Home Blog Page 77

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ.

0

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಕ್ಷೇತ್ರದಲ್ಲಿ ಉತ್ತಮ ತಾಂತ್ರಿಕತೆ ಅಳವಡಿಕೆ ಮಾಡಿಕೊಂಡ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಸಕ್ತ ಪ್ರಕತಿಪರ ರೈತ ಮತ್ತು ರೈತ ಮಹಿಳೆ ಹಾಗೂ ಕೃಷಿ ವಿಭಾಗದಲ್ಲಿ ತಳ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ಹಹಿಸುತ್ತಿರುವ ವಿಸ್ತರಣಾ ಕಾರ್ಯಕರ್ತರಿಂದ ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕುರಿತು ವಿ ಎಲ್ ಮಧು ಪ್ರಸಾದ್ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರು ಪ್ರಕಟಣೆ ಹೊರಡಿಸಿದ್ದಾರೆ.

ಪ್ರಶಸ್ತಿಗಳ ವಿವರ ಹೀಗಿದೆ:

ರಾಜ್ಯ ಮಟ್ಟದ ಪ್ರಶಸ್ತಿಗಳು (ರಾಜ್ಯ ವ್ಯಾಪ್ತಿ)

1. ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ:

2. ಡಾ. ಎಂ.ಹೆಚ್, ಮರಿಗೌಡ ರಾಜ್ಯ ಮಟ್ಟದ ಅತ್ಯತ್ತಮ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿ.

ರಾಜ್ಯ ಮಟ್ಟದ ಪ್ರಶಸ್ತಿಗಳು (ಕೃವಿವಿ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 10 ಜಿಲ್ಲೆಗಳು)

1. ಕೆನರಾ ಬ್ಯಾಂಕ್ ಪ್ರಯೋಜಿತ ಕ್ಯಾನ್ ಬ್ಯಾಂಕ್ ಆತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ.

2. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ.

3. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ.

ಜಿಲ್ಲಾ ಮಟ್ಟದ ಪ್ರಶಸ್ತಿಗಳು (ಕೃವಿವಿ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 10 ಜಿಲ್ಲೆಗಳು) 

1. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ.

2. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ.

ತಾಲ್ಲೂಕು ಮಟ್ಟದ ಪ್ರಶಸ್ತಿಗಳು (ಕೃವಿದಿ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 61 ತಾಲ್ಲೂಕುಗಳು ) 

1. ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ

2. ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ.

ಇದನ್ನೂ ಓದಿ: ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು?

ಮೇಲಿನ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲಿರುವ ಕೃಷಿ ಮೇಳ-2023ರ ಸಂದರ್ಭದಲ್ಲಿ ನೀಡಲಾಗುತ್ತದೆ. ನಿಗದಿತ ಅರ್ಜಿ ನಮೂನೆಯ ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ವಿಸ್ತರಣಾ ನಿರ್ದೇಶಕರ ಕಛೇರಿ, ಜಿಕೆವಿಕೆ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳು (ಹಾಡೋನಹಳ್ಳಿ -ದೊಡ್ಡಬಳ್ಳಾಪುರ, ಚಂದುರಾಯನಹಳ್ಳಿ-ಮಾಗಡಿ, ಕಂದಲಿ–ಸನ, ಕೊನೇಹಳ್ಳಿ- ತಿಪಟೂರು ವಿ.ಸಿ.ಫಾರಂ-ಮಂಡ್ಯ, ಕುರುಬೂರು ಫಾರಂ-ಚಿಂತಾಮಣಿ ಮತ್ತು ಹರದನಹಳ್ಳಿ-ಚಾಮರಾಜನಗರ) ವಿಸ್ತರಣಾ ಶಿಕ್ಷಣ ಘಟಕ (ನಾಗನಹಳ್ಳಿ-ಮೈಸೂರು)ದಲ್ಲಿ ದೊರೆಯುತ್ತದೆ. ಅರ್ಜಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ (www.uasbangalore.edu.in) ಲಭ್ಯವಿರುತ್ತದೆ. 

ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2023.

ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಛೇರಿ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560 065 ಇವರನ್ನು ಸಂಪರ್ಕಿಸಬಹುದು. 

ದೂರವಾಣಿ ಸಂಖ್ಯೆ: 080-23330153

ಕೃಷಿ ವಿಶ್ವವಿದ್ಯಾನಿಲಯ ವೆಬ್ಸೈಟ್: www.uasbangalore.edu.in

“ಗೃಹ ಜ್ಯೋತಿ” ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳೇನು?

0

ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುಚ್ಛಕ್ತಿಯನ್ನು ಉಚಿತವಾಗಿ ರಾಜ್ಯದ ಜನರಿಗೆ ಕಲ್ಪಿಸುವ ದೇಸೆಯಲ್ಲಿ ಒದಗಿಸಲು ದಿನಾಂಕ: 20.05.2023 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಒದಗಿಸಲು ತಾತ್ವಿಕ ಅನುಮೋದನೆ ನೀಡಿದೆ.

“ಗೃಹ ಜ್ಯೋತಿ” ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್ ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23 ರ ಬಳಕೆಯ ಆಧಾರದನ್ವಯ) ಯೂನಿಟ್ ಗಳ ಮೇಲೆ ಶೇಕಡ 10 ರಷ್ಟು ಹೆಚ್ಚಿನ ವಿದುತ್ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ಒದಗಿಸಲು ಹಾಗೂ 200 ಯೂನಿಟ್ ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರ್ಕಾರ ಆದೇಶಿಸಿದೆ.

ಈ ಯೋಜನೆಯನ್ನು ಜುಲೈ 2023 ರ ತಿಂಗಳು ವಿದ್ಯುತ್ ಬಳಕೆಗೆ ಆಗಸ್ಟ್ 2023 ರ ತಿಂಗಳಿಂದ ನೀಡುವ ಬಿಲ್ಲಿಗೆ ಅನ್ವಯವಾಗುತ್ತದೆ ಎಂದು ಸರಕಾರದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಆರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1. ಆಧಾರ್ ಕಾರ್ಡ್.
2. ವಿದ್ಯುತ್ ಬಿಲ್.
3. ವಿದ್ಯುತ್ ಖಾತೆ ಸಂಖ್ಯೆ(ಪ್ರತಿ ತಿಂಗಳು ನೀಡವ ವಿದ್ಯುತ್ ಬಿಲ್ ನಲ್ಲಿ ನಮೂದಿಸಿರುತ್ತಾರೆ)
4. ಮೊಬೈಲ್ ಸಂಖ್ಯೆ.

ಅರ್ಜಿ ಸಲ್ಲಿಕೆ ವಿಧಾನ:

ಅರ್ಜಿದಾರರು ಇಂದು(18-06-2023) ಬೆಳ್ಳಗೆ 2-00 ಗಂಟೆಯ ನಂತರ ರಾಜ್ಯ ಸರಕಾರದ ಸೇವಾ ಸಿಂಧು ಪೋರ್ಟಲ್ (https://sevasindhugs.karnataka.gov.in/about_kannada.html) ಭೇಟಿ ಮಾಡಿ ನೀವೇ ಸ್ವತಃ ನಿಮ್ಮ ಮೊಬೈಲ್ ಮೂಲಕ ಅಗತ್ಯ ವಿವರ ದಾಖಲಿಸಿ ಅರ್ಜಿ ಸಲ್ಲಿಸಬವುದಾಗಿದೆ ಅಥವಾ ನಿಮ್ಮ ಹತ್ತಿರದ ಗ್ರಾಮ್ ಒನ್ , ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್, ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಬವುದು.

ಅರ್ಜಿ ಸಲ್ಲಿಕೆ ಕುರಿತು ಯಾವುದೇ ಪ್ರಶ್ನೆಗಳಿಗೆ ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಿ:

ಸಹಾಯವಾಣಿ-1: 1902

ಸಹಾಯವಾಣಿ-2: 08022279954 / 8792662814 / 8792662816

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು 30 ಜೂನ್ ಕೊನೆಯ ದಿನ.

ಗೃಹ ಜ್ಯೋತಿ ಯೋಜನೆಯ ನಿಯಮ ಮತ್ತು ಷರತ್ತುಗಳ ವಿವರ:

ಯೋಜನೆಯು ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯವಾಗುತ್ತದೆ; ವಾಣಿಜ್ಯ ಉದ್ದೇಶಗಳಿಗೆ ವಿದ್ಯುತ್ ಉಪಯೋಗಿಸಿದಲ್ಲಿ ಅನ್ವಯವಾಗುವುದಿಲ್ಲ.

ಪ್ರತಿ ತಿಂಗಳ ಮೀಟರ್ ರೀಡಿಂಗ್ ಮಾಡಿದಾಗ ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಲಾಗುವುದು.

ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್ ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ net bill ನೀಡುವುದು ಹಾಗೂ ಗ್ರಾಹಕರು net bill ನ್ನು ಪಾವತಿಸಬೇಕು.

ಅರ್ಹ ಯೂನಿಟ್ / ಮೊತ್ತಕ್ಕಿಂತ ಒಳಗೆ ಬಿಲ್ ಆಗಿದ್ದಲ್ಲಿ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ಲನ್ನು ನೀಡಲಾಗುವುದು.

ಈ ಯೋಜನೆಯಡಿ ಸೌಲಭ್ಯ ಪಡೆಯಲು ಇಚ್ಛಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.

ಪ್ರತಿ ಫಲಾನುಭವಿಯು ತನ್ನ Connection ID / Account ID ಅನ್ನು ಆಧಾರ್ ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು.

ಪ್ರಸ್ತುತ ಚಾಲ್ತಿಯಲ್ಲಿರುವ ಭಾಗ್ಯ ಜ್ಯೋತಿ / ಕುಟೀರ ಜ್ಯೋತಿ ಯೋಜನೆ ಮತ್ತು ಅಮೃತ ಜ್ಯೋತಿ ಯೋಜನೆಯ ಫಲಾನುಭವಿಗಳನ್ನು ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಸೇರ್ಪಡಿಸಲಾಗುವುದು.

ದಿನಾಂಕ: 30.06.2023 ರ ಅಂತ್ಯಕ್ಕೆ (ಜೂನ್ 2023 ರ ಮಾಹೆಯಲ್ಲಿ ಬಳಸಿದ ವಿದ್ಯುತ್ ಪ್ರಮಾಣಕ್ಕೆ ಜುಲೈ 2023 ರಲ್ಲಿ ವಿತರಿಸಿದ ಬಿಲ್ಲಿನ ಮೊತ್ತ ಒಳಗೊಂಡಂತೆ) ಬಾಕಿ ಇರುವ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗೆ ಪಾವತಿಸತಕ್ಕದದು. ಬಾಕಿ ಮೊತ್ತವನ್ನು ನಿಗಧಿತ ಅವಧಿಯೊಳಗೆ ಪಾವತಿಸದಿದ್ದಲ್ಲಿ ಅಂತಹ ಗ್ರಾಹಕರು ವಿದ್ಯುತ್ ಸ್ಥಾವರಗಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು.

ಗೃಹ ವಿದ್ಯುತ್ ಗ್ರಾಹಕರ ಸ್ಥಾವರಗಳುಗೆ ಮಾಪಕವನ್ನು ಅಳವಡಿಸುವುದು ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ.

ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದಲ್ಲಿ, ಒಂದು ಸ್ಥಾವರಕ್ಕೆ ಮಾತ್ರ ಈ ಯೋಜನೆಯಡಿಯ ಸೌಲಭ್ಯಕ್ಕೆ ಅರ್ಹರಾಗುವರು.

ಮುಂಗಾರು ಮಳೆ ಹೇಗೆ ಉಂಟಾಗುತ್ತದೆ? ಮಾನ್ಸೂನ್ ಮಾರುತಗಳು ಎಂದರೇನು?

0

ಇಡೀ ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ಮುಂಗಾರು ಮಾರುತಗಳು ಈ ಬಾರಿ ಮಾಮೂಲಿಗಿಂತ ತಡವಾಗಿ ಕೇರಳಕ್ಕೆ ಪ್ರವೇಶಿಸುತ್ತವೆ. ಇಷ್ಟೊತ್ತಿಗೆ ಕರಾವಳಿ ಜಿಲ್ಲೆಗಳಲ್ಲಿ ಆರ್ಭಟಿಸಬೇಕಾಗಿದ್ದ ಮುಂಗಾರು ಮಳೆ ಇನ್ನು ಬಂದಿಲ್ಲ. ಅಷ್ಟೇ ಅಲ್ಲದೇ ಎಲ್ ನೀನೊ ಪ್ರಭಾವದಿಂದ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ. ಮುಂಗಾರು ಮಳೆ ಸಾಧಾರಣವಾಗಿ ಬೀಳಬಹುದು ಎನ್ನುವ ಆತಂಕಕಾರಿ ಮಾಹಿತಿಯನ್ನು ಹವಾಮಾನ ತಜ್ಞರು ಹೇಳುತ್ತಿದ್ದಾರೆ. 

ಇಡೀ ದೇಶದ ಹವಾಮಾನ ಮಾನ್ಸೂನ್ ಮಳೆಯ ಮೇಲೆ ಅವಲಂಬಿತವಾಗಿದೆ. ಜೊತೆಗೆ ಭಾರತದ ಆರ್ಥಿಕತೆಯ ದೃಷ್ಟಿಯಿಂದ ಕೂಡ ಮುಖ್ಯವಾಗಿದೆ. ಯಾಕೆಂದರೆ ಭಾರತದ ಕೃಷಿ ಈ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ.  ಭಾರತದ ಕೃಷಿಯನ್ನು ಮಾನ್ಸೂನ್ ನೊಂದಿಗಿನ ಜೂಜಾಟ ಎಂದು ಕರೆಯಲಾಗುತ್ತದೆ.  ಹಾಗಾದರೆ ಈ ಮಾನ್ಸೂನ್ ಮಾರುತಗಳು ಎಂದರೆ ಏನು? ಮುಂಗಾರು ಮಳೆ ಎಲ್ಲಿಂದ ಬರುತ್ತದೆ. ಹೇಗೆ ಉಂಟಾಗುತ್ತದೆ. ಬೇರೆ ಮಳೆಗೂ, ಈ ಮಳೆಗೂ ಏನು ವ್ಯತ್ಯಾಸ? 

ಏನಿದು ಮುಂಗಾರು?

ಮುಂಗಾರನ್ನು ಮಾನ್ಸೂನ್ ಎಂದು ಕರೆಯಲಾಗುತ್ತದೆ. ಮಾನ್ಸೂನ್ ಎನ್ನುವ ಪದ ಅರೇಬಿಕ್ ಭಾಷೆಯ ಮೌಸಿಂ ಇಂದ ಬಂದಿದೆ. ಮಾನ್ಸೂನ್ ಎಂದರೆ ಕಾಲಕ್ಕೆ ತಕ್ಕಂತೆ ದಿಕ್ಕನ್ನು ಬದಲಿಸುವ ಮಾರುತಗಳು, ಅಥವಾ ಚಲಿಸುವ ಗಾಳಿ, ಬೇಸಿಗೆಯಲ್ಲಿ ಮಾನ್ಸೂನ್ ಅಥವಾ ಮುಂಗಾರು ಮಾರುತಗಳು ಸಮುದ್ರದಿಂದ ಭೂಮಿಯ ಕಡೆಗೆ ಚಲಿಸುತ್ತವೆ. ಹಾಗೆಯೇ ಚಳಿಗಾಲದಲ್ಲಿ ಭೂಮಿಯಿಂದ ಸಮುದ್ರಕ್ಕೆ ಪ್ರಯಾಣ ಮಾಡುತ್ತವೆ. ಅರಬ್ಬಿ ಸಮುದ್ರದಿಂದ ತೇವಾಂಶವನ್ನು ಹೊತ್ತು ಬರುವ ಈ ಮಾರುತಗಳು ಭಾರತದ ಭೂ ಪ್ರದೇಶದ ಮೇಲೆ ಹಾದುಹೋಗುತ್ತವೆ. 

ಒಂದುವರೆ ತಿಂಗಳಲ್ಲಿ ಗರಿಷ್ಟ ಮಳೆಯನ್ನು ಸುರಿಸುತ್ತವೆ. ದಕ್ಷಿಣದ ಕೇರಳದಿಂದ ಭಾರತವನ್ನು ಪ್ರವೇಶಿಸಿ ಉತ್ತರೆದ ತುತ್ತ ತುದಿ ಜಮ್ಮು ಕಾಶ್ಮೀರದವರೆಗೆ ಸಾಗುತ್ತವೆ.  ಈ ಮಾರುತಗಳು ಸುರಿಸುವ ಮಳೆಯನ್ನೇ ಮುಂಗಾರು ಮಳೆ ಎಂದು ಕರೆಯಲಾಗುತ್ತದೆ. ಹೀಗೆ ಹಾದು ಹೋದ ಮಾರುತಗಳು ಉತ್ತರದಿಂದ ದಕ್ಷಿಣಕ್ಕೆ ಪುನರಾಗಮನವಾಗುತ್ತವೆ. ಕೇರಳದ ಮೂಲಕ ಮತ್ತೆ ಅರಬ್ಬಿ ಸಮುದ್ರದ ಕಡೆಗೆ ಸಾಗುತ್ತವೆ. ಇದನ್ನೆ ಹಿಂಗಾರು ಮಳೆ ಎಂದು ಕರೆಯುತ್ತಾರೆ. ದಕ್ಷಿಣದಿಂದ ಉತ್ತರಕ್ಕೆ ಸಾಗುವ ಮಾರುತಗಳನ್ನು ನೈರುತ್ಯ ಮಾರುತಗಳು ಎಂದು ಕರೆಯಲಾಗುತ್ತದೆ.  

ಇವು ಜೂನ್ ನಿಂದ ಸಪ್ಟೆಂಬರ್ ವರೆಗೆ ಮಳೆಯನ್ನು ಸುರಿಸುತ್ತವೆ. ಅದೇ ರೀತಿ ಉತ್ತರದಿಂದ ದಕ್ಷಿಣಕ್ಕೆ ಜುಲೈನಿಂದ ಆಗಷ್ಟ್ ನಲ್ಲಿ ಹಾದುಹೋಗುವ ಮಾರುತಗಳನ್ನು ಈಶಾನ್ಯ ಮಾರುತಗಳು ಎಂದು ಕರೆಯಲಾಗುತ್ತದೆ. ಇವು ಸಪ್ಟಂಬರ್ ನಿಂದ ಜನವರಿ ಒಳಗೆ ಮಳೆಯನ್ನು ಸುರಿಸುತ್ತವೆ. ಐತಿಹಾಸಿಕವಾಗಿ ಮಾನ್ಸೂನ್ ಗೆ ಬಹಳ ಮಹತ್ವವಿದೆ. ಏಕೆಂದರೆ ಈ ಮಾರುತಗಳನ್ನು ಅನುಸರಿಸಿ ವ್ಯಾಪಾರಿಗಳು ಮತ್ತು ನಾವಿಕರು ಸಮುದ್ರದಲ್ಲಿ ಚಲಿಸುತ್ತಿದ್ದರು. ಮುಂಗಾರು ಮಾರುತಗಳನ್ನು ನೋಡಿಯೇ ರೋಮನ್ನರು ಭಾರತಕ್ಕೆ ಬಂದಿದ್ದರು. ಇನ್ನೂ ಮಧ್ಯ ಪಶ್ಚಿಮ ಆಫ್ರಿಕಾ , ಆಗ್ನೇಯ ಏಷ್ಯಾ ಮತ್ತು ಇತರ ಕೆಲ ಸ್ಥಳಗಳಲ್ಲಿ ಕೂಡ ಮಾನ್ಸೂನ್  ಇದ್ದರೂ ಈ ಮಾರುತಗಳು ಭಾರತ ಉಪಖಂಡದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. 

ಇದನ್ನೂ ಓದಿ: ಕರ್ನಾಟಕದ ಹವಾಮಾನ ಮುನ್ಸೂಚನೆ | 14-06-2023

ಮುಂಗಾರು ಮಳೆ ಹೇಗೆ ಉಂಟಾಗುತ್ತದೆ?

ಭಾರತಕ್ಕೆ ನೈರುತ್ಯ ಮಾರುತಗಳಿಂದ ಬರುವ ಮಳೆಯು ಬಹಳ ಮುಖ್ಯವಾಗಿರುತ್ತದೆ. ಗಾಳಿ ಹೆಚ್ಚು ಒತ್ತಡವಿರುವ ಪ್ರದೇಶದಿಂದ ಕಡಿಮೆ ಒತ್ತಡವಿರುವ ಪ್ರದೇಶಕ್ಕೆ ಚಲಿಸುತ್ತದೆ. ಗಾಳಿಯು ಅಸಂಖ್ಯಾತ ಚಿಕ್ಕ ಚಿಕ್ಕ ಏರ್ ಮೊಲೆಕ್ಯೂಲ್ ನಿಂದ ನಿರ್ಮಾಣವಾಗಿದ್ದು, ಈ ಏರ್ ಮೊಲೆಕ್ಯೂಲ್ ಗಳು ಸದಾ ಚಲಿಸುತ್ತಲೇ ಇರುತ್ತವೆ ಅಥವಾ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತವೆ. ಆ ಮೂಲಕ ತಮ್ಮ ಸಂಪರ್ಕಕ್ಕೆ ಬಂದ ವಸ್ತುವಿನ ಮೇಲೆ ಒತ್ತಡವನ್ನು ಹಾಕುತ್ತವೆ. ಈ ರೀತಿಯಲ್ಲಿಒತ್ತಡವನ್ನು ಗಾಳಿಯ ಒತ್ತಡ ಎಂದು ಕರೆಯುತ್ತಾರೆ. 

ಗಾಳಿಯ ಸಾಂಧ್ರತೆ ಹೆಚ್ಚಾದಷ್ಟು ಗಾಳಿಯ ಒತ್ತಡ ಜಾಸ್ತಿ ಇರುತ್ತದೆ. ಆದರೆ ತಾಪಮಾನ ಹೆಚ್ಚಿರುವ ಪ್ರದೇಶಗಳಲ್ಲಿ ಗಾಳಿಯ ಒತ್ತಡ ಕಮ್ಮಿಯಾಗುತ್ತದೆ. ಯಾಕೆಂದರೆ ಗಾಳಿಯ ಕಣಗಳು ಬಿಸಿಯಾದಾಗ ಅವುಗಳಗೆ ಚಲನ ಶಕ್ತಿ ಸಿಕ್ಕಾಗ ಒಂದನ್ನೊಂದು ದೂಡುತ್ತವೆ. ಆದ್ದರಿಂದ ಗಾಳಿಯ ಕಣಗಳ ಸಂಖ್ಯೆ ಕಡಿಮೆಯಾಗಿ ಸಾಂದ್ರತೆ ಮತ್ತು ಒತ್ತಡ ಕೂಡ ಕಡಿಮೆಯಾಗುತ್ತದೆ. ಈ ರೀತಿ ಒತ್ತಡ ಕಮ್ಮಿಯಾದಾಗ ಅಲ್ಲಿಗೆ ಜಾಸ್ತಿ ಒತ್ತಡವಿರುವ ಗಾಳಿ ಬರುತ್ತದೆ. 

ಭಾರತವು ಸಮಭಾಜಕ ವೃತ್ತದ ಮೇಲಿದ್ದು, ಭೂಮಿ ಸ್ವಲ್ಪ ಓರೆಯಾಗಿರುವುದರಿಂದ ಭೂಮಿಯ ಬೇರೆ ಬೇರೆ ಭಾಗಗಳ ಮೇಲೆ ಬೇರೆ ಬೇರೆ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತವೆ. ಹೀಗಾಗಿ ಉತ್ತರಾರ್ಧ ಗೋಳದಲ್ಲಿ ಬೇಸಿಗೆಯಿದ್ದಾಗ ಕರ್ಕಾಟಕ ಸಂಕ್ರಾಂತಿ ವೃತ್ತ ರೇಖೆ ಇರುವ ಭಾಗದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ. ಅಂದರೆ ಭಾರತದ ಮಧ್ಯಭಾಗ ಪ್ರದೇಶ ಮತ್ತು ಅದರ ಮೇಲಿನ ಭಾಗದಲ್ಲಿ ಹೆಚ್ಚು ಬಿಸಿಲು ಬೀಳುತ್ತದೆ. ಆದ್ದರಿಂದ ಅಲ್ಲಿನ ಭೂ ಪ್ರದೇಶ ಜಾಸ್ತಿ ಬಿಸಿಯಾಗುತ್ತದೆ. 

ಹೀಗಾಗಿ ಅಲ್ಲಿನ ಗಾಳಿ ಹೆಚ್ಚು ಬಿಸಿಯಾಗಿ ಕಡಿಮೆ ಒತ್ತಡ ಉಂಟಾಗುತ್ತದೆ. ಆದರೆ ಅದೇ ಸಮಯದಲ್ಲಿ ಅರಬ್ಬಿ ಸಮುದ್ರದ ಮೇಲಿರುವ ಗಾಳಿಯು ಭೂಮಿಯ ಮೇಲಿರುವ ಗಾಳಿಯಷ್ಟು ಬಿಸಿಯಾಗಿರುವುದಿಲ್ಲ. ಹೀಗಾಗಿ ಸಮುದ್ರದ ಮೇಲಿನ ಗಾಳಿಯಲ್ಲಿ ಕಣಗಳು ಹೆಚ್ಚು ಒತ್ತಡವಿರುತ್ತದೆ. ಈ ರೀತಿಯಾದಾಗ ಗಾಳಿ ಹೆಚ್ಚು ಒತ್ತಡವಿರುವ ಪ್ರದೇಶದಿಂದ ಕಡಿಮೆ ಒತ್ತಡವಿರುವ ಪ್ರದೇಶಕ್ಕೆ ಬರುತ್ತದೆ. ಅಂದರೆ ಅರಬ್ಬಿ ಸಮುದ್ರದ ಮೇಲಿರುವ ಗಾಳಿ ಭಾರತದ ಭೂಭಾಗದ ಮೇಲೆ ಬರುತ್ತವೆ. ಆದರೆ ಇವು ಬರುವಾಗ ತೇವಾಂಶವನ್ನು ತಗೊಂಡು ಬರುತ್ತವೆ. ಪಶ್ಚಿಮ ಘಟ್ಟಗಳ ಸಾಲು ಗಾಳಿಗೆ ಅಡ್ಡ ಬಂದು ಗಾಳಿಯು ಮೇಲಕ್ಕೆ ಏರಿದಷ್ಟು ತಂಪಾಗುತ್ತದೆ. ತೇವಾಂಶದಲ್ಲಿದ್ದ ನೀರು ಮಳೆ ಹನಿಯಾಗಿ ಭೂಮಿಯ ಮೇಲೆ ಸುರಿಯುತ್ತವೆ. 

ಹೀಗೆ ಜೂನ್ ನ ಮೊದಲ ವಾರದಲ್ಲಿ ಕೇರಳವನ್ನು ಪ್ರವೇಶ ಮಾಡುವ ಮುಂಗಾರು ಮಾರುತಗಳು ಸಪ್ಟೆಂಬರ್ ವರೆಗೆ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ವರ್ಷಕ್ಕೆ ಆಗುವ ಶೇ. 90 ರಷ್ಟು ಮಳೆಯನ್ನು ಸುರಿಸುತ್ತವೆ.  ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಸುಮಾರು 50-70 ರಷ್ಟು ಮಳೆಯನ್ನು ಸುರಿಸುತ್ತವೆ. ಈ ರೀತಿ ಒಟ್ಟಾರೆಯಾಗಿ ಭಾರತದಲ್ಲಿ ಸರಾಸರಿ 200-300 ಮಿ.ಮೀ. ಮಳೆಯಾಗುತ್ತದೆ.  ಕರ್ನಾಟಕ ಕರಾವಳಿ ಪ್ರದೇಶದಲ್ಲಿ 3083.5 ಮಿಮೀ  ಉತ್ತರ ಒಳನಾಡಿನಲ್ಲಿ 506 ಮಿ.ಮೀ., ದಕ್ಷಿಣ ಒಳನಾಡಿನಲ್ಲಿ 659.9 ಮಿಮೀ, ಒಟ್ಟಾರೆಯಾಗಿ ರಾಜ್ಯಾದಂತ 832.3 ಮಿಮೀ  ವಾಡಿಕೆಯಂತೆ ಮಳೆಯಾಗುತ್ತದೆ. ಆದರೆ ಈ ಸಮಯದಲ್ಲಿ ಮುಂಗಾರು ಮಾರುತಗಳು ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯನ್ನು ತರುವುದಿಲ್ಲ. 

ಯಾಕಂದರೆ ಪಶ್ಚಿಮ ಘಟ್ಟಗಳು ಅಡ್ಡ ಬಂದಾಗ ಗಾಳಿಯು ತಂಪಾಗಿ ಹೆಚ್ಚಿನ ಮಳೆಯು ಇಲ್ಲಿಯೇ ಸುರಿದಿದ್ದು, ತಮಿಳುನಾಡಿಗೆ ಹೋಗುವಾಗ ಹೆಚ್ಚಿ ತೇಂವಾಂಶ ಇರುವುದಿಲ್ಲ. ಆದರೆ ಸಪ್ಟೆಂಬರ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ  ಬೀಳುವುದು ಕಮ್ಮಿಯಾಗುವುದರಿಂದ ಜೊತೆಗೆ ಮಳೆಯಾಗುತ್ತಿರುವುದರಿಂದ ಭಾರತದ ಭೂ ಪ್ರದೇಶ ಬೇಗ ತಂಪಾಗುತ್ತದೆ. ಹೀಗಾಗಿ ಭಾರತ ಉಪಖಂಡದ ಗಾಳಿಯಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ. ಅತ್ತ ಹಿಂದೂ ಮಹಾ ಸಾಗರದ ಮೇಲಿನ ಗಾಳಿ ಇಷ್ಟು ತಂಪಾಗಿ ಇರುವುದಿಲ್ಲ. 

ಹೀಗಾಗಿ ಅಲ್ಲಿ ಕಡಿಮೆ ಒತ್ತಡವಿದ್ದು ಮಾನ್ಸೂನ್ ಹಿಂತಿರುಗುತ್ತವೆ. ಹಿಮಾಲಯದವರೆಗೆ ಹೋದ ಮಾರುತಗಳು ವಾಪಸ್ ಬಂಗಾಳ ಸಮುದ್ರದ ಮುಖಾಂತರ ಹೋಗುತ್ತವೆ. ಇದಕ್ಕೆ ಈಶಾನ್ಯ ಮಾರುತಗಳು ಅಥವಾ ಹಿಂಗಾರು ಮಳೆ ಎಂದು ಕರೆಯಲಾಗುತ್ತದೆ. ತಮಿಳುನಾಡು ಮತ್ತು ಆಗ್ನೇಯ ಭಾಗದಲ್ಲಿ ಶೇ. 50-60 ಮಳೆಯಾಗುತ್ತದೆ. 

ಮಾಹಿತಿ ಕೃಪೆ: masth magaa.com

ಅಣಬೆ ಉತ್ಪಾದನಾ ತಂತ್ರಜ್ಞಾನ ಕುರಿತು ತರಬೇತಿಗೆ ಅರ್ಜಿ ಅಹ್ವಾನ.

0

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಅಣಬೆ ಉತ್ಪಾದನಾ ತಂತ್ರಜ್ಞಾನ ಕುರಿತು ನಾಲ್ಕು ದಿನಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ತರಬೇತಿಯ ಉದ್ದೇಶಗಳು:

ಅಣಬೆ ಉತ್ಪಾದನಾ ಕೌಶಲ್ಯವನ್ನು ತಿಳಿಸಿಕೊಡುವುದು,

ಪಾತ್ಯಕ್ಷಿಕೆಯ ಮೂಲಕ ಅಣಬೆ ಬೇಸಾಯದ ಹಂತಗಳನ್ನು ಪರಿಚಯಿಸುವುದು.

ಅಣಬೆಯ ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತು ತಿಳಿಸುವುದು ಮಾರುಕಟ್ಟೆ ತಾಂತ್ರಿಕತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕುರಿತು ಮಾಹಿತಿ.

ತರಬೇತಿಯಲ್ಲಿ ಯಾವೆಲ್ಲ ವಿಷಯ ತಿಳಿಸಲಾಗುತ್ತದೆ:

ಅಣಬೆ ಕೃಷಿ ಪರಿಚಯ ಮತ್ತು ಮಹತ್ವ.

ಆಯಿಸ್ಟರ್, ಬಟನ್ ಮತ್ತು ಮಿಲ್ಕಿ ಅಣಬೆಯ ಉತ್ಪಾದನಾ ತಂತ್ರಜ್ಞಾನಗಳು.

ಅಣಬೆ ಬೀಜ ಉತ್ಪಾದನೆ.

ಆಯಿಸ್ಟರ್ ಅಣಬ್ಬೆ ಕೃಷಿಗಾಗಿ ಸಬ್ ಸ್ಟೇಟ್ಸ್ ತಯಾರಿಕಾ ವಿಧಾನಗಳು ಆಯಿಸರ್ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು.

ಇತರೆ ಅಣಬೆ ಕೃಷಿ ಉತ್ಪಾದನಾ ತಂತ್ರಜ್ಞಾನಗಳು ಹೆಸರಘಟ್ಟದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(IIHR)ಅಣಬೆ ಕೃಷಿ ಘಟಕಕ್ಕೆ ಭೇಟಿ.

ಅಣಬೆಯ ಸಂಸ್ಕರಣೆ, ಸಂರಕ್ಷಣೆಯಲ್ಲಿ ಸುರಕ್ಷತಾ ವಿಧಾನಗಳು ಅಣಬೆ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳು.

ಅಣಬೆ ಉತ್ಪಾದನೆಯ ಆರ್ಥಿಕತೆ ಹಾಗೂ ಮಾರುಕಟ್ಟೆ ನಿರ್ವಹಣೆ.

ತರಬೇತಿ ವಿಧಾನ: ಉಪನ್ಯಾಸ, ಕೌಶಲ್ಯ ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ

ತರಬೇತಿ ನಡೆಯುವ ದಿನಾಂಕ: 26-06-2023 ರಿಂದ 29-06-2023(ಸೋಮವಾರ ದಿಂದ ಗುರುವಾರ‍)

ಸಮಯ: ಬೆಳಿಗ್ಗೆ 10.00 ರಿಂದ ಸಾಯಂಕಾಲ 5,00 (4 ದಿನಗಳು) : 

ಅರ್ಜಿ ಸಲ್ಲಿಕೆ ವಿಧಾನ ಹೇಗೆ?

https://forms.gle/9RjnJtWUe4hqct8LA ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಗೂಗಲ್ ಪಾರ್ಮ್ ಒಪನ್ ಆಗುತ್ತದೆ ಅಲ್ಲಿ ನಿಮ್ಮ ವೈಯಕ್ತಿಕ ವಿವರ ಇತ್ಯಾದಿ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

ಯಾರು ಈ ತರಬೇತಿ ಪಡೆದುಕೊಳ್ಳಬವುದು?

ಆಸಕ್ತ ಕೃಷಿಕರು ಕೃಷಿಕ ಮಹಿಳೆಯರು, ಗ್ರಾಮೀಣ ಯುವಕರು/ಯುವತಿಯರು ಮತ್ತು ಅಣಬೆ ಉದ್ಯಮದಲ್ಲಿ ಆಸಕ್ತಿ ಇರುವ ನಗರವಾಸಿಗಳು.

ತರಬೇತಿ ಶುಲ್ಕ

ವಸತಿ ಸಹಿತ: 4.800/-

ವಸತಿ ರಹಿತ: 3.700/-

ನೊಂದಣಿ ವಿಧಾನ:

The Comptroller, UAS, GKVK, Bangalore ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಡಿಡಿಯನ್ನು ತೆಗೆದುಕೊಂಡು ದಿನಾಂಕ 20-06-2013 ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸುವುದು. 

ಸಂಸ್ಥೆಯ ವಿಳಾಸ : ಮುಖ್ಯಬೋಧಕರು, ರೈತ ತರಬೇತಿ ಸಂಸ್ಥೆ ಕೃ,ವಿ,ವಿ. ಜಿ.ಕೆವಿಕೆ. ಬೆಂಗಳೂರು -56006, ದೂರವಾಣಿ: 080-23626455.

ಇತರೆ ಮಾಹಿತಿಗಾಗಿ ಸಂಪರ್ಕಿಸಿ:

1. ಡಾ. ಬನು ದೇಶಪಾಂಡೆ
ಸಹ ಪ್ರಾಧ್ಯಾಪಕರು & ತರಬೇತಿ ಸಂಯೋಜಕರು ಮೊ: 9844176675

2. ಶ್ರೀಮತಿ ಪವಿತ್ರ ಎ ಸಹಾಯಕರು ಮೊ: 8747988880

3. ಶ್ರೀಮತಿ ರಮ್ಯ, ಎ. ಕೆ
ಬೆರಳಚ್ಚುಗಾರರು ಮತ್ತು ಗಣಕಯಂತ್ರ ಆಪರೇಟರ್ ಮೊ: 9620459342

ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ವಿವಿಧ ಇಲಾಖೆಯ ಸಚಿವರನ್ನು ಸಂಪರ್ಕಿಸಲು ರಾಜ್ಯ ಸರಕಾರದಿಂದ ದೂರವಾಣಿ ಸಂಖ್ಯೆಗಳ ಪಟ್ಟಿ ಬಿಡುಗಡೆ.

ವಿವಿಧ ಇಲಾಖೆಯ ಸಚಿವರನ್ನು ಸಂಪರ್ಕಿಸಲು ರಾಜ್ಯ ಸರಕಾರದಿಂದ ದೂರವಾಣಿ ಸಂಖ್ಯೆಗಳ ಪಟ್ಟಿ ಬಿಡುಗಡೆ.

0

ವಿವಿಧ ಇಲಾಖೆಗೆ ಸಂಬಂದಪಟ್ಟ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಯ ಇಲಾಖೆಯ ಸಚಿವರ ಗಮನಕ್ಕೆ ತಿಲಿಸಲು ಸಂಬಂದಿಸಿದ ಸಚಿವರನ್ನು ಸಂಪರ್ಕಿಸಲು ನೂತನ ರಾಜ್ಯ ಸರಕಾರದಿಂದ ಸಚಿವರ ಅಧಿಕೃತ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ್ ಉಪ ಮುಖ್ಯಮಂತ್ರಿ, ಸಚಿವರ ಅಪ್ತ ಕಾರ್ಯದರ್ಶಿ, ವಿಶೇಷ ಕರ್ತ್ಯವಾಧಿಕರಿ ಮತ್ತು ಅಪ್ತ ಸಹಾಯಕರ ದೂರವಾಣಿ ಸಂಖ್ಯೆಯನ್ನು ತಿಳಿಸಲಾಗಿದೆ.

ದೂರವಾಣಿ ಸಂಖ್ಯೆಗಳ ಪಟ್ಟಿ 

ದೂರವಾಣಿ ಸಂಖ್ಯೆಗಳ ಪಟ್ಟಿಯ ಪಿಡಿಎಪ್ ಪೈಲ್ ಪಡೆಯಲ್ಲು ಇಲ್ಲಿ ಕ್ಲಿಕ್ ಮಾಡಿ

ವಿವಿಧ ಇಲಾಖೆಯ ಸಹಾಯವಾಣಿ ಸಂಖ್ಯೆಗಳು:

ರಾಜ್ಯ ಸಹಾಯವಾಣಿ ಸಂಖ್ಯೆ:1902
ಕೋವಿಡ್‌-19 ರಾಜ್ಯ ನಿಯಂತ್ರಣ ಕೊಠಡಿ ಸಂಖ್ಯೆಗಳು:104, 1075, 080-46848600, 080-66692000, 9745697456, 080-1070 (ಎಸ್‌.ಇ.ಓ.ಸಿ), 9980299802 (ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ವಹಣೆಸಂಖ್ಯೆ)
ಇಲಾಖೆಯ ಸಹಾಯವಾಣಿ ಸಂಖ್ಯೆಗಳು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:104
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ:1967/18000-425-9339
ಕೃಷಿ ಇಲಾಖೆ:080-22212818/080-22210237
ಸಾರ್ವಜನಿಕ ಕುಂದುಕೊರತೆ ಇಲಾಖೆ:080-44554455
ಆಂಬುಲೆನ್ಸ್‌:102/108
ಮಹಿಳಾ ಸಹಾಯವಾಣಿ:181
ಆರಕ್ಷಕ ಇಲಾಖೆ:100
ಬಿಬಿಎಂಪಿ:080-22660000
ಕಾರ್ಮಿಕ ಇಲಾಖೆ:155214
ಬೆಸ್ಕಾಂ:1912
ಬಿಡಬ್ಲ್ಯೂಎಸ್‌ಎಸ್‌ಬಿ:1916
ಸಮಾಜ ಕಲ್ಯಾಣ ಇಲಾಖೆ:155214
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ):18004258666

ರಾಜ್ಯ ಸರಕಾರದ ಅಧಿಕೃತ ಜಾಲತಾಣ: https://www.karnataka.gov.in/  

ಇದನ್ನೂ ಓದಿ: ಮಳೆ ಮುನ್ಸೂಚನೆ
ಕರ್ನಾಟಕ ಹವಾಮಾನ ಮುನ್ಸೂಚನೆ | 12-06-2023

ಬೆಳೆಗಳಿಗೆ ಎಷ್ಟು ಪ್ರಮಾಣದ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು? ಬಳಸುವ ವಿಧಾನ ಹೇಗೆ?

0

ರೈತರು ಬೆಳೆಗಳಿಂದ ಉತ್ತಮ ಇಳುವರಿ ಪಡೆಯಲು ಮತ್ತು ಕಡಿಮೆ ವೆಚ್ಚದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಮಾಡುಲು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಜೈವಿಕ ಗೊಬ್ಬರಗಳ ಬಳಕೆ ಮಾಡುವುದು ಅತ್ಯಗತ್ಯವಾಗಿದೆ.

ಈ ಅಂಕಣದಲ್ಲಿ ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆಗಳಿಗೆ ಎಷ್ಟು ಪ್ರಮಾಣದ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು? ಬಳಸುವ ವಿಧಾನ ಹೇಗೆ? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಅಣುಜೀವಿ ಗೊಬ್ಬರಗಳ ಬಳಕೆ:

ಕ್ರ.ಸಂಬೆಳೆಅಣುಜೀವಿ ಗೊಬ್ಬರ(ಪ್ರತಿ ಎಕರೆ)ಪ್ರಮಾಣ  (ಗ್ರಾಂ/ಪ್ರತಿ ಎಕರೆಗೆ)ಬಳಸುವ ವಿಧಾನ
ಭತ್ತಅಝೋಸ್ಫಿರಿಲಂ1 ಕಿ.ಗ್ರಾಂ.ಸಸಿಗಳನ್ನು 15-20 ನಿಮಿಷಗಳ ಕಾಲ ಅದ್ದಿ ನಾಟಿ ಮಾಡುವುದು
ಜೋಳಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 200 ಗ್ರಾಂಬೀಜೋಪಚಾರ
ಗೋವಿನಜೋಳಅಝೋಸ್ಫಿರಿಲಂ250 ಗ್ರಾಂಬೀಜೋಪಚಾರ
ಸಜ್ಜೆಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 150 ಗ್ರಾಂಬೀಜೋಪಚಾರ
ಗೋಧಿಅಝೋಸ್ಫಿರಿಲಂ1.2 ಕಿ.ಗ್ರಾಂಬೀಜೋಪಚಾರ
ಕಡಲೆಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ500 ಗ್ರಾಂ 500 ಗ್ರಾಂಬೀಜೋಪಚಾರ
ಹೆಸರುರೈಜೊಬಿಯಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 500 ಗ್ರಾಂಬೀಜೋಪಚಾರ
ಶೇಂಗಾರೈಜೊಬಿಯಂ500 ಗ್ರಾಂಬೀಜೋಪಚಾರ
ಸೋಯಾಅವರೆರೈಜೊಬಿಯಂ ಮತ್ತು ರಂಜಕ ಕರಗಿಸುವ ಗೊಬ್ಬರ500 ಗ್ರಾಂ 500 ಗ್ರಾಂಬೀಜೋಪಚಾರ
ಹತ್ತಿಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 ಗ್ರಾಂ 200 ಗ್ರಾಂಬೀಜೋಪಚಾರ
ಮೆಣಸಿನಕಾಯಿಅಝೋಸ್ಫಿರಿಲಂ ಮತ್ತು ರಂಜಕ ಕರಗಿಸುವ ಗೊಬ್ಬರ200 3.2 ಕಿ.ಗ್ರಾಂಬೀಜೋಪಚಾರ  ಸಸಿಗಳ ಬೇರುಗಳನ್ನು ಅದ್ದುವುದು
ಈರುಳ್ಳಿ/ಉಳ್ಳಾಗಡ್ಡೆಅಝೋಸ್ಫಿರಿಲಂ500 ಗ್ರಾಂಬೀಜೋಪಚಾರ

ಇದನ್ನೂ ಓದಿ: ಉಚಿತ ಕುರಿ,ಮೇಕೆ, ಹೈನುಗಾರಿಕೆ,ಕೋಳಿ,ಹಂದಿ ಸಾಕಾಣಿಕೆ ತರಬೇತಿಗೆ ಅರ್ಜಿ ಅಹ್ವಾನ.

ಜೈವಿಕ ಗೊಬ್ಬರವನ್ನು ಎಲ್ಲಿ ಖರೀದಿ ಮಾಡಬವುದು?

ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ , ಜಿಲ್ಲೆ ಮಟ್ಟದ ಕೃಷಿ ವಿಜ್ನಾನ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಕಾಲೇಜ್, ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರಗಳಲ್ಲಿ ಖರೀದಿ ಮಾಡಬವುದು.

ಅಥವಾ 

ಡಾ ಮಂಜುನಾಥ, ಪ್ಯೂಚರ್ ಬಯೋ ಟೆಕ್ ,ದಾರವಾಡ ಮೊ: 9480291450 ಇವರಿಗೆ ಸಂಪರ್ಕ ಮಾಡಿದರೆ ವಿ.ಆರ್.ಎಲ್ ನಲ್ಲಿ ನಿಮಗೆ ತಲುಪಿಸಿತ್ತಾರೆ.

ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ.

0

ನಮ್ಮ ರಾಜ್ಯದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದ ರೈತರು ಮಳೆಗಾಲದಲ್ಲಿ ಅಡಿಕೆ ಕೊಳೆ ರೋಗಕ್ಕೆ ಬೋರ್ಡೊ ದ್ರಾವಣವನ್ನು ಸಿಂಪರಣೆ ಮಾಡುತ್ತಾರ‍ೆ ಈ ದ್ರಾವಣ ತಯಾರಿಕೆ ಕುರಿತು ರೈತರು ಅನುಸರಿಸಬೇಕಾದ ಕ್ರಮಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರನಾಶಕ, ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ: ಸಿಂಪರಣೆ ಕೈಗೊಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.

ಶೇ. 1 ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು (100 ಲೀಟರ್ ನೀರು)

1. ಮೈಲುತುತ್ತ 1 ಕೆ.ಜಿ.

2. ಸುಣ್ಣ 1 ಕೆ.ಜಿ.

3, ನೀರು’ 100 ಲೀಟರ್.

4. ಸ್ವಚ್ಛವಾದ ಕಬ್ಬಿಣದ ತುಂಡು ಚಾಕು/ಪಿ.ಹೆಚ್.ಪೇಪರ್. 

5. 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್‌ .

6. 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್ ಬ್ಯಾರಲ್.

ಇದನ್ನೂ ಓದಿ: Monsoon update : ಕರ್ನಾಟಕ ಹವಾಮಾನ ಮುನ್ಸೂಚನೆ | 10-06-2023

ತಯಾರಿಕೆ ವಿಧಾನ:

ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟನಲ್ಲಿ ಸಂಪೂರ್ಣವಾಗಿ ಕರಗಿಸಬೇಕು.

ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್‌ ಬಕೆಟ್‌ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು.

ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 40 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‌ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದೆ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ, ಸ್ವಲ್ಪ ಸ್ವಲ್ಪ. ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಕೆಲವು ಸಂಧರ್ಭದಲ್ಲಿ ಉತ್ತಮ ಗುಣಮಟ್ಟದ ಸುಣ್ಣವನ್ನು ಉಪಯೋಗಿಸಿದರೆ 100 ಲೀಟರ್ ದ್ರಾವಣಕ್ಕೆ 500 ಗ್ರಾಂ ಸುಣ್ಣ ಸಾಕಾಗುತ್ತದೆ, ಆದರೆ ಸುಣ್ಣದ ಪ್ರಮಾಣವನ್ನು ರಸಸಾರವನ್ನು ಪರೀಕ್ಷೆ ಮಾಡುತ್ತ ಸುರಿಯಬೇಕು. ಅಂದಾಜಿನ ಮೂಲಕ ಸುಣ್ಣವನ್ನು ಸುರಿಯಬಾರದು, ಸರಿಯಾದ ಶೇ. 1ರ ಬೋರ್ಡೋ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.

ಬೋರ್ಡೊ ದ್ರಾವಣದ ಪರೀಕ್ಷೆ:

• ಕೆಂಪು ಬಣ್ಣದ, ಲಿಟಸ್, ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್‌ಮಸ್‌ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.

• ಬೋರ್ಡೋ ದ್ರಾವಣದ ರಸಸಾರ 8 ರಿಂದ 10 ಇರುವ ಹಾಗೆ ನೋಡಿಕೊಳ್ಳಬೇಕು.

ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು.

0

ರೈತರು ಮತ್ತು ನಾಗರಿಕರು ಮಳೆಗಾಲದ ಆರಂಭದಲ್ಲಿ ಗುಡುಗು ಮತ್ತು ಸಿಡಿಲು ಇರುವಂತಹ ಸಂದರ್ಭದಲ್ಲಿ ಯಾವೆಲ್ಲ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಸಿಡಿಲು ಪ್ರಕೃತಿಯಲ್ಲಿ ಉಂಟಾಗುವ  ಸ್ಥಳೀಯ ವಿದ್ಯಮಾನವಾಗಿದೆ. ಇದರಿಂದ ಜೀವ ಮತ್ತು ಆಸ್ತಿಯ ನಷ್ಟದ ವಿಷಯದಲ್ಲಿ ವಿನಾಶಕಾರಿ ಪರಿಣಾಮಗಳನ್ನು ಬೀರಬಹುದು.  ಪ್ರಸಕ್ತ ಮುಂಗಾರು ಪೂರ್ವ ಋತುವಿನಲ್ಲಿ (ಮಾರ್ಚ್ 1 ರಿಂದ ಮೇ 23 ರವರೆಗೆ) ಸಿಡಿಲಿನಿಂದಾಗಿ 34 ಮಾನವ ಜೀವಹಾನಿ ವರದಿಯಾಗಿವೆ.  

ಕಳೆದ 2 ವರ್ಷಗಳಲ್ಲಿ ಸಿಡಿಲು ಬಡಿದು ಒಟ್ಟು 200 ಸಾವುಗಳಳು ವರದಿಯಾಗಿವೆ. ಸಿಡಿಲು ಬಡಿತವನ್ನು ತಪ್ಪಿಸಲು ಸಾದ್ಯವಿಲ್ಲವಾದರೂ ಇದರಿಂದಾಗುವ ಸಾವು ನೋವುಗಳ ಪ್ರಮಾಣವನ್ನು ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಪ್ರಮಾಣವನ್ನು ತಗ್ಗಿಸಬಹುದಾಗಿದೆ. 

ಈ ಹಿನ್ನೆಲೆಯಲ್ಲಿ, ಸಿಡಿಲಿನ ಸುರಕ್ಷತೆಯ ಬಗ್ಗೆ ಸಾಮೂಹಿಕ ಜಾಗೃತಿ ಮೂಡಿಸುವ ಮೂಲಕ ಸಿಡಿಲಿನಿಂದಾಗುವ ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಮಾಹಿತಿಯನ್ನು ನಿಮ್ಮ ಅಪ್ತರಿಗೆ ತಪ್ಪದೇ ಶೇರ್ ಮಾಡಿ.  

ಇದನ್ನೂ ಓದಿ: ಹೆಸ್ಕಾಂನಿಂದ ಉಚಿತ ವಿದ್ಯುತ್ ಯೋಜನೆ ಕುರಿತು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಗಳ ವಿವರ.

ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು:

ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆಗಳನ್ನು Common Alerting, Protocol (CAP) ಮುಖಾಂತರ ಬರುವ ಮೆಸೇಜ್‌ಗಳನ್ನು ಮೊಬೈಲ್‌ನಲ್ಲಿ ಗಮನಿಸಿಸುವುದು. ಪ್ರತಿಕೂಲ ಹವಾಮಾನದ ಸಮಯದಲ್ಲಿ ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗದಿರುವುದು. 

ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು, ಸುರಕ್ಷಿತವಲ್ಲ, ಸುರಕ್ಷಿತವಾದ ಕಟ್ಟಡಗಳಲ್ಲಿ ಅಶ್ರಯ ಪಡೆಯುವುದು. ಬೆಟ್ಟಗಳು, ಪರ್ವತ ಶ್ರೇಣಿಗಳು ಅಥವಾ ಶಿಖರಗಳಂತಹ ಎತ್ತರದ ಪ್ರದೇಶಗಳಿಂದ ಕೆಳಗೆ ಇಳಿದು ಪ್ರವಾಹ ಬರದಂತಹ ತಗ್ಗು ಪ್ರದೇಶವನ್ನು ಖಚಿತಪಡಿಸಿ ಆಶ್ರಯ ಪಡೆಯುವುದು.

ನೀರಿನ ಮೂಲಗಳಾದ ಕೆರೆ ಮತ್ತು ನದಿಗಳಿಂದ ದೂರವಿರುವುದು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ದೂರವಾಣಿ ಸಂಪರ್ಕ, ಮೊಬೈಲ್ ಟವರ್, ಪವನ ವಿದ್ಯುತ್ ಗೋಪುರ ಹಾಗೂ ರೈಲು ಹಳಿಗಳಿಂದ ದೂರವಿರುವುದು.

ವಾಹನ ಚಾಲನೆಯಲ್ಲಿದ್ದರೆ ತಕ್ಷಣವೇ ವಾಹನ ನಿಲ್ಲಿಸಿ ವಾಹನದಲ್ಲಿಯೇ ಆಶ್ರಯ ಪಡೆಯುವುದು. ಗುಡುಗು ಸಿಡಿಲಿನ ಸಮಯದಲ್ಲಿ ಗುಂಪಿನಲ್ಲಿದ್ದರೆ, ಅಪಾಯವನ್ನು ಕಡಿಮೆ ಮಾಡಲು ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು.

ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸಾಕಷ್ಟು ಸಮಯವಿಲ್ಲದಿದ್ದರೆ, ಎರಡು ಕಾಲುಗಳನ್ನು ಜೋಡಿಸಿ ಮಂಡಿಯೂರಿ ಕುಳಿತುಕೊಂಡು ತಲೆಯನ್ನು ಬಗ್ಗಿಸಿ ಕಿವಿಗಳನ್ನು ಮುಚ್ಚಿಕೊಳ್ಳುವುದು.

ವಿದ್ಯುತ್ ಅಥವಾ ಟೆಲಿಫೋನ್ ಕಂಬಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಇವು ಮಿಂಚನ್ನು ಆಕರ್ಷಿಸುತ್ತವೆ.

ಅರಣ್ಯ ಪುದೇಶದಲ್ಲಿದ್ದರೆ ಸಣ್ಯ/ಚಿಕ್ಕ ಮರಗಳ ಕೆಳಗೆ ಆಶ್ರಯ ಪಡೆಯುವುದು.

ಲೋಹದ ವಸ್ತುಗಳನ್ನು ಬಳಸಬಾರದು ಮತ್ತು ಬೈಕುಗಳು, ವಿದ್ಯುತ್ ಅಥವಾ ದೂರವಾಣಿ ಕಂಬಗಳು, ತಂತಿ ಬೇಲಿ, ಯಂತ್ರಗಳು ಇತ್ಯಾದಿಗಳಿಂದ ದೂರವಿರುವುದು. ಸಿಡಿಲು ಸಂದರ್ಭದಲ್ಲಿ ಮೊಬೈಲ್ ಫೋನ್ ಗಳನ್ನು ಬಳಸಬಾರದು.

ಕಬ್ಬಿಣದ ಸರಳುಗಳಿಂದ ಕೂಡಿದ ಛತ್ರಿಗಳನ್ನು ಬಳಸಬಾರದು.

ಗುಡುಗು ಸಿಡಿಲಿನ ಸಮಯದಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಬೆಂಕಿ ಮತ್ತು ವಿದ್ಯುತ್ ಶಕ್ತಿ ಸಂಪರ್ಕದಿಂದ ದೂರವಿರುವುದು. ಗಮನಹರಿಸುವುದು.

ಮಕ್ಕಳು, ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಹಾರುವ ಮತ್ತು ಅಪಘಾತಕ್ಕೆ ಕಾರಣವಾಗಬಹುದಾದ ಮರದ ಕಟ್ಟಿಗೆ ಅಥವಾ ಇತರ ಯಾವುದೇ ಅವಶೇಷಗಳನ್ನು ತೆಗೆದುಹಾಕುವುದು.

ಸಿಡಿಲು ಸಂದರ್ಭದಲ್ಲಿ, ಕಟ್ಟಡದ ಕೊಳಾಯಿ ಮತ್ತು ಲೋಹದ ಕೊಳವೆಗಳ ಮೂಲಕ ಹರಿಯುವ ಸಾಧ್ಯತೆ ಇರುವುದರಿಂದ, ಸಿಡಿಲು ಉಂಟಾಗುವ ಸಂದರ್ಭದಲ್ಲಿ ಸ್ನಾನ ಅಥವಾ ಶವರ್ ತೆಗೆದುಕೊಳ್ಳಬಾರದು, ಪಾತ್ರೆಗಳನ್ನು ತೊಳೆಯಬಾರದು, ಬಟ್ಟೆ ಹೊಗೆಯಬಾರದು.

ವಿದ್ಯುತ್ ಸಂಪರ್ಕ ಹೊಂದಿರುವ ದೂರವಾಣಿಯನ್ನು ಬಳಸಬಾರದು. ಗುಡುಗು – ಸಿಡಿಲಿನ ಮುನ್ಸೂಚನೆ ಅಥವಾ ಮುನ್ನೆಚ್ಚರಿಕೆ ಇದ್ದಲ್ಲಿ ಪ್ರಯಾಣವನ್ನು ಮುಂದೂಡುವುದು.

ಗುಡುಗು ಸಿಡಿಲಿನ ಸಮಯದಲ್ಲಿ, ಮೋಟರ್ ಸೈಕಲ್ ಅಥವಾ ಇನ್ನಿತರ ಯಾವುದೇ ತೆರೆದ ವಾಹನಗಳ ಸಂಚಾರವನ್ನು ಮಾಡದಿರುವುದು.

ಆಟದ ಮೈದಾನ, ಉದ್ಯಾನವನಗಳು ಈಜುಕೊಳ ಮತ್ತು ಕಡಲ ತೀರಗಳಿಗೆ ಹೋಗುವುದನ್ನು ತಪ್ಪಿಸುವುದು. ದೋಣಿ ವಿಹಾರ ಅಥವಾ ಈಜುತ್ತಿದ್ದರೆ, ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವುದು.

ಸಿಡಿಲಿನ ಸಂದರ್ಭದಲ್ಲಿ ವಾಹನ ಕಿಟಕಿಗಳನ್ನು ಮುಚ್ಚಿ ವಾಹನದ ಒಳಗೆ ಇರುವುದು. ಅರಣ್ಯ, ಪುದೇಶದಿಂದ, ಗಿಡ-ಗಡ್ಡೆಗಳಿಲ್ಲದ ಸ್ವಚ್ಛ ಪ್ರದೇಶದ ಕಡೆಗೆ ಚಲಿಸುವುದು, ಮಿಂಚಿನ ಹೊಡೆತದಿಂದಾಗಿ ಕಾಡಿಚ್ಚು, ಸಂಭವಿಸುವ ಸಾಧ್ಯತೆಯಿದೆ.

ಹೆಸ್ಕಾಂನಿಂದ ಉಚಿತ ವಿದ್ಯುತ್ ಯೋಜನೆ ಕುರಿತು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಗಳ ವಿವರ.

0

ರಾಜ್ಯದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ಗೃಹ ಜ್ಯೋತಿ ಯೋಜನೆಯ ಕುರಿತು ಗ್ರಾಹಕರಲ್ಲಿರುವ ಗೊಂದಲಗಳಿಗೆ ಉತ್ತರ ನೀಡುವ ದೇಸೆಯಲ್ಲಿ ಹೆಸ್ಕಾಂ ಕಚೇರಿಯಿದ ಈ ಯೋಜನೆಯ ಕುರಿತು ಗ್ರಾಹಕರು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಪ್ರಕಟಿಸಲಾಗಿದೆ.

ಗೃಹ ಜ್ಯೋತಿ ಯೋಜನೆ ಕುರಿತು ಗ್ರಾಹಕರು ಪದೇ ಪದೇ ಕೇಳಲಾಗುವ ಪ್ರಶ್ನೆಗಳು: 

ಗೃಹ ಜ್ಯೋತಿ – ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ನಾನು ಈ ಯೋಜನೆಗೆ ಅರ್ಹನೇ?
ಕರ್ನಾಟಕ ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

2. ಗೃಹ ಜ್ಯೋತಿ ಯೋಜನೆ ಎಂದರೇನು?
ಗೃಹ ಜ್ಯೋತಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳನ್ನು ಒಳಗೊಂಡಂತ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ.

3. ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು?
ಈ ಯೋಜನೆಯನ್ನು ಪಡೆಯಲು ಪ್ರತಿ ಗೃಹ ಬಳಕೆ ಗ್ರಾಹಕರು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ಲಿಂಕ್ ಅನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು. ನೋಂದಣಿ ಜೂನ್-15 ರಿಂದ ಪ್ರಾರಂಭವಾಗುತ್ತದೆ.

4. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?
ಜುಲೈ, 2023 ರಲ್ಲಿ ಬಳಸಿದ ವಿದ್ಯುತ್‌ ಬಳಕೆಯನ್ನು ಆಗಸ್ಟ್ 2023 ರಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗುವಂತ ಯೋಜನೆಯನ್ನು ಜಾರಿಗೊಳಿಸಲಾಗುವುದು.

5. ಈ ಯೋಜನೆಯನ್ನು ನಾನು ಹೇಗೆ ಮತ್ತು ಎಲ್ಲಿ ಪಡೆಯಬಹುದು? 
ಈ ಯೋಜನೆಯನ್ನು ಪಡೆಯಲು ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸುವುದು. ಇದರ ಲಿಂಕ್ ಅನ್ನು ಶೀಘ್ರದಲ್ಲೇ ಒದಗಿಸಲಾಗುವುದು. ನೋಂದಣಿಯು ಜೂನ್-15 ರಿಂದ ಪ್ರಾರಂಭವಾಗುತ್ತದೆ.

6. ಈ ಯೋಜನೆಯನ್ನು ಆಫ್‌ಲೈನ್ (Offline) ಮೂಲಕ ನಾನು ಪಡೆಯಬಹುದೇ?
ಹೌದು, ಎಲ್ಲಾ ಗೃಹಬಳಕೆ ಗ್ರಾಹಕರಿಗೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

7. ಈ ಯೋಜನೆ ಪಡೆಯಲು ಯಾವುದೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು?
ಆಧಾರ್ ಸಂಖ್ಯೆ, ವಿದ್ಯುತ್‌ ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ ಖಾತ ಸಂಖ್ಯೆ ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ID ಸಲ್ಲಿಸುವುದು.

ಇದನ್ನೂ ಓದಿ: Mungaru male: ಹವಾಮಾನ ಇಲಾಖೆ ಪ್ರಕಟಣೆ: ಕೇರಳಕ್ಕೆ ಪ್ರವೇಶಿಸಿದ ಮುಂಗಾರು.

8. ಅರ್ಜಿ ಸಲ್ಲಿಸುವಾಗ ನಾನು ಶುಲ್ಕ ಪಾವತಿಸಬೇಕೆ?
ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಪಾವತಿಸಬೇಕಾಗಿರುವುದಿಲ್ಲ.

9. ನಾನು ಜೂನ್ ತಿಂಗಳ ವಿದ್ಯುತ್ ಬಿಲ್ಲನ್ನು ಪಾವತಿಸಬೇಕೆ?
ಹೌದು, ಈ ಯೋಜನೆಯು ಜುಲೈ 2023 ತಿಂಗಳ ವಿದ್ಯುತ್ ಬಳಕೆಗೆ ಅನ್ವಯಿಸಲಿದ್ದು, 1 ನೇ ಆಗಸ್ಟ್ 2023 ಹಾಗೂ ನಂತರದ ಮಾಪಕ ಓದುವ ದಿನಾಂಕದಿಂದ ಅನ್ವಯಿಸುತ್ತದೆ.

10. ನನಗೆ ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ, ನಾನು ಈ ಯೋಜನೆಗೆ ಅರ್ಹನೇ? 
ಇಲ್ಲ, ಪ್ರತಿ ಗ್ರಾಹಕರು ಒಂದು ಮೀಟರ್ ಗೆ ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ.

11. ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯುತ್ತೇನೆಯೇ? 
ಹೌದು, ಸೇವಾ ಸಿಂಧುವಿನಿಂದ ಸ್ವೀಕೃತಿ ಸಂದೇಶವನ್ನು ನೋಂದಾಯಿತ ಗ್ರಾಹಕರಿಗೆ ಇಮೇಲ್/ ಮೆಸೇಜ್‌ (SMS) ಮೂಲಕ ಕಳುಹಿಸಲಾಗುತ್ತದೆ.

12. ನಾನು ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ, ಯೋಜನೆಯ ಲಾಭವು ಯಾವಾಗ ನನ್ನ ಖಾತೆಗೆ ಸೇರಲು ಪ್ರಾರಂಭವಾಗುತ್ತದೆ?
ಜುಲೈ-23 ರಲ್ಲಿ ನೀಡಿದ ಬಿಲ್ ಅನ್ನು ಯೋಜನೆಯ ಲಾಭ ಇಲ್ಲದೆ ಪಾವತಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳು ಮೀಟರ್ ಓದುವ ದಿನಾಂಕದಿಂದ ಅಂದರೆ 1ನೇ ಆಗಸ್ಟ್ 2023 ರಂದು ಅಥವಾ ನಂತರ ಅನ್ವಯಿಸುತ್ತದೆ. (ಜುಲೈ 2023 ಬಳಕೆಗಾಗಿ). 

13. ನಾನು ಅಪಾರ್ಟೆಂಟ್ (ವಸತಿ ಸಮುಚ್ಚಯ) ಮಾಲೀಕನಾಗಿದ್ದೇನೆ. ನಾನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದೇ? 
ಹೌದು, ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಲಭ್ಯವಿದ್ದರೆ ಅಥವಾ ಸ್ಥಾಪಿಸಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

14. ನಾನು ಬಾಡಿಗೆದಾರ: ಬಿಲ್ ಮಾಲೀಕರ ಹೆಸರಿನಲ್ಲಿದೆ, ನನಗೂ ಯೋಜನೆ ಅನ್ವಯವಾಗುವುದೇ?
ಹೌದು, ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ID ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.

15. ಯೋಜನೆಯ ಅಡಿಯಲ್ಲಿ ಬಾಡಿಗೆ/ಭೋಗ್ಯದಾರನಾಗಿ ನಾನು ನೋಂದಾಯಿಸಲು ಸಲ್ಲಿಸಬೇಕಾದ ದಾಖಲೆಗಳು ಯಾವುವು? 
ಬಾಡಿಗೆ ಅಥವಾ ಭೋಗ್ಯದಾರರು ವಿಳಾಸ ಪುರಾವೆಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಸದರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಜೊತೆಗೆ ಬಾಡಿಗೆ/ ಭೋಗ್ಯದ ಕರಾರು ಪತ್ರವನ್ನು ಸಲ್ಲಿಸುವುದು.

16. ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿದ್ದೇನೆ, ನನಗೆ ಲಾಭ ಸಿಗುತ್ತದೆಯೇ?
ಹೌದು, ಹೊಸ ಸಂಪರ್ಕಕ್ಕಾಗಿ ನಿಯಮಾವಳಿಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

17. ನಾನು ಅಂಗಡಿಯ ಮಾಲೀಕರಾಗಿದ್ದೇನೆ, ನಾನು ಸಹ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದೇ? 
ಇಲ್ಲ, ಗೃಹಬಳಕೆ ದಾರರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

18. ನಾನು ಎಷ್ಟು ಉಚಿತ ಯೂನಿಟ್ ವಿದ್ಯುತ್‌ಗೆ ಅರ್ಹನಾಗುತ್ತೇನೆ? ತಿಂಗಳಿಗೆ 200 ಯೂನಿಟ್ ಗಳಿಗೆ ನಾನು ಅರ್ಹನೇ? 
2022-23 ರ ಸರಾಸರಿ ವಿದ್ಯುತ್ ಬಳಕೆ + ಶೇಕಡ 10% ಹೆಚ್ಚಳ (ಎರಡು ಸೇರಿಸಿದರೆ ಒಟ್ಟು 200 ಯೂನಿಟ್‌ಗಳಿಗಿಂತ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕೀಕರಿಸಲಾಗುತ್ತದೆ.

19. ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬೇಕು?
ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯು ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಲಭ್ಯವಿರುತ್ತದೆ.

20. ಈ ಯೋಜನೆಯನ್ನು ಪಡೆಯಲು ಖಾತೆ ಸಂಖ್ಯೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವೇ? 
ಹೌದು, ಗ್ರಾಹಕ ಸಂಖ್ಯೆ/ಖಾತ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

21. ನನ್ನ ಅಧಾರ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದೆ. ನಾನು ಈ ಯೋಜನ ಪಡೆಯಲು ಅರ್ಹನಾಗುತ್ತೇನೆಯೇ?
ಹೌದು, ನೀವು ಕರ್ನಾಟಕದ ವಿಳಾಸ ಪುರಾವೆಯೊಂದಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ವಾಸಿಸುತ್ತಿದ್ದರೆ, ನೀವು ಯೋಜನೆಗೆ ಅರ್ಹರಾಗಿದ್ದೀರಿ. 

22. ನಾನು ವಿದ್ಯುತ್ ಬಿಲ್ ಬಾಕಿಯನ್ನು ಉಳಿಸಿಕೊಂಡಿದ್ದರೆ, ನಾನು ಈ ಯೋಜನೆಗೆ ಅರ್ಹನೇ? 
ಹೌದು, ಆದರೆ ಜೂನ್ 30 ರವರೆಗಿನ ವಿದ್ಯುತ್ ಬಾಕಿಯನ್ನು 3 ತಿಂಗಳೊಳಗೆ ಪಾವತಿಸಬೇಕು. ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

23. ಒಂದು ವೇಳೆ ನಾನು ಈ ಯೋಜನೆಯ ಫಲಾನುಭವಿಯಾಗಿ, ನನಗೆ ನಿಗದಿ ಪಡಿಸಿರುವ ಉಚಿತ ವಿದ್ಯುತ್ ಗಿಂತ ಜಾಸ್ತಿ ಯೂನಿಟ್ ಬಳಸಿದರೆ, ನಾನು ಆ ಹೆಚ್ಚಿನ ಯೂನಿಟ್ ಗಳಿಗೆ ಪಾವತಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ, ಆ ಹೆಚ್ಚಿನ ಯೂನಿಟ್ ಬಳಕೆಯ ಬಿಲ್ಲನ್ನು ಪಾವತಿಸದಿದ್ದರೆ, ನನ್ನನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುವುದೇ? 
ಇಲ್ಲ. ಬಾಕಿ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿಯನ್ನು ಪಾವತಿಸಿದ ನಂತರ ಪುನಃ ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು.

24. ವಿದ್ಯುತ್ ಬಿಲ್ ನನ್ನ ದಿವಂಗತ ತಂದೆಯ ಹೆಸರಿನಲ್ಲಿದೆ? ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು? 
ವಿದ್ಯುತ್ ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾಯಿಸಬೇಕು ಮತ್ತು ತದನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲಾ ಉಪ ವಿಭಾಗಗಳಲ್ಲಿನ ಜನ ಸ್ನೇಹಿ ವಿದ್ಯುತ್ ಸೇವಾ ಕೌಂಟರ್‌ಗಳಲ್ಲಿ ಮಾಡಲಾಗುತ್ತದೆ.

25. ನನ್ನ ಮಾಸಿಕ ಬಳಕೆಯು 200 ಯೂನಿಟ್‌ಗಳಿಗಿಂತ ಹೆಚ್ಚಿದ್ದರೆ, ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕೇ? 
ಹೌದು. ಆ ನಿರ್ದಿಷ್ಟ ತಿಂಗಳಿಗೆ ಮಾತ್ರ ನೀವು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.

26. ನನ್ನ ವಿದ್ಯುತ್ ಬಳಕೆಯು ಉಚಿತ ಯೂನಿಟ್ ಗಳಿಗಿಂತ ಕಡಿಮೆಯಿದ್ದರೆ, ಬಿಲ್ ಮೊತ್ತ ಏನಾಗುತ್ತದೆ? 
ವಿದ್ಯುತ್ ಬಳಕೆಯು ಅರ್ಹ 200 ಯೂನಿಟ್ ಗಳಿಗಿಂತ ಕಡಿಮೆಯಿದ್ದರೆ ನೀವು ‘ಶೂನ್ಯ ಬಿಲ್’ ಪಡೆಯುತ್ತೀರಿ.

ಕೇಂದ್ರ ಸರಕಾರದಿಂದ 15 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ! ಇಲ್ಲಿದೆ ಸಂಪೂರ್ಣ ವಿವರ.

0

ನವದೆಹಲಿ: ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಬೆಲೆ ಒದಗಿಸುವ ದೇಸೆಯಲ್ಲಿ ಬುಧವಾರ, ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ಹಾಲಿ ಮಾರುಕಟ್ಟೆ ಋತುವಿನ ಎಲ್ಲ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. 

ಮೆಕ್ಕೆಜೋಳ, ಭತ್ತ, ಜೋಳ, ಸಜ್ಜೆ, ರಾಗಿ, ತೊಗರಿಬೇಳೆ, ಹೆಸರುಬೇಳೆ, ಉದ್ದು, ನೆಲಗಡಲೆ, ಹತ್ತಿ, ಸೂರ್ಯಕಾಂತಿ ಸೇರಿ ಪ್ರಮುಖ 15 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ರೈತರಿಗೆ ಬೆಳೆ ಬೆಳೆಯಲು ಉತೇಜನ ನೀಡಲು ಮತ್ತು ಮಾರುಕಟ್ಟೆ ಧಾರಣೆ ಕುಸಿತವಾದಾಗ ಸರಕಾರದಿಂದ ಅರ್ಥಿಕವಾಗಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಉತ್ಪನ್ನ ಖರೀದಿ ಮಾಡಿ ಅನುಕೂಲ ಮಾಡುವ  ಉದ್ದೇಶದಿಂದ 15 ಬೆಳೆಗಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.

2022 ನೇ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಭತ್ತ 143 ರೂ, ಹೆಸರುಕಾಳು 803 ರೂ, ತೊಗರಿ ಬೇಳೆ 400 ರೂ, ಹೈಬ್ರೀಡ್ ಜೋಳ 210 ರೂ, ಉದ್ದಿನ ಬೇಳೆ 350 ರೂ, ರಾಗಿ 268 ರೂ, ಮೆಕ್ಕೆಜೋಳ 128 ರೂ, ಶೇಂಗಾ 527 ರೂ, ಸೂರ್ಯಕಾಂತಿ 360 ರೂ, ಹತ್ತಿ(ಮಧ್ಯಮ) 540 ರೂ, ಹತ್ತಿ (ಉದ್ದ)640 ರೂ ಬೆಂಬಲ ಬೆಲೆಯನ್ನು ಹೆಚ್ಚಳ  ಮಾಡಲಾಗಿದೆ. ಹೆಸರುಕಾಳು 803 ರೂ ಅತ್ಯಧಿಕ ಏರಿಕೆಯಾಗಿದೆ.

ಇದನ್ನೂ ಓದಿ: ವೃದ್ದಾಪ್ಯ , ಸಂಧ್ಯಾ ಸುರಕ್ಷಾ ಇತರೆ ಮಾಸಿಕ ಪಿಂಚಣಿದಾರರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು 15 ಜೂನ್ 2023 ಕಡೆಯ ದಿನ.

ಪರಿಷ್ಕರಣೆ ಮಾಡಿದ ಕನಿಷ್ಟ ಬೆಂಬಲ ಬೆಲೆ ದರ ಪಟ್ಟಿ: 

ಸರಕಾರದ  2022-23ನೇ ಸಾಲಿನ ಮೂರನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 330.5 ಮಿಲಿಯನ್ ಟನ್‌ಗಳು ಎಂದು ಅಂದಾಜಿಸಲಾಗಿದ್ದು, ಇದು ಹಿಂದಿನ ವರ್ಷ 2021-22ಕ್ಕೆ ಹೋಲಿಸಿದರೆ 14.9 ಮಿಲಿಯನ್ ಟನ್‌ಗಳಷ್ಟು ಉತ್ಪಾದನೆ ಹೆಚ್ಚಾಗಿದ್ದು, ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಏರಿಕೆಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.