Home Blog Page 81

Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್

0

ತಮ್ಮ ಮನೆಯ ವಿದ್ಯುತ್ ಬಳಕೆಯ(electric bill) ಕುರಿತು ಗ್ರಾಹಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಮನೆಯಲ್ಲಿ ಕುಳಿತು ಯಾವುದೇ ಕಚೇರಿ ಭೇಟಿ ಮಾಡದೇ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ, ಯಾವೆಲ್ಲ ಮಾಹಿತಿ ಮತ್ತು ಸೌಲಭ್ಯಗಳು ಈ ವೆಬ್ಸೈಟ್ ನಲ್ಲಿ ಲಭ್ಯ? ವೆಬ್ಸೈಟ್ ಲಿಂಕ್ ಯಾವುದು? ಎಂದು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ರಾಜ್ಯ ವಿವಿಧ ಎಸ್ಕಾಂಗಳ ಜಾಲತಾಣ ಭೇಟಿ ಮಾಡಿ ನಿಮ್ಮ ಮನೆಯಲ್ಲಿ ಸರಾಸರಿ ಒಂದು ವರ್ಷದಲ್ಲಿ ಎಷ್ಟು ಯುನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ತಿಳಿಯಬವುದು, ಮತ್ತು ಕಳೆದ ಹಿಂದಿನ 12 ತಿಂಗಳ ವಿದ್ಯುತ್ ಬಿಲ್ ಮೊತ್ತ ಇತರೆ ವಿವರದ ಸಂಪೂರ್ಣ ಮಾಹಿತಿ ಸಿಗುತ್ತದೆ, ಇದರ ಜೊತೆಗೆ ಈ ವೆಬ್ಸೈಟ್ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ನ ಹೆಸರು ಬದಲಾವಣೆಗೆ ಅರ್ಜಿಯನ್ನು ಸಹ ಹಾಕಬವುದಾಗಿದೆ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದಲ್ಲಿ ನಿಮ್ಮ ಅಪ್ತರಿಗೂ ತಪ್ಪದೇ ಶೇರ್ ಮಾಡಿ.

ಸರಾಸರಿ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ತಿಳಿಯುವ ವಿಧಾನ: 

Step-1:https://onlineservices.bescom.org/ ಲಿಂಕ್ ಮೇಲೆ ಕ್ಲಿಕ್ ಮಾಡಿ ಬೆಸ್ಕಾಂನ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು.

Step-2: ನೀವು ಮೊದಲ ಭಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡಿದ್ದಲ್ಲಿ ನಿಮ್ಮ (ಗ್ರಾಹಕರ)ವಿವರವನ್ನು “Register” ಬಟಲ್ ಮೇಲೆ ಕ್ಲಿಕ್ ಮಾಡಿ Connection ID, Date pf birth, email id, , mobile number ,password ರಚನೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಇ ಪುಟದ ಎಲ್ಲಾ ಕಾಲಂ ವಿವರ ಭರ್ತಿ ಮಾಡಿದ ನಂತರ ಕೊನೆಯಲ್ಲಿ ಕಾಣುವ “save” ಬಟನ್ ಮೇಲೆ ಕ್ಲಿಕ್ ಮಾಡಿದಾಗ “Registered Successfully” ಎಂದು  ಗೋಚರಿಸುತ್ತದೆ.

ಗಮನಿಸಿ: ನೀವು ನಮೂದಿಸಿದ user name ಮತ್ತು password ಒಂದು ಕಡೆ ಬರೆದಿಟ್ಟುಕೊಳ್ಳಿ.

Step-3: ನೀವು ರಚನೆ ಮಾಡಿಕೊಂಡ user name ಮತ್ತು password ಅನ್ನು ಈ ಜಾಲತಾಣದ ಮುಖಪುಟದಲ್ಲಿ ಕಾಣುವ User id mattu password ಕಾಲಂ ನಲ್ಲಿ ಹಾಕಿ(ಮೇಲೆ Cuctomer ಎಂದು ಆಯ್ಕೆ ಮಾಡಿಕೊಳ್ಳಿ) “LOGIN” ಬಟನ್ ಮೇಲೆ ಕ್ಲಿಕ್ ಮಾಡಿ.

Step-4: LOGIN ಅದ ನಂತರ ನಿಮ್ಮ ವಿದ್ಯುತ್ ಬಿಲ್ ವಿವರದ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “MY acconut” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Accont summary” ಬಟಲ್ ಮೇಲೆ ಕ್ಲಿಕ್ ಮಾಡಿದರೆ ಕಳೆದ ಹಿಂದಿನ 12 ತಿಂಗಳ ಬಿಲ್ ವಿವರ ಮತ್ತು ಸರಾಸರಿ ಇಲ್ಲಿಯವರೆಗೆ ಬಳಕೆ ಮಾಡಿದ ವಿದ್ಯುತ್ ವಿವರ ಗೋಚರಿಸುತ್ತದೆ.

ಈ ಪುಟದಲ್ಲಿ 8 ಕಾಲಂ ನ “Avg Cons” ಹೆಸರಿನ ಕೆಳಗೆ ತೋರಿಸ ಸಂಖ್ಯೆಯೆ ಸರಾಸರಿ ವಿದ್ಯುತ್ ಬಳಕೆ ಯುನಿಟ್ ಅಗಿರುತ್ತದೆ.

ಇದನ್ನೂ ಓದಿ: Gruha joythi bill: ಗೃಹ ಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಹೇಗೆ ಬರಲಿದೆ ಇಲ್ಲಿದೆ ಸ್ಯಾಂಪಲ್ ಬಿಲ್.

ಈ ವೆಬ್ಸೈಟ್ ನ ಇತರೆ ಸೌಲಭ್ಯಗಳ ವಿವರ ಹೀಗಿದೆ:

1. ಈ ವೆಬ್ಸೈಟ್ ಮೂಲಕ ನಿಮ್ಮ ವಿದ್ಯುತ್ ಬಿಲ್ ನ ಹೆಸರನ್ನು ಬದಲಾಯಿಸಲು ಅರ್ಜಿ ಸಲ್ಲಿಸಬವುದು.

2. tariff change, Load Reduction, Load Enhancement. ಈ ಸೇವೆಗಳು ಈ ವೆಬ್ಸೈಟ್ ನಲ್ಲಿ ಲಭ್ಯ.

ಈ ಮೇಲೆ ವಿವರಿಸಿದ ವೆಬ್ಸೈಟ್ ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(Bescom) ವ್ಯಾಪ್ತಿ ಗ್ರಾಹಕರು ಮಾತ್ರ ನಿಮ್ಮ ವಿದ್ಯುತ್ ಬಿಲ್ ಬಳಕೆ ಕುರಿತು ವಿವರವನ್ನು ಪಡೆಯಬವುದು ಉಳಿದ ವಿಭಾಗದ ಗ್ರಾಹಕರು ತಮ್ಮ ತಮ್ಮ ವ್ಯಾಪ್ತಿಯ ಎಸ್ಕಾಂ ನ ಅಧಿಕೃತ ವೆಬ್ಸೈಟ್ ಗಳ ಲಿಂಕ್ ಅನ್ನು ಈ ಕೆಳಗೆ ಹಾಕಲಾಗಿದ್ದು ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ನಿಮ್ಮ ಮನೆಯ ವಿದ್ಯುತ್ ಬಳಕೆ ವಿವರ ಇತ್ಯಾದಿ ಮಾಹಿತಿಯನ್ನು ನಿಮ್ಮ ಮನೆಯಲ್ಲೇ ಕುಳಿತು ತಿಳಿದಿಕೊಳ್ಳಬವುದಾಗಿದೆ.

Hescom-ಹೆಸ್ಕಾಂ: https://www.hescom.co.in/SCP/Myhome.aspx 

mescom- ಮೆಸ್ಕಾಂ: https://mescom.karnataka.gov.in/info-3/Online+Payment+System/en

Gescom- ಜೆಸ್ಕಾಂ: https://gescom.karnataka.gov.in/info-3/Online+Payments/kn

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

FID number: ಬೆಳೆ ವಿಮೆ ,ಬೆಳೆ ಸಾಲ ಪಡೆಯಲು ರೈತರಿಗೆ ಕಡ್ಡಾಯ ಈ ಐಡಿ! ಇದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಪಡೆಯುವುದು?

0

ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಮತ್ತು ಬೆಳೆ ಸಾಲ ಪಡೆಯಲು ಹಾಗೂ ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳಿಂದ ಯಾವುದೇ ಸರಕಾರಿ ಸೌಲಭ್ಯ ಪಡೆಯಲು ಪ್ರತಿಯೊಬ್ಬ ರೈತರು FID ನಂಬರ್ ಅನ್ನು ಅಗತ್ಯವಾಗಿ ಒದಗಿಸಬೇಕಾಗುತ್ತದೆ. ಏನಿದು FID ಸಂಖ್ಯೆ? ಎಲ್ಲಿ ಪಡೆಯಬೇಕು? ಫ್ರೂಟ್ಸ್(FRUITS) ತಂತ್ರಾಂಶದ ಮೂಲಕ FID ನಂಬರ್ ಪಡೆಯುವುದ್ ಹೇಗೆ?  FID ನಂಬರ್ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ರಾಜ್ಯದ ಕೃಷಿ ಇಲಾಖೆಯಿಂದ ರೈತರ ಜಮೀನಿನ ವಿವರ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಡಿಜಿಟಲ್ ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಲಾಗಿದ್ದು, ಪ್ರತಿಯೊಬ್ಬರ ರೈತರಿಗೂ ವಿವಿಧ ಬಗ್ಗೆಯ ಗುರುತಿನ ಸಂಖ್ಯೆಯನ್ನು(FID) ಸಹ ನೀಡಲಾಗಿರುತ್ತದೆ.

ಈ ತಂತ್ರಾಂಶಕ್ಕೆ ಪ್ರೂಟ್ಸ್ ಎಂದು ಕರೆಯಲಾಗುತ್ತದೆ “FRUITS”ಅಂದರೆ Farmer Registration and Unified beneficiary InformaTion System ಎಂದರ್ಥ ಈ ತಂತ್ರಾಂಶದಲ್ಲಿ ಒಬ್ಬ ರೈತ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಸರ್ವೆ ನಂಬರ್ ವಿವರ ಮತ್ತು ಅವರ ಬ್ಯಾಂಕ್ ಖಾತೆಯ ವಿವರವನ್ನು ದಾಖಲಾತಿ ಮಾಡಿದಾಗ “FID” ನಂಬರ್ ಸೃಜನೆಯಾಗುತ್ತದೆ.

FID number lick- ನಿಮ್ಮ ಮೊಬೈಲ್ ನಲ್ಲಿ FID ನಂಬರ್ ಪಡೆಯುವ ವಿಧಾನ:

ಈಗಾಗಲೇ ರಾಜ್ಯ ಶೇ 90 ಕ್ಕಿಂತ ಹೆಚ್ಚಿನ ರೈತರ ವಿವರವು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾವಣೆಯಾಗಿದ್ದು ಇವರಿಗೆ “FID number” ಸೃಜನೆಯಾಗುತ್ತದೆ ಇವರು ತಮ್ಮ ಈ ನಂಬರ್ ಅಲ್ಲಿ ತಿಳಿದುಕೊಳ್ಳಲು ಈ ಲಿಂಕ್ https://fruitspmk.karnataka.gov.in/MISReport/GetDetailsByAadhaar.aspx ಮೇಲೆ ಕ್ಲಿಕ್ ಮಾಡಿ ತಮ್ಮ 12 ಅಂಕಿಯ ಆಧಾರ್ ನಂಬರ್ ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ತಮ್ಮ “FID” ಸಂಖ್ಯೆ ಗೋಚರಿಸುತ್ತದೆ.

FID ನಂಬರ್ ಯಾವುದಕ್ಕೆ ಬೇಕಾಗುತ್ತದೆ?

ಈ ಸಂಖ್ಯೆಯನ್ನು ಬೆಳೆ ವಿಮೆ ಅರ್ಜಿ ಸಲ್ಲಿಸಲು, ಬೆಳೆ ಸಾಲ ವಿತರಿಸಲು, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಕೆಯಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಾಗಿ ಒದಗಿಸಬೇಕಾಗುತ್ತದೆ.

FID ನಂಬರ್ ನ ಇತರೆ ಮಾಹಿತಿ ಪಡೆಯುವ ವಿಧಾನ:

ಈ FID ನಂಬರ್ ನಲ್ಲಿ ನಮೂದಿಸಿರುವ ಜಮೀನಿನ ಸರ್ವೆ ನಂಬರ್ ಯಾವುವು? ಬ್ಯಾಂಕ್ ಖಾತೆ ವಿವರ ಮತ್ತು ರೈತರ ಹೆಸರು ವಿಳಾಸ ಇತ್ಯಾದಿ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಧಾನ ಅನುಸರಿಸಿ.

ಈ ಲಿಂಕ್ https://fruits.karnataka.gov.in/OnlineUserLogin.aspx ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆಯ ಮೂಲಕ ನೊಂದಣಿ ಮಾಡಿಕೊಂಡು ಅವರ ಅಧಾರ್ ನಂಬರ್ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಅವರ ಹೆಸರಿನಲ್ಲಿ ದಾಖಲಿಸಲಾದ “FID” ವಿವರವನ್ನು ತಿಳಿಯಬವುದು.

FIDಗೆ ಹೊಸ ಅರ್ಜಿ ಮತ್ತು ಬಿಟ್ಟು ಹೊದ ಸರ್ವೆ ನಂಬರ್ ಸೇರಿಸಲು ಎಲ್ಲಿ ಸಲ್ಲಿಸಬೇಕು?

ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ(RSK) ಹೊಸ ಅರ್ಜಿ ಮತ್ತು FID ಸಂಖ್ಯೆಯಲ್ಲಿ ಬಿಟ್ಟಿ ಹೋಗಿರುವ ಸರ್ವೆ ನಂಬರ್ ಗಳನ್ನು ಸೇರ್ಪಡೆ ಮಾಡಿಕೊಳ್ಳಬವುದು. 

ಇದನ್ನೂ ಓದಿ: Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್

ಫ್ರೂಟ್ಸ್(FRUITS) ತಂತ್ರಾಶದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ:

Fruits/FID number: ಫ್ರೂಟ್ಸ್ ಎಂದರೇನು ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ?

ಫ್ರೂಟ್ಸ್ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ – Farmer Registration & Unified Beneficiary InformaTion System – FRUITS) ಅಂತರ್ಜಾಲ ಆಧಾರಿತ ತಂತ್ರಾಂಶಯಾಗಿದೆ. ಇದು ರೈತರಿಗೆ ರಾಜ್ಯ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಆಸಕ್ತಿಯಿರುವ ರೈತರು / ವ್ಯಕ್ತಿಯ ನೋಂದಣಿಗೆ ಸಹಕಾರಿಯಾಗಿದೆ. ಅಲ್ಲದೇ ಫಲಾನುಭವಿಗಳು ಪಡೆಯುವ ಪ್ರಯೋಜನಗಳ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ಆದ್ದರಿಂದ ಇದು ರೈತರು, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ.

ರೈತರು ಸ್ವಯಂ ನೋಂದಾಯಿಸಿಕೊಳ್ಳಬಹುದೇ?

ಹೌದು. ಜಮೀನು ಹೊಂದಿರುವವವರು ಈ ಲಿಂಕ್ https://fruits.karnataka.gov.in/OnlineUserLogin.aspx ಮೇಲೆ ಕ್ಲಿಕ್ ಮಾಡಿ ಮುಖಪುಟದ ಎಡಬದಿಯಲ್ಲಿ ಕಾಣುವ  “ನಾಗರೀಕ ಪ್ರವೇಶ (Citizen Login)”  ಆಯ್ಕೆಯಗೆ ಭೇಟಿ ನೀಡಿ ಅವಶ್ಯ ದಾಖಲೆಗಳನ್ನು ಒದಗಿಸಿ ಸ್ವಯಂ ನೋಂದಣಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಆಧಾರ್ ಪ್ರಕಾರ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ ಮ್ನಂತರ. ತಮ್ಮ ಹೆಸರಿನಲ್ಲಿರುವ ಜಮೀನಿನ ವಿವರಗಳನ್ನು ಭೂಮಿ ತಂತ್ರಾಂಶದ ಮೂಲಕ ಪಡೆದು ದಾಖಲಿಸಬೇಕಾಗುತ್ತದೆ ಮತ್ತು ಅನುಮೋದನಾ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟ ಅನುಮೋದನಾ ಅಧಿಕಾರಿಯು ಅನುಮೋದಿಸಿದ ನಂತರ, ನೋಂದಣಿ ಪೂರ್ಣಗೊಳ್ಳುತ್ತದೆ. ಮೊಬೈಲ್ ಸಂಖ್ಯೆಯನ್ನು ಬಳಕೆದಾರರ ID ಯಾಗಿ ಬಳಸಬೇಕು. ಪ್ರವೇಶ (Login) ಒಟಿಪಿ ದೃಢೀಕರಣ ಆಧರಿಸಿದೆ; ಒಟಿಪಿಯನ್ನು ಆಧಾರ್ ಆಧಾರಿತ ಮೊಬೈಲ್ಗೆ ಕಳುಹಿಸಲಾಗುತ್ತದೆ.

FID number:- ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ಬೇಕಾಗುವ ದಾಖಲಾತಿಗಳು:

1. ಆಧಾರ್ ಕಾರ್ಡ
2. ಬ್ಯಾಂಕ್ ಪಾಸ್ ಬುಕ್
3. ಪಹಣಿ/ಉತಾರ್/RTC
4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಮಾಣ ಪತ್ರ(ಈ ವರ್ಗಕ್ಕೆ ಸೇರಿ ರೈತರಿಗೆ ಮಾತ್ರ)

Joint owner: ಜಮೀನು ಜಂಟಿ ಮಾಲೀಕತ್ವದ ರೈತರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಬಹುದೇ?

ನೋಂದಣಿ ಮಾಡಿಕೊಳ್ಳಬವುದು, ಜಂಟಿ ಮಾಲೀಕತ್ವದ ದಾಖಲೆಗಳನ್ನು (RTC) ಭೂಮಿಯಲ್ಲಿ ಏಕ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ, ಸರ್ಕಾರದ ಸವಲತ್ತುಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಂಟಿ ಮಾಲೀಕರು ಈ ಕೆಳಗಿನ ಮೂರು ಪ್ರಕಾರಗಳಲ್ಲಿ ಯಾವುದಾದರೂ ಒಂದು ಪ್ರಕಾರದಲ್ಲಿ ನೋಂದಾಯಿಸಿಕೊಳ್ಳಲು ಫ್ರೂಟ್ಸ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
(A) ಜಂಟಿ ಮಾಲೀಕರು ಒಟ್ಟಾಗಿ ನೋಂದಾಯಿಸಬಹುದು, ಹೀಗೆ ನೋಂದಾಯಿಸಿದಲ್ಲಿ ಒಬ್ಬರ ಹೆಸರಿನಲ್ಲಿ ನೋಂದಾಯಿಸಿಕೊಳ್ಳಬಹುದು.
(B) ಸ್ವಯಂ ಘೋಷಣೆಯೊಂದಿಗೆ, ಘೋಷಣೆಯ ಪ್ರಕಾರ ಪ್ರತಿ ಮಾಲೀಕರಿಗೆ ಭೂ ವ್ಯಾಪ್ತಿಯನ್ನು ದಾಖಲಿಸಿ ಎಲ್ಲಾ ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು
(C) ಪ್ರತಿ ಮಾಲಿಕರಿಗೆ ಸಮಾನ ಪಾಲು ಹೊಂದಿರುವಂತೆ ಭೂ ವ್ಯಾಪ್ತಿಯನ್ನು ದಾಖಲಿಸಿ ಪ್ರತಿ ಒಬ್ಬ ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

Cersa Lapida Insect: ಈ ಕೀಟ ಕಚ್ಚಿದರೆ ಸಾಯುತ್ತಾರಾ? ಇಲ್ಲಿದೆ ಫ್ಯಾಕ್ಟ್ ಚೆಕ್ ವಿವರ.

0

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿಜವಾದ ಸುದ್ದಿಗಿಂತ ಅತೀ ವೇಗವಾಗ ಹರಡುವುದು ಸುಳ್ಳು ಸುದ್ದಿಯಾಗಿದೆ, ಅತೀ ಕಡಿಮೆ ಅವಧಿಯಲ್ಲಿ ಎಲ್ಲಾ ಕಡೆ ಫೇಕ್ ನ್ಯೂಸ್ ಹರಡಿ ಬಿಡುತ್ತದೆ ಅದಕ್ಕೆ ಕಾರಣವು ನಾವೇ ಅಗಿದ್ದೇವೆ.

ಏಕೆಂದರೆ ನಮ್ಮ ವಾಟ್ಸಾಪ್ ಗುಂಪುಗಳಲ್ಲಿ ಯಾರಾದರು ಫಾರ್ವರ್ಡ್ ಮೆಸೇಜ್ ಕಳುಹಿಸಿದರೆ ಅದನ್ನು ಒಮ್ಮೆ ಆ ವಿಷಯದ ಕುರಿತು ಪರಾಮರ್ಶಿಸದೆ ಮತ್ತೊಂದು ಗುಂಪಿಗೆ ಫಾರ್ವರ್ಡ್ ಮಾಡಿಬಿಡುತ್ತವೆ ಹೀಗೆಯೇ ಹೆಚ್ಚು ಜನ ಶೇರ್ ಮಾಡಿ ಸುಳ್ಳು ಸುದಿ ನಿಜ ಸುದ್ದಿ ಅನ್ನುವಷ್ಟರ ಮಟ್ಟಿಗೆ ವೈರಲ್ ಆಗಿಬಿಡುತ್ತದೆ.

ಇದೇ ರೀತಿ Cersa Lapida ಎಂಬ ಕಂಬಳಿ ಹುಳುವಿನ ಕುರಿತು ಸುಳ್ಳು  ಸುದ್ದಿ ಕಳೆದ ಹಲವು ವರ್ಷಗಳಿಂದ ಪ್ರತಿ ಮಳೆಗಾಲದ ಅವಧಿಯಲ್ಲಿ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತದೆ.

ಈ ಹುಳುವಿನ ಕುರಿತು ಜಂಟಿ ಕೃಷಿ ನಿರ್ದೇಶಕರು ಕಲಬುರಗಿರವರ ಸಾರ್ವಜನಿಕ ಪ್ರಕಟಣೆ ವಿವರ ಹೀಗಿದೆ:

ಈ ಮೂಲಕ ಎಲ್ಲ ರೈತ ಭಾಂದವರಿಗೆ ತಿಳಿಸುವುದೇನಂದರೆ ಚಿಂಚೋಳಿ ತಾಲ್ಲೂಕಿನ WhatsApp ಗ್ರೂಪ್ ನಲ್ಲಿ ಧ್ವನಿ ಇರುವ ಫೋಟೊ ಹರಿದಾಡುತ್ತಿದ್ದು ಆ ಹುಳು ಕಡಿದರೆ ಮನುಷ್ಯ ಸಾಯುತ್ತಾನೆನ್ನುವ ಮಾಹಿತಿಯು ಶುದ್ಧ ಸುಳ್ಳು ಮಾಹಿತಿಯಾಗಿರುತ್ತದೆ. ಚಿತ್ರದಲ್ಲಿ ಕಾಣಿಸಿದ ಹುಳುವಿನ ವೈಜ್ಞಾನಿಕ ಹೆಸರು Cersa Lapida, ಇದು ಕೇವಲ ಒಂದು ಎಲೆ ತಿನ್ನುವ ಕೀಟ, ಸರ್ವೇ ಸಾಮಾನ್ಯವಾಗಿ ಔಡಲ ಹಾಗೂ ಸೂರ್ಯಕಾಂತಿ ಬೆಳಗಳಲ್ಲಿ ಬಹಳ ವಿರಳವಾಗಿ ಕಂಡು ಬರುತ್ತದೆ. ಈ ಹುಳು ಬಣ್ಣ ಬದಲಿಸುತ್ತದೆಂಬ ತಪ್ಪು ಮಾಗಿತಿಯು WhatsApp ಗ್ರೂಪ್ ನಲ್ಲಿ ಹರಿದಾಡುತ್ತಿದ್ದು. ಎಲೆ ತಿಂದಾಗ ಈ ಕೀಟವು ಹಸಿರು ಬಣ್ಣದಾಗಿರುತ್ತದೆ,

ಮತ್ತು ಹೂ ತಿಂದಾಗ ಹಳದಿ ಬಣ್ಣದಾಗಿರುತ್ತದೆ. ಹಾಗೂ ಕಾಯಿ ತಿಂದಾಗ ಕಪ್ಪು, ಬಣ್ಣಕ್ಕ ಸಹಜವಾಗಿ ತಿರುಗುತ್ತದೆ. ಈ ಹುಳಕ್ಕೆ ಮನುಷ್ಯನಿಗೆ ಕಡಿಯಲು ಬರುವುದಿಲ್ಲ. ಬೇರೆ ಹುಳುಗಳಂತೆ ಇದೊಂದು ಕಂಬಳಿ ಹುಳು, ಇದರಿಂದ ಮನುಷ್ಯನಿಗೆ ಯಾವುದೇ ತೊಂದರೆಯಾಗುವುದಿಲ್ಲ ಕಾರಣ ರೈತ ಭಾಂದವರು ಇಂಥ ಸುಳು ಸುದ್ದಿಗಳಿಗೆ ಕಿವಿಗೊಡದಿರಿ ಆ WhatApp ಸಂದೇಶದಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gruha joythi bill: ಗೃಹ ಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಹೇಗೆ ಬರಲಿದೆ ಇಲ್ಲಿದೆ ಸ್ಯಾಂಪಲ್ ಬಿಲ್.

whatsapp viral news-ವಾಟ್ಸಾಪ್ ಮೆಸೇಜ್ ಫಾರ್ವರ್ಡ್ ಮಾಡುವ ಮುನ್ನ ಈ ಕ್ರಮ ಅನುಸರಿಸಿ:

ನಿಮಗೆ ಯಾವುದೇ ರೀತಿಯ ಸಂಶಯತ್ಮಕ ಸಂದೇಶವು ವಾಟ್ಸಾಪ್ ನಲ್ಲಿ ಬಂದಾಗ ಅದನ್ನು ಇತರರಿಗೆ ಕಳುಹಿಸುವು ಮುನ್ನ ಅದರ ಕುರಿತು ನಿಜಾಂಶ ತಿಳಿಯಲು ಗೂಗಲ್ ನಲ್ಲಿ ಈ ಕುರಿತು ಸರ್ಚ್ ಮಾಡಿ ನಂತರ ನಿಮಗೆ ಈ ವಿಷಯ ಖತರಿ ಅನಿಸಿದರೆ ಮಾತ್ರ ಇತರರಿಗೆ ಆ ಸಂದೇಶವನ್ನು ಕಳುಹಿಸಿ ಇಲ್ಲವಾದಲ್ಲಿ ಯಾವುದೇ ಕಾರಣಕ್ಕು ಫಾರ್ವರ್ಡ್ ಮಾಡಬೇಡಿ.

ಒಂದು ಫಾರ್ವರ್ಡ್ ಮೆಸೇಜ್ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತದೆ ಸಮಾಜದಲ್ಲಿ ತಲ್ಲಣವನ್ನು ಸೃಷ್ಟಿಸುತ್ತದೆ ಇನ್ನು ಮುಂದೆ ತಪ್ಪದೇ ಮೇಲೆ ವಿವರಿಸಿರುವ ಕ್ರಮ ಅನುಸರಿಸಿ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ನಿಮ್ಮ ಅಪ್ತರಿಗೂ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

IFS scheme: ಈ ಯೋಜನೆಯಡಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ರೈತರಿಗೆ ಸಿಗಲಿದೆ 1.00 ಲಕ್ಷವರೆಗೆ ಸಹಾಯಧನ!

0

ರಾಜ್ಯ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಆಸಕ್ತಿಯಿರುವ ರೈತರಿಗೆ 2023-24 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿಯ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನುಷ್ಥಾನ ಮಾಡಲಾಗುತ್ತಿದೆ.

ಸಮಗ್ರ ಕೃಷಿ ಪದ್ಧತಿಯೆಂದರೆ ಎರಡು ಅಥವಾ ಹೆಚ್ಚಿನ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪರಸ್ಪರ ಅವಲಂಬನೆಯೊಂದಿಗೆ ಅಳವಡಿಸಿಕೊಳ್ಳುವುದು ಅಥವಾ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು, ರಾಜ್ಯದ ರೈತರು ಅನೇಕ ಶತಮಾನಗಳಿಂದ ವರ್ಷಪೂರ್ತಿ ಆದಾಯ ಮತ್ತು ಹೆಚ್ಚುವರಿ ಉದ್ಯೋಗಾವಕಾಶಗಳಂತಹ ಅನುಕೂಲಗಳಿಗಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸುತ್ತಿದ್ದಾರೆ. 

ಇದು ನೈಸರ್ಗಿಕ ತತ್ತ್ವವನ್ನು ಒಳಗೊಂಡಿರುವುದಲ್ಲದೆ, ಇದರ ಮೂಲಕ ಕೃಷಿ ಬೆಳೆಗಳ ಸಾಗುವಳಿ ಜೊತೆಗೆ ಕ್ಷೇತ್ರ ಮಟ್ಟದಲ್ಲಿ ಕೃಷಿಯೇತರ ಚಟುವಟಿಕೆಗಳಾದ ಜಾನುವಾರು, ಕೋಳಿ, ಮೀನುಗಾರಿಕೆ, ರೇಷ್ಮೆ ಇವುಗಳನ್ನು ಒಗ್ಗೂಡಿಸಿ ಅಧಿಕ ಆದಾಯ ಪಡೆಯಬಹುದಾಗಿರುತ್ತದೆ. ಸಮಗ್ರ ಕೃಷಿ ಪದ್ಧತಿಯಲ್ಲಿ ವಿಭಿನ್ನ ಚಟುವಟಿಕೆಗಳನ್ನು ಸಮತೋಲನದಲ್ಲಿ ಒಗ್ಗೂಡಿಸಿ ಪ್ರತಿಯೊಂದು ಘಟಕವು ಪೂರಕವಾಗಿ ಕೃಷಿ ಪದ್ಧತಿಗಳನ್ನು ಅಳವಡಿಸಲು ಹಾಗೂ ಒಂದರ ತ್ಯಾಜ್ಯವನ್ನು ಇನ್ನೊಂದರ ಸಂಪನ್ಮೂಲವಾಗಿ ಮರುಬಳಕೆ ಮಾಡಲಾಗುತ್ತದೆ.

ಸಮಗ್ರ ಕೃಷಿ ಪದ್ಧತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿವಿಧ ಘಟಕಗಳು ಉತ್ತಮ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳಲು, ನೀರಿನ ಒಳಹರಿವಿನ ಗರಿಷ್ಠ ಬಳಕೆಗೆ ಮತ್ತು ಅಧಿಕ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತವೆ. ಸಮಗ್ರ ಕೃಷಿ ಪದ್ಧತಿ ಶ್ರಮದಾಯಕವಾಗಿದ್ದರೂ, ರೈತರ ಕುಟುಂಬಗಳು ವರ್ಷದುದ್ದಕ್ಕೂ, ಆದಾಯ ಪಡೆಯುವಂತೆ ತೊಡಗಿಸಿಕೊಳ್ಳಲು ಸಹಾಯಕವಾಗುತ್ತವೆ. ಸಮಗ್ರ ಕೃಷಿ ಪದ್ಧತಿಯನ್ನು ಕ್ಲಸ್ಟರ್ (ಗುಚ್ಛ) ಮಾದರಿಯಲ್ಲಿ ಅನುಷ್ಠಾನ ಮಾಡುವುದರಿಂದ, ಸಂಪನ್ಮೂಲಗಳ ಸದ್ಬಳಕೆ ಮತ್ತು ಸಾಮೂಹಿಕ ಉತ್ಪನ್ನಗಳ ಮಾರಾಟಕ್ಕಾಗಿ ಉತ್ತೇಜಿಸಬಹುದಾಗಿರುತ್ತದೆ. ಇದರಲ್ಲಿ ಉತ್ಪಾದನಾ ವೆಚ್ಚ ಕಡಿಮೆಯಿದ್ದು, ಸುಸ್ಥಿರ ಆಧಾರದ ಮೇಲೆ ಆದಾಯವನ್ನು ಹೆಚ್ಚಿಸುತ್ತದೆ.

ಸಮಗ್ರ ಕೃಷಿ ಪದ್ಧತಿಯು ಏಕ ಬೆಳಪದ್ಮತಿ ವಿಧಾನದಿಂದ ಬಹು ಬೆಳಪದ್ಧತಿ ಬದಲಾವಣೆಗೆ ಅವಕಾಶ ಕಲ್ಪಿಸುತ್ತದೆ. ಕೃಷಿ ಪದ್ಧತಿಗಳಲ್ಲಿ ಜಾನುವಾರು, ಬೆಳೆ ಉತ್ಪಾದನೆ, ತೋಟಗಾರಿಕೆ, ಇತರ ರೈತರ ಆದಾಯ ಹೆಚ್ಚಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತದೆ.

ಸಮಗ್ರ ಕೃಷಿ ಪದ್ಧತಿ ವಿಸ್ತರಣೆ ಹಾಗೂ ಜನಪ್ರಿಯಗೊಳಿಸುವ ಕಾರ್ಯಕ್ರಮದ ಗುರಿ ಹಾಗೂ ಉದ್ದೇಶಗಳು:

ಯೋಜನೆಯ ಗುರಿ:

2023-24 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಾದ ತೋಟಗಾರಿಕೆ ಹಾಗೂ ಪಶುಸಂಗೋಪನೆಗಳನ್ನು ಒಗ್ಗೂಡಿಸಿ “ಸಮಗ್ರ ಕೃಷಿ ಪದ್ಧತಿ” ಮೂಲಕ ರೈತನ ಆದಾಯ ಹೆಚ್ಚಳ ಮಾಡುವುದು ಹಾಗೂ ಅಳವಡಿಸಿದ ಪ್ರದೇಶದಲ್ಲಿ, ಜಮೀನಿನಲ್ಲಿ ಬೆಳೆ ಉತ್ಪಾದಕತೆ, ಸುಸ್ಥಿರತೆ, ಸಮತೋಲನಾ ಆಹಾರ ಉತ್ಪಾದನೆ, ತಾಜ್ಯಗಳ ಮರುಬಳಕ ಹಾಗೂ ವರ್ಷಪೂರ್ತಿ ಆದಾಯ ಹೆಚ್ಚಿಸುವುದು ಮುಖ್ಯ ಗುರಿಯಾಗಿರುತ್ತದೆ.

ಉದ್ದೇಶಗಳು:

1, ಕೃಷಿ ಹಾಗೂ ಸಂಬಂಧಿತ ಕಾರ್ಯಕ್ಷೇತ್ರಗಳಲ್ಲಿ “ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಸಿದ್ಧಪಡಿಸಿದ್ದು, ಆಯಾ ಕ್ಷೇತ್ರಕ್ಕೆ ಸೂಕ್ತವಾಗುವಂತೆ ಅಳವಡಿಸುವುದು.

2. ಉತ್ತಮ ಬೇಸಾಯ ಪದ್ಧತಿಗಳಾದ ನೂತನ ತಾಂತ್ರಿಕತೆಗಳು, ಅಧಿಕ ಇಳುವರಿ ಕೊಡುವ ತಳಿಗಳನ್ನು ಸಂಯೋಜನೆಯಲ್ಲಿ ಬಳಸುವುದು, 3. ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರ ಆದಾಯ ಬರುವ ಉದ್ಯಮಗಳನ್ನು ಅಳವಡಿಸಲು ಪ್ರೇರೇಪಿಸುವುದು.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

ಆರ್ಥಿಕ ವೆಚ್ಚ:

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಸಮಗ್ರ ಕೃಷಿ ಮಾದರಿ ಸ್ಥಾಪಿಸಲು ಒಟ್ಟಾರೆ 72.736 ಕೋಟಿ ರೂಗಳ ಅನುದಾನ ಅನುಮೋದನೆಯಾಗಿದ್ದು, ರಾಜ್ಯಾದ್ಯಂತ ಮಳೆಯಾಶ್ರಿತ / ನೀರಾವರಿ ಮಾದರಿಗಳನ್ನು ಅಳವಡಿಸಲಾಗುವುದು. 2023-24 ನೇ ಸಾಲಿಗೆ ಎಲ್ಲಾ ಜಿಲ್ಲೆಗಳಲ್ಲಿ 4000 ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಅನುಷ್ಠಾನಗೊಳಿಸಲು ರೂ. 20,00 ಕೋಟೆಗಳ ಕಾರ್ಯಕ್ರಮ ರೂಪಿಸಲಾಗಿದೆ.

2023-24 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಸಮಗ್ರ ಕೃಷಿ ಪದ್ಮತಿ ಮಾದರಿಗಳನ್ನು ಅಳವಡಿಸಲು ಅವಕಾಶ ಕಲ್ಪಿಸಿದ್ದು, ರೈತರ ಆಸಕ್ತಿಯನ್ನು ಪರಿಗಣಿಸಿ ಬೇಡಿಕೆ ಇರುವ ಪಂಚಾಯಿತಿಯಲ್ಲಿ ಈಗಾಗಲೇ (2021-22 ಹಾಗೂ 2022-23 ನೇ ಸಾಲಿನಲ್ಲಿ) ಅನುಷ್ಮಾನ ಮಾಡಿದ್ದರೂ ಸಹ ಒಂದಕ್ಕಿಂತ ಹೆಚ್ಚು ಸಮಗ್ರ ಕೃಷಿ ಪದ್ಧತಿ ಮಾದರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಅನುಷ್ಠಾನ ಮಾಡದಿರುವ ಗ್ರಾಮ/ ಗ್ರಾಮ ಪಂಚಾಯಿತಿಗಳಲ್ಲಿ ಆದ್ಯತೆ ಮೇರೆಗೆ ಅನುಷ್ಠಾನ ಮಾಡಲಾಗುತ್ತದೆ.

ಯೋಜನೆಯ ವಿವರ ಹಾಗೂ ಅನುಷ್ಮಾನ ಮಾರ್ಗಸೂಚಿ ವಿವರ ಹೀಗಿದೆ:

ಕರ್ನಾಟಕ ರಾಜ್ಯದಲ್ಲಿ 6027 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ ಮಳೆ ಪ್ರಮಾಣದ ಆಧಾರದಲ್ಲಿ 4100 ಗ್ರಾಮ ಪಂಚಾಯಿತಿಗಳನ್ನು ಮಳೆಯಾಶ್ರಿತ ಪ್ರದೇಶಗಳಿಗಾಗಿ ಹಾಗೂ 1927 ಪಂಚಾಯಿತಿಗಳನ್ನು ನೀರಾವರಿ ಮಾದರಿಗಳಾಗಿ ಅನುಷ್ಠಾನಗೊಳಿಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಸ್ಥಾಪಿಸಲು ಯೋಜಿಸಿದ. ಪುಸಕ್ತ ವರ್ಷದಲ್ಲಿ ಅವಶ್ಯಕತೆ ಹಾಗೂ ಸದರಿ ಪ್ರದೇಶದ ಕೃಷಿ ಪದ್ಧತಿಯನ್ನಾಧರಿಸಿ ಮಳೆಯಾಶ್ರಿತ ಅಥವಾ ನೀರಾವರಿ ಸಮಗ್ರ ಕೃಷಿ ಪದ್ಮತಿಗಳಾಗಿ ಮಾದರಿಗಳನ್ನು ಅನುಷ್ಠಾನ ಮಾಡಹುದಾಗಿದ್ದು, ಸದರಿ ಮಾದರಿಗಳನ್ನು, ಇತರೆ ರೈತರಿಗೆ ಕಲಿಕಾ ಕ್ಷೇತ್ರವಾಗಿ ಸ್ಥಾಪಿಸಲು ಯೋಜಿಸಲಾಗಿದೆ.

ಫಲಾನುಭವಿ ಆಯ್ಕೆ ಹೇಗೆ ಮಾಡಲಾಗುತ್ತದೆ:

1. ಪ್ರತಿ ಪಂಚಾಯಿತಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮಾದರಿಯಂತೆ ಪ್ರತಿ ಹೋಬಳಿಯಲ್ಲಿ 8-10 ಸಮಗ್ರ ಕೃಷಿ ಪದ್ಧತಿ ತಾಕುಗಳನ್ನು ಆಯಾ ಜಿಲ್ಲೆಗಳ ಮಳೆಯಾಶ್ರಿತ ಪ್ರದೇಶ ಅಥವಾ ನೀರಾವರಿ ಪ್ರದೇಶಕ್ಕನುಗುಣವಾಗಿ ಸ್ಥಾಪಿಸುವುದು. ಪ್ರಸಕ್ತ ವರ್ಷದಲ್ಲಿ ಆದ್ಯತೆ ಮೇರೆಗೆ ಇಲ್ಲಿಯವರೆಗೆ ಅಂದರೆ 2021-22 ಮತ್ತು 2022-23 ನೇ ಸಾಲಿನಲ್ಲಿ ಅನುಷ್ಠಾನ ಮಾಡದಿರುವ ಪಂಚಾಯತಿಗಳಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡುವುದು ಹಾಗೂ ತದನಂತರ ಬೇಡಿಕೆ ಇರುವ ಪಂಚಾಯಿತಿಗಳಲ್ಲಿ ಒಂದಕ್ಕಿಂತ ಹೆಚ್ಚು ಮಾದರಿಯನ್ನು ಅನುಷ್ಠಾನ ಮಾಡುಲಾಗುತ್ತದೆ.

2. ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ಕನಿಷ್ಠ 1 ಎಕರೆಯಿಂದ ಗರಿಷ್ಠ 1 ಹೆಕ್ಟೇ‌ – ಪ್ರದೇಶದಲ್ಲಿ ಏರ್ಪಡಿಸಲಾಗುತ್ತದೆ.

3. ರೈತ ಸಂಪರ್ಕ ಕೇಂದ್ರವಾರು ಕೃಷಿ ಅಧಿಕಾರಿ/ಸಹಾಯಕ ಕೃಷಿ ಅಧಿಕಾರಿ ತಮ್ಮ ವ್ಯಾಪ್ತಿಯ ಅನುಷ್ಠಾನ ಮಾಡುವ ರೈತರ ಪಟ್ಟಿಯನ್ನು ಸಿದ್ಧಪಡಿಸಿ. ಫಲಾನುಭವಿಯು ಆಸಕ್ತ ಪ್ರಗತಿ ಪರ ರೈತನಾಗಿದ್ದು ಸಮಗ್ರ ಕೃಷಿ ಪದ್ಧತಿ ಅಳವಡಿಸಲು ಶೇ 50 ರಷ್ಟು ವಂತಿಕೆ ಭರಿಸಲು ಸಿದ್ಧನಾಗಿರಬೇಕು. ಇತರ ರೈತರು ಅಳವಡಿಸಲು ಸೂಕ್ತವಾಗುವಂತೆ ಮಾದರಿಯಾಗಿ ಸಮಗ್ರ ಕೃಷಿ ಪದ್ಧತಿಯ ತಾಕನ್ನು ರೂಪಿಸುವ ಮನೋಭಾವನೆ ಇರುವ ರೈತರನ್ನು ಆಯ್ಕೆ ಮಾಡಲಾಗುತ್ತದೆ.

4. ನಿಯಮಾನುಸಾರ ಪರಿಶಿಷ್ಟ ಜಾತಿ (17.15%), ಪರಿಶಿಷ್ಟ ಪಂಗಡ (6.95%) ರಂತ ಆಯ್ಕೆ ಮಾಡುವುದು. ಮಹಿಳೆಯರಿಗೆ (33%) ರಷ್ಟು, ಅಲ್ಪ ಸಂಖ್ಯಾತರಿಗೆ (15%) ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Gruha joythi bill: ಗೃಹ ಜ್ಯೋತಿ ಯೋಜನೆಯ ಶೂನ್ಯ ವಿದ್ಯುತ್ ಬಿಲ್ ಹೇಗೆ ಬರಲಿದೆ ಇಲ್ಲಿದೆ ಸ್ಯಾಂಪಲ್ ಬಿಲ್.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಆಸಕ್ತ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬವುದು.

ಬೇಕಾಗುವ ದಾಖಲಾತಿಗಳು:

1. ಆಧಾರ್ ಕಾರ್ಡ

2. ಬ್ಯಾಂಕ್ ಪಾಸ್ ಬುಕ್

3. ಪೋಟೋ

4. ಪಹಣಿ/ಉತಾರ್/RTC

ಸಹಾಯಧನದ ವಿವರ ಪ್ರತಿ ಹೆಕ್ಟೇರ್ ಗೆ:

Aadhar update: ಪ್ರಮುಖ ಸುದ್ದಿ-ಆಧಾರ್ ಕಾರ್ಡ್ ಹೊಂದಿರುವವರಿಗೆ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ.

0

ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಲಬುರಗಿ ಕಚೇರಿಯಿಂದ ಆಧಾರ್ ಕಾರ್ಡ(Aadhar card update) ಹೊಂದಿರುವ ನಾಗರೀಕರಿಗೆ ಒಂದು ಪ್ರಮುಖ ಸೂಚನೆಯನ್ನು ಪ್ರಕಟಿಸಿದೆ ಇದು ರಾಜ್ಯದ ಎಲ್ಲಾ ಭಾಗದ ಜನರಿಗೂ ಅನ್ವಯವಾಗುತ್ತದೆ ಪ್ರಕಟಣೆ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪತ್ರಿಕಾ ಪ್ರಕಟಣೆ ವಿವರ ಈ ರೀತಿ ಇದೆ ಆಧಾರ್ ಕಾರ್ಡ ಹೊಂದಿ ಹತ್ತು(10) ವರ್ಷ ಅಗಿರುವವರು ತಾವು ನೋದಣಿ ಮಾಡಿಕೊಂಡಿರುವ ಸಮಯದಲ್ಲಿ ನಮೂದಿಸಿರುವ ವಿಳಾಸ ಮತ್ತು ತಮ್ಮ ಗುರುತಿನ ವಿವರವನ್ನು ತಪ್ಪದೇ ನವೀಕರಿಸಲು  ಸೂಚಿಸಲಾಗಿದೆ, ಈ ಕೆಲಸ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರಿ ಯೋಜನೆಗಳಡಿ ಸೌಲಭ್ಯ ಪಡೆಯಲು ಅಗುವುದಿಲ್ಲ ಅದರಿಂದ ಇದನ್ನು ನಿರ್ಲಕ್ಷ ಮಾಡದಿರಿ.

ರಾಜ್ಯದಲ್ಲಿ ಆಧಾರ್ ಕಾರ್ಡ ಹೊಂದಿ 10 ವರ್ಷ ಮೇಲ್ಪಟ್ಟ ನಾಗರೀಕರು ಆಧಾರ್ ನೋದಣಿ ಸಮಯದಲ್ಲಿ ನಮೂದಿಸಿದ ವಿಳಾಸದಲ್ಲಿ ಈಗಲೂ ಇದ್ದರೂ ಸಹಿತ ಅಂತಹ ಆಧಾರ ಕಾರ್ಡಗಳು ನಿಷ್ಕ್ರಿಯವಾಗುತ್ತಿರುವುದರಿಂದ 11 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ ಹೊಂದಿದವರು

ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ (Proof of Ilitity ) ಮತ್ತು ವಿಳಾಸದ ದಾಖಲೆಗಳೊಂದಿಗೆ (Proof of Address) ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಆಧಾರ್ ಪ್ರಾಧಿಕಾರ(UIDAI) ರವರು ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ/ಕಾಲೋಚಿತಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. 

ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ಮತ್ತು ಮೋಬೈಲ್ ನಂಬರ್ ಅನ್ನು
ನವೀಕರಣಗೊಳಿಸಬೇಕಾಗಿರುತ್ತದೆ. 

ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ ನಾಗರೀಕರು ಪ್ರತಿ 10 ವರ್ಷಕ್ಕೊಮ್ಮೆ Bio-Metric ನವೀಕರಣ ಮಾಡಿಸಿಕೊಳ್ಳಲು ಕೋರಿದೆ. 

ಇದನ್ನೂ ಓದಿ: Crop loan details- ನಿಮ್ಮ ಮೊಬೈಲ್ ನಲ್ಲೇ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಬವುದು.

ಆಧಾರ್ ಸೇವಾ ಶುಲ್ಕ ವಿವರ ಈ ಕೆಳಗಿನಂತಿರುತ್ತದೆ:

ಹೊಸ ನೋಂದಣಿಯು ಉಚಿತವಾಗಿರುತ್ತದೆ. 

5 ವರ್ಷ ಮೇಲ್ಪಟ್ಟು 1 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೆಟ್ರಿಕ್ ನವೀಕರಣವು ಉಚಿತವಾಗಿರುತ್ತದೆ.

ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಟೇಲ್ ನಂಬರಗಳ ವಿವರಗಳ (Demographic) ನವೀಕರಣಕ್ಕೆ 50 ರೂ ಶುಲ್ಕ ಇರುತ್ತದೆ.

ಕಣ್ಣು, ಮುಖ, ಕೈ ಬೆರಳುಗಳ ವಿವರಗಳ (Bio-Metric) ನವೀಕರಣಕ್ಕೆ 100 ರೂ ಶುಲ್ಕ ಇರುತ್ತದೆ.

ಆಧಾರ್ ನೋಂದಣಿ ಮಾಡಿಸಿದ ನಂತರ ಸ್ವೀಕೃತಿಯಲ್ಲಿ ನಮೂದಿಸಿರುವ ಶುಲ್ಕವನ್ನು ಮಾತ್ರ ಪಾವತಿಸಬೇಕು ಹಾಗೂ ಪೂರ್ಣ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು.

ಆದ್ದರಿಂದ ರಾಜ್ಯದ ನಾಗರೀಕರು ಆಧಾರ್ ಹೊಸ ನೋಂದಣಿ ಹಾಗೂ ನವೀಕರಣಗಳ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

Adhar card Update link- ನಿಮ್ಮ ಮೊಬೈಲ್ ನಲ್ಲೇ ಮಾಡಬವುದು ಆಧಾರ್ ನವೀಕರಣ:

https://krushikamitra.com/111 ಲಿಂಕ್ ಮೇಲೆ ಕ್ಲಿಕ್ ಮಾಡಿ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ಹೇಗೆ ಆಧಾರ್ ಕಾರ್ಡ ನವೀಕರಣ(Aadhar update) ಮಾಡಬವುದು ಎಂದು ತಿಳಿಯಿರಿ.

ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

Tractor Juction: ಕಡಿಮೆ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳು ಇಲ್ಲಿ ಲಭ್ಯ.

0

ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕ ಅಗತ್ಯ ವಸ್ತುಗಳ/ಉಪಕರಣಗಳ ಸಂಪೂರ್ಣ ಮಾಹಿತಿ ಪಡೆದು ಖರೀದಿಯನ್ನು ಸಹ ಮಾಡಬವುದಾಗಿ ನಿಧಾನವಾಗಿ ಕೃಷಿ ಕ್ಷೇತ್ರಕ್ಕೂ ಡಿಜಿಟಲ್ ಸ್ಪರ್ಶ ಸಿಗುತ್ತಿದೆ. ಉತ್ತಮ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ (Second hand tractors)ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳನ್ನು ಮಾರಾಟ ಮತ್ತು ಖರೀದಿ ಮಾಡುವ ವೆಬ್ಸೈಟ್ ಒಂದರ ಕುರಿತು ಈ ಕೆಳಗೆ ತಿಳಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಅನಿವಾರ್ಯವಾಗಿದ್ದು, ಕೃಷಿ ಕಾರ್ಮಿಕರ ಕೊರತೆ ಮತ್ತು ಸರಿಯಾದ ಸಮಯಕ್ಕೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರು ಯಂತ್ರೋಪಕರಣಗಳ ಮೊರೆ ಹೊಗುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಪ್ರಥಮ ಅದ್ಯತೆ ಟ್ರಾಕ್ಟರ್ ಒಂದು. 

ಅದರೆ ಕೆಲವು ರೈತರಿಗೆ ಹೊಸ ಯಂತ್ರಗಳ ಮೇಲೆ ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಆಸಕ್ತಿಯಿರುವುದಿಲ್ಲ ಅಂತಹ ರೈತರಿಗೆ ಇಂದು ಈ ಅಂಕಣದಲ್ಲಿ ಅಧಿಕೃತ ಮೂಲದಿಂದ ಹೇಗೆ ನಾವು ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಇತರೆ ಕೃಷಿ ಉಪಕರಣಗಳು ಖರೀದಿ ಮಾಡಬವುದು ಎಂದು ವಿವರಿಸಿದ್ದೇವೆ.

ಈ Tractor Juction ಮೂಲಕ ಖರೀದಿ ಮಾಡುವ ರೈತರಿಗೆ ಅರ್ಥಿಕವಾಗಿ ನೆರವಾಗಳು ಲೋನ್(tractor loan) ಅನ್ನು ಸಹ ಇವರು ಮಾಡಿಕೊಡುತ್ತಾರೆ.

ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

ಟ್ರಾಕ್ಟರ್ ಜಂಕ್ಷನ್ (Tractor Juction) ನಲ್ಲಿ ಯಾವೆಲ್ಲ ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರಗಳು ಲಭ್ಯ?

ಎಲ್ಲಾ ಕಂಪನಿಯ ಟ್ರಾಕ್ಟರ್, ಒಕ್ಕಣೆ ಯಂತ್ರಗಳು, ಉಳುಮೆ ಉಪಕರಣಗಳು ಕಲ್ಟಿವೆಟರ್, ಪ್ಲೋ, ಟ್ರಾಲಿ, ಬಾಂಡ್ಲಿ ಇತ್ಯಾದಿಗಳು.

new model tractor information: ರೈತರು ಈ ಪ್ಲಾಟ್ ಪಾರ್ಮ್ ಮೂಲಕ ಹೊಸ ಟ್ರಾಕ್ಟರ್ ಮಾಹಿತಿಯನ್ನು ಪಡೆಯಬವುದು:

ನೀವೆನಾದರು ಹೊಸ ಟ್ರಾಕ್ಟರ್ ಖರೀದಿ ಮಾಡುವ ಆಸಕ್ತಿ ಹೊಂದಿದಲ್ಲಿ ಯಾವ ಕಂಪನಿ ಟಾಕ್ಟರ್ ಉತ್ತಮ ಮತ್ತು ಮಾರುಕಟ್ಟೆಯಲ್ಲಿ ಹೊಸ ಮಾಡೆಲ್ ಟಾಕ್ಟರ್ ಯಾವುದು ಬಿಡುಗಡೆಯಾಗಿ? ವಿವಿಧ ಕಂಪನಿವಾರು ಟ್ರಾಕ್ಟರ್ ವ್ಯಾತಾಸ್ಯವೇನು? ಸಂಪೂರ್ಣ ಮಾಹಿತಿಯನ್ನು ಈ https://www.tractorjunction.com/ ಲಿಂಕ್ ಮೇಲೆ ಕ್ಲಿಕ್ ಮಾಡಿ ಟ್ರಾಕ್ಟರ್ ಜಂಕ್ಷನ್ ವೆಬ್ಸೈಟ್ ಭೇಟಿ ಮಾಡಿ ತಿಳಿಯಬವುದು.

Second hand tractor- ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳನ್ನು ಹುಡುಕುವ ವಿಧಾನ:

https://www.tractorjunction.com/used-tractors-for-sell/ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಡಬದಿಯಲ್ಲಿ ಗೋಚರಿಸುವ Price Range ವಿಭಾಗದಲ್ಲಿ ನಿಮ್ಮ ದರವನ್ನು ಆಯ್ಕೆ ಮಾಡಿಕೊಂಡು ಅದರ ಕೆಳಗೆ ಕಾಣುವ Tractor HP Range ಅನ್ನು ಸಹ ಆಯ್ಕೆ ಮಾಡಿಕೊಳ್ಳಬವುದು ಇದರ ಜೊತೆಗೆ State ಆಯ್ಕೆಯಲ್ಲಿ ಕರ್ನಾಟಕ ಎಂದು ಟಿಕ್ ಮಾಡಿ ಹೀಗೆ  ಇತರೆ ಮಾಹಿತಿಯನ್ನು ನಿಮಗೆ ಬೇಕಾದ ಆಯ್ಕೆಯನ್ನು ಮಾಡಿ ಮೇಲೆ ಕಾಣುವ “Apply Filter” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ವಿವಿಧ ಬಗ್ಗೆಯ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ತೋರಿಸುತ್ತದೆ.

ಅದೇ ರೀತಿ Buy used ಆಯ್ಕೆ ಮೇಲೆ ಕ್ಲಿಕ್ ಮಾಡಿ Used Farm implements, used harvester, ಬಟನ್ ಮೇಲೆ ಕ್ಲಿಕ್ ಮಾಡಿ ಕೃಷಿ ಉಪಕರಣಗಳನ್ನು ಹುಡುಕಬವುದಾಗಿದೆ.

ಖರೀದಿ ವಿಧಾನ ಹೇಗೆ?

ನಿಮಗೆ ಇಷ್ಟವಾದ ಉಪಕರಣದ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ, ರಾಜ್ಯ, ಜಿಲ್ಲೆ ಮತ್ತು ನಿಮ್ಮ ದರ ಮಾಹಿತಿಯನ್ನು ಭರ್ತಿ ಮಾಡಿ Contact Seller ಮೇಲೆ ಕ್ಲಿಕ್ ಮಾಡಿದರೆ ಸಾಕು ಮಾರಾಟಗಾರನ್ನ ಹೆಸರು ಮತ್ತು ಮೊಬೈಲ್ ಸಂಖ್ಯೆ ತೋರಿಸುತ್ತದೆ ನೀವು ಅವರಿಗೆ ಕರೆ ಮಾಡಿ ಮುಂದಿನ ಪ್ರಕ್ರಿಯೆ ಮುಂದುವರೆಸಬವುದು.

ನಿಮ್ಮ ಬಳಿಯಿರುವ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಸೇರಿದಂತೆ ಎಲ್ಲಾ ಕೃಷಿ ಉಪಕರಣಗಳನ್ನು ಇಲ್ಲಿ ಮಾರಾಟ ಮಾಡಬವುದು:

ರೈತರು ಈ ಪ್ಲಾಟ್ ಪಾರ್ಮ್ ಮೂಲಕ ಖರೀದಿ ಜೊತೆಗೆ ತಮ್ಮ ಬಳಿ ಲಭ್ಯವಿರುವ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಮತ್ತು ಇತರೆ ಕೃಷಿ ಉಪಕರಣಗಳನ್ನು ಈ ವೆಬ್ಸೈಟ್ ಮೂಲಕ ಮಾರಾಟ ಮಾಡಬವುದು.

Tractor Loan: ರೈತರಿಗೆ ಉಪಕರಣ ಖರೀದಿಗೆ  ಸಾಲ ಸೌಲಭ್ಯ:

ಇದೆ ವೆಬ್ಸೈಟ್ ನಲ್ಲಿ ಗೋಚರಿಸುವ view loan offers ಮೇಲೆ ಕ್ಲಿಕ್ ಮಾಡಿ ರೈತರು ಈ ಪ್ಲಾಟ್ ಪಾರ್ಮ್ ಮೂಲಕ ಉಪಕರಣ/ಟ್ರಾಕ್ಟರ್ ಖರೀದಿಗೆ ಅರ್ಥಿಕವಾಗಿ ನೆರವಾಗಳು ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತದೆ.

ಇದನ್ನೂ ಓದಿ: Ration Card application-2023: ಇಂದಿನಿಂದ ರೇಷನ್ ಕಾರ್ಡ ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತು ತಿದ್ದುಪಡಿ ಪ್ರಾರಂಭ! ಇಲ್ಲಿದೆ ಅರ್ಜಿ ಸ್ಥಿತಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

Crop loan details- ನಿಮ್ಮ ಮೊಬೈಲ್ ನಲ್ಲೇ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಬವುದು.

0

ರೈತರು ಮತ್ತು ಕೃಷಿ ಜಮೀನು ಖರೀದಿ ಮಾಡಲು ಆಸಕ್ತಿಯಿರುವವರು ಆ ಜಮೀನಿನ ಮೇಲೆ ಎಷ್ಟು ಸಾಲವಿದೆ(Crop loan) ಮತ್ತು ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಯಾವ ಸರಕಾರಿ ಕಚೇರಿಗೆ ಭೇಟಿ ಮಾಡದೆ ಹೇಗೆ ತಿಳಿಯಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಅಪ್ತರಿಗೂ ಶೇರ್ ಮಾಡಿ ನಮ್ಮ ತಂಡವನ್ನು ಬೆಂಬಲಿಸಿ.

ರೈತರು ಅಥವಾ ಹೊಸದಾಗಿ ಕೃಷಿ ಜಮೀನು ಖರೀದಿ ಮಾಡುವವರು ಆ ಜಮೀನಿನ/ಸರ್ವೆ ನಂಬರ್ ಮೇಲೆ ಸಾಲವಿದಿಯೇ? ಇಲ್ಲವೇ ಎಂದು ಮತ್ತು ಸಾಲವಿದಲ್ಲಿ ಯಾವೆಲ್ಲ ಬ್ಯಾಂಕ್ ಗಳಲ್ಲಿ ಇದೆ? ಒಟ್ಟು ಸಾಲದ ಮೊತ್ತ ಎಷ್ಟು ಹೀಗೆ ಹಲವು ಮಾಹಿತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ವೆಬ್ಸೈಟ್ ಭೇಟಿ ಮಾಡಿ ತಿಳಿಯಬವುದು.

ಹೊಸದಾಗಿ ಜಮೀನು ಖರೀದಿ ಮಾಡುವವರಿಗೆ ಮತ್ತು ಹಾಲಿ ಕೃಷಿಕರಿಗೆ ಯಾವ ಸರ್ವೆ ನಂಬರ್ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿದಿರುವುದಿಲ್ಲ ಮತ್ತು ಅದನ್ನು ಎಲ್ಲಿ ವಿಚಾರಿಸಬೇಕು ಎನ್ನುವ ಮಾಹಿತಿಯು ಬಹಳ ಜನರಿಗೆ ಗೊತ್ತಿರುವುದಿಲ್ಲ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ರಾಜ್ಯ ಸರಕಾರದ ಬೆಳೆ ಸಾಲ ಕುರಿತು ರಚಿಸಿರುವ ಈ https://clws.karnataka.gov.in/ ತಂತ್ರಾಂಶದಲ್ಲಿ ದೊರೆಯುತ್ತದೆ.

ಯಾವೆಲ್ಲ ಮಾಹಿತಿ ಲಭ್ಯ:

ವಾಣಿಜ್ಯ ಬ್ಯಾಂಕ್ ನಲ್ಲಿ ಎಷ್ಟು ಸಾಲಪಡೆದಿದ್ದಾರೆ ಅದರ ವಿವರ ಇದರ ಜೊತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎಷ್ಟು ಸಾಲ ಪಡೆದ್ದಿದಾರೆ ಅದರ ವಿವರ, ರೈತನ ಹೆಸರು, ಜಿಲ್ಲೆ ,ತಾಲ್ಲೂಕು, ಯಾವ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆ? ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ದಿನಾಂಕ, ಒಟ್ಟು ಸಾಲದ ಮೊತ್ತದ  ಸರ್ವೆ ನಂಬರ್ ಮಾಹಿತಿ ದೊರೆಯುತ್ತದೆ.

Crop Loan Details- ನಿಮ್ಮ ಮೊಬೈಲ್ ನಲ್ಲೇ ಜಮೀನಿನ ಮೇಲಿರುವ ಸಾಲದ ವಿವರ ತಿಳಿಯುವ ವಿಧಾನ: 

ವಿಧಾನ-1

Step-1: ಮೊದಲಿಗೆ ಈ https://clws.karnataka.gov.in/clws/ ಮೇಲೆ ಕ್ಲಿಕ್ ಮಾಡಿ ನಂತರ “Aadhar number” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ಈ ರೀತಿ ಆಧಾರ್ ನಂಬರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಅಲ್ಲೇ ಪಕ್ಕದಲ್ಲಿ ಕಾಣುವ ಬಾಕ್ಸ್ ನಲ್ಲಿ ಚೆಕ್ ಮಾಡಬೇಕಾದ ರೈತರ ಆಧಾರ್ ನಂಬರ್ ನಮೂದಿಸಿ “Fetch Details” ಮೇಲೆ ಕ್ಲಿಕ್ ಮಾಡಿದರೆ ಸಾಕು ವಾಣೀಜ್ಯ ಬ್ಯಾಂಕ್, ಪ್ರಾಥಮಿಕ ಸಹಕಾರ ಸಂಘದಲ್ಲಿ ಎಷ್ಟು ಸಾಲವಿದೆ ಈ ಕುರಿತು ಸಂಪೂರ್ಣ ವಿವರ ಗೋಚರಿಸುತ್ತದೆ.

Step-3: ಅಲ್ಲೇ ಈ ಪುಟ ಎಡ ಬದಿಯ ಮೊದಲನೇ ಕಾಲಂನಲ್ಲಿರುವ “Reports” ಆಯ್ಕೆಯ ಚಿನ್ನೆಗಳ ಮೇಲೆ ಕ್ಲಿಕ್ ಮಾಡಿ ಬೆಳೆ ಸಾಲದ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬವುದು, ಇಲ್ಲಿ ರೈತರ ಸರ್ವೆ ನಂಬರ್, ವಿಸ್ತೀರ್ಣ ಹೀಗೆ ಹಲವು ಮಾಹಿತಿಯ ಪಿಡಿಎಫ಼್ ಪುಟ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Ration Card application-2023: ಇಂದಿನಿಂದ ರೇಷನ್ ಕಾರ್ಡ ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತು ತಿದ್ದುಪಡಿ ಪ್ರಾರಂಭ! ಇಲ್ಲಿದೆ ಅರ್ಜಿ ಸ್ಥಿತಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

ವಿಧಾನ-2

Step-1: ಈ ಕೊಂಡಿಯ https://landrecords.karnataka.gov.in  ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಕಂದಾಯ ಇಲಾಖೆಯ ಲಾಂಡ್ ರೆಕಾರ್ಡ ಜಾಲತಾಣಕ್ಕೆ ಭೇಟಿ ಮಾಡಬೇಕು, ನಂತರ ಇಲ್ಲಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

Step-2: ತದನಂತರ ಜಮೀನಿನ ವಿವರಗಳು ವಿಭಾಗದಲ್ಲಿ “ಸ್ವಾಧೀನದಾರರ ವಾರು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು, ಬಳಿಕ ನಿಮ್ಮ ಜಿಲ್ಲೆ ತಾಲ್ಲೂಕು , ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅಲ್ಲೇ ಕೆಳಗೆ ಕಾಣುವ “ವಿವರಗಳನ್ನು ಪಡೆ” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸರ್ವೇ ನಂಬರ್ ವಾರು ನಿಮ್ಮ ಗ್ರಾಮದ ಎಲ್ಲಾ ರೈತರ ಜಮೀನಿನ ವಿವರ ಗೋಚರಿಸುತ್ತದೆ.

Step-3: ಈ ಪುಟದಲ್ಲಿ ನಿಮ್ಮ್ಅ ಹೆಸರನ್ನು ಹುಡುಕಿ ಮೊದಲನೇ ಕಾಲಂನ ವೀಕ್ಷಣೆ ಕೆಳಗೆ ಇರುವ “View” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಜಮೀನ ಸಂಪೂರ್ಣ ವಿವರ ಗೋಚರಿಸುತ್ತದೆ.

Step-4: ಇದೇ ಪುಟದ  ನೀಲಿ ಬಣ್ಣದ “Owner Details” ವಿಭಾಗದ  ಕಾಲಂ ನಂಬರ್ 11.Other rights and liablities” ನಲ್ಲಿ ಈ ಸರ್ವೆ ನಂಬರ್ ಮೇಲೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಸಾಲವಿದೆ ಎಂದು ಗೋಚರಿಸುತ್ತದೆ ಒಂದೊಮ್ಮೆ ಈ ಕಾಲಂ ಖಾಲಿ ಇದ್ದಲ್ಲಿ ಈ ಸರ್ವೆ ನಂಬರ್ ಮೇಲೆ ಯಾವುದೇ ಸಾಲವಿಲ್ಲ ಎಂದು.

ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

Madras Eye : ರಾಜ್ಯದಲ್ಲಿ ಕೆಂಗಣ್ಣು ಕಾಯಿಲೆ, ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಪ್ರಕಟ.

0

ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ವಾತಾವರಣದ ವ್ಯತ್ಯಾಸದಿಂದ ಜನರಲ್ಲಿ ಕಣ್ಣಿನ ಉರಿ-ಊತ ಕೆಂಗಣ್ಣು(Madras eye) ಕಾಯಿಲೆ ಕಂಡು ಬರುತ್ತಿರುವುದರಿಂದ. ಈ ಕಾರಣದಿಂದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೇತ್ರ ಚಿಕಿತ್ಸಾ ವಿಭಾಗದ ಜಂಟಿ ನಿರ್ದೇಶಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕಳೆದ 3-4 ವಾರದಿಂದ ಬಿಟ್ಟು ಬಿಡದೆ ಅಧಿಕ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ರಾಜ್ಯಾದಂತ್ಯ ಕೆಂಗಣ್ಣು(Madras eye) ಸಮಸ್ಯೆಯೂ ಹೆಚ್ಚುತ್ತಿದ್ದು, ಮಕ್ಕಳಲ್ಲಿ, ಮಧ್ಯಮ ವಯಸ್ಸಿನವರಲ್ಲಿ ಮತ್ತು ವಯಸ್ಕರಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.

ಗ್ರಾಮೀಣ ಮತ್ತು ನಗರ ಭಾಗ ಜನರು ಈ ಸಮಸ್ಯೆಯಿಂದ ಚಿಕಿತ್ಸೆಗಾಗಿ ದಿನ ದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಸ್ಪತ್ರೆಗಳ ಕಡೆಗೆ ಬರ ತೊಡಗಿದ್ದು ಸಾಮಾನ್ಯವಾಗಿ ಮಳೆಗಾಲದಲ್ಲಿ ಬ್ಯಾಕ್ಟೀರಿಯಯಾ ಮತ್ತು ವೈರಾಣುಗಳು ಹೆಚ್ಚು ಕ್ರಿಯಾಶೀಲ ಅಗುವುದರಿಂದ ಕೆಂಗಣ್ಣು ಸಮಸ್ಯೆ ಉದ್ಬವಿಸುತ್ತದೆ.

ಮಕ್ಕಳಲ್ಲಿ ಕೆಂಗಣ್ಣು ಕಾಣಿಸಿಕೊಂಡಿರುವುದರಿಂದ ಈ ಕುರಿತು ಒಂದಿಷ್ಟು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಕಾರಣದಿಂದಾಗಿ ಈ ಕೆಂಗಣ್ಣು(Madras eye) ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗದೆ ಸೂಕ್ತ ಚಿಕಿತ್ಸಾ ಕ್ರಮ ಪಾಲನೆ ಮಾಡಿದರೆ ಈ ಸಮಸ್ಯೆ ಬೇಗ ಗುಣ ಮುಖವಾಗುತ್ತದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

ರೋಗದ ಲಕ್ಷಣಗಳು:

  • ರೋಗಿಯ ಕಣ್ಣಿನ ಬಿಳಿ ಭಾಗವು ಕೆಂಪಾಗುತ್ತದೆ.
  • ಕಣ್ಣುಗಳಲ್ಲಿ ಉರಿ ಮತ್ತು ನೋವು ಇರುತ್ತದೆ.
  • ಕಣ್ಣುಗಳಿಂದ ನಿರಂತರವಾಗಿ ನೀರು ಹೊರಬರುತ್ತಿರುತ್ತದೆ.
  • ಕಣ್ಣುಗಳು ಊದಿಕೊಳ್ಳುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು:

  • ಹೆಚ್ಚಿನ ಜನ ಇರುವ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು.
  • ಪದೇ ಪದೇ ಕಣ್ಣುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು.
  • ಸೋಪ್ ನಲ್ಲಿ ಆಗಾಗ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು.
  • ಕಣ್ಣಿನ ಉರಿ ಊತ ಬಂದ ವ್ಯಕ್ತಿ ಬೇರೆಯವರ ಜೊತೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸಬೇಕು.
  • ರೋಗಿಯು ಉಪಯೋಗಿಸಿದ ಟವೆಲ್, ತಲೆ ದಿಂಬನ್ನು ಇತರರು ಉಪಯೋಗಿಸದಂತೆ ನೋಡಿಕೊಳ್ಳಬೇಕು.

ಇದನ್ನೂ ಓದಿ: Ration Card application-2023: ಇಂದಿನಿಂದ ರೇಷನ್ ಕಾರ್ಡ ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತು ತಿದ್ದುಪಡಿ ಪ್ರಾರಂಭ! ಇಲ್ಲಿದೆ ಅರ್ಜಿ ಸ್ಥಿತಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

Karnataka Dam water level-2023: ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ರಾಜ್ಯದ ಜಲಾಶಯಗಳ ಒಳಹರಿವು!

0

ಕಳೆದ 1 ವಾರದಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡುಬಂದಿರುತ್ತದೆ. ಈ ಕೆಳಗೆ ಪಟ್ಟಿವಾರು ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ(karnataka Dam water level-2023) ಒಳಹರಿವು ಮತ್ತು ಹೊರಹರಿವು ಎಷ್ಟಿದೆ?(Inflows and Outflows) ಎಂದು ಅಂಕಿ-ಅಂಶಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಹಿಂದಿನ ತಿಂಗಳು ಮಳೆ ಅಭಾವದಿಂದ ರಾಜ್ಯದ ಜಲಾಶಯಗಳು ಬರಿದಾಗುತ್ತ ಹೊಗುತ್ತಿದ್ದವು ಆದರೆ ಈ ತಿಂಗಳ 2ನೇ ವಾರದಿಂದ ಬರುತ್ತಿರುವ ಉತ್ತಮ ಮಳೆಯಿಂದಾಗಿ ಈಗ ಬಹುತೇಕ ರಾಜ್ಯದ ಎಲ್ಲಾ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ಒಳ ಹರಿವು ಬರುತ್ತಿದೆ ಇದರಿಂದಾಗಿ ಡ್ಯಾಂ ಗಳಲ್ಲಿ ನೀರಿನ ಮಟ್ಟ ಏರಿಕೆಯತ್ತ ಸಾಗುತ್ತಿದೆ..

ಕರ್ನಾಟಕದ ಪ್ರಮುಖ ಜಲಾಶಯಗಳ ಪಟ್ಟಿ(karnataka Dam list):

ಸೂಫಾ ಜಲಾಶಯ(Supa Dam), ನಾರಾಯಣಪುರ ಜಲಾಶಯ(Narayanapura Dam), ಆಲಮಟ್ಟಿ ಜಲಾಶಯ (Almatti Dam), ಭದ್ರಾ ಜಲಾಶಯ (Bhadra Dam), ಹೇಮಾವತಿ ಜಲಾಶಯ (Hemavathi Dam), ಲಿಂಗನಮಕ್ಕಿ ಜಲಾಶಯ (Linganamakki Dam), ಕಬಿನಿ ಜಲಾಶಯ (Kabini Dam), ಘಟಪ್ರಭಾ ಜಲಾಶಯ (Ghataprabha Dam),  ವರಾಹಿ ಜಲಾಶಯ (Varahi Dam), ಹಾರಂಗಿ ಜಲಾಶಯ (Harangi Dam)​​,  ಕೆಆರ್​ಎಸ್​ ಜಲಾಶಯ (KRS Dam), ತುಂಗಭದ್ರಾ ಜಲಾಶಯ (Tungabhadra Dam),ಮಲಪ್ರಭಾ ಜಲಾಶಯ (Malaprabha Dam), ವಾಣಿವಿಲಾಸ(Vanivilasa dam)

ಇದನ್ನೂ ಓದಿ: Gruhajoyti scheme- ಗೃಹ ಜ್ಯೋತಿ ಯೋಜನೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ಬೆಸ್ಕಾಂ! ಆಗಸ್ಟ್ ತಿಂಗಳಲ್ಲಿ ಉಚಿತ ಬಿಲ್ ಪಡೆಯಲು ಈ ಕೆಲಸ ತಪ್ಪದೇ ಮಾಡಿ

karnataka Dam water level- 25 ಜುಲೈ 2023ಕ್ಕೆ ಜಲಾಶಯಗಳ ನೀರಿನ ಮಟ್ಟ (ಮೀಟರ್ ಗಳಲ್ಲಿ)-:

ಆಲಮಟ್ಟಿ- 515.86
ಭದ್ರಾ- 646.68 
ಹೇಮಾವತಿ- 885.78
ಕೆ.ಆರ್​.ಎಸ್ – 30.48
ತುಂಗಭದ್ರಾ – 489.72
ಮಲಪ್ರಭಾ- 626.97
ಲಿಂಗನಮಕ್ಕಿ- 542.19
ಘಟಪ್ರಭಾ- 650.28
ಕಬಿನಿ- 695.07
ವರಾಹಿ- 578.78
ಹಾರಂಗಿ- 869.57
ಸೂಫಾ- 539.50
ನಾರಾಯಣಪುರ: 487.79
ವಾಣಿವಿಲಾಸ ಸಾಗರ: 450.18

ಕಬಿನಿ ಜಲಾಶಯವು ಒಟ್ಟು ಸಾಮರ್ಥ್ಯಕ್ಕೆ ಶೇ 89 ರಷ್ಟು ಭರ್ತಿಯಾಗಿ ರಾಜ್ಯದ ಅತೀ ಹೆಚ್ಚು ಭರ್ತಿಯಾದ ಜಲಾಶಯಗಳಲ್ಲಿ ಪ್ರಥಮ ಸ್ಥಾನದಲಿದೆ. ವರಾಹಿ ಜಲಾಶಯ ಶೇ 28 ರಷ್ಟು ತುಂಬಿದ್ದು ಕೊನೆಯ ಸ್ಥಾನದಲ್ಲಿದೆ.

ಲಿಂಗನಮಕ್ಕಿ, ಸೂಪಾ, ತುಂಗಭದ್ರ, ಮಲಪ್ರಭಾ, ಘಟಪ್ರಭಾ ಜಲಾಶಯಗಳನ್ನು ಹೊರತುಪಡಿಸಿ ಉಳಿದೆಲ್ಲ ಜಲಾಶಯಗಳು ಶೇ 50 ರಷ್ಟುಕ್ಕಿಂತ ಹೆಚ್ಚು ಭರ್ತಿಯಾಗಿದೆವೆ.

Karnataka dams water storage- ನೀರಿನ ಸಂಗ್ರಹಣೆ ಮತ್ತು ಒಟ್ಟು ಸಾಮರ್ಥ್ಯ(ಟಿಎಂಸಿ ಗಳಲ್ಲಿ)(25-07-2023):

ಸೂಫಾ: ಇಂದಿನ ನೀರಿನ ಸಂಗ್ರಹಣೆ- 60.89 ಒಟ್ಟು ಸಾಮರ್ಥ್ಯ- 145.33

ನಾರಾಯಣಪುರ: ಇಂದಿನ ನೀರಿನ ಸಂಗ್ರಹಣೆ- 16.76 ಒಟ್ಟು ಸಾಮರ್ಥ್ಯ- 33.31

ಕೆಆರ್​ಎಸ್: ಇಂದಿನ ನೀರಿನ ಸಂಗ್ರಹಣೆ- 22.00 ಒಟ್ಟು ಸಾಮರ್ಥ್ಯ-  49.45

ತುಂಗಭದ್ರಾ: ಇಂದಿನ ನೀರಿನ ಸಂಗ್ರಹಣೆ- 31.66 ಒಟ್ಟು ಸಾಮರ್ಥ್ಯ-  105.79

ಮಲಪ್ರಭಾ: ಇಂದಿನ ನೀರಿನ ಸಂಗ್ರಹಣೆ- 14.33  ಒಟ್ಟು ಸಾಮರ್ಥ್ಯ-  37.78

ಆಲಮಟ್ಟಿ: ಇಂದಿನ ನೀರಿನ ಸಂಗ್ರಹಣೆ- 71.81 ಒಟ್ಟು ಸಾಮರ್ಥ್ಯ- 123.08

ಭದ್ರಾ: ಇಂದಿನ ನೀರಿನ ಸಂಗ್ರಹಣೆ- 36.53 ಒಟ್ಟು ಸಾಮರ್ಥ್ಯ- 71.54 

ಹೇಮಾವತಿ: ಇಂದಿನ ನೀರಿನ ಸಂಗ್ರಹಣೆ- 23.95 ಒಟ್ಟು ಸಾಮರ್ಥ್ಯ-  34.31

ಲಿಂಗನಮಕ್ಕಿ: ಇಂದಿನ ನೀರಿನ ಸಂಗ್ರಹಣೆ- 52.75 ಒಟ್ಟು ಸಾಮರ್ಥ್ಯ- 151.75 

ಘಟಪ್ರಭಾ: ಇಂದಿನ ನೀರಿನ ಸಂಗ್ರಹಣೆ- 23.64  ಒಟ್ಟು ಸಾಮರ್ಥ್ಯ- 51.00

ಕಬಿನಿ: ಇಂದಿನ ನೀರಿನ ಸಂಗ್ರಹಣೆ- 17.35 ಒಟ್ಟು ಸಾಮರ್ಥ್ಯ- 19.52 

ವರಾಹಿ: ಇಂದಿನ ನೀರಿನ ಸಂಗ್ರಹಣೆ- 8.59 ಒಟ್ಟು ಸಾಮರ್ಥ್ಯ- 31.10 

ಹಾರಂಗಿ: ಇಂದಿನ ನೀರಿನ ಸಂಗ್ರಹಣೆ-  6.60 ಒಟ್ಟು ಸಾಮರ್ಥ್ಯ- 8.55

ವಾಣಿವಿಲಾಸ ಸಾಗರ: ಇಂದಿನ ನೀರಿನ ಸಂಗ್ರಹಣೆ- 24.76 ಒಟ್ಟು ಸಾಮರ್ಥ್ಯ- 30.00

ಒಳಹರಿವು ಕ್ಯೂಸೆಕ್ಸ್ ಗಳಲ್ಲಿ(25-07-2023)- Karnataka dam Inflow:

ಕಬಿನಿ: ಒಳಹರಿವು- 25,896 

ವರಾಹಿ: ಒಳಹರಿವು- 7,618, 

ಹಾರಂಗಿ: ಒಳಹರಿವು- 19,343,

ಆಲಮಟ್ಟಿ: ಒಳಹರಿವು- 1,16,263 

ಭದ್ರಾ: ಒಳಹರಿವು- 31,425

ಹೇಮಾವತಿ: ಒಳಹರಿವು- 25,888

ಕೆಆರ್​ಎಸ್: ಒಳಹರಿವು- 48,025

ಸೂಫಾ: ಒಳಹರಿವು- 43,560

ತುಂಗಭದ್ರಾ: ಒಳಹರಿವು- 72,489

ಮಲಪ್ರಭಾ: ಒಳಹರಿವು- 19,106

ಲಿಂಗನಮಕ್ಕಿ: ಒಳಹರಿವು- 32,077, 

ಘಟಪ್ರಭಾ: ಒಳಹರಿವು- 67,317

ನಾರಾಯಣಪುರ: ಒಳಹರಿವು- 13,706

ವಾಣಿವಿಲಾಸ ಸಾಗರ: ಒಳಹರಿವು- 999

ಇದನ್ನೂ ಓದಿ: Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯ ಮೇಸೆಜ್ ಪಡೆಯಲು ವೆಬ್ಸೈಟ್ ನಲ್ಲಿ ಬದಲಾವಣೆ!

Pm-kisan 14th instalment: ನಾಳೆ ಕೇಂದ್ರ ಸರಕಾರದಿಂದ ರೈತರ ಖಾತೆಗೆ ಪಿ ಎಂ ಕಿಸಾನ್ ಯೋಜನೆಯ 2000 ರೂ ಹಣ ವರ್ಗಾವಣೆ!

0

ಕೇಂದ್ರ ಸರಕಾರದಿಂದ ನಾಳೆ(27-07-2023) ಬೆಳಿಗ್ಗೆ 11:00 ಗಂಟೆಗೆ ದೇಶದ 8.5 ಕೋಟಿ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಪಿ.ಎಂ ಕಿಸಾನ್ ಯೋಜನೆಯ(pm kisan Yojana) 2,000 ರೂ ಜಮಾ ಆಗಲಿದೆ. ಈ ಕುರಿತು ಕೇಂದ್ರ ಕೃಷಿ ಸಚಿವ(Agriculture minister) ನರೇಂದ್ರ ಸಿಂಗ್ ತೋಮರ್ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರೈತರಿಗೆ ಗೊಬ್ಬರ ಮತ್ತು ಬೀಜ ಖರೀದಿಗೆ ಅರ್ಥಿಕವಾಗಿ ಸಹಾಯ ನೀಡುವ ಉದ್ದೇಶದಿಂದ ಪಿ.ಎಂ ಕಿಸಾನ್ ಯೋಜನೆಯನ್ನು 2019ರಿಂದ ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಏಕ ಕಾಲಕ್ಕೆ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಇಲ್ಲಿಯವರೆಗೆ ರೂ 2,000 ದಂತೆ ಒಟ್ಟು 13 ಕಂತುಗಳನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.

Pm kisan 14th instalment: 14 ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಾಳೆ ಅಂದರೆ ದಿನಾಂಕ: 27-07-2023 ರ  11:00 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶದ ರೈತರ ಸಮೂಖದಲ್ಲಿ 8.5 ಕೋಟಿ ರೈತರ ಖಾತೆಗೆ ಏಕ ಕಾಲಕ್ಕೆ ನೇರ ನಗದು ವರ್ಗಾವಣೆ(DBT) ಮೂಲಕ ಅರ್ಥಿಕ ನೆರವನ್ನು ವರ್ಗಾವಣೆ ಮಾಡಲಿದ್ದಾರೆ.

ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ನೀವು ಭಾಗವಹಿಸಬವುದು ಈ https://pmevents.ncog.gov.in/registration/index/109 ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆದು ನಿಮ್ಮ ವಿವರವನ್ನು ನಮೂದಿಸಿ ನೊಂದಣಿ ಮಾಡಿಕೊಂಡು ನಾಳೆಯ ಪಿ ಎಂ ಕಿಸಾನ್ ಯೋಜನೆಯ ವಿಡಿಯೋ ಕಾನ್ಫರೆನ್ಸ್  ಕಾರ್ಯಕ್ರಮಕ್ಕೆ ಮನೆಯಲ್ಲೇ ಕುಳಿತು ರೈತರು ಈ ವಿಡಿಯೋ ಸಂವಾದಲ್ಲಿ ಭಾಗವಹಿಸಬವುದಾಗಿದೆ.

ಇದನ್ನೂ ಓದಿ: Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯ ಮೇಸೆಜ್ ಪಡೆಯಲು ವೆಬ್ಸೈಟ್ ನಲ್ಲಿ ಬದಲಾವಣೆ!

How to check pm kisan yojana status- ನಿಮ್ಮ ಖಾತೆಗೆ ಹಣ ಪಾವತಿಯನ್ನು ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಖಾತೆಗೆ ಹಣ ವರ್ಗಾವಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಬೆಳಗ್ಗೆ ಈ ಕಾರ್ಯಕ್ರಮ ಮುಗಿದ ನಂತರ ಸ್ವಲ್ಪ ಸಮಯ ಬಿಟ್ಟು ಏಕೆಂದರೆ ಹಣ ವರ್ಗಾವಣೆ ಮಾಹಿತಿ ಪಿ ಎಂ ಕಿಸಾನ್ ಯೋಜನೆಯ ವೆಬ್ಸೈಟ್ ನಲ್ಲಿ ಅಪ್ಡೇಟ್ ಅಗುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅದ್ದರಿಂದ ಸಂಜೆ ಅಥವಾ 28-07-2023 ರ ಬೆಳಗ್ಗೆ  https://pmkisan.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಖಾತೆಗೆ ಅರ್ಥಿಕ ನೆರವಿನ ಹಣ ಪಾವತಿ ಅಗಿರುವುದನ್ನು ಚೆಕ್ ಮಾಡಬವುದು.

Step-1: ನಿಮ್ಮ ಮೊಬೈಲ್ ಮೂಲಕ ಈ https://pmkisan.gov.in/ (28-07-2023 ರ ನಂತರ) ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಯೋಜನೆಯ ಜಾಲತಾಣ ಭೇಟಿ ಮಾಡಿ ನಂತರ “Know Your Stutas” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ ಅರ್ಜಿದಾರರ/ಫಲಾನುಭವಿಯ ರಿಜಿಸ್ಟ್ರೇಷನ್ ನಂಬರ್ ಹಾಕಿ ಅಲ್ಲೇ ಕಾಣುವ ಕ್ಯಾಪ್ಚನ್ ನಮೂದಿಸಿ “Get Data” ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ 14 ನೇ ಕಂತಿನ ಹಣ ವರ್ಗಾವಣೆ ವಿವರ ಗೋಚರಿಸುತ್ತದೆ.

ಇದಲ್ಲದೆ ಈ ಪುಟದಲ್ಲಿ ಇಲ್ಲಿಯವರೆಗೆ ಎಷ್ಟು ಕಂತು ಹಣ ಜಮಾ ಅಗಿದೆ? ಯಾವ ಬ್ಯಾಂಕ್ ? ಬ್ಯಾಂಕ್ ಖಾತೆಯ ಕೊನೆಯ 4 ಸಂಖ್ಯೆ. ಹಣ ವರ್ಗಾವಣೆಯಾದ ದಿನಾಂಕ ಮಾಹಿತಿಯನ್ನು ಸಹ ಇಲ್ಲಿ ತಿಳಿಯಬವುದು.

ಸಮಾನ್ಯವಾಗಿ ಈ ಹಿಂದಿನ 13ನೇ ಕಂತು ರೈತರಿಗೆ ಜಮಾ ಅಗಿದರೆ ಅಂತಹ ಎಲ್ಲಾ ರೈತರಿಗೆ ಈ ಕಂತಿನ ಹಣವು ವರ್ಗಾವಣೆ ಅಗಿರುತ್ತದೆ.

Know your registration number- ನಿಮ್ಮ ರಿಜಿಸ್ಟ್ರೇಷನ್ ನಂಬರ್ ತಿಳಿಯುವ ವಿಧಾನ:

https://pmkisan.gov.in/KnowYour_Registration.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ ನಂಬರ್ ಹಾಕಿ ಒಟಿಪಿ ಪಡೆದು ಅದನ್ನು ನಮೂದಿಸಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ ತಿಳಿದುಕೊಳ್ಳಬವುದು.

ಆಧಾರ್ ಕಾರ್ಡನಲ್ಲಿ ಹೆಸರು ತಿದುಪಡ್ದಿ ಮಾಡಿದ್ದರೆ ರೈತರಿಗೆ ಹಣ ಜಮಾ ಅಗುವುದಿಲ್ಲ- (PM-kisan “NAME CORRECTION AS PER AADHAAR)- 

ರೈತರು ತಮ್ಮ ಆಧಾರ್ ಕಾರ್ಡನಲ್ಲಿ ನಮೂದಿಸಿರುವ ಹೆಸರನ್ನು ತಿದುಪಡ್ಡಿ ಮಾಡಿದ್ದರೆ ಅಂತಹ ರೈತರು ತಪ್ಪದೇ ಈ ಯೋಜನೆಯ ತಂತ್ರಾಂಶದಲ್ಲಿ ನಿಮ್ಮ ಹೆಸರಿನಲ್ಲಿ ಅಗಿರುವ ಇಂಗ್ಲೀಷ್ ಅಕ್ಷರಗಳ ಬದಲಾವಣೆ ವಿವರವನ್ನು ಇಲ್ಲಿ ಅಪ್ಲೋಡ್ ಮಾಡಬೇಕು. ನೀವು ಇತೀಚೆಗೆ ಆಧಾರ್ ಕಾರ್ಡನ ತಿದ್ದುಪಡಿ ಮಾಡಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ ಮತ್ತು ಜೋಡಣೆಯಾಗಿರುವ ಮೊಬೈಲ್ ಸಹಿತ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕು ಇದಾದ ಬಳಿಕವೇ ನಿಮಗೆ ಹಣ ಪಾವತಿಯಾಗುತ್ತದೆ.

ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡನಲ್ಲಿ ಹೆಸರು ತಿದುಪಡಿಯನ್ನು ಈ ಯೋಜನೆಯ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಬವುದು:

Step-1:  ಈ https://pmkisan.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣದ ವೆಬ್ಸೈಟ್ ಭೇಟಿ ಮಾಡಿ ಮುಖಪುಟದಲ್ಲಿ ಕಾಣುವ “NAME CORRECTION AS PER AADHAAR” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರದಲ್ಲಿ ನಿಮ್ಮ ರಿಜಿಸ್ಟ್ರೇಷನ್ ನಂಬರ್(Registration Number) ಮತ್ತು ಅಲ್ಲೇ ಗೋಚರಿಸುವ ಕ್ಯಾಪ್ಚರ್ ಹಾಕಿ “Search” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರ “Edit” ಆಯ್ಕೆಯ ಮೇಲೆ ಕಿಕ್ ಮಾಡಿ ಪ್ರಸ್ತುತ ಆಧಾರ್ ಕಾರ್ಡನಲ್ಲಿರುವ ಹೆಸರು ಹೇಗೆ ಇದಿಯೋ ಹಾಗೆಯೇ ಟೈಪ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ನಮೂದಿಸಿ “Update” ಬಟನ್ ಮೇಲೆ ಕ್ಲಿಕ್ ಮಾಡಿದ್ದರೆ ನಿಮ್ಮ ಸರಿಯಾದ ಆಧಾರ್ ಕಾರ್ಡ ವಿವರ ಅಪ್ಲ್ಡೇಟ್ ಅಗುತ್ತದೆ.

Search ಮಾಡಿದ ನಂತರ ಈ ರೀತಿ “Record not found for correction or it has already been corrected” ತೋರಿಸಿದಲ್ಲಿ ಈಗಾಗಲೇ ನಿಮ್ಮ ವಿವರ ಸರಿಪಡಿಸಲಾಗಿದೆ ಎಂದು.

ಇದನ್ನೂ ಓದಿ: Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ!