Home Blog Page 78

ವೃದ್ದಾಪ್ಯ , ಸಂಧ್ಯಾ ಸುರಕ್ಷಾ ಇತರೆ ಮಾಸಿಕ ಪಿಂಚಣಿದಾರರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು 15 ಜೂನ್ 2023 ಕಡೆಯ ದಿನ.

0

ನೀವು ಸರ್ಕಾರದಿಂದ  ವೃದ್ದಾಪ್ಯ ಅಂಗವಿಕಲ ವಿಧವಾ – ಸಂಧ್ಯಾ ಸುರಕ್ಷಾ -ಮನಸ್ವಿನಿ – ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುತ್ತಿದ್ದೀರಾ ? ಹಾಗಾದರೆ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ ಆಥವಾ ನಿಮಗೆ ಗೊತ್ತಿರುವವರು ಈ ಮಾಸಿಕ ಪಿಂಚಣೆ ಯೋಜನೆಯಡಿ ಅರ್ಥಿಕ ಸಹಾಯಧನ ಪಡೆಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇರುವವರಿಗೆ(NPCI Not Mapped, NPCI inactive), ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರ ತಾಳೆ ಆಗದಿದ್ದಲ್ಲಿ, ಆಧಾರ್ ಕಾರ್ಡ್ ನಿಷ್ಕ್ರಿಯವಾಗಿದರಿಂದ(invalid Aadhar, inactive aadhar) ಈ ಎಲ್ಲಾ ತಾಂತ್ರಿಕ ಕಾರಣಗಳಿಂದ ರಾಜ್ಯದಲ್ಲಿ ಅನೇಕ ಜನರಿಗೆ ಪ್ರತಿ ತಿಂಗಳು ನೇರವಾಗಿ ಫಲಾನುಭವಿ ಖಾತೆಗೆ ಜಮಾ ಅಗುತ್ತಿದ್ದ  ವೃದ್ದಾಪ್ಯ ವೇತನ ಅಂಗವಿಕಲ ವಿಧವಾ, ಸಂಧ್ಯಾ ಸುರಕ್ಷಾ ,ಮನಸ್ವಿನಿ , ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಫಲಾನುಭವಿ ಖಾತೆಗೆ ವರ್ಗಾಹಿಸಲು ಸಾಧ್ಯವಾಗಿರುವುದಿಲ್ಲ. 

ಈ ತಾಂತ್ರಿಕ ಸಮಸ್ಯೆಯನ್ನು ಪರಿಹಾರಿಸಲು ಮಾಸಿಕ ಪಿಂಚಣಿ ಜಮಾ ಅಗದಿರುವ  ಸಾರ್ವಜನಿಕರಿಗೆ ತಮ್ಮ ಖಾತೆಯಿರುವ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(NPCI Mapping) ಮಾಡಿಸಬೇಕೆಂದು ಕಂದಾಯ ಇಲಾಖೆಯಿಂದ  ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ :  ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000/- ಪಡೆಯಲು ಮಾರ್ಗಸೂಚಿ ಬಿಡುಗಡೆ.

ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಒಮ್ಮೆ ನಿಮ್ಮ ಭಾಗದ ಗ್ರಾಮ ಚಾವಡಿ ಭೇಟಿ ಮಾಡಿ ಅಲ್ಲಿ ಒಟ್ಟು ಮೂರು ರೀತಿಯ ಪಟ್ಟಿ ಲಬ್ಯವಿದ್ದು ಬ್ಯಾಂಕ್‌ ಖಾತೆಗೆ ಆಧಾರ ನಂಬರ ಲಿಂಕ್ ಆಗಿಲ್ಲ, ಮತ್ತು N P C I ಗೆ ಆಧಾರ ನಂಬರ ಲಿಂಕ್ ಆಗಿಲ್ಲ,ಆಧಾರ ನಂಬರ ಚಾಲ್ತಿ ಇಲ್ಲ . ಅನ್ನುವ 3 ರೀತಿಯ ಪಟ್ಟಿ ಇರುತ್ತದೆ ಇಲ್ಲಿ ನಿಮಗೆ ನಿಮ್ಮ ಅರ್ಜಿ ಸ್ಥಿತಿ ಕುರಿತು ಸಂಫೂರ್ಣ ಮಾಹಿತಿ ಸಿಗುತ್ತದೆ.

ನೀವು ಕಡ್ಡಾಯವಾಗಿ ದಿನಾಂಕ : 15-06-2023 ರ ಒಳಗೆ ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕಿಗೆ / ಪೋಸ್ಟ್ ಆಫೀಸಿಗೆ ಹೋಗಿ ಆಧಾರ್ ಲಿಂಕ್ ಮಾಡಿಸಲೇಬೇಕು,  ತಪ್ಪಿದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ತಾವು ಪಡೆದುಕೊಳ್ಳಲು ತೊಂದರೆ ಆಗುತ್ತದೆ.

ಈ ವಿಧಾನ ಅನುಸರಿಸಿ ಮಾಸಿಕ  ಪಿಂಚಣಿ ಅರ್ಜಿ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬವುದು:

https://mahitikanaja.karnataka.gov.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಕಣಜ ಜಾಲಾತಾಣ ಭೇಟಿ ಮಾಡಬೇಕು. ನಂತರ ಇಲ್ಲಿ ಗ್ರಾಮೀಣ/ನಗರ ಎರಡು ಆಯ್ಕೆಯಲ್ಲಿ ನಿಮ್ಮ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ, ತದನಂತರದಲ್ಲಿ ನಿಮ್ಮ ಜಿಲ್ಲೆ,ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸಿ ಮೇಲೆ ಒತ್ತಿ.

ಆಗ ನಿಮ್ಮ ಗ್ರಾಮದ ಮಾಸಿಕ ಪಿಂಚಣಿದಾರರ ಅರ್ಜಿದಾರರ ಸ್ಥಿತಿ ಗೋಚರಿಸುತ್ತದೆ ಇಲ್ಲಿ ಪಿಂಚಣಿ ಅನುಮತಿ ದಿನಾಂಕ, ಪಿಂಚಣಿ ಮೊತ್ತ, ಇತ್ಯಾದಿ ವಿವರವನ್ನು ನೋಡಬವುದು,ಅರ್ಜಿ ಸ್ಥಿತಿ ತಿಳಿಯಲು “ಪಿಂಚಣಿ ವಿವರಗಳು” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ನಕ್ಷತ್ರವಾರು ಈ ವರ್ಷದ ಮಳೆ ಅವಧಿ ಮತ್ತು ಪ್ರಮಾಣ, ಸೂಕ್ತ ಬೆಳೆ, ಹಿರಿಯರ ಗಾದೆಗಳ ಲೆಕ್ಕಾಚಾರ.

0

ಈ ವರ್ಷದ(2023) ನಕ್ಷತ್ರವಾರು ಮಳೆ ಅವಧಿ ಹಾಗೂ ಪ್ರಮಾಣ, ಸೂಕ್ತ ಬೆಳೆ, ಹಿಂದಿನ ಕಾಲದ ಹಿರಿಯರ ಗಾದೆಗಳ ಲೆಕ್ಕಾಚಾರ ಮಾಹಿತಿಯನ್ನು ಈ ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ.

ಹಿಂದೆ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ಮೆಲಕು ಹಾಕುವುದಕ್ಕಾಗಿ ಇಲ್ಲಿ ಕೆಲವನ್ನು ತಿಳಿಸಲಾಗಿದೆ.

1. ಅಶ್ವಿನಿ

ದಿನಾಂಕ: 14-4-2023ರಿಂದ 27-4-2023ರವರೆಗೆ (ಸಾಮಾನ್ಯ ಮಳೆ)

ಗಾದೆ: ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು,  ಅಶ್ವಿನಿ ಸಸ್ಯ ನಾಶಿನೀ, ಅಶ್ವಿನಿ ಸನ್ಯಾಸಿಸಿ ಅಶ್ವಿನಿ ಆದ್ರೆ ಶಿಶುವಿಗೆ ಹಾಲಿಲ್ಲ.

2. ಭರಣಿ

ದಿನಾಂಕ: 28-4-2023ರಿಂದ 10-5-2023ರವರೆಗೆ (ಸಾಮಾನ್ಯ ಮಳೆ)

ಗಾದೆ: ಭರಣಿ ಮಳೆ ಧರಣಿ ಬೆಳೆ  ಬರಿಣಿ ಬಂದ್ರ ದರಿಣಿ ಬೆಳೀತದ,   ಭರಣಿ ಸುರಿದರೆ ಧರಣಿ ಬದುಕೀತು,   ಭರಣೀ ಬಂದರೆ ಧರಣಿ ತಣಿಯುತ್ತೆ.  ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,  ಭರಣಿ ಬಂದ್ರೆ ಧರಣಿ ಎಲ್ಲಾ ಹಸಿರು. ಭರಣಿ ಮಳೆ ಧರಣಿ ತಂಪು ಭರಣಿ ಮಳೆ ಧರಣಿ ಎಲ್ಲಾ ಆಳ್ತು

3. ಕೃತಿಕ

ದಿನಾಂಕ: 11-5-2023ರಿಂದ 24-5-2023ರವರೆಗೆ (ಸಾಮಾನ್ಯ ಮಳೆ)

ಗಾದೆ: ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

4. ರೋಹಿಣಿ

ದಿನಾಂಕ: 25-5-2023ರಿಂದ 7-6-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಹೆಸರು, ಉದ್ದು, ಕೂರಿಗೆ ಭತ್ತ, ಹತ್ತಿ, ತೊಗರಿ, ಮುಸುಕಿನ ಜೋಳ ಮತ್ತು ಹಸಿರೆಲೆ ಗೊಬ್ಬರ

ಗಾದೆ: ರೋಹಿಣಿ ಮಳೆ ಓಣಿಯೆಲ್ಲಾ ಕೆಸರು  ರೋಹಿಣಿ ಮಳೆಗೆ ಓಣ್ಯೆಲ್ಲಾ ಜೋಳ

5. ಮೃಗಶಿರ

ದಿನಾಂಕ: 8-6-2023ರಿಂದ 21-6-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ನಾಟಿ ಭತ್ತ, ಕೂರಿಗೆ ಭತ್ತ, ಹತ್ತಿ, ಶೇಂಗಾ, ತೊಗರಿ ಮುಸುಕಿನ ಜೋಳ ಮತ್ತು ಹಸಿರೆಲೆ ಗೊಬ್ಬರ

ಗಾದೆ: ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು.  ಮೃಗಶಿರಾ ಮಳೆಯಲಿ ಗಿಡ ಮುರಿದು ನೆಟ್ಟರೂ ಬದುಕುವುದು. ಮ್ರಗಶಿರ ಮಿಂಚಿದರೆ ಮೂರು ಮಳೆ ಇಲ್ಲ.

6. ಆರಿದ್ರ

ದಿನಾಂಕ: 22-6-2023 ರಿಂದ 5-7-2023ರವರೆಗೆ(ಉತ್ತಮ ಮಳೆ )

ಸೂಕ್ತ ಬೆಳೆಗಳು : ಕೂರಿಗೆ ಭತ್ತ, ಔಡಲ, ಎಳ್ಳು, ಹತ್ತಿ, ಶೇಂಗಾ, ತೊಗರಿ ಮತ್ತು ಮುಸುಕಿನ ಜೋಳ.

ಗಾದೆ: ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ,  ಆದರೆ ಆರಿದ್ರಾ, ಇಲ್ವಾದ್ರೆ ದರಿದ್ರ!  ಆರಿದ್ರಾ ಮಳೆ ಆರದೆ ಹುಯ್ಯುತ್ತೇ,   ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ,   ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.  ಆರಿದ್ರೆಯಲಿ ಗಿಡ ಆದರೆ ಆದಿತು.

7. ಪುನರ್ವಸು

ದಿನಾಂಕ: 6-7-2023ರಿಂದ 19-7-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಸಿರಿ ಧಾನ್ಯ, ನಾಟಿ ಭತ್ತ, ಹತ್ತಿ, ಶೇಂಗಾ ತೊಗರಿ, ಸಜ್ಜೆ, ಮುಸುಕಿನ ಜೋಳ, ಮುಂಗಾರಿ ಜೋಳ ಮತ್ತು ಮೆಣಸಿನ ಕಾಯಿ

ಗಾದೆ: ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು. 

8. ಪುಷ್ಯ

ದಿನಾಂಕ: 20-7-2023ರಿಂದ 2-8-2023ರವರೆಗೆ

ಗಾದೆ: ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)  ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು.

ಇದನ್ನೂ ಓದಿ: ಇಂದಿನ ಅಡಿಕೆ, ತರಕಾರಿ, ಮೆಕ್ಕೆಜೋಳ, ರಾಗಿ, ಹತ್ತಿ, ಸೋಯಾಬಿನ್ ಮಾರುಕಟ್ಟೆ ಧಾರಣೆ ವಿವರ ಹೀಗಿದೆ.

9. ಆಶ್ಲೇಷ

ದಿನಾಂಕ: 3-8-2023ರಿಂದ 16-8-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಸಿರಿ ಧಾನ್ಯ, ನಾಟಿ ಭತ್ತ, ತೊಗರಿ, ಮುಸುಕಿನ ಜೋಳ ಮತ್ತು ಸೂರ್ಯಕಾಂತಿ.

ಗಾದೆ: ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ,   ಅಸಲೆ ಮಳೆ ಕೈತುಂಬಾ ಬೆಳೆ,   ಆಶ್ಲೇಷ ಮಳೆ ಈಸಲಾರದ ಹೊಳೆ. ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.  ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗೀತು  ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ.  ಆಶ್ಲೇಷಾ ಗಿಡಗಳಿಗೆ ಕೊಳೆಬರಿಸುವ  ನಂಜಿನ ಮಳೆ.  ಅಶ್ಲೆ ಮಳೆ ಹುಯ್ಶಾಲಿ, ಸೋಸಲು ಗಟ್ಟ ಹತ್ತಾಲಿ

10. ಮಘ

ದಿನಾಂಕ: 17-8-2023 ರಿಂದ 30-8-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಸಿರಿ ಧಾನ್ಯ, ಸೂರ್ಯಕಾಂತಿ, ಮುಸುಕಿನ ಜೋಳ ಮತ್ತು ತರಕಾರಿ ಬೆಳೆಗಳು.

ಗಾದೆ: ಬಂದರೆ ಮಗೆ ಹೋದರೆ ಹೊಗೆ,  ಬಂದರೆ ಮಘೆ ಇಲ್ಲದಿದ್ದರೆ ಧಗೆ,  ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.  ಮಗೆ ಮಳೆ ಮಗೆ ಗಾತ್ರ ಬೀಳ್ತದೆ.  ಮಘೇ ಮೊಗೆಬೆಳೆಯುವ ಮಳೆ..  ಮಘಮಳೆ ಮೊಗೆದು ಹೊಯ್ಯುವುದು.

11. ಹುಬ್ಬ

ದಿನಾಂಕ: 31-8-2023 ರಿಂದ 12-9-2023ರವರೆಗೆ (ಉತ್ತಮ ಮಳೆ)

ಗಾದೆ: ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.  ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ.  ಹುಬ್ಬೆ ಮಳೆ ಅಬ್ಬೆ ಹಾಲು ಕುಡದ್ಹಾಂಗೆ.  ಹುಬ್ಬೆ ಮಳೆ ಉಬ್ಬುಬ್ಕೊಂಡು ಹೊಡೆ.  ಹುಬ್ಬೇ ಮಳೆ ಉಬ್ಬುಬ್ಬುಕೊಂಡು ಬಂದ್ರು ಗುಬ್ಬಚ್ಚಿ ಪುಕ್ಕ ನೆನಿಲಿಲ್ಲ.

12. ಉತ್ತರ

ದಿನಾಂಕ: 13-9-2023 ರಿಂದ 26-9-2023 ರವರೆಗೆ(ಉತ್ತಮ ಮಳೆ)

ಉತ್ತಮ ಮಳೆ ಸೂಕ್ತ ಬೆಳೆಗಳು : ಮುಸುಕಿನ ಜೋಳ, ಹಿಂಗಾರಿ ಜೋಳ, ಕುಸುಬೆ ಮತ್ತು ಕಡಲೆ

ಗಾದೆ: ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ. ಉತ್ತರ ಎದುರುತ್ತರದ ಮಳೆ. ಉತ್ತರೆ ಮಳೆಗೆ ಹುತ್ತದಲ್ಲಿರುವ ಹಾವೆಲ್ಲಾ ಹೊರಗೆ. ಉತ್ತರಿ ಬಿತ್ತಿರಿ ಅದು ಬರದಿದ್ದರೆ ನೀವು ಸತ್ತಿರಿ

13. ಹಸ್ತ

ದಿನಾಂಕ: 27-9-2023 ರಿಂದ 10-10-2023ರವರೆಗೆ(ಉತ್ತಮ ಮಳೆ)

ಸೂಕ್ತ ಬೆಳೆಗಳು : ಸೂರ್ಯಕಾಂತಿ, ಹಿಂಗಾರಿ ಜೋಳ, ಕಡಲೆ ಮತ್ತು ಕುಸುಬೆ

14. ಚಿತ್ತ

ದಿನಾಂಕ: 11-10-2023 ರಿಂದ 23-10-2023ರವರೆಗೆ(ಉತ್ತಮ ಮಳೆ)

ಉತ್ತಮ ಮಳೆ ಸೂಕ್ತ ಬೆಳೆಗಳು : ಅಗಸೆ, ಶೇಂಗಾ, ಸೂರ್ಯಕಾಂತಿ, ಮುಸುಕಿನ ಜೋಳ, ಕಡಲೆ ಮತ್ತು ಕುಸುಬೆ.

ಗಾದೆ: ಕುರುಡು ಚಿತ್ತೆ ಎರಚಿದತ್ತ ಬೆಳೆ. ಚಿತ್ತಾ ಮಳೆ ವಿಚಿತ್ರ ಬೆಳೆ!  ಚಿತ್ತಾ ಚಿತ್ರವಿಚಿತ್ರ ಮಳೆ.. ಕುರ್ಡು ಚಿತ್ತೆ ಎತ್ಲಾಗ ಬಿದ್ದರೂ ಬರುತ್ತೆ.

15. ಸ್ವಾತಿ

ದಿನಾಂಕ: 24-10-2023 ರಿಂದ 5-11-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಅಗಸೆ, ಶೇಂಗಾ, ಮುಸುಕಿನ ಜೋಳ, ಕಡಲೆ ಮತ್ತು ಕುಸುಬೆ.

ಗಾದೆ: ಸ್ವಾತಿ ಮಳೆ ಮುತ್ತಿನ ಬೆಳೆ. ಸ್ವಾತಿ ಮಳೆ ಹೇತೆನೆಂದ್ರೂ ಬಿಡದು. ಸ್ವಾತಿ ಮುತ್ತಿನ ಹನಿಯ ಮಳೆ.. ಸ್ವಾತಿ ಮಳೆ ಹೋದ್ರಾ ಇನ್ಯಾತರ ಮಳೆ

16. ವಿಶಾಖ

ದಿನಾಂಕ: 6-11-2023 ರಿಂದ(ಉತ್ತಮ ಮಳೆ)

ಗಾದೆ: ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ. ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ. ವಿಶಾಖೆ ಮಳೆಗೆ ಹುಳವೆಲ್ಲಾ ಸಾಯುತ್ತೆ.

ತೋಟಗಾರಿಕೆ ಇಲಾಖೆ ಪ್ರಕಟಣೆ: ಅಡಿಕೆ ಎಲೆ ಚುಕ್ಕೆ ರೋಗದ ಹತೋಟಿಗೆ ಮುಂಜಾಗ್ರತೆ ಕ್ರಮಗಳು.

0

ಹೊಸನಗರ: ತಾಲೂಕಿನಾದ್ಯಂತ, ಅದರಲೂ, ನಗರ, ಹುಂಚಾ ಮತ್ತು ಕಸಬಾ ಹೋಬಳಿಯ ಬಹುತೇಕ ಗ್ರಾಮಗಳ ಸುತ್ತ ಮುತ್ತ ಇರುವ ಘಟ್ಟ ಕಣಿವೆ ಪ್ರದೇಶಗಳು ಮತ್ತು ಶರಾವತಿ ಹಿನ್ನೀರಿನ ಅಡಿಕೆ ತೋಟಗಳಲ್ಲಿ, ಕಳೆದ ವರ್ಷ ಎಲೆಚುಕ್ಕೆ ರೋಗ ಗರಿಗಳು, ಹಿಂಗಾರ ಮತ್ತು ಅಡಿಕೆ ಕಾಯಿ ಬೆಳವಣಿಗೆಗೆ ತೊಂದರೆ ಉಂಟಾಗಿ ಇಳುವರಿ ಕುಂಠಿತಕ್ಕೆ ಕಾರಣವಾಗಿರುತ್ತದೆ. 

ಈ ಎಲೆಚುಕ್ಕೆ ರೋಗಕ್ಕೆ ಕಾರಣವಾದ ಶಿಲೀಂದ್ರ ರೋಗಾಣುಗಳಾದ ಕೊಲೆಟೊಟ್ರಿಕಮ್, ಪೆಸ್ಮಲೋಸಿಯಾ ಮತ್ತು ಫಿಲೋಸಿ ರೋಗಾಣುಗಳು ಕಳೆದ ಬಾರಿ ಬಿದ್ದು ಅತಿ ಹೆಚ್ಚು ಮಳೆಯಿಂದ ಮಣ್ಣಿನಲ್ಲಿ, ಗರಿಗಳು ಮತ್ತು ಅಡಿಕೆ ಕಾಯಿಗಳ ಮೇಲೆ ಕಂದು ಮಿಶ್ರಿತ ಕಪ್ಪು, ಬಣದ ಶಿಲೀಂದ್ರಗಳು ಹಾನಿ ಮಾಡಿ ಇಳುವರಿ ಮೇಲೆ ಪರಿಣಾಮ ಉಂಟುಮಾಡಿರುತ್ತದೆ. ಹೀಗಾಗಿ ಈ ಮುಂಗಾರು ಋತುವಿನಲ್ಲಿ, ಈ ರೋಗದ ಹತೋಟಿಗೆ ಸಾಮೂಹಿಕವಾಗಿ ಸಮಗ್ರ ಹತೋಟಿ ಕ್ರಮ ನಿರ್ವಹಿಸಿ ರೋಗದ ಹತೋಟಿಗೆ ಸಹಕರಿಸಲು ಕೋರಿ ತೋಟಗಾರಿಕೆ ಇಲಾಖೆಯಿಂದ ಮುಂಜಾಗ್ರತೆ ಕ್ರಮಗಳ ಪ್ರಕಟಣೆ ಹೊರಡಿಸಲಾಗಿದೆ.

ನಿರ್ವಹಣಾ ಮುನ್ನೆಚ್ಚರಿಕೆ ಕ್ರಮಗಳು:-

1) ಜಮೀನಿನಲ್ಲಿರುವ ಕಳೆದ ಬಾರಿಯ ರೋಗಪೀಡಿತ, ಒಣಗಿರುವ ಮತ್ತು ಹಳದಿಯಾಗಿರುವ ಗರಿಗಳನ್ನು ತೆಗೆದು ರಾಶಿ ಹಾಕಿ ಸುಡಬೇಕು,

2) ತಾಲೂಕಿನ ನಗರ, ಕಸಬಾ ಮತ್ತು ಹುಂಚಾ ಹೋಬಳಿಯ ನಗರ ಹೋಬಳಿಗೆ ಹತ್ತಿರವಿರುವ ಭೂಭಾಗದಲ್ಲಿ, ಹೆಚ್ಚು ಮಳೆ ಬೀಳುವುದರಿಂದ ಲವಣಾಂಶಗಳು ಮತ್ತು ಫಲವತ್ತತೆ ನೀರಿನೊಂದಿಗೆ ಕೊಚ್ಚಿಹೋಗುವುದರಿಂದ ಮಣಿನಲೆ, ಪೋಷಕಾಂಶಗಳ ಕೊರತೆ ಹೆಚ್ಚು ಉಂಟಾಗುತ್ತದೆ. ಹೀಗಾಗಿ ಮಣ ಪರೀಕ್ಷೆ ಆಧಾರದ ಮೇಲೆ ಅಡಿಕೆ ಮರಗಳಿಗೆ ಪೋಷಕಾಂಶಗಳನ್ನು ನೀಡುವುದು,

3) ಫಸಲು ಬಿಡುತ್ತಿರುವ ಮರಗಳಿಗೆ (7 ವರ್ಷಕ್ಕೂ ಹೆಚ್ಚು ವಯಸ್ಸಿನ) ಪೊಟಾಶ್ 250 ಗ್ರಾಂ, 15:15:15 ಅಥವಾ 10:26:26 ಅಥವಾ DAP ಅಥವಾ 20:20 150 ಗ್ರಾಂ ಮತ್ತು ಜಿಂಕ್ ಸೆಟ್ ಮತ್ತು ಬೋರಾನ್ ಲಘು ಪೋಷಕಾಂಶಗಳು 20 ಗ್ರಾಂ ಗಿಡಕ್ಕೆ ಬುಡದಿಂದ 2 ಅಡಿ ದೂರದಲ್ಲಿ, ನೀಡಿ ಮಣ್ಣು ಮುಚ್ಚಬೇಕು,

ಇದನ್ನೂ ಓದಿ: ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ ಮತ್ತು ಹಾವು ಕಡಿತಗಳಿಂದ ತಪ್ಪಿಸಿಕೊಳ್ಳುವುದೇಗೆ?

4) ಮಣಿಗೆ ಕೊಟ್ಟಿಗೆ ಗೊಬ್ಬರ/ಬೇವಿನಹಿಂಡಿ/ಕುರಿ ಗೊಬ್ಬರ/ಎರೆ ಹುಳು ಗೊಬ್ಬರ/ಸಾವಯವ ಗೊಬ್ಬರಗಳನ್ನು ಹಾಕಿ ಪಾತಿ ಮಾಡಿ ಮಣು ಮುಚ್ಚುವುದು,

5) ಮುಂಗಾರು ಋತು ಪ್ರಾರಂಭದಲ್ಲಿ ಎಲೆಚುಕ್ಕೆ ರೋಗಕ್ಕೆ ಬೋರ್ಡೋ ದ್ರಾವಣ ರಾಮಬಾಣವಾಗಿದ್ದು, ಪ್ರಾರಂಭದಲ್ಲಿಯೇ ಸಿಂಪರಿಸಬೇಕು.

6) ರೋಗದ ತೀವ್ರತೆ ಆಧಾರದ ಮೇಲೆ Tebuconazole 1 ml ಅಥವಾ Tebuconazole+ Trifloxystrobin 2 ml ಅಥವಾ Flupyram+Tebuconazole 1 ml Azoxystrobin+Tebuconazole 1ml Fluslozole +Corbondezim 2 ml ಅಥವಾ Pyrixostrobin+Metiram 1.59 ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.

7) ಮಳೆಯ ತೀವ್ರತೆ ಮತ್ತು ರೋಗದ ತೀವ್ರತೆ ನೋಡಿಕೊಂಡು ಪ್ರತಿ 40-45 ದಿನಕೊಮ್ಮೆ ಸಿಂಪಡಿಸಬೇಕು,

ಯುವ ನಿಧಿ ಮತ್ತು ಅನ್ನ ಭಾಗ್ಯ ಯೋಜನೆಯ ಅಧಿಕೃತ ಮಾರ್ಗಸೂಚಿ ಬಿಡುಗಡೆ.

0

ರಾಜ್ಯ ಸರಕಾರದ ಹೊಸ ಯೋಜನೆಗಳಲ್ಲಿ ಯುವ ನಿಧಿ ಮತ್ತು ಅನ್ನ  ಭಾಗ್ಯ ಯೋಜನೆಯಡಿ ಯಾವೆಲ್ಲ ನಿಯಮಗಳು ಇರಲಿವೆ ಎನ್ನುವುದರ ಕುರಿತು ಸಾರ್ವಜನಿಕರಿಗೆ ಮತ್ತು ಯೋಜನೆ ಅನುಷ್ಠಾನಕ್ಕೆ ಸಂಭಂದಿಸಿದಂತೆ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

“ಯುವ ನಿಧಿ ಯೋಜನೆ”(Yuva nidhi yojane) ಮಾರ್ಗಸೂಚಿ ಹೀಗಿದೆ:

ರಾಜ್ಯದ ಪದವೀಧರರ ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ನಿರುದ್ಯೋಗ ಭತ್ಯೆ ಪಾವತಿಸಲು “ಕರ್ನಾಟಕ ಯುವ ನಿಧಿ ಯೋಜನೆ” ಯನ್ನು ಜಾರಿಗೆ ತರಲಾಗಿದೆ.

ರಾಜ್ಯದಲ್ಲಿ 2022-23 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.3000/- (ಮೂರು ಸಾವಿರ ರೂಗಳು ಮಾತ್ರ) ಹಾಗೂ ಡಿಪ್ಲೋಮಾ ಹೊಂದಿದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1500/- (ಒಂದು ಸಾವಿರದ ಐದುನೂರು ರೂ.ಗಳು ಮಾತ್ರ) ರಂತೆ ನಿರುದ್ಯೋಗ ಭತ್ಯೆ ನೀಡುವ “ಯುವ ನಿಧಿ ಯೋಜನೆ” ಯನ್ನು ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿತ್ತು.

ಈಗ ಸಚಿವ ಸಂಪುಟದ ಅನುಮೋದನೆ ನಂತರ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಷರತ್ತು ಮತ್ತು ನಿಬಂಧನೆಗಳು ಹಾಗೂ ಅನರ್ಹತೆಯ ಮಾನದಂಡಗಳನ್ನು ವಿಧಿಸಿ ಆದೇಶ ಹೊರಡಿಸಲು ಸರ್ಕಾರವು ತೀರ್ಮಾನಿಸಿದ್ದು. 

2023 ರ ವರ್ಷದಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತ್ತಿಪರ ಕೋರ್ಸ್‌ ಗಳು ಸೇರಿದಂತೆ) ಪ್ರತಿ ತಿಂಗಳು ರೂ.3000/- (ಮೂರು ಸಾವಿರ ರೂ.ಗಳು ಮಾತ್ರ ನಿರುದ್ಯೋಗ ಭತ್ಯೆ ಹಾಗೂ ಡಿಪ್ಲೋಮಾ ಪಾಸಾದ ವಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ.1500/- (ಒಂದು ಸಾವಿರದ ಐದುನೂರು ರೂ.ಗಳು ಮಾತ್ರ ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ, ಎರಡು ವರ್ಷಗಳ ಅವಧಿಗೆ ನೀಡಲು “ಯುವ ನಿಧಿ ಯೋಜನೆ” ಯನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಅನುಷ್ಟಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.

ಷರತ್ತು ಮತ್ತು ನಿಬಂಧನೆಗಳು:

1. ಪದವಿ / ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ (Domicile of Karnataka) ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ. 

2. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು. 

3. ಭತ್ಯೆಯನ್ನು DBT ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು.

4. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು, ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.

ಯೋಜನೆಗೆ ಅರ್ಹರಾಗದೇ ಇರುವವರು:

1, ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರೆಸುವವರು.

2, ಶಿಶಿಕ್ಷು (Apprentice) ವೇತನವನ್ನು ಪಡೆಯುತ್ತಿರುವವರು. 

3. ಸರ್ಕಾರಿ/ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು.

3. ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕಿಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.

ಇದನ್ನೂ ಓದಿ: Nano DAP: ನ್ಯಾನೋ ಡಿಎಪಿ ರಸಗೊಬ್ಬರ ಎಲ್ಲಿ ಖರೀದಿಸಬೇಕು? ಇದರ ಬಳಕೆಯ ಲಾಭಗಳೇನು? ಯಾವೆಲ್ಲ ಬೆಳೆಗೆ ಸಿಂಪರಣೆ ಮಾಡಬವುದು.


“ಅನ್ನ ಭಾಗ್ಯ”(Anna bhagya yojane) ಯೋಜನೆ ಮಾರ್ಗಸೂಚಿ ವಿವರ:

ದಿನಾಂಕ: 02.06.2023 ರಂದು ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 10 ಕೆ.ಜಿ, ಆಹಾರ ಧಾನ್ಯವನ್ನು ವಿತರಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಮಾರ್ಗಸೂಚಿಯನು ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗಿರುವ ಅಂತ್ಯೋದಯ ಯೋಜನೆ (AAY) ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯವನ್ನು ವಿತರಿಸುವ ಸಲುವಾಗಿ ನೂತನ ಮಾರ್ಗಸೂಚಿಯನ್ನು ರಾಜ್ಯ ಸರಕಾರದಿಂದಾ ಹೊರಡಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗಿರುವ ಅಂತ್ಯೋದಯ ಅನ್ನ  ಭಾಗ್ಯ  ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಕ್ಕೆ, ಪ್ರತಿ ತಿಂಗಳು ಫಲಾನುಭವಿಗಳ ಪರಿಗಣನೆಗೆ ತೆಗೆದುಕೊಳ್ಳದೇ 35 ಕೆ.ಜಿ, ಆಹಾರ ಧಾನ್ಯವನ್ನು ಹಾಗೂ ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ಪ್ರತಿ ತಿಂಗಳು 05 ಕೆ.ಜಿ, ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ವಿತರಿಸಲಾಗಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 05 ಕೆ.ಜಿ, ಆಹಾರ ಧಾನ್ಯವನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ, ಉಚಿತವಾಗಿ ವಿತರಿಸಲಾಗುತ್ತಿದೆ.

ರಾಜ್ಯದಲಿರುವ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುತ್ತಿರುವ 5ಕೆ.ಜಿ, ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ 01 ಕೆ.ಜಿ, ಅಕ್ಕಿಯನ್ನು ಉಚಿತವಾಗಿ ವಿತರಿಸಲು ಆದೇಶಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನಯ ವಿತರಿಸಲಾಗಿರುವ ಅಂತ್ಯೋದಯ ಅನ್ನ ಯೋಜನೆ (AAY), ಆದ್ಯತಾ ಕುಟುಂಬ ಪಡಿತರ ಚೀಟಿಗಳು ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ವಿತರಿಸಲಾಗಿರುವ ಆದ್ಯತಾ ಪಡಿತರ ಚೀಟಿಗಳ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಆಹಾರ ಧಾನ್ಯವನ್ನು ದಿನಾಂಕ: 01.07.2023 ರಿಂದ ಅನ್ವಯವಾಗುವಂತೆ ಉಚಿತವಾಗಿ ವಿತರಿಸಲು ಆದೇಶ ನೀಡಲಾಗಿದೆ.

ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ ಮತ್ತು ಹಾವು ಕಡಿತಗಳಿಂದ ತಪ್ಪಿಸಿಕೊಳ್ಳುವುದೇಗೆ?

0

ಭಾರತದಲ್ಲಿ ಪ್ರತಿ ವರ್ಷ ಸುಮಾರು 60,000 ಜನರು ವಿಷಪೂರಿತ ಹಾವಿನ ಕಡಿತದಿಂದ ಸಾಯುತ್ತಾರೆ ಮತ್ತು ಸುಮಾರು ಮೂರು ಪಟ್ಟು ಹೆಚ್ಚಿನ ಸಂಖ್ಯೆಯ ಜನರು ಶಾಶ್ವತವಾದ ಅನಾರೋಗ್ಯ ಅಥವಾ ಜೀವ ಕಾರ್ಯವನ್ನು ಕಳೆದುಕೊಳ್ಳುತ್ತಾರೆ. ಈ ಸಂಘರ್ಷದ ಪ್ರಮಾಣವು ಜಗತ್ತಿನಲ್ಲಿ ಎಲ್ಲಿಯೂ ಸಾಟಿಯಿಲ್ಲ.

ಭಾರತದಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ, ಹಾವು ಕಡಿತದ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಜ್ಞಾನ ಮತ್ತು ತಿಳುವಳಿಕೆ ಕೊರತೆ, ಈ ಕಾರಣದಿಂದಾಗಿ, ಬಹಳ ಹಾನಿಕಾರಕ ಮತ್ತು ಮಾರಣಾಂತಿಕ ಅಭ್ಯಾಸಗಳನ್ನು ಅನುಸರಿಸಲಾಗುತ್ತದೆ. ಅದು ವಿಷಯಗಳನ್ನು ಅಗತ್ಯಕ್ಕಿಂತ ಹೆಚ್ಚು ಕೆಟ್ಟದಾಗಿ ಮಾಡುತ್ತದೆ. ಹಾವು ಕಡಿತಕ್ಕೆ ಪ್ರಥಮ ಚಿಕಿತ್ಸೆಯಲ್ಲಿ “ಮಾಡಬೇಕಾದ ಮತ್ತು ಮಾಡಬಾರದ” 
ವಿಷಯಗಳು ಇಲ್ಲಿವೆ.

ಹಾವುಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

ಅಪಾಯಕಾರಿ ಅಂಶಗಳು:

  • ಸೌರಗಳ ಕಟ್ಟನ್ನು ಪರಿಶೀಲಿಸದೆ ಎತ್ತುವುದು
  • ಸ್ವಚ್ಛವಾಗಿರದ ಹೊಲ ಗದ್ದೆಗಳು ಹಾವಿನ ಸಂಖ್ಯೆಗಳನ್ನು ಹೆಚ್ಚಿಸುತ್ತವೆ ಹಾಗೂ ನಡೆದಾಡಲು ಗಿಡ ಗಂಬಿಗಳು ತುಂಬಿದ ಅಪಾಯವನ್ನು ಹೆಚ್ಚಿಸುತ್ತದೆ.
  • ಸಂಭವವನ್ನು ಹೆಚ್ಚಿಸುತ್ತದೆ
  • ಸುತ್ತ ಮುತ್ತಲಿನ ಜಾಗಗಳಲ್ಲಿ ಕಸದ ರಾಶಿಯಿದ್ದರೆ ಅದು ಹೆಚ್ಚು ಹಾವುಗಳನ್ನು ಆಕರ್ಷಿಸುತ್ತದೆ

ಸುರಕ್ಷತೆ ಅಂಶಗಳು:

  • ರೈತರು ಹೊಲದಲ್ಲಿ ನಡೆದಾಡುವಾಗ ಹಾವಿನ ಕಡಿತದಿಂದ ರಕ್ಷಿಸಿಕೊಳ್ಳಲು ಗಮ್ ಶೂಸ್(ರಬ್ಬರ್ ಬೂಟ್)ಗಳನ್ನು ಉಪಯೋಗಿಸಿ.
  • ರಾತ್ರಿ ಸಮಯದಲ್ಲಿ ಒಡಾಟ ಮಾಡುವಾಗ ಟಾರ್ಚ್ ಅನ್ನು ಹಾಕಿಕೊಳ್ಳಿ.
  • ಸೌದೆ ಕಟ್ಟುಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಮೊದಲು ಪರಿಶೀಲಿಸಿ.
  • ಹೊಲ ಗದ್ದೆಗಳನ್ನು ಕಳೆಗಳಿಂದ ಸ್ವಚ್ಛವಾಗಿರಿಸಿ.
  • ಮಲಗಿದ್ದಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಹೆಚ್ಚು ಸುರಕ್ಷಿತ.
  • ನಡೆದಾಡುವ ದಾರಿಗಳನ್ನು ಕಳೆ ಮುಕ್ತ ಮಾಡುವುದರಿಂದ ಹಾವಿನ ಕಡಿತವನ್ನು ಕಡಿಮೆ ಮಾಡಬಹುದು.
  • ಕಸವನ್ನು ಬುಟ್ಟಿಗಳಲ್ಲಿ ಹಾಕಿ, ಮನೆ ಸುತ್ತಮುತ್ತ ಗಿಡಗಂಟೆಗಳನ್ನು ಕತ್ತರಿಸಿ ಸ್ವಚ್ಛವಾಗಿಡಿ.


ಹಾವು ಕಡಿತ ನಿರ್ವಹಣೆ:

ವಿಷಕಾರಿ ಹಾವು ಕಡಿತ ಪ್ರಥಮ ಚಿಕಿತ್ಸೆಹಾವು ಕಚ್ಚಿದಾಗ, ಸಮಾಧಾನದಿಂದಿರಿ ಮತ್ತು ಕಡಿತಕ್ಕೊಳಗಾದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಯಾವುದಾದರು ವಾಹನ ಅಥವಾ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ, ನೀವು ವಾಹನಕ್ಕಾಗಿ ಕಾಯುತ್ತಿರುವಾಗ, ಕೆಳಕಂಡವುಗಳನ್ನು ಅನುಸರಿಸಿ ಮತ್ತು ಕೆಲವನ್ನು ಅನುಸರಿಸಬೇಡಿ ಮಾಡಿ ಹೆದರಬೇಡಿ, ಸಮಾಧಾನವಾಗಿರಿ ರೋಗಿಯನ್ನು ಕೂರಿಸಿ, ಕಚ್ಚಿರುವ ಭಾಗ ಹೃದಯದ ಕೆಳಗೆ ಬರುವ ಹಾಗೆ ಇರಲಿ ರಕ್ತ ಪರಿಚಲನ ತಡೆಗಟ್ಟುವಂತಹ – ಕೈ ಗಡಿಯಾರ, ಬಳೆ, ಉಂಗುರ ಮುಂತಾದವುಗಳನ್ನು ತೆಗೆದಿಡಿ ಕಚ್ಚಿದ ಭಾಗವನ್ನು ಅಲುಗಾಡದಂತೆ ನೋಡಿಕೊಳ್ಳಿ, ಹುಶಾರಾಗಿ ವ್ಯಕ್ತಿಯನ್ನು ವಾಹನದ ಕಡೆಗೆ ಕರೆದುಕೊಂಡು ಹೋಗಿ ನೇರವಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯಿರಿ ದಾರಿಯಲ್ಲಿ ರೋಗ ಲಕ್ಷಣಗಳನ್ನು ಪಟ್ಟಿ ಮಾಡಿ.


ಮಾಡಬೇಕಾದುದು:

ರೋಗಿಯನ್ನು ರಕ್ಷಿಸಿ ಕೈಗಡಿಯಾರಗಳು, ಉಂಗುರಗಳು, ಬಳೆಗಳು, ಸ್ಲೀವ್ ಕಫ್‌ಗಳು ಮುಂತಾದ ಯಾವುದೇ ನಿರ್ಬಂಧಿತ ವಸ್ತುಗಳನ್ನು ತೆಗೆದುಹಾಕಿ, ಅದರ ಸುತ್ತಲೂ ಏನನ್ನೂ ಬಿಗಿಯಾಗಿ ಕಟ್ಟದ ಅಂಗವನ್ನು ನಿಶ್ಚಲಗೊಳಿಸಿ
ನೇರವಾಗಿ ಆಸ್ಪತ್ರೆಗೆ ಹೋಗಿ ಕಚ್ಚುವಿಕೆಯ ಇತಿಹಾಸ ಮತ್ತು ಗಮನಿಸಿದ ಯಾವುದೇ ರೋಗಲಕ್ಷಣಗಳನ್ನು ಸಂಕ್ಷಿಪ್ತವಾಗಿ ವೈದ್ಯರಿಗೆ ವರದಿ ಮಾಡಿ.

ಇದನ್ನೂ ಓದಿ: ಯುವ ನಿಧಿ ಮತ್ತು ಅನ್ನ  ಭಾಗ್ಯ ಯೋಜನೆಯ ಅಧಿಕೃತ ಮಾರ್ಗಸೂಚಿ ಬಿಡುಗಡೆ.

ಮಾಡಬಾರದು:

  • ಗಾಬರಿಗೊಳಗಾಗಬಾರದು.
  • ಅಂಗದ ಸುತ್ತಲೂ ಯಾವುದನ್ನಾದರೂ ಬಿಗಿಯಾಗಿ ಕಟ್ಟಬಾರದು. 
    ಅಂಗವನ್ನು ತೊಳೆಯಬಾರದು.
  • ಗಾಯವನ್ನು ಕತ್ತರಿಸಲು ಅಥವಾ ವಿಷವನ್ನು ಹೀರಲು ಪ್ರಯತ್ನಿಸಬಾರದು.
  • ಗಾಯವನ್ನು ಸುಟ್ಟುಹಾಕಬಾರದು.
  • ಸಮಯವನ್ನು ವ್ಯರ್ಥ ಮಾಡಬೇಡಿ.
  • ಪರ್ಯಾಯ ವೈದ್ಯರ ಬಳಿಗೆ ಹೋಗಬಾರದು.
    ಹಾವನ್ನು ಕೊಲ್ಲಲು/ಹಿಡಿಯಲು ಪ್ರಯತ್ನಿಸಬಾರದು.

ಶಾಂತವಾಗಿರಿ ಮತ್ತು ಗಾಬರಿಯಾಗಬೇಡಿ: ನಿಮ್ಮ ಹೃದಯಬಡಿತವನ್ನು ಹೆಚ್ಚಿಸದಿರಲು ಮತ್ತು ಸಂವೇದನಾಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಅನುವು ಮಾಡಿಕೊಡಲು ಇದು ಬಹಳ ಮುಖ್ಯ.

ನಿಶ್ಚಲತೆ ಮತ್ತು ಅಂಗವನ್ನು ಕಟ್ಟುವುದು: ರಕ್ತದ ಹರಿವನ್ನು ನಿಧಾನಗೊಳಿಸುವ ಉದ್ದೇಶದಿಂದ ಅಂಗದ ಸುತ್ತಲೂ ಯಾವುದನ್ನಾದರೂ ಕಟ್ಟುವುದು ಭಾರತದಲ್ಲಿ ಪ್ರತಿಕೂಲವಾಗಿದೆ. ಮೊದಲನೇಯದಾಗಿ, ಇದು ನಮ್ಮ ರಕ್ತಪರಿಚಲನಾ ವ್ಯವಸ್ಥೆಯಲ್ಲಿ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಹೃದಯದ ಬಡಿತವನ್ನು ಹೆಚ್ಚು ಮಾಡುತ್ತದೆ. ಈ ಒತ್ತಡವು ಅಸ್ಥಿರಜ್ಜು ತೆಗೆದುಹಾಕಿದಾಗ ರಕ್ತವು ಧಾವಿಸುವಂತೆ ಮಾಡುತ್ತದೆ ಮತ್ತು ಹೆಚ್ಚು ವೇಗವಾದ, ಹೆಚ್ಚು ತೀವ್ರವಾದ ವಿಷತ್ವಕ್ಕೆ ಕಾರಣವಾಗಬಹುದು. ಎರಡನೇಯದಾಗಿ, ಭಾರತದಲ್ಲಿನ ಅನೇಕ ವಿಷಪೂರಿತ ಹಾವುಗಳು ತೀವ್ರವಾದ ಊತವನ್ನು ಉಂಟುಮಾಡುತ್ತವೆ. ಅಂಗದ ಸುತ್ತಲೂ ಏನನ್ನಾದರೂ ಕಟ್ಟುವುದು ಮತ್ತಷ್ಟು ಹಾನಿಗೆ ಕಾರಣವಾಗುತ್ತದೆ ಮತ್ತು ಪ್ರಾಯಶಃ ಸಾವಿಗೆ ಕಾರಣವಾಗಬಹುದು.

ಕಚ್ಚಿದ ಸ್ಥಳವನ್ನು ಎಂದಿಗೂ ತೊಳೆಯಬೇಡಿ ಕತ್ತರಿಸಬೇಡಿ ಅಥವಾ ಸುಡಬೇಡಿ: ಆಗಾಗ್ಗೆ, ವಿಷವು ಚರ್ಮದ ಮೇಲಿನ ಪದರಗಳಲ್ಲಿ ಅಥವಾ ಮೃದು ಎಲುಬಿನಂತಹ ಸಂಯೋಜಕ ಅಂಗಾಂಶಗಳಲ್ಲಿ ಅಂಟಿಕೊಂಡಿರುತ್ತದೆ, ಅಲ್ಲಿ ಅದು ನಿಧಾನವಾಗಿ ಹರಿಯುತ್ತದೆ. ಗಾಯವನ್ನು ತೊಳೆಯುವುದು, ಕತ್ತರಿಸುವುದು ಅಥವಾ ಅದನ್ನು ಕಟ್ಟುವುದರಿಂದ ವಿಷವು ನೇರವಾಗಿ ರಕ್ತಪ್ರವಾಹಕ್ಕೆ ಹರಿಯುತ್ತದೆ. ಕಚ್ಚುವಿಕೆಯಿಂದ ವಿಷವನ್ನು ಹೀರುವುದು ಸಹ ಅಸಾಧ್ಯ. ಗಾಯವನ್ನು ಸುಡುವುದು ದೀರ್ಘಾವಧಿಯ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಯಾವುದೇ ರೀತಿಯಲ್ಲಿ ಗಾಯವನ್ನು ಹಾಳುಮಾಡುವುದು ಹೆಚ್ಚು ಹಾನಿಯನ್ನುಂಟುಮಾಡುತ್ತದೆ ಮತ್ತು ಚಿಕಿತ್ಸೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ.

ಸಾಂಪ್ರದಾಯಿಕ ವೈದ್ಯರು ಅಥವಾ ಆಂಟಿವೆನಮ್ ಹೊರತುಪಡಿಸಿ ಏನನ್ನು ಬಳಸುವ ಯಾರೊಬ್ಬರ ಬಳಿಗೆ ಹೋಗಬೇಡಿ: ಸಾಂಪ್ರದಾಯಿಕ ವೈದ್ಯರು ವಿಷಕಾರಿಯಲ್ಲದ ಹಾವುಗಳಿಂದ ಕಚ್ಚಲ್ಪಟ್ಟ ಗ್ರಾಹಕರು ಅಥವಾ ಯಾವುದೇ ವಿಷವಿಲ್ಲದ ಅಥವಾ ವಿಷದ ಉಪ-ಮಾರಣಾಂತಿಕ ಪ್ರಮಾಣದ ವಿಷವನ್ನು ಪಡೆದವರಿಂದ ವಿಶ್ವಾಸಾರ್ಹತೆಯನ್ನು ಪಡೆಯುತ್ತಾರೆ. ಹಾವಿನ ಕಲ್ಲುಗಳು, ಇನ್ನಿತರ ಸಾಬೀತಾಗದ ಪರಿಹಾರಗಳಂತಹ ಸುಳ್ಳುಗಳನ್ನು ಅವಲಂಬಿಸಿರುವುದು ಅನೇಕ ಸಂಸ್ಥೆಗಳಿಗೆ ಇದು ನಿಜವಾಗಿದೆ. ವಿಷಪೂರಿತ ಹಾವು ಕಡಿತಕ್ಕೆ ಪರಿಹಾರಗಳ ಕುರಿತು ವ್ಯಾಪಕವಾದ ಸಂಶೋಧನೆಯನ್ನು ಮಾಡಲಾಗಿದೆ ಮತ್ತು ಮಾಡಲಾಗುತ್ತಿದೆ ಆದರೆ ಆಚಿಟಿವೆನಮ್ ಮಾತ್ರ ನಿಜವಾದ ವಿಷಪೂರಿತ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಸಾಬೀತಾಗಿದೆ.

ಹಾವನ್ನು ಕೊಲ್ಲಲು ಅಥವಾ ಹಿಡಿಯಲು ಎಂದಿಗೂ ಪ್ರಯತ್ನಿಸಬೇಡಿ: ಇದು ಮತ್ತಷ್ಟು ಸಾವುನೋವುಗಳಿಗೆ ಕಾರಣವಾಗಬಹುದು ಮತ್ತು ಹಾವು ಕಡಿತದ ಚಿಕಿತ್ಸೆಯಲ್ಲಿ ಸಹಾಯ ಮಾಡುವುದಿಲ್ಲ. ಭಾರತದಲ್ಲಿರುವ ‘ದೊಡ್ಡ ನಾಲ್ಕು’ ವಿಷಪೂರಿತ ಹಾವುಗಳ ವಿಷಕ್ಕಾಗಿ ತಯಾರಿಸಲಾದ ಪಾಲಿವಲೆಂಟ್ ಆಂಟಿವೆನಮ್ ಸೀರಮ್ ಅನ್ನು ನಾವು ಹೊಂದಿದ್ದೇವೆ. ಹಾವನ್ನು ಗುರುತಿಸಿವುದರಿಂದ ಬೇರೆ ಯಾವುದೇ ರೀತಿಯ ಚಿಕಿತ್ಸೆಯನ್ನು ಒದಗಿಸುವುದಿಲ್ಲ. ಆದಾಗ್ಯೂ, ಹಾವು ವಿಷಕಾರಿಯಲ್ಲದಿದ್ದಲ್ಲಿ ಅಥವಾ ‘ದೊಡ್ಡ ನಾಲ್ಕು’ ಜಾತಿಗಳಲ್ಲಿ ಒಂದಲ್ಲದಿದ್ದರೆ ದೂರದಿಂದ ಫೋನ್‌ನಲ್ಲಿ ಚಿತ್ರವನ್ನು ತೆಗೆದುಕೊಳ್ಳುವುದು ಉಪಯುಕ್ತವಾಗಿದೆ.

ಇದನ್ನೂ ಓದಿ: ಕೃತಕವಾಗಿ ಹಣ್ಣು ಮಾಡಿದ ಮಾವನ್ನು  ಪತ್ತೆ ಮಾಡುವುದು ಹೇಗೆ?

ಹಾವು ಇರುವ ಯಾವುದೇ ಪೆಟ್ಟಿಗೆಯನ್ನು ನಿರ್ವಹಿಸುವಾಗ ಅತ್ಯಂತ ಜಾಗರೂಕರಾಗಿರಬೇಕು ಮತ್ತು ಹಾವಿಗೆ ಕನಿಷ್ಟ ಒತ್ತಡವನ್ನು ಉಂಟುಮಾಡಬಹುದು.

Nano DAP: ನ್ಯಾನೋ ಡಿಎಪಿ ರಸಗೊಬ್ಬರ ಎಲ್ಲಿ ಖರೀದಿಸಬೇಕು? ಇದರ ಬಳಕೆಯ ಲಾಭಗಳೇನು? ಯಾವೆಲ್ಲ ಬೆಳೆಗೆ ಸಿಂಪರಣೆ ಮಾಡಬವುದು.

0

ಪಲಿಸರ ಸ್ನೇಹಿ, ಕಡಿಮೆ ವೆಚ್ಚ, ಸುಲಭ ನಿರ್ವಹಣೆಗಾಗಿ ದ್ರವರೂಪದ ರಸಗೊಬ್ಬರ ‘ನ್ಯಾನೋ ಡಿಎಪಿ’ ರೈತ ಸಮುದಾಯದ ಪರಿಶ್ರಮ ಮತ್ತು ಖರ್ಚನ್ನು ಮಿತಗೊಳಿಸುವ ನಿಟ್ಟಿನಲ್ಲಿ ಇಸ್ರೋ ಸಂಸ್ಥೆಯು ಪರಿಸರ-ಸ್ನೇಹಿ ದ್ರವರೂಪದ ನ್ಯಾನೋ ಡಿಎಪಿ ರಸಗೊಬ್ಬರವನ್ನು ಬಿಡುಗಡೆ ಮಾಡಿದೆ.

ನ್ಯಾನೋ ಡಿಎಪಿ ಬಳಕೆ ಪ್ರಯೋಜನೆಗಳು :

1. ಮೊಳಕೆಯೊಡೆಯುವಿಕೆಯ ಪ್ರಮಾಣ ಹೆಚ್ಚಳ.

2. ಬೇರುಗಳ ಬೆಳವಣಿಗೆಗೆ ಸಹಾಯಕ.

3. ಕೊಂಬೆಗಳು ಮತ್ತು ಹೂವುಗಳ ಸಂಖ್ಯೆಯ ಹೆಚ್ಚಳ.

4. ಅಧಿಕ ಇಳುವರಿಯೊಂದಿಗೆ ಉತ್ತಮ ಆದಾಯ.

5. ಬೇಸಾಯ ವೆಚ್ಚ ಕಡಿತ.

6. ಸಂಗ್ರಹಣೆ, ಸಾಗಾಟ ಮತ್ತು ಬಳಕೆ ಸುಲಭ.

7. ಪರಿಸರ ಸ್ನೇಹಿ – ವಿಷಕಾರಿಯಲ್ಲ.

8. ಗಿಡಗಳಿಗೆ ನೇರ ಸಿಂಪರಣೆ.

ಆರ್ಥಿಕವಾಗಿ ಲಾಭದಾಯಕ :

500 ಮಿ.ಲಿ. ನ್ಯಾನೋ ಡಿಎಪಿ ಬಾಟಲಿಯು 50 ಕೆ.ಜಿ. ಡಿಎಪಿ ರಸಗೊಬ್ಬರಕ್ಕೆ ಸಮ. ಒಂದು ರಸಗೊಬ್ಬರ ಚೀಲಕ್ಕೆ ರೂ. 1350/- ಆಗಿದೆ. ದ್ರವರೂಪದ ನ್ಯಾನೋ ಡಿಎಪಿ ರಸಗೊಬ್ಬರದ ದರ 500 20. d. 600/- JUDE 500 ಮಿ.ಲೀ ಬಾಟಲಿ ಒಂದರ ದರ ರೂ. 600/- ಮಾತ್ರ ಇತರೇ ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಿಲ್ಲ.

ರೈತರು ಎಲ್ಲಿ ಖರೀದಿಸಬವುದು:

ನಿಮ್ಮ ಹತ್ತಿರದ ವ್ಯವಸಾಯ ಸೇವ ಸಹಕಾರ ಸಂಘದ(ಸೊಸೈಟಿ/VSS) ಕಚೇರಿಯಲ್ಲಿ ಖರೀದಿಸಬವುದು ಅಥವಾ ನೇರವಾಗಿ https://www.iffcobazar.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅನ್ಲೈನ್ ನಲ್ಲಿ ಅರ್ಡರ್ ಮಾಡಿ ತರಿಸಿಕೊಳ್ಳಬವುದು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾನ್ಯ ಸೇವಾ ಕೇಂದ್ರದಲ್ಲಿಯು (CSC) ಲಭ್ಯ : ದ್ರವರೂಪದ ನ್ಯಾನೋ ಡಿಎಪಿ ಗೊಬ್ಬರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮ ಮಟ್ಟದಲ್ಲಿ ನಡೆಸಲ್ಪಡುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಮಾರಾಟಕ್ಕೆ ಲಭ್ಯವಿರುತ್ತದೆ. ಆಸಕ್ತ ರೈತರು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರದ ಗ್ರಾಮ ಮಟ್ಟದ ಪ್ರತಿನಿಧಿಗಳನ್ನು (VLE) ಭೇಟಿ ಮಾಡಿ ಮುಂಗಡ ಬೇಡಿಕೆಯನ್ನು ನೀಡಿ ಪಡೆಯಬವುದು.

ಇದನ್ನೂ ಓದಿ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಯಾರೆಲ್ಲ ಅರ್ಹರು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ಯಾವೆಲ್ಲ ಬೆಳೆಗಳಿಗೆ ಹೇಗೆ ಬಳಕೆ ಮಾಡಬವುದು:

ಭತ್ತದ ಬೀಜೋಪಚಾರ: ಭತ್ತ ಬಿತ್ತನೆ ಮಾಡುವ ಮೊದಲು ನ್ಯಾನೋ ಡಿಎಪಿಯನ್ನು 3-5 ಎಮ್ ಎಲ್ ಪ್ರತಿ ಕೆಜಿ ಭತ್ತಕ್ಕೆ ಹಾಕಿ 20-30 ನಿಮಿಷ ನೆರಳಿನಲ್ಲಿ ಒಣಗಿಸಿ ನಂತರ ಬಿತ್ತನೆ ಮಾಡಬೇಕು.

ಭತ್ತದ ಸಸಿಗೆ: ಭತ್ತದ ಸಸಿಯನ್ನು ನಾಟಿ ಮಾಡುವ ಮೊದಲು ನ್ಯಾನೋ ಡಿಎಪಿಯನ್ನು 3-5 ಎಮ್ ಎಲ್ ಪ್ರತಿ ಲೀಟರ್ ನೀರಿಗೆ ಹಾಕಿ ಸಸಿ ಬೇರುಗಳನ್ನು ನೆನಸಿ 20-30 ನಿಮಿಷ ನೆರಳಿನಲ್ಲಿ ಒಣಗಿಸಿ ನಂತರ ನಾಟಿ ಮಾಡಬೇಕು.

ಬೆಳೆಗಳಿಗೆ ಸಿಂಪರಣೆ: 2-4 ಎಮ್ ಎಲ್ ನ್ಯಾನೋ ಡಿಎಪಿಯನ್ನು ಪ್ರತಿ ಲೀಟರ್ ನೀರಿಗೆ ಬೇರಸಿ ಹೂವಾಡುವ ಹಂತಕ್ಕಿಂತ ಮೊದಲು ಮತ್ತು ಕವಲು ಹೊಡೆದ ಸಮಯದಲ್ಲಿ ಬೆಳೆಗಳಿಗೆ ಸಿಂಪರಣೆ ಮಾಡಬವುದು.

ಬೀಜೋಪಚಾರ ಮತ್ತು ಸಿಂಪರಣೆ ಹಂತಗಳು:

ಗೋಧಿ, ಮೆಕ್ಕೆಜೋಳ, ಸಿರಿಧಾನ್ಯ, ಭತ್ತ ಬೆಳೆಗಳಿಗೆ ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ದ್ವಿದಳ ದಾನ್ಯ ಬೆಳೆಗಳಿಗೆ: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ಕಬ್ಬು: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 40-60 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ತರಕಾರಿ ಬೆಳೆಗಳಿಗೆ: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ಹತ್ತಿ: ಬೀಜೋಪಚಾರಕ್ಕೆ- 3-5 ml/kg ಸಿಂಪರಣೆ- 30-35 ದಿನದ ಬೆಳೆಗೆ 2-4 ml ಪ್ರತಿ ಲೀಟರ್ ನೀರಿಗೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ:

https://nanodap.in/ka

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಗೆ ಯಾರೆಲ್ಲ ಅರ್ಹರು? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

0

ಬೆಂಗಳೂರು: ನಿನ್ನೆ ನಡದೆ ನೂತನ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ.

ನೂತನ ರಾಜ್ಯ ಸರಕಾರವು ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಹೆಸರಿನ 5 ನೂತನ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಗೃಹಜ್ಯೋತಿ ಯೋಜನೆಯಡಿ  200 ಯುನಿಟ್‌ವರೆಗೆ ಉಚಿತ ವಿದ್ಯುತ್, ಅನ್ನಭಾಗ್ಯದಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರ ಕುಟುಂಬ ಸದಸ್ಯರಿಗೆ ಈ ಯೋಜನೆಯಡಿ ತಲಾ 10 ಕೆ.ಜಿ ಉಚಿತ ಆಹಾರಧಾನ್ಯ, ಗೃಹಲಕ್ಷ್ಮಿ ಯೋಜನೆಯಡಿ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ ರೂ. 2000 ನೇರ ವರ್ಗಾವಣೆ, ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ, ಯುವನಿಧಿ
ಯೋಜನೆಯಡಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತಿರ್ಣರಾದ ನಿರುದ್ಯೋಗಿ  ಯುವಜನರಿಗೆ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.

5 ಗ್ಯಾರಂಟಿ ಯೋಜನೆಗಳ ಸಂಪೂರ್ಣ ವಿವರ ಹೀಗಿದೆ:

ಗ್ಯಾರಂಟಿ ನಂ. 1 “ಗೃಹಜ್ಯೋತಿ”:

ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಉಚಿತ ವಿದ್ಯುತ್ ಒದಗಿಸಲು  ನಿನ್ನೆ )2 ಜೂನ್ 2023) ಶುಕ್ರವಾರದಂದು ಸಚಿವ ಸಂಪುಟವು ಅನುಮೋದನೆ ನೀಡಲಾಗಿದ್ದು, ಉಚಿತ ವಿದ್ಯುತ್ ಯೋಜನೆಯ ದುರ್ಬಳಕೆ ತಡೆಯಲು ಈ ಯೋಜನೆಯಡಿ ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್ ಬಳಕೆಯ ಸರಾಸರಿಯ ಮೇಲಿನ ಶೇ. 10 ರಷ್ಟು ಉಚಿತ ವಿದ್ಯುತ್ ಒದಗಿಸಲಾಗುತ್ತದೆ.

ನಿಯಮಗಳು:

ಜುಲೈ 1ರ ವರೆಗಿನ ವಿದ್ಯುತ್ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು.

ಆಗಸ್ಟ್ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ಜುಲೈ 1ರಿಂದ ಬಳಕೆಯಾಗುವ ವಿದ್ಯುತ್ ಗೆ ಈ ಯೋಜನೆ ಅನ್ವಯವಾಗುತ್ತದೆ.

ಉಚಿತ ವಿದ್ಯುತ್ ಲೆಕ್ಕಾಚಾರ ಹೀಗಿದೆ:

ಉದಾಹರಣೆಗೆ ಒಂದು ಮನೆಯವರು ಕಳೆದ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಖರ್ಚು ಮಾಡಿದ್ದೀರೋ ಅದರ ಆಧಾರದ ಮೇಲೆ ಉಚಿತ ವಿದ್ಯುತ್ ಯೋಜನೆ ಸಿಗಲಿದೆ. ಅಂದರೆ ನೀವು ಕಳೆದ 12 ತಿಂಗಳಲ್ಲಿ 70 ಯೂನಿಟ್ ಬಳಸಿದ್ದರೆ, ಈಗ 10% ಹೆಚ್ಚಿಗೆ ಸೇರಿ, 80 ಯೂನಿಟ್ ಬಳಸಬಹುದು. ಆಗ ನೀವು ಅದಕ್ಕೆ ವಿದ್ಯುತ್ ಬಿಲ್ ಕಟ್ಟುವ ಹಾಗಿಲ್ಲ. ಒಂದು ವೇಳೆ ಈಗ ಅಂದರೆ ಉಚಿತ ವಿದ್ಯುತ್ ಯೋಜನೆ ಜಾರಿಯಾದ ನಂತರ ನೀವು ಏಕಾಏಕಿ 70 ರಿಂದ 85 ಅಥವಾ 90 ಯೂನಿಟ್ ಬಳಸಿದರೆ ಉಚಿತ ಯೋಜನೆ ಅನ್ವಯವಾಗುವುದಿಲ್ಲ. ಉಚಿತ ಕೊಡುತ್ತಾರೆ ಎಂದು ದುರ್ಬಳಕೆ ಮಾಡುವುದನ್ನು ತಪ್ಪಿಸಲು ಈ ನಿಯಮ ಮಾಡಲಾಗಿದೆ. 

ಗ್ಯಾರಂಟಿ ನಂ.2 “ಅನ್ನಭಾಗ್ಯ” :

ಹಸಿವುಮುಕ್ತ ಕರ್ನಾಟಕ ಎಂಬ ಶಿರ್ಷಿಕೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರ ಕುಟುಂಬ ಸದಸ್ಯರಿಗೆ ಈ ಯೋಜನೆಯಡಿ ತಲಾ 10 ಕೆ.ಜಿ ಉಚಿತ ಆಹಾರಧಾನ್ಯ.

ಜೂನ್ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯಗಳ ಖರೀದಿ ಮಾಡಬೇಕಿರುವುದರಿಂದ ಜುಲೈ 1ರಿಂದ ಈ ಯೋಜನೆಯನ್ನು ಜಾರಿ ಅಗಲಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಕುರಿತು ಪ್ರಕಟಣೆ! ಯಾವೆಲ್ಲ ಬಿತ್ತನೆ ಬೀಜ ಲಭ್ಯ?

ಗ್ಯಾರಂಟಿ ನಂ.3 “ಗೃಹಲಕ್ಷ್ಮಿ”

ಕುಟುಂಬ ನಿರ್ವಹಣೆಗಾಗಿ ಆರ್ಥಿಕ ನೆರವು ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ

ರೂ. 2000 ನೇರ ವರ್ಗಾವಣೆ ಮಾಡಲು ಸಂಪುಟ ಅನುಮೋದನೆ ನೀಡಿದೆ.

ನಿಯಮಗಳು:

  • ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಿ, ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು.
  • ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮಾಹಿತಿ ಒದಗಿಸಬೇಕು.
  • ಜೂನ್ 15 ರಿಂದ ಜುಲೈ 15 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಜುಲೈ 15 ರಿಂದ ಆಗಸ್ಟ್ 15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆಗಸ್ಟ್ 15ರ ಸ್ವಾತಂತ್ರ್ಯ
  • ದಿನಾಚರಣೆಯ ದಿನ ಯೋಜನೆಗೆ ಚಾಲನೆ ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗ್ಯಾರಂಟಿ ನಂ.4  “ಶಕ್ತಿ ಯೋಜನೆ” :

ಸ್ತ್ರೀ ಸಬಲೀಕರಣದ ಮೂಲಕ ಸಮಸಮಾಜದತ್ತ ಹೆಜ್ಜೆ ಎನ್ನುವ ಉದ್ದೇಶದೊಂದಿಗೆ ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ.

  • ಜೂನ್ 11 ರಿಂದ ಯೋಜನೆಗೆ ಚಾಲನೆ.
  • ಶೇ. 94 ರಷ್ಟು ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗಿದೆ.
  • ಬಸ್‌ಗಳಲ್ಲಿ ಶೇ. 50 ರಷ್ಟು ಸೀಟುಗಳು ಪುರುಷರಿಗೆ ಮೀಸಲು ಇಡಲಾಗಿದೆ.

ಗ್ಯಾರಂಟಿ ನಂ.5 “ಯುವನಿಧಿ” 

ನಿರುದ್ಯೋಗಿ ಯುವಜನರ ಕನಸಿಗೆ ಆರ್ಥಿಕ ಬೆಂಬಲ  ನೀಡವ ದೆಸೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲಾ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಬವುದಾಗಿದೆ.

ನಿಯಮಗಳು:

ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆಯನ್ನು ಅರ್ಹ ಪಲಾನುಭವಿಗಳ ಖಾತೆಗೆ ವರ್ಗಾಹಿಸಲಾಗುತ್ತದೆ.

ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಸೌಲಭ್ಯ ಒದಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ನೀವು ಬೆಳೆದ ಬೆಳೆಗೆ ಮಾರುಕಟ್ಟೆ ಸಮಸ್ಯೆಯೇ? ಇಲ್ಲಿದೆ ಕೃಷಿ ಉತ್ಪನ್ನ ರಫ್ತುದಾರರು ವಿವರ.

0

ರೈತಾಪಿ ವರ್ಗದಲ್ಲಿ ತಾವು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಧಾರಣೆ ಸಿಗದೇ ಅನೇಕ ಭಾರಿ ನಷ್ಟಕ್ಕೆ ಒಳಗಾಗುತ್ತಾರೆ, ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಹವಾಮಾನ/ ವಾತಾವರಣ ವೈಪರಿತ್ಯ ಇಂಹತ ಕಠಿಣ ಪರಿಸ್ಥಿತಿಯಲ್ಲಿಯ ನಡುವೆಯು ರೈತರು ಕಷ್ಟಪಟ್ಟು ಬೆಳೆ ಬೆಳೆದರೆ ಉತ್ತಮ ಮಾರುಕಟ್ಟೆ ಸಿಗದೆ ಬೇಸರ ವ್ಯಕ್ತಪಡಿಸುತ್ತಾರೆ.


ಇಂದು ಈ ಅಂಕಣದಲ್ಲಿ ಒಂದಿಷ್ಟು ಕೃಷಿ ಉತ್ಪನ್ನಗಳ ರಫ್ತುದಾರರ ಮತ್ತು ಖರೀದಿ ಮಾಡುವವರ ವಿವರವನ್ನು ಹಂಚಿಕೊಳ್ಳಲಾಗಿದ್ದು, ಅವಶ್ಯಕವಿರುವ ರೈತರು ಕಚೇರಿ ಸಮಯದಲ್ಲಿ ಕರೆ ಮಾಡಿ ಸಧ್ಯದ ಮಾರುಕಟ್ಟೆ ಪರಿಸ್ಥಿತಿ ಮತ್ತು ಉತ್ತಮ ಧಾರಣೆಯಿರುವಂತಹ ಬೆಳೆಯ ಮಾಹಿತಿ ಪಡೆದು ಅದರ ಜೊತೆಗೆ ಖರೀದಿದಾರರಿಗೆ ಅವಶ್ಯಕವಿರುವ ಉತ್ಪನ್ನದ ಮಾಹಿತಿಯನ್ನು ತಿಳಿದು ಅಂತಹ ಬೆಳೆ ಬೆಳೆಯುವುದರ ಕುರಿತು ಗಮನಹರಿಸಬವುದು.


ರೈತರಲ್ಲಿ ತಾವು ಬೆಳೆದ ಬೆಳೆಯನ್ನು ತಾವೇ ರಫ್ತು ಮಾಡುವ ಯೋಜನೆಯಿದಲ್ಲಿ ಅಂಹತ ರೈತರು ಈ ಕೆಳಗೆ ತಿಳಿಸಿರುವ ಕೃಷಿ ಉತ್ಪನ್ನ ರಫ್ತಗೆ ತರಬೇತಿ ನೀಡುವ ಭಾರತ ಸರ್ಕಾರದ ಸಂಸ್ಥೆಗಳ ಕಚೇರಿಯನ್ನು ಭೇಟಿ ಮಾಡಬವುದು ಇಲ್ಲಿ ನಿಮಗೆ ಕೃಷಿ ಉತ್ಪನ್ನ ರಫ್ತುಮಾಡುವುದರ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬವುದು.

ಕೃಷಿ ಉತ್ಪನ್ನ ಖರೀದಿದಾರರು/ರಫ್ತುದಾರರು:


ಖರೀದಿದಾರರ ವಿವರ,ದೂರವಾಣಿ ಸಂಖ್ಯೆ, ರೈತರಿಂದ ನೇರವಾಗಿ ಖರೀದಿಸುವ ಕೃಷಿ ಉತ್ಪನ್ನ
10 JEENI Millet Health MIX
76249 31166
ಸಿರಿಧಾನ್ಯಗಳು (ರಾಗಿ, ನವಣೆ, ಸಜ್ಜೆ, ಜೋಳ ಇತ್ಯಾದಿ)


ವಿವೇಕ್ ನಾಯ್ಕ
94481 19061
ಮಿಡಿ ಸೌತೆಕಾಯಿ, ಪಪಾಯ, ಬೆಂಡೆಕಾಯಿ, ಹಾಗಲಕಾಯಿ, ಬೇಬಿ ಕಾರ್ನ್, ಸ್ವೀಟ್ ಕಾರ್ನ್, ಸೀಬೆ ಹಣ್ಣು (ಗುಲಾಬಿ ತಿರುಳು), ಪೈನಾಪಲ್, ಡ್ರಾಗನ್ ಫೂಟ್

ನವೀನ್ ರಾಯ್
96329 92999
ಸಾವಯವ ವಿಧಾನದಲ್ಲಿ ಬೆಳೆದ – ಧಾನ್ಯಗಳು, ಕಾಳುಗಳು, ಹಣ್ಣು ಮತ್ತು – ತರಕಾರಿಗಳು

ವಿಜಯ್ ಬಾಸ್ಕರ್ ರೆಡ್ಡಿ
98489 43518
ಗುಲಾಬಿ ಹೂವು, ಈರುಳ್ಳಿ

ನಾಗೇಂದ್ರ ಕುಮಾರ್
99806 85466
ಸಾವಯವ ವಿಧಾನದಲ್ಲಿ ಬೆಳೆದ – ಸ್ಥಳೀಯ ಭತ್ತದ ತಳಿಗಳು (ಉದಾ – ರಾಜಮುಡಿ), ಎಣ್ಣೆಕಾಳುಗಳು

ಡಾ. ಸ್ವರೂಪ್ (ಬಸನಿ ಅಗೋ ಇನೋವೆಶನ್ ಪ್ರೈ.ಲಿ)
91770 01188
ಸಾವಯವ ವಿಧಾನದಲ್ಲಿ ಬೆಳೆದ ಸಾಂಬಾರ್ ಬೆಳೆಗಳು

ಕಾಂತರಾಜ್ (ಮೈಸೂರ್ ಗ್ರೀನ್ಸ್ ಎಕ್ಸ್ ಪೋರ್ಟ್ ಪ್ರೈಲಿ.)
99450 82556
ಸಾವಯವ ವಿಧಾನದಲ್ಲಿ ಬೆಳೆದ ಹಣ್ಣು ಮತ್ತು ತರಕಾರಿಗಳು

ಬೆರಿಡೇಲ್ ಫುಡ್ಸ್ ಪ್ರೈಲಿ
99990 89182
ಸಾವಯವ ವಿಧಾನದಲ್ಲಿ ಬೆಳೆದ ಎಲ್ಲಾ ತರಕಾರಿಗಳು

ವಿನಯ್ ರಾಜ್ (ಅಕ್ಷಾತ್ ಅಗೋ ಎಕ್ಸ್ ಪೋರ್ಟ್ ಪ್ರೈಲಿ.)
72047 90065
ತರಕಾರಿಗಳು, ಕಾಳುಗಳು

ಡಾ. ಪ್ರಕಾಶ್ ಕಶ್ಯಪ್
98450 79390
ತುಳಸಿ, ದವಣ, ಲೆಮನ್ ಗ್ರಾಸ್, ರೋಸ್-ಮೆರಿ, ಸ್ಥಳೀಯ ಶುಂಠಿ, ಗಾಂಧಾರಿ ಮೆಣಸು ಇತ್ಯಾದಿ


ರೈತರಿಗೆ ಕೃಷಿ ಉತ್ಪನ್ನ ರಫ್ತಗೆ ತರಬೇತಿ ನೀಡುವ ಭಾರತ ಸರ್ಕಾರದ ಸಂಸ್ಥೆಗಳು:

1. Vinu Choudari
96201 39602
Fedaration Of Indian Export Organaizations (FIEO)
J.C Road, Banglore-560002
080-2221 2266, 2221 4854, 2221 4855

2. Dr. Nagaveni
94835 34444
Visvesvaraya Trade Promotion Center (VTPC)
Kasthurba Road, Ambedkar Veedhi, Banglore-560001
080-22534444

MRP of fertilizers: ಈ ವರ್ಷದ ರಸಗೊಬ್ಬರ ದರ ಪಟ್ಟಿ ಬಿಡುಗಡೆ! ಪ್ರಸ್ತುತ ಯೂರಿಯಾ, ಡಿಎಪಿ ಬೆಲೆ ಎಷ್ಟು?

0

ರಾಜ್ಯದಲ್ಲಿ ಇನ್ನೆನು ಕೆಲವೆ ದಿನಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಾರಂಭವಾಗಳಿದ್ದು, ರೈತರು ಮಾರುಕಟ್ಟೆಗೆ ಹೋಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿ ಚಟುವಟಿಗಳು ಆರಂಭವಾಗಲಿವೆ.

ಇದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಈ ವರ್ಷ ಪ್ರಸ್ತುತ ರಸಗೊಬ್ಬರಗಳ ದರ ಎಷ್ಟು ಇದೆ ಎಂದು ರೈತರು ತಿಳಿದುಕೊಳ್ಳುವುದು ಅತ್ಯಗತ್ಯ, ಸರಕಾರದಿಂದ ಈ ವರ್ಷದ ರಸಗೊಬ್ಬರ ದರ ಪಟ್ಟಿ ಬಿಡುಗಡೆ ಮಾಡಿದ್ದು ರಸಗೊಬ್ಬರ ದರದಲ್ಲಿ ಯಾವುದೇ ಏರಿಕೆ ಮಾಡಿಲ್ಲದಿರುವುದು ಸಂತಸದ ಸುದ್ದಿಯಾಗಿದೆ.

ಪ್ರಸ್ತುತ ಒಂದು ಚೀಲ ಡಿಎಪಿ ಬೆಲೆ ರೂ 1,350/- ಹಾಗೂಯೂರಿಯಾ ಚೀಲದ ಬೆಲೆ ರೂ 266/- ನಿಗದಿ ಮಾಡಲಾಗಿದೆ. ಹಿಂದಿನ ವರ್ಷದ ಬೆಲೆಯೇ ಈ ವರ್ಷ ಮುಂದುವರೆಸಲಾಗಿದ್ದು ಕೇಂದ್ರ ಸರಕಾರವು ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಿರುವ ಕಾರಣ ಈ ವರ್ಷದ ರಸಗೊಬ್ಬರದ ಬೆಳೆ ಸ್ಥಿರವಾಗಿದ್ದು ಬೆಲೆ ಏರಿಕೆ ಕಂಡಿಲ್ಲ.

2023-24ರಲ್ಲಿ ರಸಗೊಬ್ಬರಗಳ ಮೇಲೆ ರೂ 1.08 ಲಕ್ಷ ಕೋಟಿ ಮೊತ್ತದ ಸಬ್ಸಿಡಿಗೆ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಯೂರಿಯಾ ಗೊಬ್ಬರಕ್ಕೆ ರೂ 70,000 ಕೋಟಿಯನ್ನು ಡಿಎಪಿ ಮತ್ತು ಇತರೆ ಗೊಬ್ಬರಗಳಿಗೆ ರೂ 38,000 ಕೋಟಿ ಸಹಾಯಧನವನ್ನು ಮಂಜೂರು ಮಾಡಲಾಗಿದೆ.

2023-24ರ ರಸಗೊಬ್ಬರಗಳ ಕಂಪನಿವಾರು ದರಪಟ್ಟಿ ಹೀಗಿದೆ:

ಇಲ್ಲಿ ಕ್ಲಿಕ್ ಮಾಡಿ.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

0

ಕೇಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿನ ರೈತರು, ಉದ್ಯಮಿಗಳನ್ನು ಸಂಘಟಿತ ವಲಯಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಹಾಗೂ ಅವರ ಉದ್ದಿಮೆಗಳನ್ನು ಲಾಭದಾಯಕವನ್ನಾಗಿ ಪರಿವರ್ತಿಸಿಬೇಕೆನ್ನುವ ಮೂಲ ಉದ್ದೇಶದೊಂದಿಗೆ ಜಾನುವಾರು ಉತ್ಪನ್ನ (ಹಾಲು, ಮಾಂಸ, ಮೊಟ್ಟೆ, ಉಣ್ಣೆಗಳ ಉತ್ಪಾದನೆ ಹೆಚ್ಚಿಸುವುದು, ಅಲ್ಲದೇ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಮೌಲ್ಯವರ್ಧಿತ ಜಾನುವಾರುಗಳ ಉತ್ಪನ್ನಗಳನ್ನು ಒದಗಿಸುವುದು, 

ಈ ಮೂಲಕ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತು ರೈತರ ಆದಾಯ ದ್ವಿಗುಣಗೊಳಿಸುವ ಸದ್ದುದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಲು ಸಾಲ ಮತ್ತು ಸಹಾಯಧನ ಪಡೆಯಬವುದು:

ಈ ಕಾರ್ಯಕ್ರಮದಡಿ ಗಾಮೀಣ ಕೋಳಿ ಸಾಕಾಣಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯಬಹುದಾಗಿದೆ.

ಸಹಾಯಧನ ವಿವರ ಹೀಗಿದೆ:

1.  ಗ್ರಾಮೀಣ ಕೋಳಿ ಉದ್ದಿಮ ಅಭಿವೃದ್ಧಿ (1000 ದೇಶಿ ಮಾತೃಕೋಳಿ ಘಟಕ + ಹ್ಯಾಚರಿ ಘಟಕ+ಮರಿಗಳ ಸಾಕಾಣಿಕೆ ಘಟಕ) Rural Poultry Entrepreneurship Programme-ವೆಚ್ಚ ರೂ.3472,540/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ರೂ.25, ಲಕ್ಷ.

2. ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500+25) Entrepreneur in small ruminant sector (Sheep and goat farming) ಘಟಕ ವೆಚ್ಚ ರೂ. 87,30,000/- ಇದಕ್ಕೆ ಸಹಾಯಧನ ಶೇ.50 ರಷ್ಟು ಗರಿಷ್ಟ ರೂ.50 ಲಕ್ಷ

3. ಹಂದಿ ತಳಿ ಸಂವರ್ಧನಾ ಘಟಕ (100+10) Piggery entrepreneurship ಘಟಕ ವೆಚ್ಚ ರೂ. 50,29,400/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಗರಿಷ್ಟ ರೂ.30 ಲಕ್ಷ.

4. ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2000-2500 ಮೆ.ಟನ್‌ ಉತ್ಪಾದನೆ) Sllage making unit for entrepreneurs (Production capacity 2000-2500 MT Per Annum). 500,000/- ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ಗರಿಷ್ಠ-ರೂ.50 ಲಕ್ಷ.

ಕಡಿಮೆ ಪ್ರಮಾಣದಲ್ಲಿ ಈ ಮೇಲಿನ ಉದ್ದಿಮೆಯನ್ನು  ಪ್ರಾರಂಭಿಸಲು ಸಹ ಅವಕಾಶವಿರುತ್ತದೆ ಒಮ್ಮೆ ನಿಮ್ಮ ತಾಲ್ಲೂಕಿನ ಪಶುವೈದ್ಯಾಧಿಕಾರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ಪಡೆಯಬವುದು.

ಇದನ್ನೂ ಓದಿ: ಪ್ರತಿ ದಿನ ನಿಮ್ಮ ಸ್ಥಳದ ಮಳೆ ಮುನ್ಸೂಚನೆ ತಿಳಿಯಬೇಕೆ? ಈ ಆ್ಯಪ್ ಬಳಕೆ ಮಾಡಿ.

ಈ ಯೋಜನೆಯಡಿ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆಯಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳು:

1. ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ/ ಪಾನ್ ಕಾರ್ಡ್.

2. ಸ್ವಂತ ಜಮೀನಿನ ಪಹಣಿ ಅಥವಾ ಲೀಜ್ ಪಡೆದ ಜಮೀನಿನ ಪಹಣಿ,(RTC or Lease Land Agreement )

3. ತರಬೇತಿ ಪ್ರಮಾಣ ಪತ್ರ(Trainig Certificate)

4. ಯೋಜನಾ ವರದಿ (DPR).

5. ಜಿ.ಪಿ. ಎಸ್ ಪೋಟೋ (Site Jio tag Photo.)

6. ಆರು ತಿಂಗಳ ಬ್ಯಾಂಕ್‌ ವಹಿವಾಟು ವರದಿ(6 months Bank Statement. )

7. ಅನುಭವದ ಪ್ರಮಾಣ ಪತ್ರ(Experience Certificate. )

8. ರದ್ದುಗೊಳಿಸಿದ ಬ್ಯಾಂಕ್ ಚೆಕ್(Cancelled Chek leaf.)

9. ಬ್ಯಾಂಕಿನಲ್ಲಿ ನಿಮ್ಮ ಖಾತೆ ಇರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ಪತ್ರ(Bank Moudtae form (available in Bank) 

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ಜಾಲತಾಣ ಭೇಟಿ ಮಾಡಿ: https://nlm.udyamimitra.in/ ಮತ್ತು https://ahf.karnataka.gov.in/

ಸಹಾಯವಾಣಿ ಸಂಖ್ಯೆ: 8277100200