Online RTC : ನಿಮ್ಮ ಜಮೀನಿನ ಪಹಣಿ/ಉತಾರ್ ಪ್ರಿಂಟ್ ತೆಗೆಸಲು ಸರ್ವೆ ನಂಬರ್ ಮರೆತು ಹೋಗಿದೆಯೇ? ಈ ಇಲ್ಲಿದೆ ಸರ್ವೆ ನಂಬರ್ ಇಲ್ಲದೇ ಪಹಣಿ ತೆಗೆಯುವ ಐಡಿಯಾ!

ಆತ್ಮೀಯ ರೈತ ಬಾಂಧವರೇ! ಇಂದು ಈ ಅಂಕಣದಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಸರ್ವೆ ನಂಬರ್(Land records) ಮತ್ತು ಹಿಸ್ಸಾ ನಂಬರ್ ಇಲ್ಲದೆಯೇ ಹೇಗೆ ನಿಮ್ಮ ಪಹಣಿಯ(online rtc) ಸರ್ವೆ ನಂಬರ್ ಮಾಹಿತಿ ಪಡೆದು ಹೇಗೆ ಪಹಣಿ/ಉತಾರ್/RTC ಪ್ರಿಂಟ್ ತೆಗೆದುಕೊಳ್ಳಬವುದು ಎಂದು ವಿವರಿಸಲಾಗಿದೆ.

ರೈತರು ವಿವಿಧ ಇಲಾಖೆ ಯೋಜನೆಗಳ ಸವಲತ್ತು ಪಡೆಯುವ ಸಂದರ್ಭದಲ್ಲಿ ಪಹಣಿ/ಉತಾರ್/RTC ಒದಗಿಸುವುದು ಅತ್ಯಗತ್ಯವಾಗಿರುತ್ತದೆ, ಅನೇಕ ಜನರಿಗೆ ತಮ್ಮ ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್ ಸರಿಯಾಗಿ ನೆನಪಿರುವುದಿಲ್ಲ ಮತ್ತು ಕೆಲವೊಮ್ಮೆ ನಿಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ಬದಲಾವಣೆ ಅಗಿರುತ್ತವೆ ಇಂತಹ ಸನ್ನಿವೇಶಗಳಲ್ಲಿ ರೈತರು ಪಹಣಿ ಮುದ್ರಿಸಲು ಹರಸಾಹಸ ಪಡಬೇಕಾಗುತ್ತದೆ.

ಈ ಎಲ್ಲಾ ಸಮಸ್ಯೆಗಳಿಗೆ ಇಂದು ಈ ಅಂಕಣದಲ್ಲಿ ಸೂಕ್ತ ಪರಿಹಾರ ಕ್ರಮವನ್ನು ತಿಳಿಸಲಾಗಿದೆ ಹೇಗೆ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ಮತ್ತು ಹಿಸ್ಸಾ ಸಂಖ್ಯೆಯನ್ನು ಪಡೆದು ಪಹಣಿ ಪ್ರಿಂಟ್ ತೆಗೆಸಿಕೊಳ್ಳಬವುದು ಎಂದು ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ ಈ ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ತಪ್ಪದೇ ನಿಮ್ಮ ಅಪ್ತರಿಗೂ ಶೇರ್ ಮಾಡಿ ಸಹಕರಿಸಿ.

Online RTC- ನಿಮ್ಮ ಹೆಸರಿನ ಜಮೀನಿನ ಸರ್ವೆ ನಂಬರ್ ಪಡೆಯುವುದು ಹೇಗೆ?

Step-1: ಮೊದಲಿಗೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ(Revenue Department) ದಿಶಾಂಕ್ ವೆಬ್ಸೈಟ್(Dishank website) ಭೇಟಿ ಮಾಡಬೇಕು. 
Link: https://landrecords.karnataka.gov.in 

Step-2: ನಂತರ ಮೇಲೆ ಕನ್ನಡ/English ಭಾಷೆ ಆಯ್ಕೆಯಲ್ಲಿ “ಕನ್ನಡ” ಮೇಲೆ  ಕ್ಲಿಕ್ ಮಾಡಿಕೊಂಡು, ಜಮೀನಿನ ವಿವರಗಳು ವಿಭಾಗದಲ್ಲಿ “ಸ್ವಾದೀನದಾರರವರು” ಎಂದು ಗೋಚರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು “ವಿವರಗಳನ್ನು ಪಡೆ” ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಇಲ್ಲಿ ನಿಮ್ಮ ಗ್ರಾಮದ ಎಲ್ಲಾ ರೈತರ ಸರ್ವೆ ನಂಬರ್ ವಾರು ಜಮೀನಿನ ವಿವರ ತೋರಿಸುತ್ತದೆ ಇಲ್ಲಿ ನೀವು ನಿಮ್ಮ ಹೆಸರನ್ನು ಹುಡುಕಿ ನಿಮ್ಮ ಜಮೀನಿನ ಸರ್ವೆ ನಂಬರ್ ಮತ್ತು ಹಿಸ್ಸಾ ಮಾಹಿತಿಯನ್ನು ಪಡೆದುಕೊಳ್ಳಬವುದು. ಇದರ ಜೊತೆಗೆ ಅಲ್ಲೇ ಪಕ್ಕದಲ್ಲಿ ಕಾಣುವ “View” ಬಟನ್ ಮೇಲೆ ಕ್ಲಿಕ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬವುದು.

ಗಮನಿಸಿ: ಒಂದು ಪುಟದಲ್ಲಿ ಕೇವಲ 10 ಜನರ ವಿವರ ಮಾತ್ರ ಗೋಚರಿಸುತ್ತದೆ ಪುಟದ ಕೆಳಗೆ ಇರುವ “Next” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ರೈತರ ವಿವರ ತಿಳಿಯಬವುದು.

ಇದನ್ನೂ ಓದಿ: Gruhalakshmi website link: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೇಸೆಜ್ ಬಂದಿಲ್ಲವೇ? ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ.

ಪಹಣಿ ಪ್ರಿಂಟ್ ತೆಗೆಯಲು ಹೀಗೆ ಮಾಡಿ:

ಈ ಮೇಲೆ ತಿಳಿಸಿದ ವಿಧಾನದ ಮೂಲಕ ನಿಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ಪಡೆದು ನಿಮ್ಮ ಹತ್ತಿರದ ನಾಡ ಕಚೇರಿ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಸರ್ವೇ ನಂಬರ್ ಹೇಳಿ ಪಹಣಿ ಪ್ರಿಂಟ್ ತೆಗೆಸಿಕೊಳ್ಳಬವುದು ಅಥವಾ ನಿಮ್ಮ ಮೊಬೈಲ್ ನಲೇ ಪಹಣಿ ನೋಡಲು ಈ https://landrecords.karnataka.gov.in/Service2/rtc.aspx ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು “ಗೋ” ಮೇಲೆ ಕ್ಲಿಕ್ ಮಾಡಿ ನಂತರ ಸರ್ ನಾಖ್, ಹಿಸ್ಸಾ ನಂಬರ್, ಅವಧಿ, ವರ್ಷ ಆಯ್ಕೆಯನ್ನು ಮಾಡಿಕೊಂಡು “ವಿವರಗಳನ್ನು ಕರೆತರು” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಪಹಣಿಯ ವಿವರ ತೋರಿಸುತ್ತದೆ ಪಹಣಿ ನೋಡಲು ಅಲ್ಲೇ ಪುಟದ ಕೆಳಗೆ ಕಾಣುವ “ವೀಕ್ಷಣೆ” ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ!