ರಾಜ್ಯ ಸರಕಾರದಿಂದ ಮಾರ್ಗಸೂಚಿಯನ್ವಯ ಮೊದಲ ಕಂತಿನ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ.
ಈ ಬಾರಿ ರಾಜ್ಯದಲ್ಲಿ ಜೂನ್ ರಿಂದ ಸೆಪ್ಟೆಂಬರ್ ತಿಂಗಳ ನಡುವೆ ಮುಂಗಾರಿನಲ್ಲಿ ಶೇ. 25 ರಷ್ಟು ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರ ಪರಿಸ್ಥಿತಿಗೆ ರೈತರಿಗೆ ಅರ್ಥಿಕವಾಗಿ ನೆರವಾಗಲು NDRF ಮಾರ್ಗಸೂಚಿ ಪ್ರಕಾರ ಕೇಂದ್ರದಿಂದ ಪರಿಹಾರದ ಹಣ ಬರದ ಕಾರಣ ರಾಜ್ಯ ಸರಕಾರದಿಂದ ಮೊದಲನೆ ಕಂತಿನಲ್ಲಿ ತಲಾ ರೂ 2,000 ವನ್ನು SDRF ಮಾರ್ಗಸೂಚಿಯನ್ವಯ ಒಟ್ಟು 105.00 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ.
ಈ ಮೊದಲನೆ ಕಂತಿನ ಹಣ ಯಾರಿಗೆಲ್ಲ ಸಿಗಲಿದೆ? ಈ ಹಣ ರೈತರ ಖಾತೆಗೆ ಯಾವಾಗ ತಲುಪಲಿದೆ? ಎರಡನೇ ಕಂತಿನ ಹಣದ ಮಾಹಿತಿ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
Gruhalakshmi new application: ಗ್ರಾಮ ಒನ್ ನಲ್ಲಿ ಹೊಸ ಗೃಹಲಕ್ಷ್ಮಿ ಅರ್ಜಿ ಮತ್ತು ತಿದ್ದುಪಡಿಗೆ ಅವಕಾಶ!
Bara parihara amount-ಮೊದಲನೇ ಕಂತಿನಲ್ಲಿ 105.00 ಕೋಟಿ ಬರ ಪರಿಹಾರ ಬಿಡುಗಡೆ:
ಪ್ರಸ್ತುತ ರಾಜ್ಯ ಸರಕಾರದಿಂದ ಜಿಲ್ಲಾ ಮಟ್ಟಕ್ಕೆ ದಿನಾಂಕ: 05-01-2024 ರಂದು ಮೊದಲ ಕಂತಿನ ರೂ 105.00 ಕೋಟಿ ಬರ ಪರಿಹಾರ ಬಿಡುಗಡೆಗೊಳಿಸಿದ್ದು ಬರ ಪೀಡಿತ ತಾಲ್ಲೂಕು ಎಂದು ಈ ಹಿಂದೆ ಘೋಷಣೆ ಮಾಡಿದ ತಾಲ್ಲೂಕುಗಳಲ್ಲಿ ಇರುವ ರೈತರಿಗೆ ಈ ಹಣ ಸಿಗಲಿದೆ.
Bara parihara- ರೂ 2,000 ರೈತರ ಖಾತೆಗೆ ಯಾವಾಗ ಸಿಗಲಿದೆ?
ನಿನ್ನೆ ಅಂದರೆ ದಿನಾಂಕ: 05-01-2024 ರಂದು ಮೊದಲ ಕಂತಿನ ಹಣ ಬಿಡುಗಡೆಗೆ ಅಧಿಕೃತ ಆದೇಶ ಹೊರಡಿಸಲಾಗಿದ್ದು Fruits ತಂತ್ರಾಂಶದಲ್ಲಿ ನೋಂದಾವಣೆ ಅಗಿರುವ ರೈತರ ಖಾತೆಗೆ ಇನ್ನು 4-5 ದಿನಗಳ ಒಳಗಾಗಿ ನೇರ ನಗದು ವರ್ಗಾವಣೆ(DBT) ಮೂಲಕ ಮೊದಲನೆ ಕಂತಿನ ರೂ 2,000 ರೈತರ ಖಾತೆಗೆ ಜಮಾ ಅಗಲಿದೆ.
ಇದನ್ನೂ ಓದಿ: life insurance-ಕಾರ್ಮಿಕ ಇಲಾಖೆಯಿಂದ ರೂ.2 ಲಕ್ಷ ಜೀವ ವಿಮೆ ಹಾಗೂ ಅಪಘಾತ ವಿಮೆ ಪಡೆಯಲು ಅರ್ಜಿ ಆಹ್ವಾನ!
Bele parihara-2023: ಯಾವೆಲ್ಲ ತಾಲ್ಲೂಕಿನ ರೈತರಿಗೆ ಬರ ಪರಿಹಾರ?
ರಾಜ್ಯ ಸರಕಾರದಿಂದ ದಿನಾಂಕ:13-9-2023ರಂದು 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು ಮತ್ತು ನಾಂಕ:12-10-2023ರಂದು 21 ತಾಲ್ಲೂಕುಗಳನ್ನು ದಿನಾಂಕ: 04-11-2023ರಂದು 7 ತಾಲ್ಲೂಕುಗಳನ್ನು ಒಟ್ಟು 223 ತಾಲ್ಲೂಕಿನ ರೈತರಿಗೆ ಬರ ಪರಿಹಾರದ ಅರ್ಥಿಕ ನೆರವು ಸಿಗಲಿದೆ.
223 ತಾಲ್ಲೂಕಿನ ಪಟ್ಟಿಯನ್ನು ಪಡೆಯಲು ಲಿಂಕ್: Download Now
ಇದನ್ನೂ ಓದಿ: Weather-ಅರಬ್ಬಿ ಸಮುದ್ರದಲ್ಲಿ ವಾಯುಭಾರ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ!
Crop loss amount- ಬರ ಪರಿಹಾರದ ಒಟ್ಟು ಮೊತ್ತ ಎಷ್ಟು?
ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿಯನುಸಾರ ಬರ ಪರಿಸ್ಥಿತಿಯಿಂದ ಶೇ.33% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಟ 02 ಹೆಕ್ಟೇರ್‌ಗೆ ಸೀಮಿತಗೊಳಿಸಿ ಈ ಕೆಳಕಂಡ ದರದಲ್ಲಿ ಇನ್‌ಪುಟ್ ಸಬ್ಸಿಡಿ ನಿಗಧಿಪಡಿಸಲಾಗಿದೆ.
ಬೆಳೆ ವಿಧ | ಪ್ರತಿ ಹೆಕ್ಟೇರ್ ಗೆ |
ಮಳೆಯಾಶ್ರಿತ ಬೆಳೆ | 8,500/- |
ನೀರಾವರಿ ಬೆಳೆ | 17,000/- |
ಬಹುವಾರ್ಷಿಕ ಬೆಳೆ | 22,500/- |
ಕೇಂದ್ರ ಸರ್ಕಾರದಿಂದ NDRF ರಡಿ ಈವರೆಗೂ ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ, ಬೆಳೆಹಾನಿ ಪರಿಹಾರದ ಮೊದಲನೇ ಅಥವಾ ಸದ್ಯಕ್ಕೆ SDRF/NDRF ಮಾರ್ಗಸೂಚಿಗಳ ಪ್ರಕಾರ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಟ ರೂ.2,000/- ರವರೆಗೆ ರೈತರಿಗೆ ಪಾವತಿಸಲು 2023-24 ನೇ ಸಾಲಿನ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ (SDRF)ರಡಿ ರೂ.105.00 ಕೋಟಿ ಬಿಡುಗಡೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ NDRF ಅನುದಾನ ಬಿಡುಗಡೆ ಆದ ನಂತರ SDRF ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೋಳಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Home Subsidy scheme-ವಸತಿ ಯೋಜನೆಯಡಿ 1 ಲಕ್ಷಕ್ಕೆ ಮನೆ ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!
ಮಳೆ ಕೊರತೆಯಿಂದ 48.17 ಲಕ್ಷ ಹೆಕ್ಟೇರ್ ಬೆಳೆ ಹಾನಿ:
ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವ ತಾಲ್ಲೂಕುಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ / ಸಿಬ್ಬಂದಿಯ ಜಂಟಿ ತಂಡಗಳು ಬೆಳೆ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಶೇ.33ರಷ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವರದಿಯನ್ನು ತಯಾರಿಸಿದ್ದಾರೆ.
ಅದರಂತೆ 46.11 ಲಕ್ಷ ಹೆಕ್ಟೇರ್ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಒಟ್ಟು 48.17 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಇದರ ಪೈಕಿ 40.72 ಲಕ್ಷ ಹೇರ್ ಮಳೆಯಾಶ್ರಿತ 7.39 ಲಕ್ಷ ಹೇಕ್ಟೇರ್, ನೀರಾವರಿ, ಹಾಗೂ 0.07 ಲಕ್ಷ ಹೇಕ್ಟೇರ್ ಬಹುವಾರ್ಷಿಕ ಬೆಳೆಹಾನಿಯಾಗಿದೆ ತಾಲ್ಲೂಕುವಾರು ಬೆಳೆಹಾನಿಗೆ ಇನ್‌ಪುಟ್ ಸಬ್ಸಿಡಿಗೆ NDRF ಅಡಿಯಲ್ಲಿ ರೂ.4663.12 ಕೋಟಿಗಳ ಆರ್ಥಿಕ ನೆರವನ್ನು ನೀಡುವಂತೆ ಕೋರಿ ರಾಜ್ಯ ಸರ್ಕಾರದಿಂದ ಒಟ್ಟಾರೆಯಾಗಿ ಕೇಂದ್ರೀಯ ಕೃಷಿ ಮಂತ್ರಾಲಯಕ್ಕೆ ಅಂತಿಮ ಮೆಮೋರಾಂಡಮ್ ಸಲ್ಲಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Bara parihara order copy-ಬರ ಪರಿಹಾರ ಆದೇಶ ಪ್ರತಿ: Download Now
ಇದನ್ನೂ ಓದಿ: DBT amount status-ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮಗೆ ಈ ತಿಂಗಳ ಅನ್ನಭಾಗ್ಯ ಹಣ ಎಷ್ಟು? ಬರುತ್ತದೆ ಎಂದು ಚೆಕ್ ಮಾಡಿ