Home Subsidy scheme-ವಸತಿ ಯೋಜನೆಯಡಿ 1 ಲಕ್ಷಕ್ಕೆ ಮನೆ ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

ರಾಜ್ಯ ಸರಕಾರದಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ(Rajiv Gandhi Housing Corporation) ಅಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್(ನಗರ)ವಸತಿ ಯೋಜನೆಯಡಿಯಲ್ಲಿ(Vasati yojane) 52,189 ಮನೆಗಳು ನಿರ್ಮಾಣಗೊಳ್ಳುತಿದ್ದು ಅರ್ಹ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದಾಗಿದೆ.

ಈ ಕುರಿತು ಸರಕಾರದ ವಾರ್ತಾ ಇಲಾಖೆಯ ಎಕ್ಸಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಒಟ್ಟು ಮನೆ ನಿರ್ಮಾಣಕ್ಕೆ 7.5 ಲಕ್ಷ ವೆಚ್ಚವಾಗಲಿದ್ದೆ ಕೇಂದ್ರ ಸರಕಾರವು 3.5 ಲಕ್ಷ ವೆಚ್ಚ ಭರಿಸಲಿದೆ ಮತ್ತು ರಾಜ್ಯ ಸರಕಾರ 3 ಲಕ್ಷ ಭರಿಸಲಿದ್ದು ಉಳಿಕೆ 1 ಲಕ್ಷ ಹಣವನ್ನು ಫಲಾನುಭವಿಗಳು ಪಾವತಿ ಮಾಡಬೇಕಾಗುತ್ತದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.

ವಸತಿ ಯೋಜನೆಯಡಿ ಮನೆಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: DBT amount status-ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ನಿಮಗೆ ಈ ತಿಂಗಳ ಅನ್ನಭಾಗ್ಯ ಹಣ ಎಷ್ಟು? ಬರುತ್ತದೆ ಎಂದು ಚೆಕ್ ಮಾಡಿ

Home Subsidy scheme-2024: ಈ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸಲು ಅರ್ಹತೆಗಳು:

(1) ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು (ವಿವಾಹಿತ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿ). ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರಿಕರಾಗಿದ್ದಲ್ಲಿ ಪುರುಷರು ಸಹ ಅರ್ಹರಾಗಿರುತ್ತಾರೆ.

(2) ಅರ್ಜಿದಾರರ ಕುಟುಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು ವಾರ್ಷಿಕ ಆದಾಯ ರೂ. 32000/- ಕ್ಕಿಂತ ಕಡಿಮೆ ಇರಬೇಕು.

(3) ಅರ್ಜಿದಾರರ ಕುಟುಂಬವು ವಸತಿರಹಿತರಾಗಿದ್ದು, ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು, ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಅರ್ಹರಾಗಿರುತ್ತಾರೆ.

(4) ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕು (ಪಾರಂಪರಿಕ ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಜಿಲ್ಲಾ ಸಮಿತಿಯಿಂದ ನೀಡಲಾದ ಹಕ್ಕುಪತ್ರ ಪಡೆದಿದ್ದಲ್ಲಿ ವಸತಿ ಸೌಕರ್ಯ ಪಡೆಯಲು ಪರಿಗಣಿಸಬಹುದಾಗಿದೆ.)

ಇದನ್ನೂ ಓದಿ: PMEGP Scheme: ಗರಿಷ್ಠ 50 ಲಕ್ಷಗಳವರೆಗೆ 250 ಬಗ್ಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಸಾಲಕ್ಕೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

(5) ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು.

(6) ಪ್ರಧಾನ ಮಂತ್ರಿ ಅವಾಸ್ ಯೋಜನೆ(ಗ್ರಾ) ಯಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದಿಂದ ನೀಡಲಾದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ 2011ರ ಪಟ್ಟಿಯಲ್ಲಿ ಹೆಸರು ಸೇರಿರಬೇಕು.

(7) ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು. ಈ ವರ್ಗದ ವಸತಿ ರಹಿತರಿಗೆ ಬೇಡಿಕೆ ಆಧಾರಿತವಾಗಿ ವಸತಿ ಕಲ್ಪಿಸಲಾಗುವುದು. (2017-18)

Vasati Yojane application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

Step-1: ಮೊದಲಿಗೆ ಈ Vasati Yojane application link ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು.

Step-2: ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಿ.

Step-3: ವಲಯ, ವಾರ್ಡ್ ಸಂಖ್ಯೆ ಹಾಗೂ ಪ್ರಸ್ತುತ ವಿಳಾಸದ ಜೊತೆಗೆ ಪಿನ್ ಸಂಖ್ಯೆಯನ್ನು ನಮೂದಿಸಿ ಮುಂದುವರಿಸಿ.

Step-4: ಆಧಾರ್ ಸಂಖ್ಯೆ, ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಮುಂದುವರೆಸುವುದು.

Step-5: ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಿದ ನಂತರ ಪಡಿತರ ಚೀಟಿಯಲ್ಲಿರುವಂತಹ ವ್ಯಕ್ತಿಗಳ ವಿವರಗಳು ಪ್ರದರ್ಶನಗೊಳ್ಳುತ್ತವೆ, ಆ ಸಂದರ್ಭದಲ್ಲಿ ಯಾವ ವ್ಯಕ್ತಿಯ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿದು ಅಂತಹ ಹೆಸರಿನ ಮುಂದೆ ಇರುವ ಚೆಕ್ ಬಾಕ್ಸ್ ಅನ್ನು ಆಯ್ಕೆಮಾಡಿ.

ಇದನ್ನೂ ಓದಿ: Revenue department- ಸರಕಾರದಿಂದ 11 ಇ , ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಮತ್ತು ಹದ್ದುಬಸ್ತು ಅರ್ಜಿಗೆ ಶುಲ್ಕ ಪಾವತಿ ದರ ಪಟ್ಟಿ ಪ್ರಕಟಿಸಲಾಗಿದೆ!

Step-6: ಅರ್ಜಿದಾರನ ಸ್ನೇ ವಿವರಗಳನ್ನು ನಮೂದಿಸಿ ಮುಂದುವರೆಸುವುದು.

Step-7: ಜಾತಿ ಮತ್ತು ಆದಾಯ ಪತ್ರದ ಆರ್ ಡಿ ಸಂಖ್ಯೆಯನ್ನು ನಮೂದಿಸಿ ಮುಂದುವರೆಯುವುದು (ಸೂಚನೆ: ಆದಾಯ ಪ್ರಮಾಣದ ಮಿತಿ ಮೂರು ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು).

Step-8: ಅರ್ಜಿದಾರನು ಯಾವುದೇ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸಿದ್ದಲ್ಲಿ ಪೂರಕ ಮಾಹಿತಿಯನ್ನು ನಮೂದಿಸುವುದು.

Step-9: ಅರ್ಜಿದಾರನು ಬೆಂಗಳೂರು ಜಿಲ್ಲೆಯಲ್ಲಿ ವಾಸಿಸಿರುವ ಅವಧಿಯನ್ನು ಆಯ್ಕೆಮಾಡಿ, ವಾಸಸ್ಥಳದ ಆರ್ ಡಿ ಸಂಖ್ಯೆಯನ್ನು ನಮೂದಿಸಿ ಮುಂದುವರೆಯುವುದು.

Step-10:  ಅರ್ಜಿದಾರನ ಬ್ಯಾಂಕ್ ಗೆ ಸಂಬಂಧಿಸಿದ ವಿವರವನ್ನು ನಮೂದಿಸಿ ಮುಂದುವರೆಯುವುದು.

Step-11: ಅರ್ಜಿದಾರನ ಉದ್ಯೋಗ ಸ್ಥಿತಿಯನ್ನು ಆಯ್ಕೆಮಾಡಿ ಸೇವ್ ಬಟನ್ ಅನ್ನು ಕ್ಲಿಕ್ ಮಾಡಿ.

Step-12:  ಸೇವ್ ಬಟನ್ ಅನ್ನು ಕ್ಲಿಕ್ ಮಾಡುವ ಮೊದಲು ದಯವಿಟ್ಟು ಮೇಲೆ ತಿಳಿಸಿದ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲಿಸಿ.

Step-13: ಅರ್ಜಿದಾರರು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುತ್ತದೆ.

Step-14: ಅರ್ಜಿದಾರರ ಅರ್ಜಿಯ ಸ್ಥಿತಿಯ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಸಂದೇಶವನ್ನು
ಅರ್ಜಿದಾರರ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು ಒ ಟಿ ಪಿ ಅನ್ನು ನಮೂದಿಸಿದ ನಂತರ ಪುಟವು ಚಲನ್ ಅಥವಾ ಆನ್ ಲೈನ್ ಪಾವತಿಗೆ ನಿರ್ದೇಶಿಸುತ್ತದೆ.

ಇದನ್ನೂ ಓದಿ: Agri startup scheme-ಕೃಷಿ ಇಲಾಖೆಯಿಂದ ಕೃಷಿ ನವೋದ್ಯಮ ಯೋಜನೆಯಡಿ ಅರ್ಜಿ ಆಹ್ವಾನ! ಶೇ 50% ಸಹಾಯಧನ 50 ಲಕ್ಷದವರೆಗೆ.

ಇನ್ನು ಹೆಚ್ಚಿನ ಮಾಹಿತಿಗಾಗಿ:

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವೆಬ್ಸೈಟ್: click here

ಈ ಯೋಜನೆಯ ಅಧಿಕೃತ ಮಾರ್ಗಸೂಚಿ: Donwload Now

ಅರ್ಜಿ ಸಲ್ಲಿಸಲು ಲಿಂಕ್: Apply Now

ಕಛೇರಿ ವಿಳಾಸ: ಕಾವೇರಿ ಭವನ, 9ನೇ ಮಹಡಿ, ಸಿ & ಎಫ್ ಬ್ಲಾಕ್, ಕೆ. ಜಿ . ರೋಡ್, ಬೆಂಗಳೂರು – 560009
ಫೋನ್ : 91-080-22106888, 91-080-23118888