ಕೇಂದ್ರ ಚುನಾವಣಾ ಆಯೋಗದಿಂದ ಹೊಸ ವೋಟರ್ ಐಡಿ ಮತ್ತು ವೋಟರ್ ಐಡಿ ತಿದ್ದುಪಡಿಗೆ(Voter Id online application)ಈ ದಿನದಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ದೇಶದ ಎಲ್ಲಾ ನಾಗರಿಕರು ಅಗತ್ಯವಾಗಿ ಹೊಂದಿರಬೇಕಾದ ಗುರುತಿನ ಚೀಟಿಗಳಲ್ಲಿ ಒಂದಾದ ವೋಟರ್ ಐಡಿಯನ್ನು ಪಡೆಯಲು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಗುರುತಿನ ಚೀಟಿ/Voter ID ಅನ್ನು ತಿದ್ದುಪಡಿ ಮಾಡಲು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಹೊಸ ವೋಟರ್ ಐಡಿ ಮತ್ತು ವೋಟರ್ ಐಡಿ ತಿದ್ದುಪಡಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇತ್ಯಾದಿ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಅವಕಾಶ ನೀಡಿದ ಅವಧಿ ವಿವರ ಹೀಗಿದೆ:
ಹೊಸ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತು ಗುರುತಿನ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು 20 ಅಗಸ್ಟ್ 2024 ರಿಂದ 18 ಅಕ್ಟೋಬರ್ 2024 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಯಾವುದಕ್ಕೆಲ್ಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?
1) ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಬಹುದು
2) ಮತದಾರ ಪಟ್ಟಿಯಲ್ಲಿ ಹೆಸರು ತಿದ್ದುಪಡಿ.
3) ವೋಟರ್ ಐಡಿಯಲ್ಲಿ ವಿಳಾಸ ಬದಲಾವಣೆ.
4) ಮೃತರು ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳ ತೆಗೆದು ಹಾಕುವಿಕೆ.
5) 18 ವರ್ಷ ತುಂಬಿರುವ ಯುವ ಮತದಾರರ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ.
How to apply for new voter id- ಎಲ್ಲಿ ಅರ್ಜಿ ಸಲ್ಲಿಸಬೇಕು?
ವೋಟರ್ ಐಡಿ ತಿದ್ದುಪಡಿ ಮತ್ತು ಹೊಸ ವೋಟರ್ ಐಡಿಗೆ ಕೇಂದ್ರ ಚುನಾವಣಾ ಅಯೋಗದ ಅಧಿಕೃತ https://voters.eci.gov.in/ ವೆಬ್ಸೈಟ್ ಅನ್ನು ಭೇಟಿ ಮಾಡಿ ನೇರವಾಗಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಮತಗಟ್ಟೆಯ ಅಧಿಕಾರಿಗಳನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: uchitha holige yantra application-ಉಚಿತ ಹೊಲಿಗೆ ಯಂತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!
Required documents for voter id-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
A) ವೋಟರ್ ಐಡಿ ತಿದ್ದುಪಡಿಗೆ ಬೇಕಾಗುವ ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ.
2) ವಿಳಾಸ ದೃಡೀಕರಣ ಪ್ರಮಾಣ ಪತ್ರ(ವಿಳಾಸ ಬದಲಾವಣೆ ಇದ್ದಲ್ಲಿ).
3) ಅರ್ಜಿದಾರರ ಮೊಬೈಲ್ ಸಂಖ್ಯೆ.
B) ಹೊಸ ವೋಟರ್ ಐಡಿಗೆ ಬೇಕಾಗುವ ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
2) ಕುಟುಂಬ ಸದಸ್ಯರ ಗುರುತಿನ ಚೀಟಿ.
3) ಅರ್ಜಿದಾರರ ಮೊಬೈಲ್ ಸಂಖ್ಯೆ .
4) ವಿಳಾಸ ದೃಡೀಕರಣ ಪ್ರಮಾಣ ಪತ್ರ.
ಇದನ್ನೂ ಓದಿ: Jamininna Ottuvari- 1.41 ಕೋಟಿ ಸರಕಾರಿ ಜಮೀನು ಭೂ ಒತ್ತುವರಿ ತೆರವು ಮಹತ್ವದ ಯೋಜನೆ ಜಾರಿ!
voter id online application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
ಕೇಂದ್ರ ಚುನಾವಣಾ ಆಯೋಗದ ಅಧಿಕೃತ voter id online application ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ವೋಟರ್ ಐಡಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.
Step-1: ಮೊದಲಿಗೆ ಈ click here ಲಿಂಕ್ ಮೇಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.
Step-2: ಇದಾದ ಬಳಿಕ ಈ ವೆಬ್ಸೈಟ್ ನ ಮುಖಪುಟದಲ್ಲಿ ಕಾಣುವ “New registration for general electors” ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹೊಸ ವೋಟರ್ ಐಡಿ ಪಡೆಯಲು ಅರ್ಜಿ ಸಲ್ಲಿಸಬಹುದು.
Step-3: ಇದೆ ಪುಟದಲ್ಲಿ ಕೆಳಗಡೆ ಕಾಣುವ “Shifting of residence/correction of entries in existing electoral roll/replacement of EPIC/marking of PwD” ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ವೋಟರ್ ಐಡಿ ತಿದ್ದುಪಡೆಗೆ ಅರ್ಜಿ ಸಲ್ಲಿಸಬಹುದು.
ವೋಟರ್ ವೆಬ್ಸೈಟ್: click here