DBT amount status-ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮಗೆ ಈ ತಿಂಗಳ ಅನ್ನಭಾಗ್ಯ ಹಣ ಎಷ್ಟು? ಬರುತ್ತದೆ ಎಂದು ಚೆಕ್ ಮಾಡಿ

ಆತ್ಮೀಯ ಓದುಗ ಮಿತ್ರರೇ ನಿಮಗೆಲ್ಲ ತಿಳಿದಿರುವ ಹಾಗೆಯೇ ಪ್ರತಿ ತಿಂಗಳು ರಾಜ್ಯ ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು ರೇಷನ್ ಕಾರ್ಡ ಹೊಂದಿರುವ ಫಲಾನುಭವಿಗಳ ಖಾತೆಗೆ ಹಣವನ್ನು ಹಾಕಲಾಗುತ್ತದೆ.

ಈ ಅಂಕಣದಲ್ಲಿ ನಿಮ್ಮ ರೇಷನ್ ಕಾರ್ಡ ನಂಬರ್ ಹಾಕಿ ಅನ್ನಭಾಗ್ಯ ಯೋಜನೆಯಡಿ ಡಿಸೆಂಬರ್-2023 ರ ತಿಂಗಳಿನಲ್ಲಿ ಅಕ್ಕಿ ಹಣ ಎಷ್ಟು ಬರುತ್ತದೆ ಮತ್ತು ಈ ಕುರಿತು ಇತರೆ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಹೇಗೆ ತಿಳಿದುಕೊಳ್ಳಬವುದು ಎಂದು ಈ ಕೆಳಗೆ ಹಂತವಾರು ವಿವರಿಸಲಾಗಿದೆ.

ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಅಕ್ಕಿ ವಿತರಣೆ ಮಾಡಲು ಬೇಕಾಗುವಷ್ಟು ದಾಸ್ತಾನು ಇಲ್ಲದ ಕಾರಣದ ಅಕ್ಕಿ ಬದಲು ಒಂದು ಕೆಜಿಗೆ ಇಂತಿಷ್ಟು ಹಣ ಎಂದು ನಿಗಧಿಪಡಿಸಿ ಒಂದು ರೇಷನ್ ಕಾರ್ಡ ನಲ್ಲಿ ಎಷ್ಟು ಜನ ಸದಸ್ಯರಿದಾರೋ ಅದರ ಆಧಾರದ ಮೇಲೆ ಪ್ರತಿ ತಿಂಗಳು 20 ನೇ ತಾರೀಖಿನ ಒಳಗಾಗಿ DBT ಮೂಲಕ ಗ್ರಾಹಕರ ಖಾತೆಗೆ ಅಕ್ಕಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: PMEGP Scheme: ಗರಿಷ್ಠ 50 ಲಕ್ಷಗಳವರೆಗೆ 250 ಬಗ್ಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಸಾಲಕ್ಕೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

DBT amount status-ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮಗೆ ಈ ತಿಂಗಳ ಅನ್ನಭಾಗ್ಯ ಹಣ ಎಷ್ಟು? ಬರುತ್ತದೆ ಎಂದು ಚೆಕ್ ಮಾಡುವ ವಿಧಾನ:

ಪಡಿತರ ಚೀಟಿ ಹೊಂದಿರುವ ಗ್ರಾಹಕರು ಆಹಾರ ಇಲಾಖೆಯ ಈ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ನಿಮ್ಮ ರೇಷನ್ ಕಾರ್ಡ ನಂಬರ್ ಅನ್ನು ಹಾಕಿ ಡಿಸೆಂಬರ್-2023 ತಿಂಗಳಿನ ಹಣ ಈ ತಿಂಗಳು ಎಷ್ಟು ಬರುತ್ತದೆ? ನಿಮ್ಮ ಕಾರ್ಡ ಸದಸ್ಯರು ಎಷ್ಟು ಒಬ್ಬರಿಗೆ ಎಷ್ಟು ಹಣ? ಹಣ ವರ್ಗಾವಣೆ ಸ್ಥಿತಿ ಇತ್ಯಾದಿ ವಿವರವನ್ನು ಈ ಕೆಳಗಿನ ವಿಧಾನ ಅನುಸರಿಸಿ ತಿಳಿದುಕೊಳ್ಳಬವುದು.

Step-1: ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ಇದಾದ ಬಳಿಕ ನಿಮ್ಮ ಮೊಬೈಲ್ ನಲ್ಲಿ desktop view ಮಾಡಿಕೊಂಡು ಬಲಬದಿಯಲ್ಲಿ ಕಾಣುವ “ಇ-ಸೇವೆಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Revenue department- ಸರಕಾರದಿಂದ 11 ಇ , ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಮತ್ತು ಹದ್ದುಬಸ್ತು ಅರ್ಜಿಗೆ ಶುಲ್ಕ ಪಾವತಿ ದರ ಪಟ್ಟಿ ಪ್ರಕಟಿಸಲಾಗಿದೆ!

Step-2: ತದನಂತರದಲ್ಲಿ “ಇ-ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ “ಡಿಬಿಟಿ ಸ್ಥಿತಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ನಂತರ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆಯ ಹೆಸರು ತೋರಿಸುವ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Agri startup scheme-ಕೃಷಿ ಇಲಾಖೆಯಿಂದ ಕೃಷಿ ನವೋದ್ಯಮ ಯೋಜನೆಯಡಿ ಅರ್ಜಿ ಆಹ್ವಾನ! ಶೇ 50% ಸಹಾಯಧನ 50 ಲಕ್ಷದವರೆಗೆ.

ಗಮನಿಸಿ: ಈ ಪುಟದಿಂದ ಮುಂದಿನ ಆಯ್ಕೆಗಳು ಬೆಳಿಗ್ಗೆ ರಿಂದ ರಾತ್ರಿ ರ ನಡುವ ಮಾತ್ರ ಒಪನ್ ಅಗುತ್ತವೆ ಅದ್ದರಿಂದ ಈ ಸಮಯದ ನಡುವೆಯೇ ಈ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಪಡಿತರ ಚೀಟಿಯ ಸ್ಥಿತಿಯನ್ನು ಪರೀಶಿಲಿಸಿಕೊಳ್ಳಬೇಕು.

Step-4: ನಿಮ್ಮ ಜಿಲ್ಲೆಯ ಹೆಸರಿನ ಲಿಂಕ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ನೇರ ನಗದು ವರ್ಗಾವಣೆ(DBT) ಬಟನ್ ಮೇಲೆ ಕ್ಲಿಕ್ ಮಾಡಿ ವರ್ಷ, ತಿಂಗಳು ಮತ್ತು ನಿಮ್ಮ ರೇಷನ್ ಕಾರ್ಡ ನಂಬರ್ ಮತ್ತು ಇಲ್ಲೇ ಕೆಳಗೆ ಕಾಣುವ ಕ್ಯಾಪ್ಚ ಕೋಡ್ ನಮೂದಿಸಿ “GO” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: LPG cylinder ekyc-ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ!

ಈ ರೀತಿ ವಿಧಾನಗಳನ್ನು ಅನುಸರಿಸಿದ ಬಳಿಕ ಇಲ್ಲಿ ಕೊನೆಯಲ್ಲಿ ನಿಮ್ಮ ರೇಷನ್ ಕಾರ್ಡ ನಲ್ಲಿ ಎಷ್ಟು ಜನ ಸದಸ್ಯರು ಇದ್ದಿರಾ? ಎಷ್ಟು ಹಣ ನಿಮ್ಮ ಖಾತೆಗೆ ಜಮಾ ಅಗಲಿದೆ ಎಂದು ತೋರಿಸಿ “ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ” ಎಂದು ತೋರಿಸುತ್ತದೆ.

ಅನ್ನಭಾಗ್ಯ ಯೋಜನೆಯ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: click here

New ration card distribution date-5 ಜನವರಿ 2024ರ ನಂತರ ಹೊಸ ರೇಷನ್ ಕಾರ್ಡ ವಿತರಣೆ: ಸಚಿವ ಮುನಿಯಪ್ಪ

ಇಲ್ಲಿಯವರೆಗೆ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿ ರೇಷನ್ ಕಾರ್ಡ ಪಡೆಯಲು ಕಾಯುತ್ತಿರುವ ಅರ್ಹ ಫಲಾನುಭವಿಗಳಿಗೆ ನೂತನ ಪಡಿತರ ಚೀಟಿ ವಿತರಣೆಯನ್ನು ಈ ತಿಂಗಳು ಅಂದರೆ 5 ಜನವರಿ 2024ರ ನಂತರದಿಂದ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಮುನಿಯಪ್ಪ ರವರು ಮಾಹಿತಿ ಹಂಚಿಕೊಂಡಿದ್ದಾರೆ.

ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: click here

ಇದನ್ನೂ ಓದಿ: Farm Pond application-ಶೇ 90 ಸಹಾಯಧನದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮಾಡಿಕೊಳ್ಳಲು ರೈತರಿಂದ ಅರ್ಜಿ ಆಹ್ವಾನ!