒಂದು ಟಿ.ಎಂ.ಸಿ ಅಂದರೆ ಒಂದು ಸಾವಿರ ಅಡಿ ಉದ್ದ, ಸಾವಿರ ಅಡಿ ಅಗಲ, ಸಾವಿರ ಅಡಿ ಎತ್ತರದ ನೀರಿನ ರಾಶಿ.

2300 ಎಕರೆ ಜಾಗದಲ್ಲಿ ಒಂದು ಅಡಿ ನೀರು ನಿಂತರೆ ಅದು 1 ಟಿಎಂಸಿಗೆ ಸಮ. ಟಿಎಂಸಿಯ ಪೂರ್ಣ ರೂಪ ಸಾವಿರ ಮಿಲಿಯನ್ ಕ್ಯೂಬಿಕ್ ಅಡಿ. ಇದನ್ನು T.M.C ಅಥವಾ TMC ft ಅಥವಾ Tmcft ಎಂದೂ ಸೂಚಿಸಲಾಗುತ್ತದೆ. ಇದು ನೀರಿನ ಪ್ರಮಾಣವನ್ನು ಅಳೆಯಲು ಬಳಸುವ ಒಂದು ಘಟಕವಾಗಿದೆ

1 ಟಿಎಂಸಿ ಎಂದರೆ ಅಂದಾಜು 2831 ಕೋಟಿ ಲೀಟರ್ ನೀರು ಅಥವಾ ಘನ ಅಡಿ. ಸಾಮಾನ್ಯವಾಗಿ ದೊಡ್ಡ ಜಲಾಶಯಗಳ ಸಾಮರ್ಥ್ಯವನ್ನು ಅಳೆಯಲು ಟಿಎಂಸಿ ಎಂಬ ಪ್ರಮಾಣವನ್ನು ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ:  kaludhari-ಕಾಲುದಾರಿ ಮತ್ತು ಬಂಡಿದಾರಿ ಕುರಿತು ರೈತರಿಗೆ ಸಿಹಿ ಸುದ್ದಿ ನೀಡಿದ ಹೈಕೂರ್ಟ್!

ಇದನ್ನೂ ಓದಿ: Agriculture Land information: ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಅಳತೆ ಎಷ್ಟು ಎಂದು ತಿಳಿಯುವುದು ಹೇಗೆ?

tb dam news today- ತುಂಗಭದ್ರಾ ಡ್ಯಾಮ್ ನಲ್ಲಿ ಘಟನೆ ವಿವರ ಹೀಗಿದೆ:

ಉತ್ತರ ಕರ್ನಾಟಕ ಭಾಗದ ರೈತರ ಜೀವನಾಡಿ ಎಂದು ಕರೆಯುವ ತುಂಗಭದ್ರಾ ಡ್ಯಾಮ್ ನ 19ನೇ ಕ್ರಸ್ಟ್‌ಗೇಟ್‌ನ ಚೈನ್‌ ಲಿಂಕ್ ಮುರಿದು ಹೋಗಿ, ಭಾರಿ ಪ್ರಮಾಣದ ನೀರು ನದಿಗೆ ವ್ಯರ್ಥವಾಗಿ ಡ್ಯಾಮ್ ನಿಂದ ಪೋಲಾಗಿ ಹೋಗುತ್ತಿದೆ. ಇತಿಹಾಸದಲೇ ಮೊದಲ ಬಾರಿಗೆ ಈ ರೀತಿಯ ಘಟನೆ ಮೊದಲ ಬಾರಿಗೆ ನಡೆದಿದೆ.

ಶನಿವಾರ ರಾತ್ರಿ 11.15ರ ಹೊತ್ತಿಗೆ ಚೈನ್‌ ಲಿಂಕ್ ಮುರಿದು ಹೋಗಿದ್ದು, ಮೀನುಗಾರರಿಗೆ ಪ್ರಥಮದಲ್ಲಿ ಈ ಮಾಹಿತಿ ಸಿಕ್ಕಿದು, ಇವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ, ತದನಂತರ ಜಲಾಶಯದ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಪರಿಶೀಲಿಸಿದಾಗ ಗೇಟ್ ಮುರಿದಿರುವುದು ದೃಢಪಟ್ಟಿತು. ಈ ವೇಳೆ ಮುರಿದ 19ನೇ ಗೇಟ್‌ನಿಂದ 35 ಸಾವಿರ ಕ್ಯುಸೆಕ್ ನೀರು ವ್ಯರ್ಥವಾಗಿ ಹರಿದಿದ್ದರಿಂದ, 

ಜಲಾಶಯ ಒಂದು ಹಂತದಲ್ಲಿ ಅದುರಿದ ಅನುಭವ ಆಯಿತು. ಎಚ್ಚೆತ್ತ ಅಧಿಕಾರಿಗಳು ಕೂಡಲೇ ಉಳಿದ ಗೇಟ್‌ಗಳನ್ನು ಮೇಲಕ್ಕೆತ್ತಿ ಜಲಾಶಯದಿಂದ 98 ಸಾವಿರ ಕ್ಯುಸೆಕ್ ನೀರು ಹರಿಸಲು ಕ್ರಮ ಕೈಗೊಂಡರು. ಮುರಿದ ಗೇಟಿನ ಮೇಲೆ ಬಿದ್ದಿರುವ ಹಠಾತ್ ಒತ್ತಡದಿಂದ ಡ್ಯಾಂನ ಉಳಿದ ಭಾಗಕ್ಕೆ ಹಾನಿಯಾಗುವ ಅಪಾಯ ಇದ್ದು, ಅದನ್ನು ತಪ್ಪಿಸುವ ಪ್ರಯತ್ನ ನಡೆದಿದೆ. ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು 1.5 ಅಡಿಯಷ್ಟು ಮೇಲಕ್ಕೆ ಎತ್ತಿ ನೀರು ಹೊರಬಿಡುವ ಮೂಲಕ ಒತ್ತಡ ತಗ್ಗಿಸಲಾಗುತ್ತಿದೆ. 

ಇದನ್ನೂ ಓದಿ:  Mini Tractor subsidy- ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಸಹಾಯಧನ ಪಡೆಯಲು ಇಲಾಖೆಯಿಂದ ಅರ್ಜಿ ಆಹ್ವಾನ!

ನಿತ್ಯ ಇದೇ ಪ್ರಮಾಣದಲ್ಲಿ ನೀರು ಹರಿಸಿದರೆ ವಾರದೊಳಗೆ 60 ಟಿಎಂಸಿ ನೀರು ಖಾಲಿಯಾಗಲಿದ್ದು, ನೂತನ ಗೇಟ್ ಅಳವಡಿಕೆಗೆ ಅನುಕೂಲವಾಗಲಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ. ಉಳಿದ ನೀರಿನಿಂದ ಅಡೆತಡೆ ಉಂಟಾದರೆ, ಮತ್ತೆ ನದಿಗೆ ಇನ್ನಷ್ಟು ನೀರು ಬಿಟ್ಟು ಕೆಲಸ ಆರಂಭಿಸಬೇಕಾಗುತ್ತದೆ.

ಜಲಾಶಯದ 33 ಗೇಟ್ ಗಳ ಪೈಕಿ 1 ರಿಂದ 16 ಗೇಟ್ ಗಳ ನಿರ್ವಹಣೆ ಕೇಂದ್ರ ಜಲ ಆಯೋಗಕ್ಕೆ ಒಳಪಟ್ತರೆ ಉಳಿದ 17 ರಿಂದ 33ನೇ ಗೇಟ್‌ನ ನಿರ್ವಹಣೆ ರಾಜ್ಯ ಸರಕಾರ ನಿರ್ವಹಣೆ ಮಾಡುತ್ತದೆ.

ಜಲಾಶಯ ಭರ್ತಿಯಾಗಿರುವುದರಿಂದ ಈ ಸಂದರ್ಭದಲ್ಲಿ ಗೇಟ್‌ನ ಕೆಳಗಡೆ ನಿಂತು ಕೆಲಸ ಮಾಡುವುದು ಸವಾಲಿನ ಕೆಲಸವಾಗಿದೆ. ದುರಸ್ತಿ ಮಾಡಬೇಕಾದರೆ ಡ್ಯಾಂನಲ್ಲಿನ 60 ಟಿಎಂಸಿ ನೀರು ಖಾಲಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: Gruha jyothi- ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡಬೇಕು!