ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM-Vishwakarma yojana-2023)ಅಡಿಯಲ್ಲಿ ಸ್ವ-ಉದ್ಯೋಗ ನಡೆಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಮತ್ತು ಸಹಾಯಧನದಲ್ಲಿ ಉಪಕರಣಗಳನ್ನು ಪಡೆಯಲು ಅರ್ಜಿ ಆಹ್ವಾನ.
ಈಗಾಗಲೇ ಟೈಲರಿಂಗ್ ಸೇರಿದಂತೆ ವಿವಿಧ ಬಗ್ಗೆಯ 18 ಕ್ಕೂ ಹೆಚ್ಚಿನ ಸ್ವ-ಉದ್ಯೋಗ ಮಾಡುವವರು ಈ ಯೋಜನೆಯ ಪ್ರಯೋಜನ ಪಡೆಯಬವುದು.
ಈ ಯೋಜನೆಯಡಿ ಪ್ರಯೋಜನ ಪಡೆಯಲು ಆಸಕ್ತ ಅಭ್ಯರ್ಥಿಗಳು ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರೆಲ್ಲ ಅರ್ಜಿ ಸಲ್ಲಿಸಬವುದು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Gruhalakshmi Camp-ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಹಣ ಬರದವರು ತಪ್ಪದೇ ಈ ದಿನ ನಿಮ್ಮ ಗ್ರಾಮ ಪಂಚಾಯತ್ ಭೇಟಿ ಮಾಡಿ.
PM-Vishwakarma scheme-ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಸಾಲ ಮತ್ತು ಸಹಾಯಧನದಲ್ಲಿ ಉಪಕರಣ ಪಡೆಯಲು ಅವಕಾಶ:
ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮೊದಲ ಬಾರಿಗೆ ₹1 ಲಕ್ಷ ಸಾಲ ನೀಡಲಾಗುತ್ತದೆ ಬಡ್ಡಿ 5% ರಷ್ಟು ಇರಲಿದೆ. ಸಾಲ ಮರು ಪಾವತಿ ಅವಧಿ 18 ತಿಂಗಳು ಇರುತ್ತದೆ ಈ ಅವಧಿಯೊಳಗೆ ಸಾಲ ಹಿಂತಿರುಗಿಸಿದರೆ ಪುನಃ 2 ಲಕ್ಷ ಸಾಲ ನೀಡಲಾಗುತ್ತದೆ ಇದನ್ನು ಸರಿಯಾದ ಸಮಯದ ಒಳಗಾಗಿ ಹಿಂತಿರುಗಿಸಿದರೆ ತದನಂತರ ₹3 ಲಕ್ಷ ಸಾಲ ಪಡೆಯಬವುದು ಇದಕ್ಕೆ ಬ್ಯಾಂಕ್ ಯಾವುದೇ ಗ್ಯಾರಂಟಿ ನೀಡುವ ಅವಶ್ಯಕತೆ ಇರುವುದಿಲ್ಲ.
ನಿಮಗೆ ಆಸಕ್ತಿಯಿರುವ ಅಥವಾ ಈಗಾಗಲೇ ಈ ಕೆಳಗೆ ತಿಳಿಸಿರುವ ಸ್ವ-ಉದ್ಯೋಗದಲ್ಲಿ ತೊಡಗಿಕೊಂಡಿರುವವರು 5 ರಿಂದ 15 ದಿನಗಳ ದಿನಗಳ ತರಬೇತಿಯೊಂದಿಗೆ ಪ್ರತಿದಿನ ರೂ.500/- ಭತ್ಯೆ ಜೊತೆಗೆ ಸಹಾಯಧನದಲ್ಲಿ ರೂ 15,000 ಗಳ ಉಪಕರಣಗಳನ್ನು ಖರೀದಿಸಲು ಈ ಯೋಜನೆಯಡಿ ಅವಕಾಶವಿರುತ್ತದೆ.
ಇದನ್ನೂ ಓದಿ: 1st installment-ಮೊದಲ ಕಂತಿನ ರೂ 2,000 ಹಣ ಬರ ಪರಿಹಾರ ವರ್ಗಾವಣೆ ಪ್ರಾರಂಭ! ನಿಮಗೆ ಜಮಾ ಅಗಿದಿಯಾ? ಚೆಕ್ ಮಾಡಿ.
self employment loan scheme-ಯಾರೆಲ್ಲ ಅರ್ಜಿ ಸಲ್ಲಿಸಬವುದು?
1) ಬಡಿಗ ವೃತ್ತಿ ಮಾಡುವವರು
2) ದೋಣಿ ತಯಾರಿಸುವವರು
3) ಶಸ್ತ್ರ ತಯಾರಕರು
4) ಕಮ್ಮಾರ ವೃತ್ತಿ ಮಾಡುವವರು
5) ಕಲ್ಲುಕುಟಗ ವೃತ್ತಿ ಮಾಡುವವರು
6) ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು
7) ಗೊಂಬೆ ಮತ್ತು ಆಟಿಕೆ ತಯಾರಕರು (ಸಂಪ್ರದಾಯಿಕ)
8) ಕ್ಷೌರಿಕ ವೃತ್ತಿ ಮಾಡುವವರು
9) ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು
10) ಹೂಮಾಲೆ ತಯಾರಕರು
11) ಅಗಸರು (ದೋಬಿ)
12) ಆಭರಣ ತಯಾರಕರು
13) ಶಿಂಪಿಗ (ಬಟ್ಟೆ ಹೊಲೆಯುವರು)
14) ಕುಂಬಾರ ವೃತ್ತಿ ಮಾಡುವವರು
15) ಮೀನು ಬಲೆ ಹೆಣೆಯುವವರು
16) ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ)
17) ಚಮ್ಮಾರ ಪಾದರಕ್ಷೆ ತಯಾರಕರು
18) ಬೀಗ ತಯಾರಕರು
19) ಟೈಲರ್ ಬಟ್ಟೆ ಹೊಲಿಯುವ ದರ್ಜಿಗಳು
ಇದನ್ನೂ ಓದಿ: LPG cylinder Ekyc-ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ಡಿ,31 ರ ಒಳಗಾಗಿ ಇ-ಕೆವೈಸಿ ವೈರಲ್ ಸುದ್ದಿ ಕುರಿತು ಅಧಿಕಾರಿಗಳಿಂದ ಸ್ಪಷ್ಟನೆ!
PM Vishwakarma yojana application-ಎಲ್ಲಿ ಅರ್ಜಿ ಸಲ್ಲಿಸಬೇಕು:
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ್ ಒನ್ , ಕರ್ನಾಟಕ ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದು.
ಅಗತ್ಯ ದಾಖಲಾತಿಗಳು:
ಅರ್ಜಿದಾರರ ಪೋಟೋ.
ಆಧಾರ್ ಕಾರ್ಡ ಪ್ರತಿ.
ಬ್ಯಾಂಕ್ ಪಾಸ್ ಬುಕ್ ಪ್ರತಿ.
ರೇಷನ್ ಕಾರ್ಡ.
ಸ್ವ-ಉದ್ಯೋಗ ಪ್ರಮಾಣ ಪತ್ರ(ಗ್ರಾಮ ಪಂಚಾಯತಿಯಲ್ಲಿ ಪಡೆಯಬೇಕು)
ಇದನ್ನೂ ಓದಿ: Secondary agriculture-ಕೃಷಿ ಇಲಾಖೆಯಿಂದ ಶೇ 50 ಸಬ್ಸಿಡಿಯಲ್ಲಿ ನರ್ಸರಿ ಸೇರಿದಂತೆ ಹಲವು ಯೋಜನೆಗೆ ಅರ್ಜಿ ಆಹ್ವಾನ!
ಇನ್ನು ಹೆಚ್ಚಿನ ಮಾಹಿತಿಗಾಗಿ:
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM-Vishwakarma yojana) ವೆಬ್ಸೈಟ್: click here
ಸಹಾಯವಾಣಿ: 8904754707