Ration card e-KYC-ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿಯನ್ನು ಪಡೆದುಕೊಂಡಿರುವ ಗ್ರಾಹಕರು ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಅನ್ನು(Ration card e-KYC) ಪಡೆಯಲು ಈ ಲೇಖನದಲ್ಲಿ ವಿವರಿಸಿರುವ ಕೆಲಸವನ್ನು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

Ration card e-KYC-ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!
Ration card e-KYC

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪಡಿತರ ಚೀಟಿಯನ್ನು ಪಡೆದುಕೊಂಡಿರುವ ಗ್ರಾಹಕರು ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಅನ್ನು(Ration card e-KYC) ಪಡೆಯಲು ಈ ಲೇಖನದಲ್ಲಿ ವಿವರಿಸಿರುವ ಕೆಲಸವನ್ನು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅರ್ಥಿಕವಾಗಿ ಹಿಂದುಳಿದ ನಾಗರಿಕರಿಗೆ ದಿನನಿತ್ಯ ಬಳಕೆ ಮಾಡುವ ಕೆಲವು ಆಹಾರ ಧಾನ್ಯಗಳನ್ನು ನೀಡಲು ಪಡಿತರ ಚೀಟಿಯನ್ನು ವಿತರಣೆ ಮಾಡಲಾಗಿದ್ದು, ಈ ರೇಷನ್ ಕಾರ್ಡ ಅನ್ನು ಹೊಂದಿರುವ ಗ್ರಾಹಕರು ಇ-ಕೆವೈಸಿಯನ್ನು ಮಾಡಿಕೊಳ್ಳಲು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ರೇಷನ್ ಕಾರ್ಡ ಅನ್ನು ಹೊಂದಿರುವ ಗ್ರಾಹಕರು ಇ-ಕೆವೈಸಿಯನ್ನು ಎಲ್ಲಿ ಮಾಡಿಸಬೇಕು? ಇ-ಕೆವೈಸಿ ಮಾಡಲು ಅಗತ್ಯ ದಾಖಲಾತಿಗಳೇನು? ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Voter Id online application-ಹೊಸ ವೋಟರ್ ಐಡಿ ಮತ್ತು ತಿದ್ದುಪಡಿಗೆ ಈ ದಿನದಿಂದ ಅರ್ಜಿ ಸಲ್ಲಿಸಲು ಅವಕಾಶ!

Ration card e-KYC- ಇನ್ನು ಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಪ್ರಕಟಣೆಯನ್ವಯ ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸುವಂತೆ ಸೂಚನೆ ನೀಡಲಾಗಿದೆ.

why ration card e-kyc required- ಇ-ಕೆವೈಸಿ ಏಕೆ ಮಾಡಿಸಬೇಕು?

1) ನೈಜ ಫಲಾನುಭವಿಗಳಿಗೆಯೇ ಪ್ರತಿ ತಿಂಗಳು ಆಹಾರ ಧಾನ್ಯ ತಲುಪುತ್ತಿರುವುದನ್ನು ಖಚಿತಪಡಿಸಿಕೊಳ್ಳಲು.

2) ನಕಲಿ ರೇಷನ್ ಕಾರ್ಡದಾರರನ್ನು ಖಚಿತಪಡಿಸಿಕೊಳ್ಳಲು ಇ-ಕೆವೈಸಿ ಮಾಡಿಸಲು ಸೂಚಿಸಲಾಗಿದೆ.

3) ರೇಶನ್ ಕಾರ್ಡನಲ್ಲಿ ಮರಣ ಹೊಂದಿದ ಸದಸ್ಯರನ್ನು ಗುರುತಿಸಿ ಅಂತಹ ಸದಸ್ಯರನ್ನು ಕಾರ್ಡನಿಂದ ತೆಗೆದು ಹಾಕಲು.

ಇದನ್ನೂ ಓದಿ: Anganwadi job application-ಈ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ  ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

Where to do Ration Card e-KYC? ರೇಷನ್ ಕಾರ್ಡ ಇ-ಕೆವೈಸಿ ಅನ್ನು ಎಲ್ಲಿ ಮಾಡಿಸಬೇಕು?

ರೇಶನ್ ಕಾರ್ಡ ನಲ್ಲಿರುವ ಸದಸ್ಯರು ಖುದ್ದು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯನ್ನು ರೇಶನ್ ಕಾರ್ಡನಲ್ಲಿರುವ ಮೊಬೈಲ್ ಸಂಖ್ಯೆಯ ಸಮೇತ ಕಚೇರಿ ವೇಳೆಯಲ್ಲಿ ಭೇಟಿ ಮಾಡಿ ಇ-ಕೆವೈಸಿ ಅನ್ನು ಮಾಡಿಕೊಳ್ಳಬೇಕು.

Last date for ration card e-kyc: ಈ ದಿನದ ಒಳಗಾಗಿ ಇ-ಕೆವೈಸಿ ಮಾಡಿಸಲು ಇಲಾಖೆಯಿಂದ ಸೂಚನೆ:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸೂಚನೆಯ ಪ್ರಕಾರ 31 ಆಗಸ್ಟ್ 2024 ರ ಒಳಗಾಗಿ ಪಡಿತರ ಚೀಟಿ ಹೊಂದಿರುವ ಗ್ರಾಹಕರು ನ್ಯಾಯಬೆಲೆ ಅಂಗಡಿಯನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: pm kisan 18th installment date- ಪಿ ಎಂ ಕಿಸಾನ್ 18ನೇ ಕಂತಿನ ಹಣ ಈ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ! ಹಣ ಪಡೆಯಲು ಇ-ಕೆವೈಸಿ ಮಾಡಿ!

ration card e kyc status: ನಿಮ್ಮ ಮೊಬೈಲ್ ನಲ್ಲಿ ರೇಶನ್ ಕಾರ್ಡ ಇ-ಕೆವೈಸಿ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ ಇ-ಕೆವೈಸಿ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ration card e kyc status ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2:  ಇದಾದ ಬಳಿಕ ಇಲ್ಲಿ "ಇ-ಸೇವೆಗಳು" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ತದನಂತರ "ಇ-ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ "ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ:  uchitha holige yantra application-ಉಚಿತ ಹೊಲಿಗೆ ಯಂತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Step-3: ಈ ಪೇಜ್ ನಲ್ಲಿ 1) ONLY FOR BENGALURU DISTRICTS CLICK HERE (BENGALURU(URBAN/RURAL/CITY) districts only)

2) ONLY FOR KALABURAGI/BENGALURU DIVISIONS EXCEPT BENGALURU(URBAN/RURAL/CITY) CLICK HERE
(Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir, Vijayanagara districts only)

3) ONLY FOR BELAGAVI/MYSURU DIVISIONS CLICK HERE 
(Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura districts only) ಈ ರೀತಿಯ ಮೂರು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ಇದನ್ನೂ ಓದಿ: Jamininna Ottuvari- 1.41 ಕೋಟಿ ಸರಕಾರಿ ಜಮೀನು ಭೂ ಒತ್ತುವರಿ ತೆರವು ಮಹತ್ವದ ಯೋಜನೆ ಜಾರಿ!

Step-4: ಈ ಪುಟದಲ್ಲಿ "ಪಡಿತರ ಚೀಟಿ ವಿವರ" ಬಟನ್ ಮೇಲೆ ಕ್ಲಿಕ್ ಮಾಡಿ "with Out OTP" ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ರೇಶನ್ ಕಾರ್ಡ ನಂಬರ್ ಅನ್ನು ಹಾಕಿ "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ Member Count    ಆಯ್ಕೆಯಲ್ಲಿ eKYC Done ಎಂದು ತೋರಿಸಿ ಎಲ್ಲಾ ಸದಸ್ಯರ ಸಂಖ್ಯೆಯನ್ನು ತೋರಿಸಿದರೆ ನಿಮ್ಮ ರೇಷನ್ ಕಾರ್ಡ ಇ-ಕೆವೈಸಿ ಅಗಿದೆ ಎಂದು ಒಂದೊಮ್ಮೆ eKyc Remaining ಆಯ್ಕೆಯಲ್ಲಿ ಸದಸ್ಯರ ಸಂಖ್ಯೆ ತೋರಿಸಿದರೆ ಇ-ಕೆವೈಸಿ ಅಗುವುದು ಇನ್ನು ಬಾಕಿ ಉಳಿದಿದೆ ಎಂದು.