NPCI mapping: ಈ ಕೆಲಸ ಮಾಡಿದರೆ ಗೃಹಲಕ್ಷ್ಮಿ,ಪಿಂಚಣಿ ಹಣ ಸೇರಿದಂತೆ ಎಲ್ಲಾ ಯೋಜನೆಯ DBT ಹಣ ನಿಮ್ಮ ಖಾತೆಗೆ ಸುಲಭವಾಗಿ ಜಮಾ ಅಗುತ್ತದೆ!

December 19, 2023 | Siddesh

ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಯಡಿ ನೇರ ನಗದು ವರ್ಗಾವಣೆ(DBT) ಮೂಲಕ ಅರ್ಥಿಕ ಸಹಾಯಧನ ಪಡೆಯಲು NPCI ಮ್ಯಾಪಿಂಗ್ ಸಮಸ್ಯೆಯಿಂದ ಅರ್ಥಿಕ ನೆರವು ಪಡೆಯಲು ತಾಂತ್ರಿಕ ತೊಂದರೆ ಅನುಭವಿಸುತ್ತಿರುವವರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣ ಓದಿ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬವುದು.

ಗೃಹಲಕ್ಷ್ಮಿ, ಅನ್ನಭಾಗ್ಯ ಅಕ್ಕಿ ಹಣ, ವಿವಿಧ ರೀತಿಯ ಮಾಸಿಕ ಪಿಂಚಣಿ ಯೋಜನೆ ಫಲಾನುಭವಿಗಳು, ಕಿಸಾನ್ ಸಮ್ಮಾನ್ ಯೋಜನೆ ಇತ್ಯಾದಿ ಯೋಜನೆಯಡಿ ಆಧಾರ್ ಲಿಂಕ್ ಇರುವ ಖಾತೆಗೆ ಹಣ ಪಡೆಯಲು ಸಾಧ್ಯವಾಗದ ಫಲಾನುಭವಿಗಳು NPCI ಮ್ಯಾಪಿಂಗ್ ಅನ್ನು ಬ್ಯಾಂಕ್ ಖಾತೆಗೆ ಮಾಡಿದರು ಆಧಾರ್ ಲಿಂಕ್ ತಾಂತ್ರಿಕ ಸಮಸ್ಯೆ ಅನುಭವಿಸುತಿರುವ ಫಲಾನುಭವಿಗಳು ಇದಕ್ಕೆ ಪರಿಹಾರ ಕ್ರಮವನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Bara parihara-ಈ ದಿನಾಂಕದ ಒಳಗಾಗಿ FID ನಂಬರ್ ಮತ್ತು ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಜೋಡಣೆ ಮಾಡಿಕೊಂಡರೆ ಮಾತ್ರ ಬರ ಪರಿಹಾರ ಸಿಗಲಿದೆ!

adhaar link-ಆಧಾರ್ ಲಿಂಕ್/NPCI ಮ್ಯಾಂಪಿಂಗ್ ಸಮಸ್ಯೆಗೆ ಸೂಕ್ತ ಪರಿಹಾರ:

ಅನೇಕ ಜನರು ನಮ್ಮ ಖಾತೆಗೆ ಆಧಾರ್ ಲಿಂಕ್ ಇದೆ ಎನ್ನುತ್ತಾರೆ ಅದರು ಸಹ ವಿವಿಧ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ವರ್ಗಾಹಿಸುವ ಹಣ ನಮಗೆ ಬರುವುದಿಲ್ಲ ಎನ್ನುತ್ತಾರೆ ಈ ಕುರಿತು ಸರಕಾರಿ ಕಚೇರಿಯಲ್ಲಿ ವಿಚಾರಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲ ಅದ್ದರಿಂದ ಹಣ ವರ್ಗಾವಣೆ ಅಗಿಲ್ಲ ಎನ್ನುತ್ತಾರೆ.

ಬಳಿಕ ಫಲಾನುಭವಿಗಳು ತಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಭೇಟಿ ಮಾಡಿ ಆಧಾರ್ ಲಿಂಕ್ ಕುರಿತು ವಿಚಾರಿಸಿದರೆ ಅಲ್ಲಿ ಅಧಾರ್ ಲಿಂಕ್ ಇದೆ ಎನ್ನುತ್ತಾರೆ ಈ ಸಮಸ್ಯೆಗೆ ಸೂಕ್ತ ಪರಿಹಾರ ಇಲ್ಲಿದೆ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಫಲಾನುಭವಿಗಳು ನೇರವಾಗಿ ನಿಮ್ಮ ಹತ್ತಿರ ಅಂಚೆ ಕಚೇರಿ ಭೇಟಿ ಮಾಡಿ ಅರ್ಜಿದಾರರ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅಂಚೆ ಕಚೇರಿಯಲ್ಲಿ "IPPB ಖಾತೆಯನ್ನು" ತೆರೆದರೆ ಸಾಕು ನಿಮ್ಮ ಬ್ಯಾಂಕ್ ಅಕೌಂಟ್ ಗೆ NPCI ಮ್ಯಾಪಿಂಗ್/ಆಧಾರ್ ಸೀಡಿಂಗ್ ಅಗುತ್ತದೆ.

ಇದನ್ನೂ ಓದಿ: New Ration card- ಸರಕಾರದಿಂದ ಹೊಸ ರೇಷನ್ ಕಾರ್ಡ ವಿತರಣೆಗೆ ದಿನಾಂಕ ನಿಗದಿ!

ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ, ಅನ್ನಭಾಗ್ಯ ಅಕ್ಕಿ ಹಣ, ವಿವಿಧ ರೀತಿಯ ಮಾಸಿಕ ಪಿಂಚಣಿ ಯೋಜನೆ ಫಲಾನುಭವಿಗಳು, ಕಿಸಾನ್ ಸಮ್ಮಾನ್ ಯೋಜನೆ ಇತ್ಯಾದಿ ಯೋಜನೆಯಡಿ ಅರ್ಥಿಕ ನೆರವು ನಿಮಗೆ ತಪ್ಪದೇ  ವರ್ಗಾವಣೆ ಅಗುತ್ತದೆ ಆಧಾರ್ ಲಿಂಕ್ ತರಹದ ಯಾವುದೇ ತಾಂತ್ರಿಕ ತೊಂದರೆ ಉಂಟಾಗುವುದಿಲ್ಲ.

ಇದನ್ನೂ ಓದಿ: NPCI status: ಬರಪರಿಹಾರ, ಬೆಳೆವಿಮೆ ,ಮತ್ತು ಪಿ ಎಂ ಕಿಸಾನ್ ಹಣ ಜಮಾ ಆಗಲು NPCI ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

IPPB ಖಾತೆಯಲ್ಲಿ ತೆರೆಯಲು ಬೇಕಾಗುವ ದಾಖಲಾತಿಗಳು:

  • ಅರ್ಜಿದಾರರ ಪೋಟೋ
  • ಅಧಾರ್ ಕಾರ್ಡ ಪ್ರತಿ
  • ಪಾನ್ ಕಾರ್ಡ್ ಪ್ರತಿ(ಲಭ್ಯವಿದ್ದಲ್ಲಿ)
  • ಅರ್ಜಿ ನಮೂನೆ(ಅಂಚೆ ಕಚೇರಿಯಲ್ಲಿ ಸಿಗುತ್ತದೆ)

Post office account-ಅಂಚೆ ಕಚೇರಿಯಲ್ಲಿ ಖಾತೆ ತೆರೆಯುದರ ಲಾಭಗಳು:

ಫಲಾನುಭವಿಗಳು ಅಂಚೆ ಕಚೇರಿಯಲ್ಲಿ ಖಾತೆಗೆ ತೆರೆಯುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬವುದಾಗಿದೆ ಏಕೆಂದರ ಇದು ಗ್ರಾಮೀಣ ಭಾಗದಲ್ಲಿ ಇರುವುದರಿಂದ ಪಟ್ಟಣದಲ್ಲಿರುವ ಬ್ಯಾಂಕ್ ನಲ್ಲಿರುವಷ್ಟು ಜನರ ದಟ್ಟಣೆ ಇಲ್ಲದ ಕಾರಣ ಬ್ಯಾಂಕ್ ಸಂಬಂಧಿತ ವ್ಯವಹಾರಗಳನ್ನು ಮಾಡಲು ಸಹಕಾರಿಯಾಗಿದೆ.

ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿ ಹಳ್ಳಿಯ ಜನರಿಗೆ ಬ್ಯಾಂಕ್ ವ್ಯವಹಾರ ಮಾಡಿವುದು ಪ್ರಸ್ತುತ ದಿನಗಳಲ್ಲಿ ಹಲವು ವಿಚಾರಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ  ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪ್ರಮುಖ ಕಾರಣ ಬ್ಯಾಂಕ್ ಸಿಬ್ಬಂದಿಯಲ್ಲಿ ಕೆಲಸ ಒತ್ತಡದಿಂದ ಗ್ರಾಹಕರಿಗೆ ಸರಿಯಾಗಿ ಸ್ಪಂದನೆ ಮಾಡಲಾಗದಿರುವುದು.

ಇದನ್ನೂ ಓದಿ: akrama sakrama yojane- ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್

ಈ ಎಲ್ಲಾ ಕಾರಣಗಳಿಂದ ಗ್ರಾಮೀಣ ಭಾಗದ ಜನರು ಅಂಚೆ ಇಲಾಖೆಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ಈ ಕಚೇರಿಯಲ್ಲಿ ಲಭ್ಯವಿರುವ ಅನೇಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬವುದು ಜೊತೆಗೆ ಅಧಾರ್ ಸೀಡಿಂಗ್ ಸಮಸ್ಯೆಯನ್ನು ಸಹ ಪರಿಹರಿಸಿಕೊಳ್ಳಬವುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: