Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!

Facebook
Twitter
Telegram
WhatsApp

ಕೃಷಿ ಇಲಾಖೆಯಿಂದ ಪ್ರತಿ ವರ್ಷ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ರೈತರ ತಾಕಿಗೆ ನೇರವಾಗಿ ಭೇಟಿ ಮಾಡಿ ಬೆಳೆ ಸಮೀಕ್ಷೆಯನ್ನು ಮಾಡಲಾಗುತ್ತದೆ ಈ ಸಮಯದಲ್ಲಿ ದಾಖಲಿಸುವ ಬೆಳೆ ವಿವರದ ಆಧಾರದ ಮೇಲೆ ರೈತರು ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.

ಪ್ರಸ್ತುತ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರದ ಹಣ ವರ್ಗಾವಣೆ ಮತ್ತು ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ , ಜೋಳ ಖರೀದಿ ಪ್ರಕ್ರಿಯೆಗಳು ಆರಂಭವಾಗಿದ್ದು ರೈತರು ಈ ಯೋಜನೆಯಡಿ ಪ್ರಯೋಜನ ಪಡೆಯಲು ತಾವು ಬೆಳೆದ ಬೆಳೆ ವಿವರವು ಸರಿಯಾಗಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾಗಿರುವುದು ಅತ್ಯಗತ್ಯ.

ಇದನ್ನೂ ಓದಿ: New ration card application date- ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನ!

Crop name information- ಬೆಳೆ ಸಮೀಕ್ಷೆಯ ಬೆಳೆ ವಿವರ ಸರಿಯಾಗಿದಿಯೇ ಎಂದು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಸರ್ವೆ ನಂಬರ್ ನ ಬೆಳೆ ಸಮೀಕ್ಷೆಯ ವಿವರ ಸರಿಯಾಗಿ ದಾಖಲಾಗಿದಿಯೇ ಎಂದು cropsurvey.karnataka.gov.in ವೆಬ್ಸೈಟ್ ಭೇಟಿ ಮಾಡಿ ಪರೀಶಿಲನೆ ಮಾಡಿಕೊಳ್ಳಬವುದು ಯಾವೆಲ್ಲ ವಿಧಾನಗಳನ್ನು ಅನುಸರಿಸಿ ಬೆಳೆ ವಿವರನ್ನು ಚೆಕ್ ಮಾಡಬವುದು ಎಂದು ಈ ಕೆಳಗೆ ವಿವರಿಸಲಾಗಿದೆ.

Step-1: ಮೊದಲಿಗೆ Crop survey details check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು.

ಇದನ್ನೂ ಓದಿ: MSP ragi rate-2023: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಈ ವರ್ಗದ ರೈತರಿಗೂ ಅವಕಾಶ! ಬೆಲೆ ಪ್ರತಿ ಕ್ವಿಂಟಾಲ್ ಗೆ 3846 ರೂ.

Step-2: ನಂತರ ಈ ಪುಟದಲ್ಲಿ “2023-24” ಎಂದು ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಋತು “ಮುಂಗಾರು” ಎಂದು ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಪೇಜ್ ನಲ್ಲಿ ಬಲಬದಿಯಲ್ಲಿ ಮೇಲೆ ಕಾಣುವ “View PR Uploaded Crop Info” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಹಾಕಿ “Get crop Survey details” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bara Parihara-2023: ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ! ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

Step-4: ಇಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ನ ಎಲ್ಲಾ ಹಿಸ್ಸಾ ತೋರಿಸುತ್ತದೆ ಇದರಲ್ಲಿ ಒಂದು ಹಿಸ್ಸಾ ಮೇಲೆ ಕ್ಲಿಕ್ ಮಾಡಿ ಕೆಳಗಡೆ ಸ್ಕ್ರೋಲ್ ಮಾಡಿದರೆ ಆ ಜಮೀನಿನ ಬೆಳೆ ಸಮೀಕ್ಷೆಯ ಬೆಳೆ ವಿವರ ತೋರಿಸುತ್ತದೆ. ಇಲ್ಲಿ ಬೆಳೆ ಹೆಸರು , ಒಟ್ಟು ವಿಸ್ತೀರ್ಣ ಕೊನೆಯಲ್ಲಿ ತಾಕಿನ ಪೋಟೋ ತೋರಿಸುತ್ತದೆ.

ಈ ಬೆಳೆ ವಿವರದ ಆಧಾರದ ಮೇಲೆಯೇ ಬೆಳೆ ವಿಮೆ, ಬೆಂಬಲ ಬೆಲೆ , ಬೆಳೆ ಪರಿಹಾರ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತದೆ.

Crop survey-ಇಲ್ಲಿ ಬೆಳೆ ವಿವರ ತಪ್ಪಾಗಿ ತೋರಿಸಿದರೆ ಏನು ಮಾಡಬೇಕು?

ರೈತರು ಈ ಮೇಲಿನ ವಿಧಾನವನ್ನು ಅನುಸರಿಸಿ ಬೆಳೆ ಸಮೀಕ್ಷೆ ವಿವರವನ್ನು ಚೆಕ್ ಮಾಡಿದಾಗ ಬೆಳೆ ವಿವರ ತಪ್ಪಾಗಿ ತೋರಿಸಿದರೆ ಕೊನೆಯ ದಿನಾಂಕದ ಒಳಗಾಗಿ ಬೆಳೆ ದರ್ಶಕ ಅಪ್ಲಿಕೇಶನ್ ಮೂಲಕ ಅಥವಾ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ನಿಮ್ಮ ಸಮೀಕ್ಷೆಯ ವಿವರವನ್ನು ಸರಿಪಡಿಸಿಕೊಳ್ಳಬವುದು.

ಬೆಳೆ ದರ್ಶಕ ಅಪ್ಲಿಕೇಶನ್ ಬಳಕೆಯನ್ನು ಹೇಗೆ ಮಾಡಬೇಕು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ: Bele darshaka 

ನಿಮ್ಮ ಮೊಬೈಲ್ ನಲ್ಲೇ ಬೆಳೆ ಸಮೀಕ್ಷೆ ಹೇಗೆ ಸ್ವಂತ ರೈತರೇ ಮಾಡಿಕೊಳ್ಳಬವುದು ಎಂದು ತಿಳಿಯಲು ಇಲ್ಲಿ ಕಿಕ್ ಮಾಡಿ: Crop Survey app 

ಇದನ್ನೂ ಓದಿ: Nigamada Yojane-ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

Facebook
Twitter
Telegram
WhatsApp
Picture of siddesh

siddesh

Leave a Comment

Top Stories

Car loan Subsidy-ಸರಕು ಅಥವಾ ಯೆಲ್ಲೋ ಬೋರ್ಡ್ ವಾಹನ ಖರೀದಿಸಲು 4 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ಮತ್ತು ಸರಕು ವಾಹನ ಖರೀದಿ ಮಾಡಿ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಅರ್ಥಿಕವಾಗಿ(Car loan Subsidy application) ನೆರವಾಗಲು ಸ್ವಾವಲಂಭಿ ಸಾರಥಿ ಯೋಜನೆಯಡಿ ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ

Ganga Kalyana aplication

Ganga Kalyana- ಕೊಳವೆ ಬಾವಿ ಕೊರೆಸಲು 4.25 ಲಕ್ಷ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ರೈತರು ತಮ್ಮ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ(Ganga Kalyana)ಕೊಳವೆ ಬಾವಿಯನ್ನು ಕೊರೆಸಲು 3.75 ಲಕ್ಷ ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸುವ ವಿಧಾನ ಯಾವುದು? ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?(Ganga