ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿಜವಾದ ಸುದ್ದಿಗಿಂತ ಅತೀ ವೇಗವಾಗ ಹರಡುವುದು ಸುಳ್ಳು ಸುದ್ದಿಯಾಗಿದೆ, ಅತೀ ಕಡಿಮೆ ಅವಧಿಯಲ್ಲಿ ಎಲ್ಲಾ ಕಡೆ ಫೇಕ್ ನ್ಯೂಸ್ ಹರಡಿ ಬಿಡುತ್ತದೆ ಅದಕ್ಕೆ ಕಾರಣವು ನಾವೇ ಅಗಿದ್ದೇವೆ.
ಏಕೆಂದರೆ ನಮ್ಮ ವಾಟ್ಸಾಪ್ ಗುಂಪುಗಳಲ್ಲಿ ಯಾರಾದರು ಫಾರ್ವರ್ಡ್ ಮೆಸೇಜ್ ಕಳುಹಿಸಿದರೆ ಅದನ್ನು ಒಮ್ಮೆ ಆ ವಿಷಯದ ಕುರಿತು ಪರಾಮರ್ಶಿಸದೆ ಮತ್ತೊಂದು ಗುಂಪಿಗೆ ಫಾರ್ವರ್ಡ್ ಮಾಡಿಬಿಡುತ್ತವೆ ಹೀಗೆಯೇ ಹೆಚ್ಚು ಜನ ಶೇರ್ ಮಾಡಿ ಸುಳ್ಳು ಸುದಿ ನಿಜ ಸುದ್ದಿ ಅನ್ನುವಷ್ಟರ ಮಟ್ಟಿಗೆ ವೈರಲ್ ಆಗಿಬಿಡುತ್ತದೆ.
ಇದೇ ರೀತಿ Cersa Lapida ಎಂಬ ಕಂಬಳಿ ಹುಳುವಿನ ಕುರಿತು ಸುಳ್ಳು ಸುದ್ದಿ ಕಳೆದ ಹಲವು ವರ್ಷಗಳಿಂದ ಪ್ರತಿ ಮಳೆಗಾಲದ ಅವಧಿಯಲ್ಲಿ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತದೆ.
ಈ ಹುಳುವಿನ ಕುರಿತು ಜಂಟಿ ಕೃಷಿ ನಿರ್ದೇಶಕರು ಕಲಬುರಗಿರವರ ಸಾರ್ವಜನಿಕ ಪ್ರಕಟಣೆ ವಿವರ ಹೀಗಿದೆ:
ಈ ಮೂಲಕ ಎಲ್ಲ ರೈತ ಭಾಂದವರಿಗೆ ತಿಳಿಸುವುದೇನಂದರೆ ಚಿಂಚೋಳಿ ತಾಲ್ಲೂಕಿನ WhatsApp ಗ್ರೂಪ್ ನಲ್ಲಿ ಧ್ವನಿ ಇರುವ ಫೋಟೊ ಹರಿದಾಡುತ್ತಿದ್ದು ಆ ಹುಳು ಕಡಿದರೆ ಮನುಷ್ಯ ಸಾಯುತ್ತಾನೆನ್ನುವ ಮಾಹಿತಿಯು ಶುದ್ಧ ಸುಳ್ಳು ಮಾಹಿತಿಯಾಗಿರುತ್ತದೆ. ಚಿತ್ರದಲ್ಲಿ ಕಾಣಿಸಿದ ಹುಳುವಿನ ವೈಜ್ಞಾನಿಕ ಹೆಸರು Cersa Lapida, ಇದು ಕೇವಲ ಒಂದು ಎಲೆ ತಿನ್ನುವ ಕೀಟ, ಸರ್ವೇ ಸಾಮಾನ್ಯವಾಗಿ ಔಡಲ ಹಾಗೂ ಸೂರ್ಯಕಾಂತಿ ಬೆಳಗಳಲ್ಲಿ ಬಹಳ ವಿರಳವಾಗಿ ಕಂಡು ಬರುತ್ತದೆ. ಈ ಹುಳು ಬಣ್ಣ ಬದಲಿಸುತ್ತದೆಂಬ ತಪ್ಪು ಮಾಗಿತಿಯು WhatsApp ಗ್ರೂಪ್ ನಲ್ಲಿ ಹರಿದಾಡುತ್ತಿದ್ದು. ಎಲೆ ತಿಂದಾಗ ಈ ಕೀಟವು ಹಸಿರು ಬಣ್ಣದಾಗಿರುತ್ತದೆ,
ಮತ್ತು ಹೂ ತಿಂದಾಗ ಹಳದಿ ಬಣ್ಣದಾಗಿರುತ್ತದೆ. ಹಾಗೂ ಕಾಯಿ ತಿಂದಾಗ ಕಪ್ಪು, ಬಣ್ಣಕ್ಕ ಸಹಜವಾಗಿ ತಿರುಗುತ್ತದೆ. ಈ ಹುಳಕ್ಕೆ ಮನುಷ್ಯನಿಗೆ ಕಡಿಯಲು ಬರುವುದಿಲ್ಲ. ಬೇರೆ ಹುಳುಗಳಂತೆ ಇದೊಂದು ಕಂಬಳಿ ಹುಳು, ಇದರಿಂದ ಮನುಷ್ಯನಿಗೆ ಯಾವುದೇ ತೊಂದರೆಯಾಗುವುದಿಲ್ಲ ಕಾರಣ ರೈತ ಭಾಂದವರು ಇಂಥ ಸುಳು ಸುದ್ದಿಗಳಿಗೆ ಕಿವಿಗೊಡದಿರಿ ಆ WhatApp ಸಂದೇಶದಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Gruha joythi bill: ಗೃಹ ಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಹೇಗೆ ಬರಲಿದೆ ಇಲ್ಲಿದೆ ಸ್ಯಾಂಪಲ್ ಬಿಲ್.
whatsapp viral news-ವಾಟ್ಸಾಪ್ ಮೆಸೇಜ್ ಫಾರ್ವರ್ಡ್ ಮಾಡುವ ಮುನ್ನ ಈ ಕ್ರಮ ಅನುಸರಿಸಿ:
ನಿಮಗೆ ಯಾವುದೇ ರೀತಿಯ ಸಂಶಯತ್ಮಕ ಸಂದೇಶವು ವಾಟ್ಸಾಪ್ ನಲ್ಲಿ ಬಂದಾಗ ಅದನ್ನು ಇತರರಿಗೆ ಕಳುಹಿಸುವು ಮುನ್ನ ಅದರ ಕುರಿತು ನಿಜಾಂಶ ತಿಳಿಯಲು ಗೂಗಲ್ ನಲ್ಲಿ ಈ ಕುರಿತು ಸರ್ಚ್ ಮಾಡಿ ನಂತರ ನಿಮಗೆ ಈ ವಿಷಯ ಖತರಿ ಅನಿಸಿದರೆ ಮಾತ್ರ ಇತರರಿಗೆ ಆ ಸಂದೇಶವನ್ನು ಕಳುಹಿಸಿ ಇಲ್ಲವಾದಲ್ಲಿ ಯಾವುದೇ ಕಾರಣಕ್ಕು ಫಾರ್ವರ್ಡ್ ಮಾಡಬೇಡಿ.
ಒಂದು ಫಾರ್ವರ್ಡ್ ಮೆಸೇಜ್ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತದೆ ಸಮಾಜದಲ್ಲಿ ತಲ್ಲಣವನ್ನು ಸೃಷ್ಟಿಸುತ್ತದೆ ಇನ್ನು ಮುಂದೆ ತಪ್ಪದೇ ಮೇಲೆ ವಿವರಿಸಿರುವ ಕ್ರಮ ಅನುಸರಿಸಿ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ನಿಮ್ಮ ಅಪ್ತರಿಗೂ ಶೇರ್ ಮಾಡಿ, ಧನ್ಯವಾದಗಳು.