Home Blog Page 76

ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸರ್ವೆ ನಂಬರ್ ಸಹಿತ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

0

ರೈತರು ನಿಮ್ಮ ಗ್ರಾಮದ ಸಂಪೂರ್ಣ ಮಾಹಿತಿಯುಳ್ಳ ನಕ್ಷೆಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಮೊಬೈಲನಲ್ಲೇ ಡೌನ್ಲೋಡ್ ಮಾಡಬವುದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವವರಿಸಲಾಗಿದೆ. ನೀವು ತಿಳಿಯಿರಿ ನಿಮ್ಮ ಅಪ್ತರಿಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಏಕೆಂದರೆ ಜಮೀನಿನ ಅಳತೆ ಮಾಡುವ ಸಂದರ್ಭದಲ್ಲಿ ಈ ನಕ್ಷೆ ರೈತರಿಗೆ ತುಂಬ ಸಹಕಾರಿಯಾಗಿದೆ.

ರೈತರು ತಮ್ಮ ಗ್ರಾಮದಲ್ಲಿ ತಮ್ಮ ಜಮೀನು ಯಾವ ದಿಕ್ಕಿನಲ್ಲಿ ಬರುತ್ತದೆ ಮತ್ತು ಅಕ್ಕ ಪಕ್ಕದ ಜಮೀನಿನ ಸರ್ವೆ ನಂಬರ್ ಯಾವುವು ಮತ್ತು ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಎಲ್ಲಿ ಬರುತ್ತದೆ ಹೀಗೆ ಅನೇಕ ಮಾಹಿತಿಯುಳ್ಳ ನಕ್ಷೆ ಇದಾಗಿದೆ.

ಗ್ರಾಮದ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

ರಾಜ್ಯ ಸರಕಾರದ ಮಾಹಿತಿ ಕಣಜ ವೆಬ್ಸೈಟ್ ನ ಈ https://mahitikanaja.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು  “ಸಲ್ಲಿಸು” ಮೇಲೆ ಕ್ಲಿಕ್ ಮಾಡಬೇಕು ಆಗ ಕೆಳಗೆ “ನಕ್ಷೆ” ಎನ್ನುವ ಆಯ್ಕೆ ಗೋಚರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಗ್ರಾಮದ ನಕ್ಷೆಯು ಡೌನ್ಲೋಡ್ ಆಗುತ್ತದೆ.

ಅನೇಕ ಮಾಹಿತಿಯುಳ್ಳ ನಕ್ಷೆ ಇದಾಗಿದೆ:

ಈ ನಕ್ಷೆಯು ಹಲವು ಮಾಹಿತಿಯನ್ನು ಒಂದಿದ್ದು ರೈತರಿಗೆ ತಮ್ಮ ಜಮೀನು ಮತ್ತು ಅಕ್ಕ-ಪಕ್ಕದ ಜಮೀನಿನ ಕುರಿತು ಹಾಗೂ ಗ್ರಾಮದ ಭೌಗೋಳಿಕ ಮಾಹಿತಿಯನ್ನು ತಿಳಿಯಬವುದಾಗಿದೆ.

ಗ್ರಾಮದ ಗಡಿ ರೇಖೆ, ಜಮೀನಿನ ಸರ್ವೆ ನಂಬರ್ ಗಡಿ, ಕಾಲು ದಾರಿ, ಬಂಡಿ ದಾರಿ, ಹಳ್ಳ, ಸರ್ವೆ ನಂಬರುಗಳು,  ಬೆಟ್ಟ, ಬಾಂದುಗಳು, ಬೇಲಿ, ಬಾವಿ, ಮೆಟ್ಟಿಲು ಬಾವಿ, ದೇವಸ್ಥಾನ, ದೊಡ್ಡ ಮರಗಳು, ತೆಂಗಿನ ಮರಗಳು ಈ ಎಲ್ಲಾ ಮಾಹಿತಿಯನ್ನು ವಿವಿಧ ಬಣ್ಣ ಮತ್ತು ಆಕಾರದಿಂದ ಗುರುತಿಸುವ ನಕ್ಷೆ ಇದಾಗಿದೆ.

ಇದನ್ನೂ ಓದಿ: ಪಿ.ಎಮ್-ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಲು 30 ಜೂನ್ ಕೊನೆಯ ದಿನ.

ಡೌನ್ಲೋಡ್ ಮಾಡಿದ ಗ್ರಾಮದ ನಕ್ಷೆಯ ವಿವಿಧ ಸೂಚಕಗಳು:

ಗ್ರಾಮದ ಗಡಿ ರೇಖೆ: ಗುಲಾಬಿ ಬಣ್ಣ ರೇಖೆಯಿಂದ ಗುರುತಿಸಲಾಗಿದೆ.
ಜಮೀನಿನ ಸರ್ವೆ ನಂಬರ್ ಗಡಿ: ಕಪ್ಪು ಬಣ್ಣದ ರೇಖೆಯಿಂದ ಗುರುತಿಸಲಾಗಿದೆ.
ಕಾಲು ದಾರಿ: ಹಳದಿ ಬಣ್ಣದ ಚುಕ್ಕೆ ಚುಕ್ಕೆ ಗೆರೆಗಳಿಂದ ಸೂಚಿಸಲಾಗಿದೆ.
ಬಂಡಿದಾರಿ: ಗುಲಾಬಿ ಬಣ್ಣದ ಚುಕ್ಕೆ ಚುಕ್ಕೆ ಗೆರೆಗಳಿಂದ ಸೂಚಿಸಲಾಗಿದೆ.
ಸರ್ವೆ ನಂಬರುಗಳು: ಕಪ್ಪು ಬಣ್ಣದ ಕನ್ನಡ ಅಂಕಿಗಳಿಂದ ನಮೂದಿಸಲಾಗಿದೆ.
ಬೆಟ್ಟ : ವೃತ್ತಾಕಾರದ ಹಸಿರು ಬಣ್ಣ.
ಬಾವಿ: ಗುಲಾಬಿ  ಬಣ್ಣದ ವೃತ್ತಾಕಾರ.
ದೇವಸ್ಥಾನ: ಹಳದಿ ಬಣ್ಣದ ಮನೆ ಆಕಾರ.

ಬೆಳೆ ವಿಮೆ ಪರಿಹಾರವನ್ನು ಹೇಗೆ ಪಡೆಯುವುದು? ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯುವ ವಿಧಾನ.

ನಮ್ಮ ರಾಜ್ಯದಲ್ಲಿ ಕೃಷಿ ಬೆಳೆಗಳಿಗೆ ವಿಮೆ ಸೌಲಭ್ಯವನ್ನು ಒದಗಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 2023-24 ರ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ವಿಮೆ ಒದಗಿಸಲಾಗುತ್ತಿದೆ. 

ರೈತರು  ಯಾವೆಲ್ಲ ಸಮಯದಲ್ಲಿ ಈ ಯೋಜನೆಯಡಿ ಬೆಳೆ ವಿಮೆ ಪರಿಹಾರವನ್ನು ಪಡೆಯಬವುದು ಮತ್ತು ಅನುಸರಿಸಬೇಕಾದ ಕ್ರಮಗಳೇನು ಇತ್ಯಾದಿ ಪ್ರಮುಖ ಮಾಃಇತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲು ರಾಜ್ಯದ ಪ್ರತಿ ಜಿಲ್ಲೆಗೂ ವಿಮಾ ಸಂಸ್ಥೆ ನಿಗದಿಪಡಿಸಲಾಗಿರುತ್ತದೆ. ಸರಕಾರಿ ಮತು ಖಾಸಗಿ ವಿಮಾ ಕಂಪನಿಗಳ ಸಹಯೋಗದಲ್ಲಿ ರೈತರ ಬೆಳೆಗೆ ವಿಮೆ ಒದಗಿಸಲಾಗುತ್ತದೆ.

ಬೆಳೆ ವಿಮೆ ಕುರಿತು ಸರಕಾರ ಹೊರಡಿಸಿರುವ ಪ್ರಕಟಣೆ ಪ್ರಮುಖ ಅಂಶಗಳು:

1. ಸ್ಥಳ, ನಿರ್ಧಿಷ್ಟ, ಪ್ರಕೃತಿ ವಿಕೋಪಗಳಾದ (Localized calamity), ಆಲಿಕಲ್ಲು ಮಳೆ (Hailstorm), ಭೂ ಕುಸಿತ (Land slide), ಬೆಳೆ ಮುಳುಗಡೆ (Inundation), ಮೇಘ ಸ್ಫೋಟ (Cloud Burst), ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಗಡ (Natural fire due to lightning) ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಈ ಯೋಜನೆಯಡಿ ಅವಕಾಶ ನೀಡಲಾಗಿದೆ.

2. ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ.

3. ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಅಥವಾ ಕೃಷಿ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.

4. 2023-24 ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇಕಡಾ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ (Prevented sowing / Planting Risk)ವಿಮಾ ಮೊತ್ತದ ಗರಿಷ್ಟ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸಬಹುದಾಗಿದೆ.

5. 2023-24 ರ ಮುಂಗಾರು ಹಂಗಾಮಿನಲ್ಲಿ ಇಂಡೆನ್ಸಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ. 90 ಹಾಗೂ ಮಳೆಆಶ್ರಿತ ಬೆಳೆಗಳಿಗೆ ಶೇ. 80 ಎಂದು ನಿಗಧಿಪಡಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣದ (Scale of Finance) ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸರ್ವೆ ನಂಬರ್ ಸಹಿತ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

6. ತಾಲೂಕುವಾರು ಮುಖ್ಯ ಬೆಳೆಗಳ ಹಾಗೂ ಇತರೆ ಬೆಳೆಗಳ ಪಟ್ಟಿಯನ್ನು ಅನುಭಂದ-1 ರಲ್ಲಿ ನೀಡಲಾಗಿದೆ. ಪ್ರಸ್ತುತ ಸಾಲು ಹಾಗೂ ಹಂಗಾಮಿನ ಬೆಳೆಗಳಿಗೆ ನಿಗದಿ ಪಡಿಸಲಾಗಿರುವ ಇಂಡೆನ್ಸಿಟಿ ಮಟ್ಟ, ವಿಮಾ ಮೊತ್ತ ಮತ್ತು ಶೇಕಡಾವಾರು ಗರಿಷ್ಠ ರೈತರ ಪಾಲಿನ ವಿವರಗಳನ್ನು ಬೆಳೆವಾರು ನಿಗದಿಪಡಿಸಿರುವ ನೊಂದಣಿಗೆ ಕೊನೆಯ ದಿನಾಂಕ ಅನುಭಂದ-2 ರಲ್ಲಿ ನೀಡಲಾಗಿದೆ.

7. ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ/ನೆರೆ /ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ (Prolonged Dry Spell) ತೀವ್ರ ಬರಗಾಲ ಮುಂತಾದವುಗಳಿಂದ ಯಾವುದೇ ಅಧಿಸೂಚಿತ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು (On Account Payment due to mid season Adversity), ನಿರೀಕ್ಷಿತ ಇಳುವರಿಯು ಪ್ರಾರಂಬಿಕ ಇಳುವರಿಯ ಶೇಕಡಾ 50 ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25 ರಷ್ಟು ಹಣವನ್ನು ಮುಂಚಿತವಾಗಿ ವಿಮೆ ಸಂಸ್ಥೆಗಳು ನೀಡುವದು, ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿ ಬಂದ ನಂತರ ಅಂತಿಮ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡಬಹುದಾಗಿದೆ.

8. Revamped PMFBY ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು, ತದನಂತರ ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚಿ ಪಡದೇ ಇದ್ದಲ್ಲಿ . ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡುವುದು,

9. ಪ್ರಸ್ತುತ ಸಾಲಿನಲ್ಲಿ ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಿದ ಬೆಳೆಗಳಿಗೆ ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ/ ಕಂದಾಯ ರಶೀದಿ/ ಖಾತೆ ಪುಸ್ತಕ / ಬ್ಯಾಂಕ ಪಾಸ್‌ ಪುಸ್ತಕ ಮತ್ತು ಆಧಾರ ಕಾರ್ಡ ನೀಡತಕ್ಕದ್ದು.

10. ಈ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯದ ರೈತರು ಅಂದಾಜು / ಉಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಪಾಲ್ಗೊಳ್ಳಬಹುದು. ಬೆಳೆ ವಿಮೆಗೆ ನೊಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ ಅವಧಿಯೊಳಗೆ (ಅಂದರೆ.ಜಿಲ್ಲಾವಾರು ಬೆಳೆಯವಾರು ನೋಂದಣಿ ಕೊನೆಯ ದಿನಾಂಕಕ್ಕೆ 2 ದಿನಗಳ ಮುಂಚಿತವಾಗಿ) ನೋಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಡೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು, ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಅಥವಾ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರು ಪಾವತಿಸುವುದು.

ಇದನ್ನೂ ಓದಿ: 2023-24 ನೇ ಸಾಲಿನ ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ! ಯಾವ ಬೆಳೆಗೆ ಎಷ್ಟು ಮೊತ್ತ ಪಾವತಿಸಬೇಕು?

11. ಈ ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ (Post Harvest Losses) ಕಟಾವು ಮಾಡಿದ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಪಡಿಸಲಾಗಿದೆ. ಇಂತಹ ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.

12. ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಿ ಇತ್ಯರ್ಥಪಡಿಸಕತಕ್ಕದ್ದು, ಇತರೆ ಇಳುವರಿ ಅಂದಾಜು ಮಾಡುವಂತಹ ವಿಧಾನಗಳಾದ ಆಣೆವಾರಿ ಅಥವಾ ರಾಜ್ಯ ಸರ್ಕಾರವು ಅಥವಾ ಯಾವುದೇ ಇಲಾಖೆ ಅಥವಾ ಸಂಸ್ಥೆ, ಕ್ಷಾಮ, ಬರ, ಪ್ರವಾಹ ಎಂದು ಘೋಷಿಸಿ ಇಳುವರಿ ನಷ್ಟವನ್ನು ಅಂದಾಜು ಮಾಡುವ ಮಾಹಿತಿಯನ್ನು ಈ ಯೋಜನೆಯಡಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಲು ಪರಿಗಣಿಸುವದಿಲ್ಲ. Revamped PMFBY ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಎರಡು ಹಂತದ ಇಳುವರಿ ಅಂದಾಜು ಮಾಡುವ ವಿಧಾನವನ್ನು ಕೇಂದ್ರ ಸರ್ಕಾರವು ನೀಡಿದಲ್ಲಿ ಅಂದರೆ ಕ್ರಮಕೈಗೊಳ್ಳಲಾಗುವುದು.

ಪ್ರಮುಖ ಸೂಚನೆ:

ರೈತರು ತಾವು ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ನಂತರ ತಪ್ಪದೇ ಸ್ವೀಕೃತಿ/ಹಣ ಪಾವತಿ ರಶೀದಿಯನ್ನು ಪಡೆದು ಬೆಳೆ ಕಟಾವು ಮುಗಿಯುವವರೆಗೂ ಅದನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಏಕೆಂದರೆ ವೈಯಕ್ತಿಕವಾಗಿ ಬೆಳೆ ಹಾನಿಯಾದಾಗ ವಿಮಾ ಸಂಸ್ಥೆಯವರಿಗೆ 72 ಗಂಟೆಯ ಒಳಗೆ ತಿಳಿಸಿ ಸ್ಥಳ ಪರೀಶಿಲನೆ ಮಾಡಿಸಿ ನಂತರ ಬೆಳೆ ವಿಮೆ ಪಡೆಯಲು ಅರ್ಜಿ ಸಲ್ಲಿಸಲು ಈ ರಶೀದಿ/ಸ್ವೀಕೃತಿ ಅತ್ಯಗತ್ಯವಾಗಿ ಸಲ್ಲಿಸಬೇಕಾಗುತ್ತದೆ ಆದ ಕಾರಣ.

ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯುವ ವಿಧಾನ:

ರೈತರು ತಮ್ಮ ಬೆಳೆಗೆ ವಿಮೆ ಮಾಡಿಸಿದ ನಂತರ ತಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಲು ಈ https://www.samrakshane.karnataka.gov.in/ ಲಿಂಕ್ ಮೇಲೆ ಒತ್ತಿ ರಾಜ್ಯ ಸರಕಾರ ಸಂರಕ್ಷಣೆ ಜಾಲಾತಾಣಕ್ಕೆ ಭೇಟಿ ಮಾಡಿ ನಂತರ ಅರ್ಜಿದಾರರ ಅರ್ಜಿ ಸಂಖ್ಯೆ/ಮೊಬೈಲ್ ಸಂಖ್ಯೆ/ಆಧಾರ್ ಸಂಖ್ಯೆಯನ್ನು ನಮೂದಿಸಿಲ್ಲಿ ಕಾಣುವ ಕ್ಯಾಪ್ಚರ್ ಹಾಕಿ “Search” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿ ಇದೆ ಎಂದು ಗೋಚರಿಸುತ್ತದೆ.

2023-24 ನೇ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ವಿಮಾ ಮೊತ್ತದ ವಿವರ:

ಪ್ರಮುಖ ಸುದ್ದಿ: ಗೃಹ ಜ್ಯೋತಿ ಮಾರ್ಗಸೂಚಿ ಸಡಿಲಿಕೆ! ಕುಟುಂಬದ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ.

0


ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ- ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ರಮ ಈ ಹಿಂದಿನ ಮಾರ್ಗಸೂಚಿಯಲ್ಲಿ ಮನೆಯ ಮಾಲೀಕ ಅಥವಾ ಬಾಡಿಗೆದಾರನ ಹೆಸರಿನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು, ಆದರೆ ಈಗ ಕುಟುಂಬದ ಸದಸ್ಯರ ಹೆಸರಿನಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಹಿಂದೆ ಅನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ನಿವಾಸಿ ವಿಧ ಆಯ್ಕೆಯಲ್ಲಿ “ಮಾಲೀಕ” ಮತ್ತು “ಬಾಡಿಗೆದಾರ‍” ಎಂದು ಎರಡು ಆಯ್ಕೆಗಳು ಮಾತ್ರ ಗೋಚರಿಸುತ್ತಿತ್ತು, ಅದರೆ ಈಗ “ಕುಟುಂಬ ಸದಸ್ಯ” ಎಂಬ ಹೊಸ ಆಯ್ಕೆಯನ್ನು ಸೇರ್ಪಡೆ ಮಾಡಲಾಗಿದ್ದು , ಕರೆಂಟ್ ಬಿಲ್/ವಿದ್ಯುತಿ ಬಿಲ್ ತಾತ/ಅಜ್ಜಿ/ತಂದೆ/ತಾಯಿಯವರ ಹೆಸರಿನಲ್ಲಿ ಬರುತ್ತಿದ್ದು ಅವರು ಇಲ್ಲದಿದ್ದಲ್ಲಿ ಮನೆಯಲ್ಲಿ ವಾಸವಿರುವ ಕುಟುಂಬದ ಸದಸ್ಯರು ತಮ್ಮ ಆಧಾರ್ ಕಾರ್ಡ್ ವಿವರ ಹಾಕಿ ಅರ್ಜಿ ಸಲ್ಲಿಸಬವುದು.

ಸದ್ಯ ಅನೇಕ ಜನರ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ ಏಕೆಂದರೆ ಅರ್ಜಿ ಸಲ್ಲಿಸಲು ಅರ್ಹರಿರುವ ಬಹು ಪಾಲು ಜನರ ಹೆಸರಿಗೆ ವಿದ್ಯುತ್ ಬಿಲ್ ಬರುತ್ತಿರಲಿಲ್ಲ ವಿದ್ಯುತ್ ಬಿಲ್ ನಲ್ಲಿ ಹೆಸರು ಬದಲಾವಣೆಗೆ ಕಚೇರಿ ಅಲೆದಾಡುವ ಪರಿಸ್ಥಿತಿ ತಪ್ಪಿದಂತಾಗಿದೆ.

ಸೈಬರ್ ಕಳ್ಳರ ಎಚ್ಚರಿಕೆ :

ರಾಜ್ಯ ಸರಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಾರ್ವಜನಿಕರ ದಾಖಲಾತಿಗಳನ್ನು ಕದಿಯಲು  ಸೈಬರ್ ಕಳ್ಳರು ಹಲವು ನಕಲಿ ಲಿಂಕ್ ಮತ್ತು ಅಪ್ಲಿಕೇಶನ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಗ್ರಾಹಕರು ಅರ್ಜಿಸಲ್ಲಿಸುವಾಗ ಅಧಿಕೃತ ಇ-ಗವರ್ನೆನ್ಸ್ ಇಲಾಖೆಯ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.

ಅರ್ಜಿ ಸಲ್ಲಿಸಲು ಅಧಿಕೃತ ಸೇವಾ ಸಿಂಧು ಪೋರ್ಟಲ್ ಲಿಂಕ್: https://sevasindhugs.karnataka.gov.in/

ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಹಾಕಬವುದು:

ಗ್ರಾಹಕರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು. 
ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ತಿಳಿಯಲು ಈ https://krushikamitra.com/how-to-apply-gruha-jyothi ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: 2023-24ನೇ ಸಾಲಿನ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಬಿಡುಗಡೆ! ರೈತರು ತಪ್ಪದೇ ಈ ಕೆಲಸ ಮಾಡಿ.

ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗು ಸಸಿ ವಿವರಣೆ ಮತ್ತು ಸಹಾಯಧನಕ್ಕೆ ಅರ್ಜಿಅಹ್ವಾನ.

0

ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿಯ ಡಿ.ಎಸ್.ಪಿ ಫಾರ್ಮ್, ಮಂಡ್ಯದಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಒಳ್ಳೆಯ ಗುಣಮಟ್ಟದ  ತೆಂಗಿನ ಸಸಿ ವಿವರಣೆ ಮತ್ತು ಸಹಾಯಧನಕ್ಕೆ ರೈತರಿಂದ ಅರ್ಜಿಅಹ್ವಾನ ಮಾಡಲಾಗಿದೆ.

ರೈತರು ನೇರವಾಗಿ ಇಲ್ಲಿಗೆ ಭೇಟಿ ಮಾಡಿ ತೆಂಗಿನ ಸಸಿ ಖರೀದಿಸಿ ಸಹಾಯಧನ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ನಮ್ಮ ರಾಜ್ಯದ ಡಿ.ಎಸ್.ಪಿ ಫಾರ್ಮ್, ಮಂಡ್ಯ ಜಿಲ್ಲೆಯ ಲೋಕಸರ ಗ್ರಾಮದಲ್ಲಿ ಅತಿ ಹೆಚ್ಚು ಇಳುವರಿ ನೀಡುವ ಒಳ್ಳೆಯ ಗುಣಮಟ್ಟದ ಬೀಜಕಾಯಿಗಳಿಂದ ಉತ್ಪಾದನೆ ಮಾಡಿದ ನಾಟಿ ತಳಿಯ ತೆಂಗಿನ ಸಸಿಗಳನ್ನು ಮಾರಾಟ ಮಾಡಲಾಗುತ್ತದೆ. 

ಆಸಕ್ತ ರೈತ ಬಾಂಧವರು ಲೋಕಸರದಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿಯ ಕೆಲಸ ದಿನಗಳಲ್ಲಿ ಕಛೇರಿ ಸಮಯ ಬೆಳಿಗ್ಗೆ 8.00 ರಿಂದ ಸಂಜೆ 3.00ರ ಒಳಗೆ ಭೇಟಿ ನೀಡಿ ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ಕೊಂಡುಕೊಳ್ಳಬಹುದು. 

ಒಂದು ನಾಟಿ ತೆಂಗಿನ ಸಸಿಯ ಬೆಲೆ ರೂ. 80/- ರೈತ ಬಾಂಧವರು ಗಮನಿಸಬೇಕಾದ ವಿಷಯವೆಂದರೆ ನಮ್ಮಲ್ಲಿ ತೆಂಗಿನ ಸಸಿಯನ್ನು ಕೊಂಡುಕೊಳ್ಳುವವರಿಗೆ ಅರ್ಧದಷ್ಟು ಹಣವನ್ನು ನೀವು ಮರಳಿ ಸಹಾಯಧನವಾಗಿ ಪಡೆಯಬಹುದು. 

ತೆಂಗಿನ ಸಸಿಗಳನ್ನು ಕೊಂಡುಕೊಳ್ಳುವಾಗ ಅದರ ಜೊತೆಯಲ್ಲಿ ಸಹಾಯಧನದ ಅರ್ಜಿಯನ್ನು ಕೂಡ ನೀಡಲಾಗುತ್ತದೆ. ತೆಂಗಿನ ಸಸಿಗಳನ್ನು ನೆಟ್ಟನಂತರ ರೈತರು ಅರ್ಜಿಯೊಂದಿಗೆ ನಾವು ಕೊಟ್ಟ ರಶೀದಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ: 08232-298015/ 9438803651/ 9945740889 ಗಳಿ ಸಂಪರ್ಕಿಸಿ ಎಂದು ಉಪ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಪ್ರಮುಖ ಸುದ್ದಿ: ಗೃಹ ಜ್ಯೋತಿ ಮಾರ್ಗಸೂಚಿ ಸಡಿಲಿಕೆ! ಕುಟುಂಬದ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ.


ಸಹಾಯಧನ ಅರ್ಜಿಗಳನ್ನು ಡೌನ್ಲೋಡ್ ಮಾಡುವ ಲಿಂಕ್ ವಿವರ:

ಸಹಾಯಧನ ಅರ್ಜಿ ಒಂದನೇ ವರ್ಷಕ್ಕೆ- https://coconutboard.gov.in/docs/AEPaplK1.pdf

ಸಹಾಯಧನ ಅರ್ಜಿ ಎರಡನೇ ವರ್ಷಕ್ಕೆ- https://coconutboard.gov.in/docs/AEPaplK2.pdf

ತೆಂಗು ಬೆಳೆಯ ಬೇಸಾಯ ಕ್ರಮಗಳ ಸಂಪೂರ್ಣ ಮಾಹಿತಿಯ ಕೈಪಿಡಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇನ್ನೂ ಹೆಚ್ಚಿನ ಮಾಹಿತಿಗಾಗಿ:

ತೆಂಗಿನ ಬೆಳೆ ಪೂರಕ ಎಲ್ಲಾ ಬಗ್ಗೆಯ ಉದ್ದಿಮೆ ಪ್ರಾರಂಬಿಸಲು ತೆಂಗು ಅಭಿವೃದ್ಧಿ ಮಂಡಳಿಯಿಂದ ಅರ್ಥಿಕವಾಗಿ ಮತ್ತು ತಾಂತ್ರಿಕ ಮಾಹಿತಿಯನ್ನು ಆಸಕ್ತರು ಪಡೆದುಕೊಳ್ಳಬವುದು ಹೆಚ್ಚಿನ ಮಾಹಿತಿ ಪಡೆಯಲು ತೆಂಗು ಅಭಿವೃದ್ಧಿ ಮಂಡಳಿಯ ಪ್ರಾದೇಶಿಕ ಕಚೇರಿ ವಿಳಾಸ: Director, Regional Office, Coconut Development Board, Hulimavu, Bannerghatta Road Bengaluru – 560 076 Karnataka. Mob: 080- 26593750, 26593743.

ತೆಂಗು ಅಭಿವೃದ್ಧಿ ಮಂಡಳಿಯ  ಜಾಲಾತಾಣ: https://coconutboard.gov.in//index.aspx

Gruha jyothi: ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

0

ರಾಜ್ಯ ಸರಕಾರದ ನೂತನ 5 ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಈ ಯೋಜನೆಯಡಿ ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು ನೀವು ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇಲ್ಲಿಯವರೆಗೆ 8 ಲಕ್ಷಕ್ಕೂ ಹೆಚ್ಚಿನ ಜನ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು,  ಅದರೆ ಈ ಯೋಜನೆಯಡಿ ಹೆಚ್ಚು ಜನ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಪ್ರತಿ ದಿನ ಸರ್ವರ್ ಡೌನ್ ಆಗುತ್ತಿದೆ ಇದರಿಂದ ಗ್ರಾಹಕರು ಸೇವಾ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಸಮಸ್ಯೆ ಎದುರಿಸುತ್ತಿದ್ದಾರೆ ಈ ಎಲ್ಲಾ ಅಡಚಣೆಗಳಿಂದ ತಪ್ಪಿಸಿಕೊಂಡು ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿ ವಿವರ:

1. ಆಧಾರ್ ನಂಬರ್.
2. ವಿದ್ಯುತ್ ಬಿಲ್ ಗ್ರಾಹಕರ ಐಡಿ.
3. ಮೊಬೈಲ್ ನಂಬರ್ (ಮೊಬೈಲ್ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಏಕೆಂದರೆ ಒ.ಟಿ.ಪಿ ಬರುತ್ತದೆ)

ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಈ ಸಮಯದಲ್ಲಿ ಅರ್ಜಿ ಸಲ್ಲಿಸಿ:

ಗ್ರಾಹಕರು ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬೆಳ್ಳಗೆ 8-00 ಗಂಟೆಯ ಒಳಗೆ ರಾತ್ರಿ 11-00 ಗಂಟೆಯ ನಂತರ ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬೇಕು. 

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಅರ್ಜಿ ಸಲ್ಲಿಸುವ ವಿಧಾನ:

ಹಂತ-1: https://sevasindhugs.karnataka.gov.in/index.html ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಗೃಹ ಜ್ಯೋತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ-2: ನಂತರ “ಘೋಷಣೆ/Declaration” ಕ್ಲಿಕ್ ಮಾಡಿ, “Captcha” ಕೋಡ ನಮೂದಿಸಿ  “Agree” ಮೇಲೆ ಕ್ಲಿಕ್ ಮಾಡಬೇಕು.

ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ

ಹಂತ-3: ಇಲ್ಲಿ ಅರ್ಜಿದಾರರ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ “Get Details” ಮೇಲೆ ಕ್ಲಿಕ್ ಮಾಡಿ. 

ಹಂತ-4: ನಂತರ ನಿಮ್ಮ ಎಸ್ಕಾಂ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ ನಮೂದಿಸಬೇಕು. 

ಹಂತ-5: ನಿವಾಸಿ ವಿಧ ಕಾಲಂನಲ್ಲಿ ಮಾಲೀಕರು/ಬಾಡಿಗೆದಾರ/ಕುಟುಂಬದ ಸದಸ್ಯ ಆಯ್ಕೆಯಲ್ಲಿ ಒಂದನ್ನು ಅಯ್ಕೆ ಮಾಡಬೇಕು. 

ಹಂತ-4:

ಕೊನೆಯಲ್ಲಿ ಅರ್ಜಿದಾರನ್ನು ಮೊಬೈಲ್ ನಂಬರ್ ನಮೂದಿಸಿ ಆ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ಬರುತ್ತದೆ ಅದನ್ನು ನಮೂದಿಸಿ “Validate” ಬಟನ್ ಮೇಲೆ ಒತ್ತಿ.

ಹಂತ-5: Declaration/ ಘೋಷಣೆಯಲ್ಲಿ “I Agree” ಆಯ್ಕೆಯ ಮೇಲೆ ಒತ್ತಿ ಅಲ್ಲೇ ಕೆಳಗೆ ಕಾಣುವ ವೇರಿಪಿಕೇಶನ್ ಸಂಖ್ಯೆಯನ್ನು ನಮೂದಿಸಿ “Submit” ಬಟನ್ ಒತ್ತಿ.

ಹಂತ-6:

ಕೊನೆಯ ಹಂತ ನೀವು ಸಲ್ಲಿಸಿದ ಎಲ್ಲಾ ವಿವರ ಸರಿಯಾಗಿದಿಯೋ/ಇಲ್ಲವೋ ಈ ಎಂದು ಒಮ್ಮೆ ಪರೀಶಿಲಿಸಿಕೊಂಡು ಕೊನೆಯಲ್ಲಿ “Submit” ಮೇಲೆ ಒತ್ತಿ, ತದ ನಂತರ ಅರ್ಜಿ ಸ್ವಿಕೃತಿ ಪುಟ ದೊರೆಯುತ್ತದೆ ಅದನ್ನು ಡೌನ್ಲೋಡ ಮಾಡಿಕೊಳ್ಳಿ.

ಪ್ರತಿ ದಿನ ನಿಮ್ಮ ಸ್ಥಳದ ಮಳೆ ಮುನ್ಸೂಚನೆ ತಿಳಿಯಬೇಕೆ? ಈ ಆ್ಯಪ್ ಬಳಕೆ ಮಾಡಿ.

0

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನದಲ್ಲಿ ಪ್ರತಿಯೊಬ್ಬರಿಗೂ ತಾವು ನೆಲೆಸಿರುವ ಸ್ಥಳದ ಮತ್ತು ತಾವು ಪ್ರಯಾಣ ಬೆಳೆಸುವ ಸ್ಥಳದ ಹವಾಮಾನ ಮುನ್ಸೂಚನೆಯನ್ನು ಸುಲಭವಾಗಿ ಹೇಗೆ ತಿಳಿಯಬೇಕು? ಮತ್ತು ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಸಮರ್ಪಕವಾಗಿ ಹವಾಮಾನ ಮುನ್ಸೂಚನೆ ಪಡೆದು ಅದಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ಕೈಗೊಳ್ಳಲು ಹವಾಮಾನ/ಮಳೆ ಮುನ್ಸೂಚನೆ ನೀಡುವ ಪರಿಣಾಮಕಾರಿ ಮೊಬೈಲ್ ಅಪ್ಲಿಕೇಶನ್ ಮತ್ತು ಇತರೆ ಮೂಲಗಳ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

1. SACHET ಅಪ್ಲಿಕೇಶನ್:

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಬಿಡುಗಡೆ ಮಾಡಿರುವ ಮೊಬೈಲ್ ಅಪ್ಲಿಕೇಶನ್ ಇದಾಗಿದೆ. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸ್ಥಳದ ಮತ್ತು ದೇಶದ ವಿವಿಧ ಭಾಗ ಮಳೆ, ಬಿಸಿ ಗಾಳಿ, ಮಿಂಚು-ಸಿಡಿಲು, ಅತೀ ವೇಗದ ಗಾಳಿಯ ಮುನ್ಸೂಚನೆಯನ್ನು ಸ್ಥಳೀಯ ಭಾಷೆಯಲ್ಲಿ ಪಡೆಯಬವುದಾಗಿದೆ.

ಈ ಅಪ್ಲಿಕೇಶ ಬಳಕೆ ಮಾಡುವ ವಿಧಾನ:

https://play.google.com/store/apps/details?id=com.cdotindia.capsachet ಈ ಲಿಂಕ್ ಮೇಲೆ ಕ್ಲಿಕ್ ಮಾಡಿ  ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇಲ್ಲಿ ಕೇಳುವ ಅನುಮತಿಯನ್ನು ಅನುಮೋದಿಸಿ ನಿಮ್ಮ ಸ್ಥಳವನ್ನು ಅಯ್ಕೆ ಮಾಡಿಕೊಂಡು ನಿರಂತರವಾಗಿ ಮಳೆ, ಬಿಸಿ ಗಾಳಿ, ಮಿಂಚು-ಸಿಡಿಲು, ಅತೀ ವೇಗದ ಗಾಳಿಯ ಮುನ್ಸೂಚನೆಯನ್ನು 3 ಗಂಟೆಯ ಮುಂಚಿತವಾಗಿ ನೊಟಿಪಿಕೇಶ ಮೂಲಕ ಪಡೆಯಬವುದಾಗಿದೆ.

ಇದರ ಜೊತೆಗೆ ನಿಮ್ಮ ಸ್ಥಳದ ಪ್ರಸ್ತುತ ತಾಪಮಾನದ ಮಾಹಿತಿ, ತೇವಾಂಶ, ಶೇಕಡಾವಾರು ಮುಂಗಾರು ಮತ್ತು ಮುಂದಿನ 7 ದಿನದ ಹವಾಮಾನ ಮುನ್ಸೂಚನೆಯನ್ನು ನೋಡಬವುದು.

ಇದನ್ನೂ ಓದಿ: ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದೇಗೆ? ಅಗತ್ಯ ದಾಖಲಾತಿ ಮಾಹಿತಿ.

2. https://saishekharbb.blogspot.com:

ಮಂಗಳೂರು ಜಿಲ್ಲೆಯ ಸಾಯಿಶೇಖರ್ ಬಿ ಎನ್ನುವವರು https://saishekharbb.blogspot.com ಈ ಜಾಲತಾಣದ ಮೂಲಕ ಪ್ರತಿನಿತ್ಯ ಮುಂಗಾರು ಮಾರುತಗಳ ಚಲನೆ ಸ್ಥಿತಿ , ವಾಯುಭಾರ ಕುಸಿತದ ವಿವರ ಮತ್ತು ರಾಜ್ಯದ ಜಿಲ್ಲಾವಾರು ಮಳೆ ಮುನ್ಸೂಚನೆಯನ್ನು ಅಂಕಣಗಳ ಮೂಲಕ ರೈತರಿಗೆ ತಿಳಿಸುತ್ತಿದ್ದಾರೆ ನೀವು ಈ ವೆಬ್ಸೈಟ್ ಭೇಟಿ ಮಾಡಿ ಮಳೆ ಮುನ್ಸೂಚನೆ ಮಾಹಿತಿಯನ್ನು ಪಡೆಯಬವುದು.

3. windy ಅಪ್ಲಿಕೇಶನ್:

https://play.google.com/store/apps/details?id=com.windyty.android ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸ್ಥಳವನ್ನು ಆಯ್ಕೆ ಮಾಡಿ ಮಳೆ ಮಾರುತಗಳ ಚಲನೆ ಮತ್ತು ಮಳೆ ಬರುವ ಸಾಧ್ಯತೆ, ತಾಪಮಾನ, ಗಾಳಿಯ ವೇಗ ಇತ್ಯಾದಿ ಮಾಹಿತಿಯನ್ನು ತಿಳಿಯಬವುದು.

4. ವರುಣ ಮಿತ್ರ

ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರುಣ ಮಿತ್ರ ಸಹಾಯವಾಣಿ ಇದಾಗಿದ್ದು, ಆಂಡ್ರಾಯ್ಡ್ ಮೊಬೈಲ್/ಸ್ಕ್ರಿನ್ ಟಚ್ ಮೊಬೈಲ್ ಹೊಂದಿಲ್ಲದವರು/ಬಳಕೆ ಮಾಡಲು ಬರದವರು ನೇರವಾಗಿ 92433454333 ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಹೆಸರು, ಜಿಲ್ಲೆ,ತಾಲ್ಲೂಕು,ಗ್ರಾಮ ಪಂಚಾಯತ್ ಹೆಸರನ್ನು ತಿಳಿಸಿ ನಿಮ್ಮ ಭಾಗದ ಮಳೆ ಮುನ್ಸೂಚನೆ ವಿವರವನ್ನು ಪಡೆಯಬವುದು.

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದೇಗೆ? ಅಗತ್ಯ ದಾಖಲಾತಿ ಮಾಹಿತಿ.

0

ಆದ್ಯತಾ ಕುಟುಂಬಗಳ (ಬಿಪಿಎಲ್-ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ) , ಎಪಿಎಲ್(ಆದ್ಯತೇತರ ಕುಟುಂಬದ ಪಡಿತರ ಚೀಟಿ) ಕೋರಿ ಆನ್‌ ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಇನ್ನೂ ಒಂದೆರಡು ವಾರದಿಂದ ಅವಕಾಶ ಕಲ್ಪಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತೀರ್ಮಾನಿಸಿದೆ.

ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ಪಡಿತರ ಚೀಟಿಗಳ ವಿತರಣೆ ನಿಲ್ಲಿಸಲಾಗಿತ್ತು. ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಕೆ ಪುಟವನ್ನು ಮುಚ್ಚಲಾಗಿತ್ತು. 

ಚುನಾವಣೆ ಮುಗಿದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸರಕಾರದ ಗ್ಯಾರಂಟಿಗಳ ಲಾಭ ಪಡೆಯಲು ಹಲವರು ಬಿಪಿಎಲ್ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸುತ್ತಾರೆಂಬ ಕಾರಣಕ್ಕೆ ಆರಂಭಿಸಿರಲಿಲ್ಲ. ಮುಂದಿನ ಒಂದೆರಡು ವಾರದ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ.

ಹೊಸ ಕಾರ್ಡ್‌ಗೆ ಬೇಕಾದ ದಾಖಲೆಗಳು:

ಅಧಾರ್ ಕಾರ್ಡ್.

ಮನೆಯ ಯಜಮಾನಿಯ ಆದಾಯ ಪ್ರಮಾಣ ಪತ್ರ.(ಕಂದಾಯ ಇಲಾಖೆಯಿಂದ ಪಡೆಯಬೇಕು).

ಪಡಿತರ ಚೀಟಿಗೆ ಹೊಸದಾಗಿ ಹೆಸರನ್ನು ಸೇರಿಸುವುದು ಇದಲ್ಲಿ ಆಧಾರ್ ಮತ್ತು ಆದಾಯ ಪ್ರಮಾಣಪತ್ರ ಒದಗಿಸಬೇಕು. ಇದರಲ್ಲಿ ಆರು  ವರ್ಷದ ಕೆಳಗಿನ ಮಕ್ಕಳನ್ನು ಸೇರ್ಪಡೆ ಮಾಡುವುದು ಇದಲ್ಲಿ ಮೊಬೈಲ್ ನಂಬರ್ ಜೋಡಣೆಯಾಗಿರುವ ಆಧಾರ್ ಸಂಖ್ಯೆ ಮತ್ತು ಜನನ ಪ್ರಮಾಣಪತ್ರ ಒದಗಿಸಬೇಕಾಗುತ್ತದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ https://ahara.kar.nic.in/ ಈ ಜಾಲತಾಣ ಭೇಟಿ ಮಾಡಿ ಅರ್ಜಿದಾರರು ಸ್ವಂತ ತಾವೇ ಅರ್ಜಿ ಸಲ್ಲಿಸಬವುದು ಅಥವಾ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಕಾರ್ಯಲಯಾದಲ್ಲಿ, ಬೆಂಗಳೂರು ಒನ್ , ಸೈಬರ್ ಕೇಂದ್ರಗಳಲ್ಲಿ ಹೆಸರು ಸೇರ್ಪಡೆ ಮತ್ತು ಹೊಸ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬವುದು.

ಸದ್ಯ ಹೊಸ ಅರ್ಜಿಗೆ ಸಲ್ಲಿಸಲು ಆದೇಶ ಹೊರಡಿಸಿಲ್ಲ ಕಳೆದ ವಾರ‍ ಪತ್ರಿಕಾ ಮಾದ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ನಿರ್ದೇಶಕರು ಜ್ಞಾನೇಂದ್ರಕುಮಾರ ಗಂಗ್ವಾರ್ ರವರು ಇನ್ನೂ ಒಂದೆರಡು ವಾರದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು?

ಅರ್ಜಿ ಸಲ್ಲಿಸಲು ಅರ್ಹರು:

ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷರೂ. ಮಿತಿಯಲ್ಲಿರಬೇಕು.

ಹೆಚ್ಚಿನ ಮಾಹಿತಿ ಮತ್ತು ಯಾವುದೇ ಸಲಹೆ ಅಥವಾ ದೂರುಗಳಿಗೆ ಆಹಾರ ಇಲಾಖೆಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ: 1967, 14445 ಅಥವಾ 1800-425-9339.

ಅಡಿಕೆ ಮತ್ತು ತೆಂಗಿನ ಮರಗಳು ಈ ರೀತಿಯಾದಲ್ಲಿ ತಪ್ಪದೇ ಹೀಗೆ ಮಾಡಿ.

0

ನಮ್ಮ ರಾಜ್ಯದಲ್ಲಿ ಅಡಿಕೆ ಮತ್ತು ತೆಂಗು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಗಳಾಗಿವೆ ಈ ಬೆಳೆಗಳನ್ನು ಅವಲಂಬಿಸಿಕೊಂಡು ಅನೇಕ ಜಿಲ್ಲೆಯ ರೈತರು ತಮ್ಮ ದೈನಂದಿನ ಅರ್ಥಿಕ ಚಟುವಟಿಕೆಗಳನ್ನು ನಡೆಸಿಕೊಂಡು ಹೊಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಇತ್ಯಾದಿ ಕಾರಣಗಳಿಂದ ಹಲವು ಜಿಲ್ಲೆಗಳಲ್ಲಿ ವಿವಿಧ ಬಗ್ಗೆಯ ರೋಗ ಮತ್ತು ಕೀಟಗಳಿಗೆ ಈ ಬೆಳೆ ತುತ್ತಾಗುತ್ತಿದ್ದು, ಇಂದು ಈ ಅಂಕಣದಲ್ಲಿ ಅಡಿಕೆ ಮತ್ತು ತೆಂಗು ಬೆಳೆಯಲ್ಲಿ ಅಂಬ್ರೋಸಿಯ ದುಂಬಿಯ ಬಾಧೆ ಹೇಗೆ ಗುರುತಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ವಿವರಿಸಲಾಗಿದೆ.

ಕೀಟದ ಲಕ್ಷಣಗಳು:

ಪ್ರೌಢಾವಸ್ಥೆಯ ದುಂಬಿ: ಚಿಕ್ಕ ಗಾತ್ರದ (2-3 ಮಿ.ಮೀ.) ಕೆಂಪು ಮಿಶ್ರಿತ, ಬಣ್ಣದಿಂದ ಕೂಡಿದ್ದು, ದೇಹವು ಸಿಲಿಂಡರಾಕೃತಿ ಹೊಂದಿರುತ್ತದೆ.

ಮರಿ ದುಂಬಿ: ಚಿಕ್ಕ ಗಾತ್ರ, ಬಿಳಿ ಬಣ್ಣದಿಂದ ಕೂಡಿದ್ದು, ಕಾಲುಗಳಿರುವುದಿಲ್ಲ, 

ಹಾವಳಿಗೆ ಮತ್ತು ಸಂತಾನೋತ್ಪತ್ತಿಗೆ ಪೂರಕವಾದ ಅಂಶಗಳು:

1. ತೋಟದ ಸುತ್ತಲಿನ ಕಾಡುಜಾತಿಯ (ತೇಗ, ಸರ್ವೆ), ಮರಗಳು, ಅಲಂಕಾರಿಕ ನರ್ಸರಿ ಸಸ್ಯಗಳು ಮತ್ತು ಹಣ್ಣಿನ ಮರಗಳು.

2. ತೋಟದಲ್ಲಿ ನೀರು, ಪೋಷಕಾಂಶಗಳ ಕೊರತೆ, ಯಾಂತ್ರಿಕವಾಗಿ ಮರಗಳು ಗಾಯಗೊಂಡು ಕತ್ತರಿಸಿದ ಅಥವಾ ಸತ್ತ ಮರಗಳಿದ್ದರೆ ದುಂಬಿಯ ಬಾಧೆ ಹೆಚ್ಚು.

3. ನೀರು ಬಸಿದು ಹೋಗದಿರುವ ಮತ್ತು ಅಣಬೆ ರೋಗಕ್ಕೆ ತುತ್ತಾದ ತೋಟಗಳು, ದುಂಬಿ ಬೆಳವಣಿಗೆಗೆ ಮತ್ತು ಸಂತಾನೋತ್ಪತ್ತಿಗೆ ಪೂರಕವಾಗಿವೆ.

ಈ ಕೀಟದ ಹಾನಿಯ ಲಕ್ಷಣಗಳು ಹೀಗಿವೆ:

1. ಹೆಣ್ಣು ದುಂಬಿಗಳು ಮೊಟ್ಟೆಯನ್ನಿಡಲು ಮರದ ಕಾಂಡದ ಮೇಲೆ ಮನುಷ್ಯನ ಭುಜದ ಎತ್ತರಕ್ಕಿಂತ ಕೆಳ ಭಾಗದಲ್ಲಿ ರಂಧ್ರಗಳನ್ನು ಕೊರೆಯುತ್ತವೆ.

2. ಕಾಂಡದಲ್ಲಿ ವೃತ್ತಾಕಾರದ ಸೂಜಿ ಗಾತ್ರದ ರಂಧ್ರಗಳಿಂದ (2- 3 ಮಿ.ಮೀ.) ಮರದ ಪುಡಿಯು ಟೂತ್ಪಿಕ್ ಅಥವಾ ತಂತಿಯಾಕಾರದಂತೆ ಹೊರ ಬರುತ್ತದೆ ಮತ್ತು ಕೆಂಪು ಮಿಶ್ರಿತ ಕಂದು ಬಣ್ಣದ ದ್ರವವು ಸೋರುವುದು.

3. ಹೆಚ್ಚು ಬಾಧೆಗೊಳಗಾದ ಮರದ ಕಾಂಡದಲ್ಲಿ 10 ಚದರ ಸೆಂ.ಮೀ. ನಲ್ಲಿ 6-8 ರಂಧ್ರಗಳನ್ನು ಕಾಣಬಹುದು.

4. ಹಾನಿಗೊಳಗಾದ ಮರದ ಬೆಳವಣಿಗೆ ಕ್ಷಿಪ್ರವಾಗಿ ಕುಂಠಿತವಾಗುವುದು, ಹೊಸ ಎಲೆಗಳು ಬರುವುದಿಲ್ಲ, ಮತ್ತು ತುದಿ ಎಲೆಗಳು ನಂತರದಲ್ಲಿ ಬೊಡ್ಡೆ ಎಲೆಗಳು ಒಣಗಲಾರಂಭಿಸುವವು.

5. ಮರವು ಒಣಗಲಾರಂಭಿಸಿ ಸತ್ತು ಹೋಗುವುದು, ನಂತರದಲ್ಲಿ ಸುತ್ತಮುತ್ತಲಿನ ಮರಗಳು ಆರಂಭಿಸುವವು (ಸಿಡಿಲು ಬಡಿದ ರೀತಿಯಲ್ಲಿ). ಸಾಯಲು ಆರಂಬಿಸುವವು.

ಇದನ್ನೂ ಓದಿ: ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದೇಗೆ? ಅಗತ್ಯ ದಾಖಲಾತಿ ಮಾಹಿತಿ.

ನಿರ್ವಹಣೆಯ ಕ್ರಮಗಳು:

1. ದುಂಬಿಯ ಬಾಧೆಗೆ ಒಳಗಾಗಿ ಅಥವಾ ಇತರ ಕಾರಣಗಳಿಂದ ಸತ್ತ ಮರಗಳನ್ನು ತೋಟದಿಂದ ಹೊರ ಹಾಕಿ ಸುಡುವುದು.

2. ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗಿಡಗಳಿಗೆ ಪೋಷಕಾಂಶಗಳನ್ನು ನೀಡುವುದು. 

3. ತೋಟಗಳಲ್ಲಿ ಹೆಚ್ಚಾದ ನೀರು ನಿಲ್ಲದೆ, ಬಸಿದು ಹೋಗುವಂತೆ ನೋಡಿಕೊಳ್ಳುವುದು. 

4. ತೋಟದ ಸುತ್ತಲೂ ಎಕರೆಗೆ 6-8 ಶೇಕಡಾ 75% ರ ಎಥೆನಾಲ್ ಬಲೆಗಳನ್ನು ಅಲ್ಲಲ್ಲಿ ಹಾಕುವುದರ ಮೂಲಕ ಹೆಣ್ಣು ದುಂಬಿಗಳ ಚಟುವಟಿಕೆಯನ್ನು ಗಮನಿಸಬಹುದು ಮತ್ತು ಸಾಮೂಹಿಕ ನಿರ್ವಹಣೆಯನ್ನು ಮಾಡಬಹುದಾಗಿದೆ.

5. ಹೆಣ್ಣು ದುಂಬಿಗಳು ಹಾನಿ ಮಾಡಿದ ಮರದ ಪಕ್ಕದಲ್ಲಿರುವ ಇತರೆ ಮರಗಳಿಗೆ ರಂಧ್ರ ಮಾಡದಂತೆ ಹಿಮ್ಮೆಟ್ಟಿಸಲು, ಸತ್ತ ಮರ ಮತ್ತು ಸುತ್ತಮುತ್ತಲಿನ ಮರಗಳಿಗೆ ಬೈಫೆಂಥಿನ್ 10% ಇ.ಸಿ. 1.5 ಮಿಲಿ / ಲೀಟರ್ + ಮ್ಯಾಂಕೊಜೆಬ್ 75 ಡಬ್ಲ್ಯೂಪಿ. 2 ಗ್ರಾಂ / ಲೀಟರ್ ಅಥವಾ ಬೈಫೆಂಥಿನ್ 10% ಇ.ಸಿ. 1.5 ಮಿಲಿ / ಲೀಟರ್ + ಕ್ಲೋರ್‌ ಫೈರಿಫಾಸ್ 30% ಇ.ಸಿ. 2 ಮಿ.ಲೀ. / ಲೀಟರ್ + ಮ್ಯಾಂಕೊಜೆಬ್ ಡಬ್ಲ್ಯೂ.ಪಿ. 2 ಗ್ರಾಂ / ಲೀಟರ್ ಮಿಶ್ರಣವನ್ನು ಮರದ ಕಾಂಡಗಳಿಗೆ ಕೈಗೆಟುಕುವ ಅಂತರದವರೆಗ ಸಿಂಪರಣೆ ಮಾಡುವುದು.

ಹೆಚ್ಚಿನ ಮಾಹಿತಿಗಾಗಿ https://youtu.be/n82XIuCWTFA ಈ ವಿಡಿಯೋ ನೋಡಿ.

ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು?

0

ಪ್ರತಿ ಮನೆಗೆ ತಿಂಗಳ ಅಂತ್ಯದಲ್ಲಿ ತಾವು ಬಳಕೆ ಮಾಡಿದ ವಿದ್ಯುತ್ ಗೆ ಕೆಇಬಿ ಸಿಬ್ಬಂದಿಗಳು ಬಿಲ್ ಅನ್ನು ಕೊಡುತ್ತಾರೆ ಅದರೆ ಅನೇಕ ಕಾರಣಗಳಿಂದ ಗ್ರಾಮೀಣ ಭಾಗಗಳ ಮನೆಗಳ ಮೀಟರ್ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವುದಿಲ್ಲ.

ಅದರೆ ಈಗ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಪ್ರಸ್ತುತ ವಾಸವಿರುವವರ ಹೆಸರಿನಲ್ಲಿ ವಿದ್ಯುತ್ ಬಿಲ್ ಇರುವುದು ಕಡ್ಡಾಯವಾಗಿರುವುದರಿಂದ ಗ್ರಾಹಕರು  ತಮ್ಮ ಹೆಸರಿಗೆ ವಿದ್ಯುತ್ ಬಿಲ್‌ ಬರುವ ಹಾಗೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಹಳೆ ಮಾಲೀಕರರಿಂದ ಮತ್ತು ತಂದೆ ಮತ್ತು ತಾತಾನ ಹೆಸರಿಗೆ ಬರುವ  ವಿದ್ಯುತ್ ಬಿಲ್‌ಅನ್ನು ನಿಮ್ಮ ಹೆಸರಿಗೆ ವರ್ಗಾಹಿಸಲು ಬೇಕಾಗುವ ದಾಖಲಾತಿ ವಿವರ ಇತ್ಯಾದಿ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳು:

1. ಅರ್ಜಿ ನಮೂನೆ(ಕೆಇಬಿ ಕಚೇರಿಯಲ್ಲಿ ಪಡೆಯಬೇಕು).

2. ಗ್ರಾಹಕರ ಆಧಾರ ಜೆರಾಕ್ಸ್.

3. ಪೋಟೋ-1.

4. 200ರೂ ಬಾಂಡ (INDEMNITY BOND).

5. ಖರೀದಿಸಿದ ಮನೆಯಾಗಿದ್ದರೆ ರಿಜಿಸ್ಟರ್ ಪ್ರತಿ.

6. ವಂಶವೃಕ್ಷ (ತಂದೆ/ತಾತಾನಿಂದ ವರ್ಗಾವಣೆಗಾಗಿ). 

7. ಮರಣ ಪ್ರಮಾಣ ಪತ್ರ.

8. ವಿದ್ಯುತ್ ಗುತ್ತಿಗೆದಾರರಿಂದ CR ಅಗ್ರಿಮೇಂಟ್. 

9. ವಿದ್ಯುತ್ ಬಿಲ್ಲಿನ ಬಾಕಿ ಮೊತ್ತವನ್ನು ಪಾವತಿಸಿರಬೇಕು

10. ಅರ್ಜಿದಾರನ ಮೊಬೈಲ್ ಸಂಖ್ಯೆ.

ಇದನ್ನೂ ಓದಿ: “ಗೃಹ ಜ್ಯೋತಿ” ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳೇನು?

ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾಯಿಸುವ ಪ್ರಕ್ರಿಯೆ:

ಅಗತ್ಯ ದಾಖಲಾತಿ ಸಮೇತ ನಿಮ್ಮ ಭಾಗದ ವಿದ್ಯುತ್ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ವಿವರ ಭರ್ತಿ ಮಾಡಿ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಿದ ನಂತರ 

ನೀವು ಸಲ್ಲಿಸಿದ ದಾಖಲೆಗಳು ಮತ್ತು ಅರ್ಜಿಯನ್ನು ಪರಿಶೀಲಿಸಿ ಅಗತ್ಯವಿದಲ್ಲಿ ಸ್ಥಳ ಭೇಟಿ ಮಾಡಿ ಪರಿಶೀಲಿಸಿ ನಿಮ್ಮ ಹೆಸರಿಗೆ ವಿದ್ಯುತ್ ಬಿಲ್ ಬರುವ ಹಾಗೆ ಕ್ರಮ ಕೈಗೊಳ್ಳುತ್ತಾರೆ.

ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಮುಖ್ಯ ವ್ಯವಸ್ಥಾಪಕರ ಶಾಖೆಯನ್ನು ಭೇಟಿ ಮಾಡಿ.

ಬೆಸ್ಕಾಂ ಜಾಲಾತಾಣ: https://bescom.karnataka.gov.in/

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ.

0

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಕ್ಷೇತ್ರದಲ್ಲಿ ಉತ್ತಮ ತಾಂತ್ರಿಕತೆ ಅಳವಡಿಕೆ ಮಾಡಿಕೊಂಡ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಸಕ್ತ ಪ್ರಕತಿಪರ ರೈತ ಮತ್ತು ರೈತ ಮಹಿಳೆ ಹಾಗೂ ಕೃಷಿ ವಿಭಾಗದಲ್ಲಿ ತಳ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ಹಹಿಸುತ್ತಿರುವ ವಿಸ್ತರಣಾ ಕಾರ್ಯಕರ್ತರಿಂದ ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕುರಿತು ವಿ ಎಲ್ ಮಧು ಪ್ರಸಾದ್ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಇವರು ಪ್ರಕಟಣೆ ಹೊರಡಿಸಿದ್ದಾರೆ.

ಪ್ರಶಸ್ತಿಗಳ ವಿವರ ಹೀಗಿದೆ:

ರಾಜ್ಯ ಮಟ್ಟದ ಪ್ರಶಸ್ತಿಗಳು (ರಾಜ್ಯ ವ್ಯಾಪ್ತಿ)

1. ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ / ರೈತ ಮಹಿಳೆ ಪ್ರಶಸ್ತಿ:

2. ಡಾ. ಎಂ.ಹೆಚ್, ಮರಿಗೌಡ ರಾಜ್ಯ ಮಟ್ಟದ ಅತ್ಯತ್ತಮ ತೋಟಗಾರಿಕಾ ರೈತ / ರೈತ ಮಹಿಳೆ ಪ್ರಶಸ್ತಿ.

ರಾಜ್ಯ ಮಟ್ಟದ ಪ್ರಶಸ್ತಿಗಳು (ಕೃವಿವಿ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 10 ಜಿಲ್ಲೆಗಳು)

1. ಕೆನರಾ ಬ್ಯಾಂಕ್ ಪ್ರಯೋಜಿತ ಕ್ಯಾನ್ ಬ್ಯಾಂಕ್ ಆತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ.

2. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿ.

3. ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ.

ಜಿಲ್ಲಾ ಮಟ್ಟದ ಪ್ರಶಸ್ತಿಗಳು (ಕೃವಿವಿ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 10 ಜಿಲ್ಲೆಗಳು) 

1. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ.

2. ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ.

ತಾಲ್ಲೂಕು ಮಟ್ಟದ ಪ್ರಶಸ್ತಿಗಳು (ಕೃವಿದಿ, ಬೆಂಗಳೂರಿನ ಆಡಳಿತ ವ್ಯಾಪ್ತಿಯ 61 ತಾಲ್ಲೂಕುಗಳು ) 

1. ತಾಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ

2. ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮಹಿಳೆ ಪ್ರಶಸ್ತಿ.

ಇದನ್ನೂ ಓದಿ: ಕರೆಂಟ್ ಬಿಲ್‌ನಲ್ಲಿ ಹೆಸರು ಬದಲಾಯಿಸುವುದು ಹೇಗೆ? ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು?

ಮೇಲಿನ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲಿರುವ ಕೃಷಿ ಮೇಳ-2023ರ ಸಂದರ್ಭದಲ್ಲಿ ನೀಡಲಾಗುತ್ತದೆ. ನಿಗದಿತ ಅರ್ಜಿ ನಮೂನೆಯ ಆಯಾ ಜಿಲ್ಲೆಗಳ ಜಂಟಿ ಕೃಷಿ ನಿರ್ದೇಶಕರವರ ಕಛೇರಿ, ವಿಸ್ತರಣಾ ನಿರ್ದೇಶಕರ ಕಛೇರಿ, ಜಿಕೆವಿಕೆ, ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರಗಳು (ಹಾಡೋನಹಳ್ಳಿ -ದೊಡ್ಡಬಳ್ಳಾಪುರ, ಚಂದುರಾಯನಹಳ್ಳಿ-ಮಾಗಡಿ, ಕಂದಲಿ–ಸನ, ಕೊನೇಹಳ್ಳಿ- ತಿಪಟೂರು ವಿ.ಸಿ.ಫಾರಂ-ಮಂಡ್ಯ, ಕುರುಬೂರು ಫಾರಂ-ಚಿಂತಾಮಣಿ ಮತ್ತು ಹರದನಹಳ್ಳಿ-ಚಾಮರಾಜನಗರ) ವಿಸ್ತರಣಾ ಶಿಕ್ಷಣ ಘಟಕ (ನಾಗನಹಳ್ಳಿ-ಮೈಸೂರು)ದಲ್ಲಿ ದೊರೆಯುತ್ತದೆ. ಅರ್ಜಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ (www.uasbangalore.edu.in) ಲಭ್ಯವಿರುತ್ತದೆ. 

ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2023.

ಹೆಚ್ಚಿನ ವಿವರಗಳಿಗೆ ವಿಸ್ತರಣಾ ನಿರ್ದೇಶಕರ ಕಛೇರಿ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು-560 065 ಇವರನ್ನು ಸಂಪರ್ಕಿಸಬಹುದು. 

ದೂರವಾಣಿ ಸಂಖ್ಯೆ: 080-23330153

ಕೃಷಿ ವಿಶ್ವವಿದ್ಯಾನಿಲಯ ವೆಬ್ಸೈಟ್: www.uasbangalore.edu.in