Home Blog Page 82

NREGA Scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

0

ಕೃಷಿಕರಿಗೆ ಗ್ರಾಮೀಣ ಮಟ್ಟದಲ್ಲಿ ಕೃಷಿ ಮತ್ತು ಕೃಷಿ ಪೂರಕ ಕೆಲಸ/ಕಾಮಗಾರಿಗಳನ್ನು ಪ್ರಾರಂಭ ಮಾಡಲು ಆರ್ಥಿಕವಾಗಿ ಸಹಾಯಧನ ಒದಗಿಸಲು ಮತ್ತು ಗ್ರಾಮೀಣ ಭಾಗದ ಜನರಿಗೆ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ಒದಗಿಸುವ ದೇಸೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು(Mgnreg Scheme-2023) ನಮ್ಮ ರಾಜ್ಯದ ವಿವಿಧ ಅಭಿವೃದ್ದಿ ಇಲಾಖೆಗಳಿಂದ ಅನುಷ್ಥಾನ ಮಾಡಲಾಗುತ್ತದೆ.

ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ನಿಟ್ಟಿನಲ್ಲಿ
ನಿಗಧಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಆಸ್ತಿಗಳ ಸೃಜನೆ ಮಾಡುವ ಉದ್ದೇಶದಿಂದಾಗಿ ಕಳೆದ ಅನೇಕ ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯಡಿ 2023 ನೇ ವರ್ಷದಲ್ಲಿ ವೈಯಕ್ತಿಕವಾಗಿ ರೈತರು ತಮ್ಮ ಜಮೀನಿದಲ್ಲಿ ಯಾವೆಲ್ಲ ಕಾಮಕಾರಿಗಳನ್ನು ಕೈಗೊಳ್ಳಬವುದು ಎಂದು ಜಿಲ್ಲಾ ಪಂಚಾಯತ ಬೆಳಗಾವಿ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

Nrega scheme Benefits-2023: ಮನರೇಗಾ ಯೋಜನೆಯಡಿ ಯಾರೆಲ್ಲಾ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆಯಬಹುದು?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಜನಾಂಗ, ಬಿಪಿಎಲ್ ಕುಟುಂಬಗಳು, ಬುಡಕಟ್ಟು ಜನಾಂಗ, ಸಣ್ಣ & ಅತಿ ಸಣ್ಣ ರೈತರು, ಲಿಂಗತ್ವ ಅಲ್ಪಸಂಖ್ಯಾತರಿಗೂ ಯೋಜನೆಯಡಿ ಅವಕಾಶವಿರುತ್ತದೆ,  ವಿಕಲಚೇತನ ಪ್ರಧಾನ ಕುಟುಂಬಗಳು, ಸ್ತ್ರೀ ಪ್ರಧಾನ ಕುಟುಂಬಗಳು.

ಈ ಯೋಜನೆಯಡಿ ಕೆಲಸ ಮಾಡಿ ಸ್ವಾಭಿಮಾನದ ಬದುಕು ಸಾಗಿಸಿ ವಿಶೇಷ ವರ್ಗದ ಜಾಬ್‌ ಕಾರ್ಡ್ ಪಡೆದು, 100 ದಿನ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳಬಹುದಾಗಿದೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ ಪಡೆಯಬಹುದು ಮತ್ತು ಈ ಯೋಜನೆಯಡಿ ಗಂಡು ಹೆಣ್ಣಿಗೆ ಸಮಾನ ಕೂಲಿ ಒದಗಿಸಲಾಗುತ್ತದೆ.

udyoga khatri yojane-2023: ಈ ಯೋಜನೆಯಡಿ ಯಾವೆಲ್ಲ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಥಾನ ಮಾಡಬವುದು? ಮತ್ತು ಅನುದಾನದ ವಿವರ:

How to apply for nrega Scheme- ಅರ್ಜಿ ಎಲ್ಲಿ ಸಲ್ಲಿಸಬೇಕು?

ಆಸಕ್ತರು ಕಾಮಗಾರಿ ಬೇಡಿಗೆಯನ್ನು ನಿಮ್ಮ್ಮ ಗ್ರಾಮ ಪಂಚಾಯತಿ ಅಥವಾ ಹತ್ತಿರದ ಕಾಮಗಾರಿ ಸಂಬಂದಪಟ್ಟ ಇಲಾಖೆ ಅಂದರೆ ಕೃಷಿ ,ತೋಟಗಾರಿಕೆ,ರೇಷ್ಮೆ,ಪಶುಪಾಲನೆ, ಅರಣ್ಯ ಇಲಾಖೆ ಕಚೇರಿಗಳಿಗೆ ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆ ಕೊಟ್ಟು ಅರ್ಜಿ ಹಾಕಬವುದು ಅಥವಾ ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಮೂಲಕವು ಸಹ ಅರ್ಜಿ ಹಾಕಬವುದಾಗಿದೆ. ಕಾಯಕ ಮಿತ್ರ ಮೊಬೈಲ್ ಅಪ್ಲಿಕೇಶನ್ ಲಿಂಕ್: https://play.google.com/store/apps/details?id=com.effiatech.kayakamitra 

Nrega work process- ಕಾಮಗಾರಿ ಅನುಷ್ಥಾನ ಪ್ರಕ್ರಿಯೆ:

ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಗ್ರಾಮ ಪಂಚಾಯತಿ ಕಾರ್ಯಲಯದಲ್ಲಿ ಜರುಗುವ ಸಭೆಯಲ್ಲಿ ನಿಮ್ಮ ಕಾಮಗಾರಿ ವಿವರವನ್ನು ಮಂಡಿಸಿ ಕ್ರ‍ಿಯಾ ಯೋಜನೆಗೆ ಅನುಮೋದನೆ ಪಡೆದು ಸಂಬಂದಪಟ್ಟ ಇಲಾಖೆಗೆ ಕಡತವನ್ನು ವರ್ಗಾಹಿಸಿ ಅರ್ಜಿದಾರರಿಗೆ ಕೆಲಸ ಪ್ರಾರಂಭಿಸಲು ವರ್ಕ್ ಆರ್ಡರ್ ನೀಡಲಾಗುತ್ತದೆ, ಇದಾದ ಬಳಿಕ ಕಾಮಕಾರಿ ಪ್ರಾರಂಭವಾಗುವ ಮುಂಚಿತವಾಗಿ ಒಂದು ಜಿಪಿಎಸ್ ಪೋಟೋ ಮತ್ತು ಕಾಮಕಾರಿ ನಡೆಯುತ್ತಿರುವಾಗ ಮತ್ತು ಕಾಮಕಾರಿ 30% ಪೂರ್ಣಗೊಂಡಾಗ ಹೀಗೆ ವಿವಿಧ ಹಂತಗಳಲ್ಲಿ ಜಿಪಿಎಸ್ ಪೋಟೊ ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ನೇರ ನಗದು ವರ್ಗಾವಣೆ ಮೂಲಕ ಕಾಮಗಾರಿ ಹಣವನ್ನು ಪಾವತಿ ಮಾಡಲಾಗುತ್ತದೆ.

ಹಣ ಪಾವತಿಯು ಎರಡು ವಿಭಾಗವನ್ನು ಹೊಂದಿದ್ದು ಒಂದು ಮೇಟಿರಿಯಲ್ ಬಿಲ್/ ಪರಿಕರ ವೆಚ್ಚ ಮತ್ತೊಂದು ವರ್ಕರ್ಸ್ ಬಿಲ್/ಕೂಲಿ ವೆಚ್ಚ ಒಳಗೊಡಿರುತ್ತದೆ.

ಇದನ್ನೂ ಓದಿ: Gruhalakshmi Yojana: ಗೃಹಲಕ್ಷ್ಮಿ ಯೋಜನೆಯ ವೇಳಾಪಟ್ಟಿಯ ಮೇಸೆಜ್ ಪಡೆಯಲು ವೆಬ್ಸೈಟ್ ನಲ್ಲಿ ಬದಲಾವಣೆ!

MGNREG Twitter account link- ನರೇಗಾ ಯೋಜನೆಯಡಿ ರಾಜ್ಯದಲ್ಲಿ ರೈತರು ಕೈಗೊಳ್ಳುತಿರುವ ಪೋಟೋ ಸಹಿತ ಮಾಹಿತಿಯನ್ನು ಈ ಟ್ವಿಟರ್ ಖಾತೆಯಲ್ಲಿ ನೋಡಬವುದು:

https://twitter.com/MgnregsK?s=20 ಲಿಂಕ್ ಮೇಲೆ ಕ್ಲಿಕ್ ಮಾಡಿ ನರೇಗಾ ಯೋಜನೆಯ ಟ್ವಿಟರ್ ಖಾತೆ ಭೇಟಿ ಮಾಡಿ ರೈತರು ಈ ಯೋಜನೆಯಡಿ ನಮ್ಮ ರಾಜ್ಯದಲ್ಲಿ ಯಾವ ಯಾವ ಸ್ಥಳದಲ್ಲಿ ಯಾವ ರೀತಿಯ ಕಾಮಗಾರಿಗಳನ್ನು ರೈತರು ಅನುಷ್ಥಾನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ ಎಂದು ನಿಮ್ಮ ಮೊಬೈಲನಲ್ಲೇ ಮನೆಯಲ್ಲಿ ಕುಳಿತು ಈ ಟ್ವಿಟರ್ ಖಾತೆ ಭೇಟಿ ಮಾಡಿ ಮಾಹಿತಿ ತಿಳಿದುಕೊಂಡು ನೀವು ಯಾವ ತರಹದ ಕಾಮಗಾರಿಯನ್ನು ಕೈಗೆತ್ತಿಗೊಳ್ಳಬವುದು ಎಂದು ಯೋಜನೆಯನ್ನು ಹಾಕಿಕೊಳ್ಳಬವುದು

Narega helpline number 1800 4258 666-ನಿಮ್ಮ ಹಳ್ಳಿಯಲ್ಲಿ ಲಭ್ಯವಿರುವ ನರೇಗಾ ಯೋಜನೆ ಕಾಮಕಾರಿ ಮಾಹಿತಿ ಪಡೆಯಲು ಈ ಸಹಾಯವಾಣಿಗೆ ಕರೆ ಮಾಡಿ:

ಈ ಯೋಜನೆಯಡಿ ಮೇಲೆ ತಿಳಿಸಿರುವ ವೈಯಕ್ತಿಕ ಕಾಮಗಾರಿಯನ್ನು ತಮ್ಮ ಜಮೀನಿನಲ್ಲಿ ಅನುಷ್ಥಾನ ಮಾಡಲು ಆಸಕ್ತಿ ಹೊಂದಿದಲ್ಲಿ ನರೇಗಾ ಯೋಜನೆಯ ಈ 1800 425 8666 ಸಹಾಯವಾಣಿಗೆ ಕರೆಮಾಡಿ ಸಧ್ಯ ನಿಮ್ಮ ಭಾಗಕ್ಕೆ ಲಭ್ಯವಿರುವ ಯೋಜನೆ ಮಾಹಿತಿ ಮತ್ತು ಈ ಯೋಜನೆಯ ಕುರಿತು ಇತರೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬವುದಾಗಿದೆ.

ಇದನ್ನೂ ಓದಿ: Karnataka weather- 2023: ರಾಜ್ಯದ ಈ  ಜಿಲ್ಲೆಗಳಲ್ಲಿ  ಜುಲೈ 27ರವರೆಗೆ ಭಾರಿ ಮಳೆ ಸಾಧ್ಯತೆ!

New ration card application: ರೇಷನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ವಿವರ ಬದಲಾವಣೆ ಮಾಡುವುದೇಗೆ? ರೇಷನ್ ಕಾರ್ಡ್ ಕುರಿತು ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

0

ರಾಜ್ಯ ಸರಕಾರದಿಂದ ಅನ್ನ ಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಅನುಷ್ಥಾನ ಮಾಡಲು ಪ್ರಾರಂಭ ಮಾಡಿದ ನಂತರ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ರೇಷನ್ ಕಾರ್ಡ್ ಕುರಿತು ಪ್ರತಿನಿತ್ಯ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಈ ನಿಟ್ಟಿನಲ್ಲಿ ಈ ಕೆಳಗೆ ರೇಷನ್ ಕಾರ್ಡ್ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಪ್ರಮುಖವಾಗಿ ಬಾಡಿಗೆ ಮನೆಯಲ್ಲಿರುವವರು ರೇಷನ್ ಕಾರ್ಡ್ ಪಡೆಯಬಹುದೇ(How to apply for new ration card)? ರೇಷನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ವಿವರ ಬದಲಾವಣೆ ಮಾಡುವುದೇಗೆ? ಹೊಸ ರೇಷನ್ ಕಾರ್ಡಗೆ ಎಲ್ಲಿ ಅರ್ಜಿ ಸಲ್ಲಿಸಬೇಕು
(Ration card online application? ಇತ್ಯಾದಿ ಪ್ರಶ್ನೆಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ಸೈಟ್(https://ahara.kar.nic.in) ನಲ್ಲಿ ಪ್ರಕಟಿಸಿರುವ ಉತ್ತರಗಳ ವಿವರವನ್ನು  ವಿವರದ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಪಡಿತರ ಚೀಟಿ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸುವಾಗ ಉದ್ಭವಿಸಬಹುದಾದ ಪ್ರಶ್ನೆಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ಸೈಟ್ ನಲ್ಲಿ ಪ್ರಕಟಿಸಿರುವ ಉತ್ತರಗಳ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

1)ಅರ್ಜಿಯನ್ನು ಕೇವಲ ಆನ್ ಲೈನ್ ಮೂಲಕವೇ ಸಲ್ಲಿಸಬೇಕೆ-Ration card application? 

ಹೌದು, ಕೇವಲ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಯಾವುದೆ ಬರಹ ಹಾಗೂ ಮುದ್ರಿತ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

2)ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಎಲ್ಲಿ ದೊರೆಯುತ್ತದೆ-Ration card application online link?

ಈಗ ಹೊಸ ಪಡಿತರ ಚೀಟಿ ಪಡೆಯಲು Online ಮೂಲಕವೇ ಅರ್ಜಿ ಸಲ್ಲಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕಡ್ಡಾಯವಾಗಿ ಆಯಾ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಲಭ್ಯವಿರುವ ಗಣಕೀಕರಣ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬಹುದು. 

ನಗರ ಹಾಗೂ ಪಟ್ಟಣ ಪ್ರದೇಶದವರು ಖಾಸಗಿ ಕಂಪ್ಯೂಟರ್ ವ್ಯವಸ್ಥೆ ಮೂಲಕ Online ಸಲ್ಲಿಸಬಹುದು ಅಲ್ಲವೇ ಆಯಾ ಪ್ರದೇಶದ ತಾಲ್ಲೂಕು ಕಛೇರಿ, ಆಹಾರ ಸಹಾಯಕ ನಿರ್ದೇಶಕರ ಕಛೇರಿ ಅಥವಾ ಉಪನಿರ್ದೆಶಕರ ಕಛೇರಿಗಳಲ್ಲಿ Online ಮೂಲಕವೇ ಸಲ್ಲಿಸಬೇಕು.

3)ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರ ಬಳಿ ಇರಬೇಕಾದ ದಾಖಲೆಗಳು ಹಾಗೂ ಮಾಹಿತಿಗಳ ಯಾವುವು?

ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಬಳಿ ಈ ಕೆಳಕಂಡ ದಾಖಲೆಗಳು ಹಾಗೂ ಮಾಹಿತಿಯನ್ನು ಇಟ್ಟುಕೊಂಡಲ್ಲಿ ಮಾತ್ರ ನೀವು ಅರ್ಜಿಯನ್ನು Onlineನಲ್ಲಿ ಭರ್ತಿ ಮಾಡಿ ಮಾಡಿಸಿ ಸಲ್ಲಿಸಲು ಸುಲಭವಾಗುತ್ತದೆ. (ಆದರೆ ಅರ್ಜಿ ಸಲ್ಲಿಸುವಾಗ ಕಛೇರಿಯಲ್ಲಿ ಯಾವುದೇ ದಾಖಲೆಗಳ ಪ್ರತಿಗಳನ್ನು ನೀಡುವ ಅಗತ್ಯವಿಲ್ಲ).

ಇದನ್ನೂ ಓದಿ: Gruhalakshmi website link: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೇಸೆಜ್ ಬಂದಿಲ್ಲವೇ? ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ.

A) ಗ್ರಾಮಾಂತರ ಪ್ರದೇಶದವರು:

1. ನಿಮ್ಮ ಗ್ರಾಮಪಂಚಾಯಿತಿಯ ಹೆಸರು.

2. ನೀವು ಈಗ ವಾಸಿಸುವ ಮನೆ ವಿಳಾಸ, 

3. ಮನೆಯ ಆಸ್ತಿ ಸಂಖ್ಯೆ ವಿವರ,

4. ಮನೆಗೆ ವಿದ್ಯುತ್‌ ಸಂಪರ್ಕವಿರುವವರು ಕಡ್ಡಾಯವಾಗಿ ವಿದ್ಯುತ್ ಬಿಲ್ಲಿನ ಪ್ರತಿ.

5. ಕುಟುಂಬದ ಎಲ್ಲಾ ಸದಸ್ಯರ ಹೆಸರು, ಸದಸ್ಯರು ಮುಖ್ಯಸ್ಥರು ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ

6. ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ

7. ನಿಮ್ಮ ಕುಟುಂಬಕ್ಕಿರುವ ಅಡುಗೆ ಅನಿಲದ ಸರಬರಾಜಿನ ಇತ್ತೀಚಿನ ಬಿಲ್ ರಶೀದಿ,

B) ನಗರ ಪಟ್ಟಣ ಪ್ರದೇಶದವರು:

1. ನೀವು ವಾಸವಿರುವ ನಗರಸಭೆ/ಪುರಸಭೆ/ನಗರ ಪಾಲಿಕೆಯ ವಾರ್ಡ್ ಸಂಖ್ಯೆ.

2. ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶ (ಬಿ.ಬಿ.ಎಂ.ಪಿ ಪ್ರದೇಶ) ದವರಾಗಿದ್ದಲ್ಲಿ ನೀವು ಆಹಾರ ಇಲಾಖೆಯ ಯಾವ ವಲಯ ವ್ಯಾಪ್ತಿಯಲ್ಲಿದ್ದೀರಿ ಎಂಬ ಬಗ್ಗೆ ಮಾಹಿತಿ (ಇದನ್ನು ಸುಲಭವಾಗಿ ತಿಳಿಯಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯವರನ್ನು ಸಂಪರ್ಕಿಸಿ, ಇಲ್ಲವೇ ನಿಮ್ಮ ನೆರೆಹೊರೆಯವರಲ್ಲಿ ಈಗಾಗಲೇ ಲಭ್ಯವಿರುವ ಪಡಿತರ ಚೀಟಿಯನ್ನು ನೋಡಿ ತಿಳಿಯಿರಿ).

3. ನಿಮ್ಮ ಮನೆಯ ವಿದ್ಯುತ್ ಬಿಲ್, (ವಿದ್ಯುತ್ ಸಂಪರ್ಕವಿಲ್ಲದವರು ವಿದ್ಯುತ್‌ ಸಂಪರ್ಕವಿಲ್ಲವೆಂದು ಅರ್ಜಿಯಲ್ಲಿ ಘೋಷಿಸಬೇಕು.) 

4. ನಿಮ್ಮ ನಿವಾಸದ ಪೂರ್ಣ ವಿಳಾಸ, (ಕಡ್ಡಾಯವಾಗಿ ಅಂಚೆಪಿನ್ ಕೋಡ್‌ನೊಂದಿಗೆ). ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು (landmark).

5. ಕುಟುಂಬದ ಸದಸ್ಯರ ಹೆಸರು, ಮುಖ್ಯಸ್ಥರು ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ

6. ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ. 

7. ನಿಮ್ಮ ಸಂಪರ್ಕದ ಮೊಬೈಲ್ ನಂಬರ್ (ಕಡ್ಡಾಯ), ಸ್ವಂತ ಮೊಬೈಲ್‌ ಇಲ್ಲದಿದ್ದರೂ ನಿಮ್ಮನ್ನು ಸಂಪರ್ಕಿಸಬಹುದಾದ ಯಾವುದಾದರೂ ಮೊಬೈಲ್ ಸಂಖ್ಯೆಯನ್ನು ನೀಡುವುದು.

8. ಅರ್ಜಿದಾರರು ಆವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ.

9. ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ, (ವಿ.ಸೂ: ಮೇಲೆ ಪಟ್ಟಿ ಮಾಡಿರುವ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿದ್ದರೆ ಮಾತ್ರ ನೀವು ಆನ್ ಲೈನ್ ಮೂಲಕ ಅರ್ಜಿಸಲ್ಲಿಸುವ ಕೆಲಸ ಯಾವುದೇ ತಪ್ಪಿಲ್ಲದೇ ಮಾಡಬಹುದು, ಈ ದಾಖಲೆಗಳನ್ನು ಕಛೇರಿಗೆ ಸಲ್ಲಿಸುವ ಅಗತ್ಯವಿಲ್ಲ.ಆದರೆ ನಿಮ್ಮ ಸ್ಥಳ ತನಿಖೆಗೆ ಬಂದಾಗ ಇವುಗಳನ್ನು ಹಾಜರಪಡಿಸುವುದು ಕಡ್ಡಾಯ).

4) ಅರ್ಜಿ ಸಲ್ಲಿಸುವಾಗ ನಮ್ಮ ಮನೆಯ ವಿದ್ಯುತ್ ಮೀಟರ್ ನಂಬರ್‌ ನೀಡುವುದು ಕಡ್ಡಾಯವೇ?

ಹೌದು, ನಿಮ್ಮ ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್‌ ಮೀಟರ್ ಆರ್.ಆರ್.ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ, ವಿದ್ಯುತ್ ಸಂಪರ್ಕ ನಿಮ್ಮ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಿರಲು ಅಥವಾ ನಿಮ್ಮ ಮನೆ ಮಾಲೀಕರ ಹೆಸರಿನಲ್ಲಿರಲಿ, ಅದೇ ಆರ್.ಆರ್.ನಂಬರ್‌ ನೀಡುವುದು ಕಡ್ಡಾಯ, ತಮ್ಮ ಮನೆಗೆ ವಿದ್ಯುತ್‌ ಇಲ್ಲದವರು ತಮಗೆ ವಿದ್ಯುತ್‌ ಸಂಪರ್ಕ ಇಲ್ಲ ತಮ್ಮ ಮನೆಗೆ ಅಧಿಕೃತ ವಿದ್ಯುತ್‌ ಮೀಟರ್ ಇಲ್ಲ / ತಮ್ಮದು ಭಾಗ್ಯಜ್ಯೋತಿ ಸಂಪರ್ಕ | ತಮ್ಮದು ಗ್ರೂಪ್ ಕ್ವಾರ್ಟಸ್ ಆಗಿದ್ದು ಎಲ್ಲರಿಗೂ ಸಾಮನ್ಯ ಮೀಟರ್ ಇದೆ. ಹೀಗೆ ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು.

5). ನಮ್ಮ ಮನೆಯ ಆಸ್ತಿ ತೆರಿಗೆ ನಂಬರನ್ನೂ ನೀಡಬೇಕೆ-Income tax? 

ಹೌದು, ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಗ್ರಾಮಪಂಚಾಯಿತಿ ನೀಡಿರುವ ಆಸ್ತಿ ತೆರಿಗೆ ನಂಬರನ್ನು ನೀಡಬೇಕು. ನಿಮ್ಮ ಮನೆಗೆ ಆಸ್ತಿ ತೆರಿಗೆ ನಂಬರ್ ಇಲ್ಲದಿದ್ದರೆ ನಿಮ್ಮ ಮನೆಯಿರುವ ಜಾಗದ ಸರ್ವೆ ನಂಬರನ್ನು ಕಡ್ಡಾಯವಾಗಿ ನೀಡಬೇಕು. ಇದು ನಿಮಗೆ ಗೊತ್ತಿಲ್ಲದಿದ್ದಲ್ಲಿ ನಿಮ್ಮ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಿಂದ ಗ್ರಾಮಲೆಕ್ಕಿಗರಿಂದ ಪಡೆಯಿರಿ.

ನಗರ/ಪಟ್ಟಣ ಪ್ರದೇಶದವರೂ ತಮ್ಮ ನಿವಾಸದ ‘ಆಸ್ತಿ ತೆರಿಗೆ ನಂಬರ್‌ ಲಭ್ಯವಿದ್ದರೆ ನೀಡಬೇಕು. ಆದರೆ ನಗರ/ಪಟ್ಟಣ ಪ್ರದೇಶದವರು ತಮ್ಮ ಮನೆ ವಿದ್ಯುತ್ ಆರ್.ಆರ್. ವಿವರ ನೀಡುವುದು ಮಾತ್ರ ಕಡ್ಡಾಯ, ತಮ್ಮ ಮನೆಗೆ ವಿದ್ಯುತ್ ಇಲ್ಲದವರು ತಮಗೆ ವಿದ್ಯುತ್‌ ಸಂಪರ್ಕ ಇಲ್ಲ ತಮ್ಮ ಮನೆಗೆ ಅಧಿಕೃತ ವಿದ್ಯುತ್‌ ಮೀಟರ್ ಇಲ್ಲ ತಮ್ಮದು ಭಾಗ್ಯಜ್ಯೋತಿ ಸಂಪರ್ಕ ತಮ್ಮದು ಗ್ರೂಪ್‌ ಕ್ವಾರ್ಟಸ್‌ ಆಗಿದ್ದು ಪ್ರತ್ಯೇಕ ಮೀಟರ್ ಇಲ್ಲ ಎಂದು ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು.

6) ನಮ್ಮ ಮನೆ ಚಿಕ್ಕ ವಠಾರವೊಂದರಲ್ಲಿದೆ, ಅಲ್ಲಿ ಒಂದಕ್ಕಿಂತ ಹೆಚ್ಚು ಕುಟುಂಬಗಳಿದ್ದು, ಎಲ್ಲರಿಗೂ ಒಂದೇ ವಿದ್ಯುತ್‌ ಆರ್.ಆರ್, ನಂಬರ್ ಇದೆ. ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಬಹುದೆ?

ಹೌದು, ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್‌ನಲ್ಲಿ ಮೊದಲನೆಯ ಪುಟದಲ್ಲಿ ನೀವು ನಿಮ್ಮ ಆರ್.ಆರ್.ನಂಬರನ್ನು ಆನ್ ಲೈನ್ ಮೂಲಕ ಭರ್ತಿ ಮಾಡಿದ ಕೂಡಲೇ, ಆದೆ ಆರ್.ಆರ್. ವಿದ್ಯುತ್‌ ಸೌಲಭಯ ಹೊಂದಿರುವುದಾಗಿ ಈಗಾಗಲೇ ಮಾಹಿತಿ ಸಲ್ಲಿಸಿರುವವರ ಪಡಿತರ ಚೀಟಿಗಳೆಲ್ಲವೂ ಕಂಪ್ಯೂಟರ್ ಪುಟದಲ್ಲಿ ಪಟ್ಟಿಯಾಗುತ್ತವೆ. ಆಗ ಅವು ಯಾರಿಗೆ ಸೇರಿದ ಪಡಿತರ ಚೀಟಿಗಳೆಂದು ನೀವು ತಿಳಿಸಬೇಕು. ಅಂದರೆ ಆ ಪಡಿತರ ಚೀಟಿ ಅಲ್ಲೇ ವಾಸವಿರುವ ಮನೆ ಮಾಲೀಕರ ಕುಟುಂಬದ್ದು ಆಗಿ ರಬಹುದು, ಅಥವಾ ಬಾಡಿಗೆಗೆ ಅಲ್ಲೇ ವಾಸವಿರುವ ಬೇರೆ ಕುಟುಂಬದು ಇರಬಹುದು, ಅಥವಾ ಅಲ್ಲೇ ವಾಸವಿರುವ ಅರ್ಜಿದಾರರ ಸಂಬಂಧಿಕರ ಇನ್ನೊಂದು ಪ್ರತ್ಯೇಕ ಕುಟುಂಬವಿರಬಹುದು. ಇಲ್ಲವೇ ಅಲ್ಲಿರುವ ಒಂದಕ್ಕಿಂತ ಹೆಚ್ಚು ಮನೆಗಳಿಗೆ ಒಂದೇ ವಿದ್ಯುತ್‌ ಆರ್.ಆರ್.ನಂಬರಿನ ಸಂಪರ್ಕವಿರಬಹುದು ಇದಲ್ಲದೇ ಅಂತಹ ಪಡಿತರ ಚೀಟಿ ಇರುವ ಯಾವುದೇ ಕಟುಂಬವೂ ಅಲ್ಲಿ ಇಲ್ಲದಿರುಬಹುದು. ಈ ರೀತಿ ಅರ್ಜಿದಾರರು ನಿಜವಾದ ತಮ್ಮ ನಿಲುವನ್ನು ನೀಡಬೇಕು. ಈ ಮಾಹಿತಿ ನೀಡಿದ ನಂತರವೇ ಅರ್ಜಿದಾರರು ಹೊಸ ಅರ್ಜಿ ಸಲ್ಲಿಸಲು ಅರ್ಹರಾಗಿತ್ತಾರೆ.

ಇದನ್ನೂ ಓದಿ: Ration Card: ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್.

7) ನಾನಿನ್ನೂ ಮದುವೆಯಾಗಿಲ್ಲ. ಆದರೆ ನನ್ನ ಮೂಲ ಕುಟುಂಬದಿಂದ ಬೇರೆಯಾಗಿರುತ್ತೇನೆ. ನಾನು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದೇ?

ಹೌದು, ಸಲ್ಲಿಸಬಹುದು, ಆದರೆ ನೀವು ನಿಮ್ಮ ಮೂಲ ಕುಟುಂಬದ ಪೋಷಕರು ಈಗ ವಾಸಿಸುತ್ತಿರುವ ಪೂರ್ಣ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಹಾಗೂ ನೀವು ಮೂಲ ಕುಟುಂಬದಿಂದ ಬೇರೆಯಾಗಿದ್ದು, ಆ ಪಡಿತರ ಚೀಟಿಯಿಂದ ನಿಮ್ಮ ಹೆಸರನ್ನು ಬೇರ್ಪಡಿಸಿರುವ Deletion Certificate (ವರ್ಜಿತ ಪ್ರಮಾಣ ಪತ್ರ) ವಿವರವನ್ನು ಒದಗಿಸಬೇಕು.

8) ನಾವು ಬೇರೆ ಊರಿಂದ ಬಂದಿದ್ದೇವೆ, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದೆ? 

ಸಲ್ಲಿಸಬಹುದು, ಆದರೆ ನಿಮ್ಮ ಈ ಹಿಂದೆ ಇದ್ದ ಪಡಿತರ ಚೀಟಿಯನ್ನು ಅಧ್ಯರ್ಪಣ ಮಾಡಿರುವ ಬಗ್ಗೆ Surrender Certificate (ಅಧ್ಯರ್ಪಣ ಪ್ರಮಾಣ ಪತ್ರ) ವಿವರ ಭರ್ತಿಮಾಡಬೇಕು.

9)ಅರ್ಜಿ ಸಲ್ಲಿಸುವಾಗ ನನ್ನ ವರಮಾನದ ವಿವರ ನೀಡಬೇಕೆ? 

ಹೌದು, ನೀವು ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಉದ್ಯೋಗ ಮತ್ತು ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ವರಮಾನವನ್ನು ಕಡ್ಡಾಯವಾಗಿ ಘೋಷಣೆ ಮಾಡಬೇಕು.

10) ನಾವು ಬಾಡಿಗೆ ಮನೆಯಲ್ಲಿದ್ದೇವೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದೆ? 

ಹೌದು, ಸಲ್ಲಿಸಿ, ಆದರೆ ನೀವು ಪಾವತಿಸುತ್ತಿರುವ ಮಾಸಿಕ ಬಾಡಿಗೆಯನ್ನು ಅರ್ಜಿ ಸಲ್ಲಿಸುವಾಗ ಭರ್ತಿ ಮಾಡುವುದನ್ನು ಮರೆಯಬಾರದು.

C)ರೇಷನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ವಿವರ ಬದಲಾವಣೆ ಮಾಡುವುದೇಗೆ?

ನಿಮ್ಮ ಹತ್ತಿರದ ಗ್ರಾಮ ಒನ್ , ಕರ್ನಾಟಕ ಒನ್ ಅಥವಾ ಗ್ರಾಮ ಪಂಚಾಯತ್ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ರೇಷನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ವಿವರವನ್ನು ಬದಲಾಯಿಸಬವುದು.

11. ನನ್ನ ಬಳಿ ನಾನು ಇತ್ತೀಚೆಗೆ ಪಡೆದಿರುವ ಆಧಾರ್ ಕಾರ್ಡ್ ನಂಬರಿದೆ ಅದನ್ನು ನೀಡಬೇಕೆ? 

ಹೌದು, ನಿಮ್ಮ ಬಳಿ ಈಗಾಗಲೇ ಆಧಾರ್ ಕಾರ್ಡ್ ನಂಬರಿದ್ದರೆ ಕಡ್ಡಾಯವಾಗಿ ಅದನ್ನು ಸಹ ಅರ್ಜಿ ಸಲ್ಲಿಸುವಾಗ ನೀಡಿ

12) ನನ್ನ ಮನೆಯ ಆಸ್ತಿ ತೆರಿಗೆ ನಂಬರನ್ನು ನೀಡಬೇಕೆ?

ಹೌದು, ನಿಮ್ಮ ಮನೆಯ ಆಸ್ತಿ ತೆರಿಗೆ ನಂಬರನ್ನು ನೀಡಿದರೆ ಬೇರೆ ಯಾರೂ ನಿಮ್ಮ ಅರಿವಿಲ್ಲದೆ ನಿಮ್ಮ ಮನೆಯ ವಿಳಾಸದಲ್ಲಿ ಇನ್ನೊಂದು ಪಡಿತರ ಚೀಟಿ ಪಡೆಯುವುದನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯವಾಗುವುದು,

13) ನಾನು ಅರ್ಜಿಯಲ್ಲಿ ಭರ್ತಿ ಮಾಡುವ ವಿವರದ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ನೀಡಬೇಕೆ? 

ಹೌದು, ನೀವು ಅರ್ಜಿಯಲ್ಲಿ ನೀಡುವ ಎಲ್ಲಾ ವಿವರಗಳ ಬಗ್ಗೆ ನಿಮ್ಮಲ್ಲಿರುವ ಮೂಲ ದಾಖಲೆಗಳನ್ನು ಆಹಾರ ನಿರೀಕ್ಷಕರು ನಿಮ್ಮ ಅರ್ಜಿ ಪರಿಶೀಲನೆ ಪ್ರಯುಕ್ತ ಸ್ಥಳ ತನಿಖೆಗಾಗಿ ಬಂದಾಗ ಕಡ್ಡಾಯವಾಗಿ ಪರಿಶೀಲನೆಗೆ ಹಾಜರುಪಡಿಸಬೇಕು.

14) ನನ್ನ ಹುಟ್ಟಿದ ದಿನಾಂಕವನ್ನು ತಿಳಿಸಬೇಕೆ?

ಹೌದು, ನಿಮ್ಮ ಮತ್ತು ಎಲ್ಲಾ ಕುಟುಂಬ ಸದಸ್ಯರ ಹುಟ್ಟಿದ ದಿನಾಂಕವನ್ನು ಕಡ್ಡಾಯವಾಗಿ ಭರ್ತಿ ಮಾಡಿ. ಒಂದು ವೇಳೆ ನಿಜವಾದ ದಿನಾಂಕ ಗೊತ್ತಿಲ್ಲದಿದ್ದರೆ, ಹುಟ್ಟಿದ ವರ್ಷವನ್ನು ಭರ್ತಿ ಮಾಡುವುದಂತೂ ಕಡ್ಡಾಯ.

15) ನಾನು ಅರ್ಜಿಯಲ್ಲಿ ಯಾವುದಾದರೂ ತಪ್ಪು ಮಾಹಿತಿ ನೀಡಿದರೆ ಅದು ಶಿಕ್ಷಾರ್ಹವೇ?

ಹೌದು, ಅರ್ಜಿಯಲ್ಲಿ ನೀವು ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದರೆ ನೀವೇ ಅರ್ಜಿಯಲ್ಲಿ ಸ್ವತಃ ಘೋಷಿಸಿರುವಂತೆ ಸರ್ಕಾರದ ಆದೇಶ ಸಂಖ್ಯೆ ಎಫ್.ಎಫ್.ಡಿ/32/ಇ.ಪಿ.ಎಂ.77, ದಿನಾಂಕ 30/09/1977, Karnataka (Prevention of Unauthorised, Possession of Ration Card) Order 1977 ಹಾಗೂ ಭಾರತ ದಂಡ ಸಂಹಿತೆ ಅಡಿಯಲ್ಲಿ ಶಿಕ್ಷಾರ್ಹರಾಗುತ್ತೀರಿ. ಎಚ್ಚರವಹಿಸಿ,

ಹೆಚ್ಚಿನ ಮಾಹಿತಿ ಪಡೆಯಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್ಸೈಟ್ ಲಿಂಕ್: https://ahara.kar.nic.in/

ಇದನ್ನೂ ಓದಿ: ನಿಮ್ಮ ರೇಶನ್ ಕಾರ್ಡ್ ಸಕ್ರಿಯವಾಗಿರುವುದನ್ನು ತಿಳಿಯುವುದು ಹೇಗೆ? ಕುಟುಂಬದ ಮುಖ್ಯಸ್ಥರ ವಿವರ ತಿಳಿಯುವ ವಿಧಾನ.                                                    

Online RTC : ನಿಮ್ಮ ಜಮೀನಿನ ಪಹಣಿ/ಉತಾರ್ ಪ್ರಿಂಟ್ ತೆಗೆಸಲು ಸರ್ವೆ ನಂಬರ್ ಮರೆತು ಹೋಗಿದೆಯೇ? ಈ ಇಲ್ಲಿದೆ ಸರ್ವೆ ನಂಬರ್ ಇಲ್ಲದೇ ಪಹಣಿ ತೆಗೆಯುವ ಐಡಿಯಾ!

0

ಆತ್ಮೀಯ ರೈತ ಬಾಂಧವರೇ! ಇಂದು ಈ ಅಂಕಣದಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಸರ್ವೆ ನಂಬರ್(Land records) ಮತ್ತು ಹಿಸ್ಸಾ ನಂಬರ್ ಇಲ್ಲದೆಯೇ ಹೇಗೆ ನಿಮ್ಮ ಪಹಣಿಯ(online rtc) ಸರ್ವೆ ನಂಬರ್ ಮಾಹಿತಿ ಪಡೆದು ಹೇಗೆ ಪಹಣಿ/ಉತಾರ್/RTC ಪ್ರಿಂಟ್ ತೆಗೆದುಕೊಳ್ಳಬವುದು ಎಂದು ವಿವರಿಸಲಾಗಿದೆ.

ರೈತರು ವಿವಿಧ ಇಲಾಖೆ ಯೋಜನೆಗಳ ಸವಲತ್ತು ಪಡೆಯುವ ಸಂದರ್ಭದಲ್ಲಿ ಪಹಣಿ/ಉತಾರ್/RTC ಒದಗಿಸುವುದು ಅತ್ಯಗತ್ಯವಾಗಿರುತ್ತದೆ, ಅನೇಕ ಜನರಿಗೆ ತಮ್ಮ ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್ ಸರಿಯಾಗಿ ನೆನಪಿರುವುದಿಲ್ಲ ಮತ್ತು ಕೆಲವೊಮ್ಮೆ ನಿಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ಬದಲಾವಣೆ ಅಗಿರುತ್ತವೆ ಇಂತಹ ಸನ್ನಿವೇಶಗಳಲ್ಲಿ ರೈತರು ಪಹಣಿ ಮುದ್ರಿಸಲು ಹರಸಾಹಸ ಪಡಬೇಕಾಗುತ್ತದೆ.

ಈ ಎಲ್ಲಾ ಸಮಸ್ಯೆಗಳಿಗೆ ಇಂದು ಈ ಅಂಕಣದಲ್ಲಿ ಸೂಕ್ತ ಪರಿಹಾರ ಕ್ರಮವನ್ನು ತಿಳಿಸಲಾಗಿದೆ ಹೇಗೆ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ಮತ್ತು ಹಿಸ್ಸಾ ಸಂಖ್ಯೆಯನ್ನು ಪಡೆದು ಪಹಣಿ ಪ್ರಿಂಟ್ ತೆಗೆಸಿಕೊಳ್ಳಬವುದು ಎಂದು ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ ಈ ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ತಪ್ಪದೇ ನಿಮ್ಮ ಅಪ್ತರಿಗೂ ಶೇರ್ ಮಾಡಿ ಸಹಕರಿಸಿ.

Online RTC- ನಿಮ್ಮ ಹೆಸರಿನ ಜಮೀನಿನ ಸರ್ವೆ ನಂಬರ್ ಪಡೆಯುವುದು ಹೇಗೆ?

Step-1: ಮೊದಲಿಗೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ(Revenue Department) ದಿಶಾಂಕ್ ವೆಬ್ಸೈಟ್(Dishank website) ಭೇಟಿ ಮಾಡಬೇಕು. 
Link: https://landrecords.karnataka.gov.in 

Step-2: ನಂತರ ಮೇಲೆ ಕನ್ನಡ/English ಭಾಷೆ ಆಯ್ಕೆಯಲ್ಲಿ “ಕನ್ನಡ” ಮೇಲೆ  ಕ್ಲಿಕ್ ಮಾಡಿಕೊಂಡು, ಜಮೀನಿನ ವಿವರಗಳು ವಿಭಾಗದಲ್ಲಿ “ಸ್ವಾದೀನದಾರರವರು” ಎಂದು ಗೋಚರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು “ವಿವರಗಳನ್ನು ಪಡೆ” ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಇಲ್ಲಿ ನಿಮ್ಮ ಗ್ರಾಮದ ಎಲ್ಲಾ ರೈತರ ಸರ್ವೆ ನಂಬರ್ ವಾರು ಜಮೀನಿನ ವಿವರ ತೋರಿಸುತ್ತದೆ ಇಲ್ಲಿ ನೀವು ನಿಮ್ಮ ಹೆಸರನ್ನು ಹುಡುಕಿ ನಿಮ್ಮ ಜಮೀನಿನ ಸರ್ವೆ ನಂಬರ್ ಮತ್ತು ಹಿಸ್ಸಾ ಮಾಹಿತಿಯನ್ನು ಪಡೆದುಕೊಳ್ಳಬವುದು. ಇದರ ಜೊತೆಗೆ ಅಲ್ಲೇ ಪಕ್ಕದಲ್ಲಿ ಕಾಣುವ “View” ಬಟನ್ ಮೇಲೆ ಕ್ಲಿಕ್ ಮಾಡಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬವುದು.

ಗಮನಿಸಿ: ಒಂದು ಪುಟದಲ್ಲಿ ಕೇವಲ 10 ಜನರ ವಿವರ ಮಾತ್ರ ಗೋಚರಿಸುತ್ತದೆ ಪುಟದ ಕೆಳಗೆ ಇರುವ “Next” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ರೈತರ ವಿವರ ತಿಳಿಯಬವುದು.

ಇದನ್ನೂ ಓದಿ: Gruhalakshmi website link: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೇಸೆಜ್ ಬಂದಿಲ್ಲವೇ? ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ.

ಪಹಣಿ ಪ್ರಿಂಟ್ ತೆಗೆಯಲು ಹೀಗೆ ಮಾಡಿ:

ಈ ಮೇಲೆ ತಿಳಿಸಿದ ವಿಧಾನದ ಮೂಲಕ ನಿಮ್ಮ ಜಮೀನಿನ ಸರ್ವೆ ನಂಬರ್ ಹಿಸ್ಸಾ ಪಡೆದು ನಿಮ್ಮ ಹತ್ತಿರದ ನಾಡ ಕಚೇರಿ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಸರ್ವೇ ನಂಬರ್ ಹೇಳಿ ಪಹಣಿ ಪ್ರಿಂಟ್ ತೆಗೆಸಿಕೊಳ್ಳಬವುದು ಅಥವಾ ನಿಮ್ಮ ಮೊಬೈಲ್ ನಲೇ ಪಹಣಿ ನೋಡಲು ಈ https://landrecords.karnataka.gov.in/Service2/rtc.aspx ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು “ಗೋ” ಮೇಲೆ ಕ್ಲಿಕ್ ಮಾಡಿ ನಂತರ ಸರ್ ನಾಖ್, ಹಿಸ್ಸಾ ನಂಬರ್, ಅವಧಿ, ವರ್ಷ ಆಯ್ಕೆಯನ್ನು ಮಾಡಿಕೊಂಡು “ವಿವರಗಳನ್ನು ಕರೆತರು” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಪಹಣಿಯ ವಿವರ ತೋರಿಸುತ್ತದೆ ಪಹಣಿ ನೋಡಲು ಅಲ್ಲೇ ಪುಟದ ಕೆಳಗೆ ಕಾಣುವ “ವೀಕ್ಷಣೆ” ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ! 

Karnataka Dam water level: ರಾಜ್ಯದ ಜಲಾಶಯಗಳ ಒಳ ಹರಿವು ಏರಿಕೆ! ನೀರಿನ ಮಟ್ಟದ ಸಂಪೂರ್ಣ ವಿವರ.

0

ನಿನ್ನೆಯಿಂದ ಮತ್ತೆ ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿರುವುದರಿಂದ ರಾಜ್ಯದ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಏರಿಕೆಯಾಗುತ್ತಿದ್ದು ಯಾವ ಡ್ಯಾಮ್ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ(karnataka Dam water level) ಒಳಹರಿವು ಎಷ್ಟಿದೆ?(Inflows and Outflows) ಎಂದು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ತಿಂಗಳಿನಲ್ಲಿ ನೀರಿಕ್ಷಿತ ಪ್ರಮಾಣದಲ್ಲಿ ಡ್ಯಾಂಗಳಿಗೆ ಒಳ ಹರಿವು ಬಂದಿರುವುದಿಲ್ಲ ಇನ್ನಾದರೂ ಉತ್ತಮ ಮಳೆ ಮುಂದುವರೆದು ಎಲ್ಲಾ ಜಲಾಶಯಗಳ ಒಳ ಹರಿವು ಏರಿಕೆಯಾಗಿ ನೀರಿನ ಮಟ್ಟ ಹೆಚ್ಚಾಗಬೇಕಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಪಟ್ಟಿ(karnataka Dam list):

ಲಿಂಗನಮಕ್ಕಿ ಜಲಾಶಯ (Linganamakki Dam), ಕಬಿನಿ ಜಲಾಶಯ (Kabini Dam), ಘಟಪ್ರಭಾ ಜಲಾಶಯ (Ghataprabha Dam),  ವರಾಹಿ ಜಲಾಶಯ (Varahi Dam), ಹಾರಂಗಿ ಜಲಾಶಯ (Harangi Dam)​​, ಸೂಫಾ ಜಲಾಶಯ(Supa Dam), ನಾರಾಯಣಪುರ ಜಲಾಶಯ(Narayanapura Dam), ಆಲಮಟ್ಟಿ ಜಲಾಶಯ (Almatti Dam), ಭದ್ರಾ ಜಲಾಶಯ (Bhadra Dam), ಹೇಮಾವತಿ ಜಲಾಶಯ (Hemavathi Dam), ಕೆಆರ್​ಎಸ್​ ಜಲಾಶಯ (KRS Dam), ತುಂಗಭದ್ರಾ ಜಲಾಶಯ (Tungabhadra Dam),ಮಲಪ್ರಭಾ ಜಲಾಶಯ (Malaprabha Dam), ವಾಣಿವಿಲಾಸ(Vanivilasa dam)

Karnataka Dam water level- 20 ಜುಲೈ 2023ಕ್ಕೆ ಜಲಾಶಯಗಳ ನೀರಿನ ಮಟ್ಟ (ಮೀಟರ್ ಗಳಲ್ಲಿ)-:

ಆಲಮಟ್ಟಿ- 510.29
ಭದ್ರಾ- 644.34 
ಹೇಮಾವತಿ- 882.44
ಕೆ.ಆರ್​.ಎಸ್ – 27.46
ತುಂಗಭದ್ರಾ – 485.15
ಮಲಪ್ರಭಾ- 623.65
ಲಿಂಗನಮಕ್ಕಿ- 536.86
ಘಟಪ್ರಭಾ- 641.30
ಕಬಿನಿ- 692.35
ವರಾಹಿ- 575.42
ಹಾರಂಗಿ- 868.52
ಸೂಫಾ- 531.30
ನಾರಾಯಣಪುರ: 491.27
ವಾಣಿವಿಲಾಸ ಸಾಗರ: 450.18

ವಾಣಿವಿಲಾಸ ಸಾಗರವು(ಶೇ 82 ರಷ್ಟು ) ರಾಜ್ಯದ ಅತೀ ಹೆಚ್ಚು ನೀರು ಭರ್ತಿಯಾದ ಜಲಾಶಯಗಳಲ್ಲಿ ಪ್ರಥಮ ಸ್ಥಾನದಲಿದೆ. ತುಂಗಭದ್ರ ಜಲಾಶಯ ಶೇ 12 ರಷ್ಟು ತುಂಬಿದ್ದು ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: Pm kisan: ಪಿ ಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಕೇಂದ್ರ ಸರಕಾರ! 

ನೀರಿನ ಸಂಗ್ರಹಣೆ ಮತ್ತು ಒಟ್ಟು ಸಾಮರ್ಥ್ಯ(ಟಿಎಂಸಿ ಗಳಲ್ಲಿ)(20-07-2023):

ಕೆಆರ್​ಎಸ್: ಇಂದಿನ ನೀರಿನ ಸಂಗ್ರಹಣೆ- 16.00 ಒಟ್ಟು ಸಾಮರ್ಥ್ಯ-  49.45

ತುಂಗಭದ್ರಾ: ಇಂದಿನ ನೀರಿನ ಸಂಗ್ರಹಣೆ- 12.57 ಒಟ್ಟು ಸಾಮರ್ಥ್ಯ-  105.79

ಮಲಪ್ರಭಾ: ಇಂದಿನ ನೀರಿನ ಸಂಗ್ರಹಣೆ- 8.06  ಒಟ್ಟು ಸಾಮರ್ಥ್ಯ-  37.78

ಆಲಮಟ್ಟಿ: ಇಂದಿನ ನೀರಿನ ಸಂಗ್ರಹಣೆ- 31.48 ಒಟ್ಟು ಸಾಮರ್ಥ್ಯ- 123.08

ಭದ್ರಾ: ಇಂದಿನ ನೀರಿನ ಸಂಗ್ರಹಣೆ- 28.34 ಒಟ್ಟು ಸಾಮರ್ಥ್ಯ- 71.54 

ಹೇಮಾವತಿ: ಇಂದಿನ ನೀರಿನ ಸಂಗ್ರಹಣೆ- 17.04 ಒಟ್ಟು ಸಾಮರ್ಥ್ಯ-  34.31

ಲಿಂಗನಮಕ್ಕಿ: ಇಂದಿನ ನೀರಿನ ಸಂಗ್ರಹಣೆ- 29.27 ಒಟ್ಟು ಸಾಮರ್ಥ್ಯ- 151.75 

ಘಟಪ್ರಭಾ: ಇಂದಿನ ನೀರಿನ ಸಂಗ್ರಹಣೆ- 11.07  ಒಟ್ಟು ಸಾಮರ್ಥ್ಯ- 51.00

ಕಬಿನಿ: ಇಂದಿನ ನೀರಿನ ಸಂಗ್ರಹಣೆ- 12.47 ಒಟ್ಟು ಸಾಮರ್ಥ್ಯ- 19.52 

ವರಾಹಿ: ಇಂದಿನ ನೀರಿನ ಸಂಗ್ರಹಣೆ- 5.77 ಒಟ್ಟು ಸಾಮರ್ಥ್ಯ- 31.10 

ಹಾರಂಗಿ: ಇಂದಿನ ನೀರಿನ ಸಂಗ್ರಹಣೆ-  5.83 ಒಟ್ಟು ಸಾಮರ್ಥ್ಯ- 8.55

ಸೂಫಾ: ಇಂದಿನ ನೀರಿನ ಸಂಗ್ರಹಣೆ- 41.40 ಒಟ್ಟು ಸಾಮರ್ಥ್ಯ- 145.33

ನಾರಾಯಣಪುರ: ಇಂದಿನ ನೀರಿನ ಸಂಗ್ರಹಣೆ- 13.94 ಒಟ್ಟು ಸಾಮರ್ಥ್ಯ- 33.31

ವಾಣಿವಿಲಾಸ ಸಾಗರ: ಇಂದಿನ ನೀರಿನ ಸಂಗ್ರಹಣೆ- 24.74 ಒಟ್ಟು ಸಾಮರ್ಥ್ಯ- 30.00

ಒಳಹರಿವು ಕ್ಯೂಸೆಕ್ಸ್ ಗಳಲ್ಲಿ(20-07-2023)- Karnataka dam Inflow:

ಆಲಮಟ್ಟಿ: ಒಳಹರಿವು- 32,146 

ಭದ್ರಾ: ಒಳಹರಿವು- 4,227  

ಹೇಮಾವತಿ: ಒಳಹರಿವು- 6,752  

ಕೆಆರ್​ಎಸ್: ಒಳಹರಿವು- 1,863

ಕಬಿನಿ: ಒಳಹರಿವು- 4,574 

ವರಾಹಿ: ಒಳಹರಿವು- 4,868, 

ಹಾರಂಗಿ: ಒಳಹರಿವು- 5,748, 

ಸೂಫಾ: ಒಳಹರಿವು- 10,983, 

ತುಂಗಭದ್ರಾ: ಒಳಹರಿವು- 9,536 

ಮಲಪ್ರಭಾ: ಒಳಹರಿವು- 10,437, 

ಲಿಂಗನಮಕ್ಕಿ: ಒಳಹರಿವು- 32,077, 

ಘಟಪ್ರಭಾ: ಒಳಹರಿವು- 20,813, 

ನಾರಾಯಣಪುರ: ಒಳಹರಿವು- 62, 

ವಾಣಿವಿಲಾಸ ಸಾಗರ: ಒಳಹರಿವು- 0,

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಯಾವ ರೀತಿ ಇರಲಿದೆ ಅರ್ಜಿ ಸಲ್ಲಿಕೆಗೆ ರೂಪುರೇಷೆಗಳು?

Aadhar Document update: ಆಧಾರ್ ಕಾರ್ಡ ಇರುವವರು ತಪ್ಪದೇ ಈ ಕೆಲಸ ಮಾಡಿ! ದಾಖಲಾತಿ ಅಪ್ಲೋಡ್ ಮಾಡಲು ವೆಬ್ಸೈಟ್ ಲಿಂಕ್.

0

ಆಧಾರ್ ಕಾರ್ಡ ಹೊಂದಿರುವ ಸಾರ್ವಜನಿಕರು ಸರಕಾರದ ವಿವಿಧ ಯೋಜನೆಯಡಿ ಸವಲತ್ತು ಪಡೆಯಲು 10 ವರ್ಷಕ್ಕೆ ಒಮ್ಮೆ ತಮ್ಮ ಆಧಾರ್ ಕಾರ್ಡ ನಲ್ಲಿ ದಾಖಲಾಗಿರುವ ಗುರುತಿನ ವಿವರ  ಮತ್ತು ವಿಳಾಸದ ಮಾಹಿತಿಯನ್ನು ನವೀಕರಿಸುವುದು ಅತ್ಯವಶಕವಾಗಿದೆ ಈ ಕುರಿತು ಆಧಾರ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ ಅನ್ನು 14 ಸೆಪ್ಟಂಬರ್ 2023 ಒಳಗೆ ಉಚಿತವಾಗಿ ಆಧಾರ್ ವೆಬ್ಸೈಟ್ uidai.gov.in ಗೆ ಭೇಟಿ ಮಾಡಿ ನವೀಕರಿಸಬವುದು ಎಂದು ಆಧಾರ್ ಪ್ರಾಧಿಕಾರ ಜಾಲತಾಣದಲ್ಲಿ(uidai) ತಿಳಿಸಿದೆ.

ಒಂದೊಮ್ಮೆ 14 ಸೆಪ್ಟಂಬರ್ 2023ರ ನಂತರ ನೀವು ಆಧಾರ್ ಕಾರ್ಡ ನವೀಕರಿಸಲು ಇಚ್ಚಿಸಿದಲ್ಲಿ ಹಣ ಪಾವತಿ ಮಾಡಿ ನವೀಕರಿಸಬೇಕಾಗುತ್ತದೆ ಆದರಿಂದ ತಪ್ಪದೇ ಆಧಾರ್ ಹೊಂದಿರುವವರು ಈ https://myaadhaar.uidai.gov.in/ ಆಧಾರ್ ಜಾಲತಾಣ ಭೇಟಿ ಮಾಡಿ ಇತ್ತೀಚಿನ ಗುರುತಿನ ಪುರಾವೆ(ಉದಾ: ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲಾತಿ) ಮತ್ತು ವಿಳಾಸದ ಪುರಾವೆ( ವೋಟರ್ ಐಡಿ ,ಪಾನ್ ಕಾರ್ಡ ಅಥವಾ ಪಾಸ್ ಪೋರ್ಟ್ ಇತ್ಯಾದಿ) ಈ ಎರಡು ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಿಸಬವುದಾಗಿದೆ.

ಈ ರೀತಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಮ್ಮ ಆಧಾರ್ ಡೇಟಾಬೇಸ್‌ನಲ್ಲಿ ದಾಖಲೆಗಳನ್ನು ನವೀಕರಿಸುವುದರಿಂದ ನಿಮ್ಮ ಆಧಾರ್ ಅನ್ನು ಬಲಪಡಿಸಲು ಆಧಾರ್ ಪ್ರಾಧಿಕಾರದಿಂದ(UIDAI) ಸಲಹೆ ನೀಡಲಾಗಿದೆ. ನೀವು ಸಲ್ಲಿಸಿದ ದಾಖಲೆಗಳಲ್ಲಿನ ವಿವರಗಳು ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ನಿಮ್ಮ ವಿವರಗಳೊಂದಿಗೆ ಹೊಂದಿಕೆಯಾಗಬೇಕು. ಆಧಾರ್ ಡೇಟಾಬೇಸ್‌ನಲ್ಲಿ ನಿಮ್ಮ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ನಿಮಗೇ ತಿಳಿದಂತೆ ಪಾನ್ ಕಾರ್ಡ್ ಮತ್ತು ಆಧಾರ್ ಲಿಂಕ್ ಮಾಡಿಸಲು ಮೊದಲು ಉಚಿತವಾಗಿಯೇ ಇತ್ತು, ಆದರೆ ಜನರು ಕಿವಿ ಕೊಡದೆ ಇದ್ದಾಗ ಸರ್ಕಾರ 1000/- ರೂಪಾಯಿ ದಂಡ ವಿದಿಸಿದೆ, ಹೀಗೆಯೆ ಆಧಾರ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಮುಂದೊಂದು ದಿನ ದಂಡ ಕಟ್ಟ ಬೇಕಾಗಬವುದು, ಅದರಿಂದ ಈಗ ಉಚಿತ ಇದ್ದಾಗಲೇ ಮಾಡಿಸಿ ಇಲ್ಲದಿದ್ದರೆ ಶುಲ್ಕ ಕಟ್ಟಿ ಮಾಡಿಕೊಳ್ಳಬೇಕಾಗುವುದು ಖಚಿತ.

ಉಚಿತವಾಗಿ ಆಧಾರ್(Aadhar card) ನವೀಕರಣ(Verify) ಮಾಡಲು 14-09-2023 ಕೊನೆಯ ದಿನಾಂಕವಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭ! ಯಾವ ರೀತಿ ಇರಲಿದೆ ಅರ್ಜಿ ಸಲ್ಲಿಕೆಗೆ ರೂಪುರೇಷೆಗಳು?

ಆಧಾರ್(Aadhar) ನವೀಕರಣ(Verify) ಯಾಕೆ ಮಾಡಬೇಕು?
 
ಸಾರ್ವಜನಿಕರು ಸರಕಾರದ ಯೋಜನೆಗಳ ಸೌಲಭ್ಯ ಪಡೆಯಲು ಮತ್ತು ತಮ್ಮ ಗುರತಿನ ಮತ್ತು ವಿಳಾಸದ ನಿಖರತೆಯನ್ನು ಆಧಾರ್ ಪ್ರಾದಿಕಾರಕ್ಕೆ ಖಚಿತಪಡಿಸಿಕೊಳ್ಳಲು ಆಧಾರ್ ಕಾರ್ಡ ನವೀಕರಣ ಮಾಡಬೇಕಾಗುತ್ತದೆ.

Aadhaar Document Update link- ನಿಮ್ಮ ಮೊಬೈಲ್ ನಲ್ಲೇ ಮಾಡಬವುದು ಈ ಕೆಲಸವನ್ನು:

Step-1: https://myaadhaar.uidai.gov.in/verifyAadhaar ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ‍ ಪ್ರಾಧಿಕಾರದ ವೆಬ್ಸೈಟ್ ಭೇಟಿ ಮಾಡಬೇಕು. ನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚರ್ ಹಾಕಿ “Send OTP” ಮೇಲೆ ಕ್ಲಿಕ್ ಮಾಡಿ.

Step-2: ಆಧಾರ್ ಕಾರ್ಡನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಬರುತ್ತದೆ ಅದನ್ನು ಇಲ್ಲಿ ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ಈ ಪುಟದಲ್ಲಿ “Document Update” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ಇದಾದ ಬಳಿಕ “Next” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಈ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡನಲ್ಲಿ ಇರುವಂತೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರ ಗೋಚರಿಸುತ್ತದೆ ಎಲ್ಲಾ ಮಾಹಿತಿ ಸರಿ ಇದಿಯೇ ಎಂದು ನೋಡಿ ಸರಿ ಇದಲ್ಲಿ “I verify that above details are correct” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Next” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

Step-5:  ಈ ಪುಟದಲ್ಲಿ ನಿಮ್ಮ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲಾತಿಗಳನ್ನು ಅಪ್ಲೋಡ ಮಾಡಬೇಕು(Document size should be less than 2 MB, Supported file Formats are: JPEG, PNG and PDF ) ಕೊನೆಯಲ್ಲಿ “Next” ಆಯ್ಕೆಯ ಮೇಲೆ ಒತ್ತಿ “Submit” ಮೇಲೆ ಕ್ಲಿಕ್ ಮಾಡಬೇಕು.

ಹೆಚ್ಚಿನ ಮಾಹಿತಿ ಪಡೆಯಲು ಆಧಾರ್ ಸಹಾಯವಾಣಿಗೆ ಕರೆ ಮಾಡಿ- Adhar helpline numbers: 1947

Fasal bima Yojana: ಈ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಇನ್ನು ಕೇವಲ 14 ದಿನ ಉಳಿದಿದೆ! ಮತ್ತು ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

0

ರೈತರು ತಾವು ಬೆಳೆದ ಬೆಳೆಗಳಿಗೆ ಇನ್ಶೂರೆನ್ಸ್(crop insurance) ಮಾಡುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರಕಾರದಿಂದ “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ” (fasa bhima yojane) ಯನ್ನು ಅನುಷ್ಥಾನ ಮಾಡಲಾಗುತ್ತಿದೆ. ಈ ಯೊಜನೆಯಡಿ ಬೆಳೆ ವಿಮೆ ಕಟ್ಟುಲು ಎಲ್ಲಾ ಬೆಳೆಗಳಿಗೆ 31 ಜುಲೈ 2023 ಕೊನೆಯ ದಿನವಾಗಿರುತ್ತದೆ ಈ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ರೈತರು ಈ ದಿನಾಂಕದ ಒಳಗೆ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಬೇಕು.

ಈ ವರ್ಷ(2023) ಬೆಳೆ ವಿಮೆ(fasal bhima yojana) ಮಾಡಿಸಲು ಅವಕಾಶ ಮಾಡಿಕೊಟ್ಟ ಬೆಳೆಗಳ ವಿವರ ಈ ರೀತಿ ಇದೆ, ಭತ್ತ, ಮುಸುಕಿನಜೋಳ/ಮೆಕ್ಕೆಜೋಳ, ಜೋಳ, ರಾಗಿ, ಸಜ್ಜೆ, ನವಣೆ, ಸಾವೆ, ಉದ್ದು, ಹೆಸರು, ತೊಗರಿ, ಹುರುಳಿ, ಸೋಯಾ ಅವರೆ, ಸೂರ್ಯಕಾಂತಿ, ಎಳ್ಳು, ನೆಲಗಡಲೆ/ಶೇಂಗಾ, ಹತ್ತಿ, ಎಲೆಕೋಸು, ಈರುಳ್ಳಿ, ಅಲೂಗಡ್ಡೆ, ಅಡಿಕೆ ಬೆಳೆ ವಿಮೆ ಮಾಡಿಸಲು 15 ಜುಲೈ ಕೊನೆಯ ದಿನವಾಗಿದ್ದು ಈಗಾಗಲೇ ಮುಕ್ತಾಯವಾಗಿರುತ್ತದೆ. ಮಾವು ಬೆಳೆಗೆ 31 ಜುಲೈ 2023ರ ವರೆಗೆ(crop insurance last date) ಅವಕಾಶವಿರುತ್ತದೆ.

ಬೆಳೆ ವಿಮೆ(bele vime parihara) ಕಟ್ಟುವ ಬಹು ದೊಡ್ಡ ಸಂಖ್ಯೆಯ ರೈತರಲ್ಲಿ ಒಂದು ಪ್ರಶ್ನೆ ಯಾವಗಳು ಕೇಳುತ್ತಾರ‍ೆ ನಾವು ಪ್ರತಿ ವರ್ಷ ಬೆಳೆ ವಿಮೆ ಕಟ್ಟತ್ತೆವೆ ಅದರೆ ನಮಗೆ ಬೆಳೆ ವಿಮೆ ಪರಿಹಾರ‍ ಬರುವುದೇ ಇಲ್ಲವೆಂದು ಅದರೆ ಬೆಳೆ ವಿಮೆ ಕಟ್ಟವ ಎಲ್ಲಾ ಭಾಗದ ರೈತರಿಗೂ ಈ ಯೋಜನೆಯಡಿ ಪರಿಹಾರ‍ ದೊರೆಯುವುದಿಲ್ಲ ಬೆಳೆ ವಿಮೆ ಅಧಿಸೂಚಿತ ಘಟಕ ಅಂದರೆ ಒಂದು ಗ್ರಾಮ ಪಂಚಾಯತಗೆ ಒಂದು ಅಧಿಸೂಚಿತ ಘಟಕ ಎಂದು ಕರೆಯುತ್ತಾರೆ ಈ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅದಾಗ, ಮತ್ತು ಶೇ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಒಟ್ಟು ಬೆಳೆ ವಿಮೆ ಮೊತ್ತದ ಗರಿಷ್ಠ ಶೇ 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ನೀಡಬೇಕು. 

ಇದೆ ರೀತಿ ವೈಯಕ್ತಿಕವಾಗಿ ರೈತರು ಬೆಳೆ ಕಟಾವು ಮಾಡಿದ ನಂತರ ಜಮೀನಿನಲ್ಲಿ ಒಣಗಲು ಬಿಟ್ಟಾಗ ಎರಡು ವಾರದ ಒಳಗಾಗಿ ಅಕಾಲಿಕ ಮಳೆ , ಚಂಡಮಾರುತದಿಂದ ಬೆಳೆ ನಷ್ಟವಾದಗ 48 ಗಂಟೆಯ ಒಳಗಾಗಿ ವಿಮೆ ಸಂಸ್ಥೆ(ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಮಾ ಸಂಸ್ಥೆಯ ಸಹಾಯವಾಣಿ ಸಂಖ್ಯೆಗಳನ್ನು ಪಡೆಯಬವುದು: https://samrakshane.karnataka.gov.in/ ಮತ್ತು ಸಂಬಂದಪಟ್ಟ ಇಲಾಖೆಗೆ(ಕೃಷಿ ಅಥವಾ ತೋಟಗರಿಕೆ) ಅರ್ಜಿ ಸಲ್ಲಿಸಿದ ನಂತರ ರೈತರ ಒಟ್ಟು  ನಷ್ಟ ಲೆಕ್ಕಾಚಾರ ಮಾಡಿ ವಿಮಾ ಸಂಸ್ಥೆಯು ರೈತರಿಗೆ ಬೆಳೆ ವಿಮೆ ಪಾವತಿಸಬೇಕು.

ಇದನ್ನೂ ಓದಿ: Ration Card: ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಾರೆಂದು ಮತ್ತು ಯಾವ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್.

ಇದಲ್ಲದೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿವಿಧ ಇಲಾಖೆ ಅಧಿಕಾರಿ ಮತ್ತು ವಿಮಾ ಸಂಸ್ಥೆಯ ಪ್ರತಿನಿಧಿ ಸಹಯೋಗದಲ್ಲಿ 4 ಕಡೆ ಬೆಳೆ ಅಂದಾಜು ಸಮೀಕ್ಷೆ(CCE-Crop Cutting Experiment) ಮಾಡಲಾಗುತ್ತದೆ ಈ ನಾಲ್ಕು ಸಮೀಕ್ಷೆಯಲ್ಲಿ ಅಧಿಸೂಚಿತ ಬೆಳೆ ವಿಮೆ ಜಮೀನಿನಲ್ಲಿ 5*5 ಮೀಟರ್ ಅಳತೆಯಲ್ಲಿ ಬೆಳೆಯನ್ನು ಕಟಾವು ಮಾಡಿ ಇಳುವರಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ ಕೊನೆಯಲ್ಲಿ ಸರಾಸರಿ ಇಳುವರಿ ಕಡಿಮೆ ಬಂದಲ್ಲಿ ಆ ಅಧಿಸೂಚಿತ ಘಟಕದಡಿ ಬರುವ ರೈತರಿಗೆ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಪಾವತಿ ಮಾಡಬೇಕು.

2023 ಮುಂಗಾರು ಹಂಗಾಮಿಗೆ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾದ ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರಗಳು(ಪ್ರತಿ ಹೆಕ್ಟೇರ್ ಗೆ- 2.5 ಎಕರೆಗೆ):

Bele vime Status check: ಬೆಳೆ ವಿಮೆ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್: 

ನಮ್ಮ ರಾಜ್ಯದಲ್ಲಿ ಇಲ್ಲಿಯವರೆಗೆ ರೈತರಿಂದ ಬೆಳೆ ವಿಮೆಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳು 5,74,830 ಸಂಗ್ರಹಿಸಲಾದ ಒಟ್ಟು ಮೊತ್ತ 80,91,01,224 ರೂ. ನೀವು ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಈ  https://samrakshane.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂರಕ್ಷಣೆ ಪೋರ್ಟಲ್ ಭೇಟಿ ಅರ್ಜಿದಾರರ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿಯು ಯಾವ ಹಂತದಲ್ಲಿ ಇದೆ ಎಂದು ತಿಳಿಯಬವುದಾಗಿದೆ.

ಇಲ್ಲಿಯವರೆಗೆ ರೈತರಿಂದ  ಸಲ್ಲಿಕೆಯಾದ ಜಿಲ್ಲಾವಾರು ಬೆಳೆ ವಿಮೆ  ಅರ್ಜಿಗಳ ಸಂಖ್ಯೆಗಳು(17-07-2023):

ಹಾವೇರಿ- 1,03,511
ತುಮಕೂರು- 68,141
ಗದಗ- 48,123
ಮಂಡ್ಯ- 44,310
ಬಿಜಾಪುರ- 43,786
ಹಾಸನ- 40,911
ಕೊಪ್ಪಳ- 34,799
ಗುಲ್ಬರ್ಗ- 29,044
ದಾರವಾಡ- 22,555
ಬೀದರ್- 19,887
ದಾವಣಗೆರೆ- 19,187
ಚಿತ್ರದುರ್ಗ- 17,335
ಚಾಮರಾಜನಗರ- 15,690
ಕಾರವಾರ- 14,426
ಚಿಕ್ಕಬಳ್ಳಾಪುರ- 11,035
ಬೆಳಗಾವಿ- 10,038
ಶಿವಮೊಗ್ಗ- 7,423
ರಾಯಚೂರು- 7,315
ಉಡುಪಿ- 4,663
ಚಿಕ್ಕಮಗಳೂರು- 2,969
ವಿಜಯನಗರ- 2,748
ಮೈಸೂರು- 2,330
ಬಾಗಲಕೋಟೆ- 2,041
ಯಾದಗಿರಿ- 872
ಕೊಪ್ಪಳ- 812
ರಾಮನಗರ- 393
ಬಳ್ಳಾರಿ- 180

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಡೇಟ್ ಫಿಕ್ಸ್! ಅಗತ್ಯ ದಾಖಲಾತಿಗಳೇನು? ಅರ್ಜಿ ಸಲ್ಲಿಕೆ ವಿಧಾನ ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

Grama panchayat: ನಿಮ್ಮ ಗ್ರಾಮ ಪಂಚಾಯತಿಯ ಅಧಿಕಾರಿ,ಅಧ್ಯಕ್ಷ, ಸದಸ್ಯರುಗಳ ಮೊಬೈಲ್ ಸಂಖ್ಯೆ ಸಹಿತ ಎಲ್ಲಾ ಮಾಹಿತಿ ಪಡೆಯುವ ವೆಬ್ಸೈಟ್ ಲಿಂಕ್.

0

ಸಾರ್ವಜನಿಕರು ರಾಜ್ಯ ಸರಕಾರದ ಮಾಹಿತಿ ಕಣಜ (Mahiti kanaja website), ಪಂಚತಂತ್ರ(panchatantra), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(RDPR website)  ಜಾಲತಾಣ ಭೇಟಿ ಮಾಡಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಗ್ರಾಮ ಪಂಚಾಯತಿಯಲ್ಲಿ(Grama panchayath) ಕಾರ್ಯನಿರ್ವಹಿಸುವ ಅಧಿಕಾರಿಗಳ ಮತ್ತು ಅಧ್ಯಕ್ಷರು, ಸದಸ್ಯರುಗಳ ಮೊಬೈಲ್ ನಂಬರ್ ಗಳನ್ನು ಮತ್ತು ಯೋಜನೆ(Grama panchayat yojanegalu), ಇತ್ಯಾದಿ ಮಾಹಿತಿಯನ್ನು ಪಡೆಯಬವುದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಕುಂದು-ಕೊರತೆ ಉಂಟಾದ ಸಂದರ್ಭದಲ್ಲಿ ಅಥವಾ ಲಭ್ಯ ಫಲಾನುಭವಿಗಳ ಯೋಜನೆಗಳ ಕುರಿತು ಮಾಹಿತಿ ತಿಳಿಯಲು ತುರ್ತು ಸಮಯದಲ್ಲಿ ನಿಮ್ಮ ಬಳಿ ನಿಮ್ಮ ಭಾಗದ ಗ್ರಾಮ ಪಂಚಾಯತಗೆ ಸಂಬಂಧಪಟ್ಟ ಅಧಿಕಾರಿ, ಚುನಾಯಿತ ಪ್ರತಿನಿಧಿಗಳ ಮತ್ತು ಸಿಬ್ಬಂದಿಗಳ ಮೊಬೈಲ್ ಸಂಖ್ಯೆಯನ್ನು ಮಾಹಿತಿ ಕಣಜ ವೆಬ್ಸೈಟ್ ನಲ್ಲಿ ಪಡೆಯಬವುದು.

ಯಾವೆಲ್ಲ ಮೊಬೈಲ್ ಸಂಖ್ಯೆಗಳು ಲಭ್ಯ: ರಾಜ್ಯ ಸರಕಾರದ ಈ ಮಾಹಿತಿ ಕಣಜ ಪೋರ್ಟಲ್ ನಿಮ್ಮ ಗ್ರಾಮ ಪಂಚಾಯತಿಯ 1) ಅಧ್ಯಕ್ಷ 2) ಸದಸ್ಯರು 3) ಬಿಲ್ ಕಲೆಕ್ಟರ್ 4) ಕಂಪ್ಯೂಟರ್ ಅಪರೇಟರ್ 5) ಪಂಚಾಯತ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಇಲ್ಲಿ ಲಭ್ಯ.

Grama panchayat mobile numbers- ಗ್ರಾಮ ಪಂಚಾಯತಿನ ಮೊಬೈಲ್ ಸಂಖ್ಯೆಗಳನ್ನು ಪಡೆಯುವ ವಿಧಾನ:

Step- 1: ಸಾರ್ವಜನಿಕರು ಈ https://mahitikanaja.karnataka.gov.in/ ಲಿಂಕ್ ಮೇಲೆ ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಬೇಕು.
Step- 2: ನಂತರ ಗ್ರಾಮ ಪಂಚಾಯತಿ ಕಾರ್ಯನಿರ್ವಹಕರು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step- 3: ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿಕೊಂಡು “ಸಲ್ಲಿಸಿ” ಮೇಲೆ ಕ್ಲಿಕ್ ಮಾಡಬೇಕು.
Step- 4: ಇಲ್ಲಿ ನಿಮ್ಮ ಗ್ರಾಮ ಪಂಚಾಯತಿಯ ಅಧಿಕಾರಿಗಳ,ಅಧ್ಯಕ್ಷ, ಸದಸ್ಯರುಗಳ, ಸಿಬ್ಬಂದಿಗಳ ಹೆಸರು, ಮೊಬೈಲ್ ನಂಬರ್ ಮತ್ತು ಹುದ್ದೆ ಇಮೇಲ್ ಐಡಿ ವಿವರಗಳ ಪಟ್ಟಿ ಗೋಚರಿಸುತ್ತದೆ.

ಗಮನಿಸಿ: ಈ ಪುಟದಲ್ಲಿ ಮೊದಲ ಪೇಜ್ ನಲ್ಲಿ ಕೇಲವು ನಂಬರ್ ಮಾತ್ರ ತೋರಿಸುತ್ತದೆ ನೀವು ಈ ಪೇಜ್ ನ ಕೆಳಗೆ 1,2,3 ಎಂದು ಪುಟ ಸಂಖ್ಯೆ ನಮೂದಿಸಿರುತ್ತಾರೆ ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮೊಬೈಲ್ ಸಂಖ್ಯೆಗಳನ್ನು ಪಡೆಯಬವುದು.

ಇದನ್ನೂ ಓದಿ: Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

Grama panchayat schemes- ಗ್ರಾಮ ಪಂಚಾಯತಿಯ ಯೋಜನೆಗಳ ಮಾಹಿತಿಯನ್ನು ತಿಳಿಯುವುದು ಹೇಗೆ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(RDPR website) ಅಧಿಕೃತ ವೆಬ್ಸೈಟ್- https://rdpr.karnataka.gov.in/ ಭೇಟಿ ಮಾಡಿ ಗ್ರಾಮ ಪಂಚಾಯತಿಯ ಯೋಜನೆ, ನೂತನ ಅಧಿಸೂಚನೆ, ಯೋಜನೆ ಮಾರ್ಗಸೂಚಿ, ಸಹಾಯವಾಣಿ(grama panchayat helplines) ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಈ ಜಾಲಾತಾಣದಲ್ಲಿ ಪಡೆಯಬವುದು.

Panchatantra website link: ನಿಮ್ಮ ಗ್ರಾಮ ಪಂಚಾಯತಿಯ ಅಂಕಿ-ಸಂಖ್ಯೆ ಮಾಹಿತಿಯನ್ನು ಇಲ್ಲಿ ಪಡೆಯಬವುದು:

https://panchatantra.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಪಂಚತಂತ್ರ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಹೆಸರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮ ಪಂಚಾಯತಿಯ ಒಟ್ಟು ಅನುದಾನ, ಬೌಗೋಳಿಕ ನಕ್ಷೆ, ಸಲ್ಲಿಕೆಯಾದ ಅರ್ಜಿಗಳ ವಿವರ, ಗ್ರಾಮ ಪಂಚಾಯತಿಯಲ್ಲಿ ನಡೆದ ವಾರ್ಡ ಸಭೆ, ಸಾಮಾನ್ಯ ಸಭೆ, ಗ್ರಾಮ ಸಭೆ ಇತ್ಯಾಧಿ ಸಭೆಗಳ ದಿನಾಂಕ  ಚರ್ಚೆಯ ಮಾಹಿತಿಯ ವಿವರ ಇಲ್ಲಿ ಪಡೆಯಬವುದು.

ಆದಾಯ ಸಂಗ್ರಹ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಳ್ಳಿವಾರು ಸಂಗ್ರಹವಾದ ಆದಾಯದ ವಿವರ ಗೋಚರಿಸುತ್ತದೆ.

Tomato farming: 30 ಗುಂಟೆಯಲ್ಲಿ ಟೊಮೆಟೊ ಬೆಳೆದು 5 ಲಕ್ಷ ಆದಾಯ ಪಡೆದ ರೈತ!

0

ಟೊಮೆಟೊ ಟೊಮೆಟೊ.. ಸಧ್ಯ ಮಾರುಕಟ್ಟೆಯಲ್ಲಿ ದರ ವಿಚಾರದಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿರುವ ತರಕಾರಿ ಈ ಕೆಂಪು ಸುಂದರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಅನೇಕ ದಿನಗಳಿಂದ ಟೊಮೆಟೊ ಬೆಳೆದು ನಷ್ಟ ಅನುಭವಿಸಿದ  ರೈತರಿಗೆ ಈ ಭಾರಿ ಉತ್ತಮ ಆದಾಯು ಸಿಗುತ್ತಿದೆ. ಈ ಹಿಂದಿನ ಎಂದು ಸಿಗದ ಬೆಲೆ ಈಗ ಮಾರುಕಟ್ಟೆಯಲ್ಲಿ ಟೊಮೆಟೊಗೆ ಸಿಗುತ್ತಿದೆ ಎನ್ನುತ್ತಾರೆ ರೈತ ಬಾಂಧವರು.

ಚಿತ್ರದುರ್ಗ(chitradurga) ಜಿಲ್ಲೆಯ ಸೀಗೆಹಳ್ಳಿ ಗ್ರಾಮದ ಜೆ ರಂಗಸ್ವಾಮಿ, ರೈತ 30 ಗುಂಟೆಯಲ್ಲಿ ಟೊಮೆಟೊ(Tomato farm) ಬೆಳೆದು 5 ಲಕ್ಷ ಆದಾಯ ಪಡೆದಿದ್ದಾರೆ. ಕಳೆದ ಎರಡು-ಮೂರು ತಿಂಗಳ ಹಿಂದೆ ಕೆಜಿಗೆ 2 ರೂ ಗು ಕೆಳದ ಟೊಮೆಟೊ ಈಗ 150 ರೂ ಗಡಿ ದಾಟಿದೆ ಈಗಾಗಿ ಸಧ್ಯ ಈ ಬೆಳೆ ಬೆಳೆದ ರೈತರಿಗೆ ಒಳ್ಳೆಯ ಲಾಭ ದೊರೆಯುತ್ತಿದೆ. ಈ ರೈತರು 30 ಗುಂಟೆಯಲ್ಲಿ  ಜಾಗದಲ್ಲಿ ವೆಲ್ಕಂ ತಳಿಯ 6,500 ಸಾವಿರ ಟೊಮೆಟೊ ಸಸಿಗಳನ್ನು ಸ್ಥಳೀಯ ನರ್ಸರಿಯಿಂದ  ತೆಗೆದುಕೊಂಡು ಬಂದು ನಾಟಿ ಮಾಡಿದ್ದೆವು ಇಲ್ಲಿಯವರೆಗೆ 5-6 ಭಾರಿ ಕೊಯ್ಲು ಮಾಡಿದ್ದೇವೆ ಸರಿ ಸೂಮಾರು 5 ಲಕ್ಷ ಆದಾಯ ದೊರೆತ್ತಿದೆ ಎಂದು ತಿಳಿಸಿದ್ದಾರೆ.

ಈ ರೈತರಿಗೆ ಒಟ್ಟು 4 ಎಕರೆ ಜಮೀನಿದ್ದು ಇದರಲ್ಲಿ ಒಂದು ಎಕರೆ ಅಡಿಕೆ, ಬಾಕಿ 30 ಗುಂಟೆಯಲ್ಲಿ ಟೊಮೆಟೊ(Tomato farming), 2.10 ಎಕರೆಯಲ್ಲಿ ಇತರೆ ಬೆಳೆಗಳನ್ನು ಬೆಳೆದಿದ್ದಾರೆ.ಇಲ್ಲಿಯವರೆಗೆ ಟೊಮೆಟೊ ಬೆಳೆಯಲು 50 ಸಾವಿರ ಖರ್ಚು ಬಂದಿದ್ದು ನಂತರ ಟೊಮೆಟೊ ಸಂಪೂರ್ಣ ಕಟಾವದ ಬಳಿದೆ ಇದೆ ಜಮೀನಿನಲ್ಲಿ ಬಳ್ಳಿ ಬೀನ್ಸ್ ಹಾಕುತ್ತೆವೆ ಅಗ ಇದೇ ಕೋಲು ಇತ್ಯಾದಿ ಪರಿಕರಗಳು ನಮಗೆ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದರು. 

ಈ ವೆಲ್ಕಂ ತಳಿಯು ಬೇಗ ಹಾಳಗುವುದಿಲ್ಲ ಇನ್ನೂ ಜಮೀನಿನಲ್ಲಿ ಬೆಳೆಯಿದ್ದು ಇದೇ ದರ ಇದಲ್ಲಿ ಇನ್ನು 2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರೈತ ಜೆ ರಂಗಸ್ವಾಮಿ.

ಜೆ ರಂಗಸ್ವಾಮಿ,ರೈತರ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಟೊಮೆಟೊ(Tomato rate) ಇಷ್ಟು ಬೆಲೆ ಏರಿಕೆಗೆ ಕಾರಣವೇನು?

ನಮ್ಮ ದೇಶದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಜನವರಿ-ಫೆಬ್ರುವರಿಯಲ್ಲಿ ತಿಂಗಳಲ್ಲಿ ನಾಟಿ ಮಾಡಿದ ಟೊಮೆಟೊ ಬೆಳೆಯು ಜೂನ್-ಜುಲೈನಲ್ಲಿ ಮಾರುಕಟ್ಟೆಗೆ ಬರಬೇಕಿತ್ತು. ಹೆಚ್ಚು ಸಮಯದವರೆಗೆ ಚಳಿ ಅಧಿಕ ಬೇಸಿಗೆ,ತಾಪಮಾಣದಿಂದ ಮತ್ತು ಮುಂಗಾರು ಮಳೆ ವಿಳಂಬದ ಕಾರಣ ನಿರೀಕ್ಷಿತ ಪ್ರಮಾಣದ ಇಳುವರಿ ಬರದಿರುವುದು ಸಹ ಬೆಲೆ ಏರಿಕೆಗೆ ಕಾರಣ. ಇದರ ಜೊತೆಗೆ ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ, ಆಂಧ್ರಪ್ರದೇಶದ ಟೊಮೆಟೊ ತಾಕುಗಳಲ್ಲಿ ಬಿಳಿ ನೋಣ ಭಾದೆ ಮತ್ತು ಶಿಲೀಂಧ್ರ ರೋಗಗಳು ಕಾಣಿಸಿಕೊಂಡ ಕಾರಣ ಇಳುವರಿ ಕಡಿಮೆಯಾಗಿರುತ್ತದೆ. ಇದೇ ಸಮಯದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಟೊಮೆಟೊ ಬೆಳೆಗಳಿಗೂ ಶಿಲೀಂಧ್ರ ರೋಗಗಳಿಗೆ ತುತ್ತಾಗಿವೆ. ಮಧ್ಯ ಭಾರತ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಅಕಾಲಿಕ ಮಳೆಯ ಕಾರಣದಿಂದ ಟೊಮೆಟೊ ಬೆಳೆ ನಾಶವಾಗಿದೆ. ಒಟ್ಟಾರೆಯಾಗಿ ಟೊಮೆಟೊ ಇಳುವರಿ ಕಡಿಮೆಯಾಗಿದ್ದರಿಂದ, ಬೆಲೆಯು ಅಧಿಕ ಪ್ರಮಾಣದಲ್ಲಿ ಒಂದೇ ಭಾರಿಗೆ ಏರಿಕೆಯಾಗಿದೆ.

ನಮ್ಮ ದೇಶದಲ್ಲಿ ಟೊಮೆಟೊ ಬೆಳೆಯುವ ಟಾಪ್ 10 ರಾಜ್ಯಗಳು(29-06-2023 ರ ದರ ವಿವರ)-Top 10 tomato producing states in india. 

1. ಮಧ್ಯ ಪ್ರದೇಶ(Madhyapradesh) : ಟೊಮೆಟೊ ದರ: 80-100 ರೂ. , ವಾರ್ಷಿಕ ಉತ್ಪಾದನೆ: 2,970 ಸಾವಿರ ಟನ್ ಉತ್ಪಾದನಾ ಪಾಲು: 14.63%

2. ಆಂಧ್ರಪ್ರದೇಶ(Andhrapradesh): ಟೊಮೆಟೊ ದರ: 50-70 ರೂ. ವಾರ್ಷಿಕ ಉತ್ಪಾದನೆ: 2,217 ಸಾವಿರ ಟನ್ ಉತ್ಪಾದನಾ ಪಾಲು: 10.92%

3. ಕರ್ನಾಟಕ(Karnataka): ದರ: 70-99 ರೂ. ವಾರ್ಷಿಕ ಉತ್ಪಾದನೆ: 2,077 ಸಾವಿರ ಟನ್ ಉತ್ಪಾದನಾ ಪಾಲು: 10.23%

4. ತಮಿಳುನಾಡು(Tamilnadu): ಟೊಮೆಟೊ ದರ: 75-95 ರೂ. ವಾರ್ಷಿಕ ಉತ್ಪಾದನೆ: 1489 ಸಾವಿರ ಟನ್, ಉತ್ಪಾದನಾ ಪಾಲು:7.34%

5. ಓಡಿಶಾ(Odisha): ಟೊಮೆಟೊ ದರ: 75-95 ರೂ, ವಾರ್ಷಿಕ ಉತ್ಪಾದನೆ: 1,432 ಸಾವಿರ ಟನ್, ಉತ್ಪಾದನಾ ಪಾಲು: 7.06%

6. ಗುಜರಾತ್(Gujarat): ದರ : 80-100 ರೂ. ವಾರ್ಷಿಕ ಉತ್ಪಾದನೆ: 1,395 ಸಾವಿರ ಟನ್ ಉತ್ಪಾದನಾ ಪಾಲು: 6.87%

7. ಪಶ್ಚಿಮ ಬಂಗಾಳ(West bengal): ಟೊಮೆಟೊ ದರ: 80-100 ರೂ, ವಾರ್ಷಿಕ ಉತ್ಪಾದನೆ: 1,284 ಸಾವಿರ ಟನ್ ಉತ್ಪಾದನಾ ಸಾಲು: 6.33%

8. ಛತ್ತೀಸಗಡ(chhattisgarh): ಟೊಮೆಟೊ ದರ: 70-90 ರೂ. ವಾರ್ಷಿಕ ಉತ್ಪಾದನೆ: 1,149 ಸಾವಿರ ಟನ್,ಉತ್ಪಾದನಾ ಪಾಲು: 5.66%

9. ಮಹಾರಾಷ್ಟ್ರ(Maharashtra): ಟೊಮೆಟೊ ದರ: 75-96 ರೂ. ವಾರ್ಷಿಕ ಉತ್ಪಾದನೆ: 1125 ಸಾವಿರ ಟನ್, ಉತ್ಪಾದನಾ ಸಾಲು: 5.54%

10. ಬಿಹಾರ(Bihar): ಟೊಮೆಟೊ ದರ: 60-80 ರೂ.  ವಾರ್ಷಿಕ ಉತ್ಪಾದನೆ: 951 ಸಾವಿರ ಟನ್ ,ಉತ್ಪಾದನಾ ಪಾಲು: 4.68%

(2021-22ರ ಅಂಕಿಅಂಶ, ಕೃಪೆ: ರಾಷ್ಟ್ರೀಯ ತೋಟಗಾರಿಕಾ ಮಂಡಳಿ-National Horticulture board)

ಇದನ್ನೂ ಓದಿ: Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

How to Grow Tomatoes-ಟೊಮೆಟೊ ಬೆಳೆಯುವ ವಿಧಾನ:

ಟೊಮ್ಯಾಟೊ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ ಜನಪ್ರಿಯ ತರಕಾರಿಯಾಗಿದೆ. ಈ ತರಕಾರಿಯು ಎ, ಬಿ ಹಾಗೂ ಸಿ. ಜೀವಸತ್ವಗಳನ್ನು ಒದಗಿಸುತ್ತದೆ.

ಟೊಮೆಟೊ ಬೆಳೆಯಲು ಸೂಕ್ತ ಮಣ್ಣು : 

ಇದನ್ನು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಗೋಡುಮಣ್ಣು ಈ ಬೆಳೆಗೆ ಸೂಕ್ತ ತಗ್ಗುಪ್ರದೇಶ, ನೀರು ನಿಲ್ಲುವ ಮತ್ತು ಆಮ್ಲಯುಕ್ತ ಮಣ್ಣಿನ ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ. ಉತ್ತಮ ಬೆಳೆಗೆ ಮಣ್ಣಿನ ರಸಸಾರ 6 ರಿಂದ 7 ಇರಬೇಕು. ಸೊರಗು ರೋಗಪೀಡಿತ ಮಣ್ಣು ಸೂಕ್ತವಲ್ಲ.

ಬಿತ್ತನೆ ಕಾಲ : 

ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಅಂದರೆ, ಜೂನ್-ಜುಲೈ, ಅಕ್ಟೋಬರ್-ನವಂಬರ್ ಮತ್ತು ಜನೆವರಿ- ಫೆಬ್ರುವರಿಯಲ್ಲಿ ಬೆಳೆಯಬಹುದು. ವಾರ್ಷಿಕ ಮಳೆ ಪ್ರಮಾಣ 75 ರಿಂದ 90 ಸೆಂ.ಮೀ. ಇರುವಲ್ಲಿ ಹಾಗೂ ಜುಲೈನಿಂದ ಅಕ್ಟೋಬರ್‌ವರೆಗೆ ನಿರ್ದಿಷ್ಟ ಮಳೆ ಬೀಳುವ ಪ್ರದೇಶಗಳಲ್ಲಿ ಈ ಬೆಳೆಯನ್ನು ಫಲಪ್ರದವಾಗಿ ಬೆಳೆಯಬಹುದು. ಹೆಚ್ಚು ಮಳೆ ಬೀಳುವ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಬೆಳೆ ಉತ್ತಮ ಇಳುವರಿ ಕೊಡುವುದಿಲ್ಲ. ಬೇಸಿಗೆಯಲ್ಲಿ (ಜನವರಿ- ಫೆಬ್ರವರಿ) ಎಲೆ ಮುದುಡು ರೋಗಕ್ಕೆ ತುತ್ತಾಗುವುದರಿಂದ ಅವಶ್ಯವಿರುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಸಿಮಡಿಯಿಂದಲೇ ಪ್ರಾರಂಭಿಸಬೇಕು. ಮಳೆಯಾಶ್ರಿತ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲು ಜುಲೈ ಮಧ್ಯದಿಂದ ಅಗಸ್ಟ್ ಮಧ್ಯದವರೆಗೂ ಉತ್ತಮ ಕಾಲ.

ನಾಟಿ ಮಾಡುವ ವಿಧಾನ : 

ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು, ಹದಮಾಡಿ, ನಿರ್ದಿಷ್ಟಪಡಿಸಿದ ಪೂರ್ಣ ಪ್ರಮಾಣದ ಕೊಟ್ಟಿಗೆ/ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ 90 ಸೆಂ. ಮೀ. ಅಂತರದಲ್ಲಿ ಸಾಲು (ಹರಿ)ಗಳನ್ನು ಮಾಡಿ, ಶಿಫಾರಸ್ಸು ಮಾಡಿದ ಶೇ 50 ರಷ್ಟು ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ, ಪೊಟ್ಯಾಷ್ ಗೊಬ್ಬರವನ್ನು ಮಣ್ಣಿನಲ್ಲಿ ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ತೆಳುವಾಗಿ ನೀರನ್ನು ಒದಗಿಸಿ 45 ಸೆಂ. ಮೀ. ಅಂತರದಲ್ಲಿ ಸಾಲಿನ ಒಂದು ಪಕ್ಕದಲ್ಲಿ ಪ್ರತಿ ಗುಣಿಗೆ ಒಂದು ಸಸಿಯಂತೆ ನಾಟಿ ಮಾಡಬೇಕು.

ನಾಟಿ ಮಾಡುವಾಗ ಪ್ರತಿ 16 ಟೊಮ್ಯಾಟೊ ಸಾಲುಗಳಿಗೆ 1 ಸಾಲು ಆಫ್ರಿಕನ್ ಚೆಂಡು ಹೂವನ್ನು ನಾಟಿಮಾಡಬೇಕು. ಸಾಮಾನ್ಯವಾಗಿ 40 ದಿನ ಬೆಳೆದ ಚೆಂಡು ಹೂವಿನ ಸಸಿಗಳನ್ನು ಹಾಗೂ 25 ದಿನ ಬೆಳೆದ ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡಲು ಬಳಸಬೇಕು, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 250 ಕಿ.ಗ್ರಾಂ ಪ್ರಮಾಣದಲ್ಲಿ ಎಣ್ಣೆಯಿರುವ ಬೇವಿನ ಹಿಂಡಿಯನ್ನು ಮತ್ತು 5 ಟನ್ ಹಸಿರೆಲೆಗೊಬ್ಬರವನ್ನು ಹಾಕುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ.

ಗೊಬ್ಬರ ಪ್ರಮಾಣ ಪ್ರತಿ ಎಕರೆಗೆ:

ಗೊಟ್ಟಿಗೆ ಗೊಬ್ಬರ: 15 ಟನ್ 
ಸಾರಜನಕ: 100 ಕೆಜಿ
ರಂಜಕ: 100 ಕೆಜಿ
ಪೊಟ್ಯಾಷ್: 100 ಕೆಜಿ.

ಇದನ್ನೂ ಓದಿ: Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

ನೀರಾವರಿ ಮತ್ತು ಅಂತರ ಬೇಸಾಯ: 

ಹವಾಗುಣ ಮತ್ತು ಭೂಮಿಯ ಗುಣಧರ್ಮಕ್ಕನುಗುಣವಾಗಿ 5 ರಿಂದ 7 ದಿನಗಳಿಗೊಮ್ಮೆ ನೀರನ್ನು ಹಾಯಿಸಬೇಕು. ನಾಟಿ ಮಾಡಿದ ನಾಲ್ಕು ಐದು ವಾರಗಳ ನಂತರ 30 ಸೆಂ. ಮೀ. ಎತ್ತರದವರೆಗೆ ಬೆಳೆದ ಸಸಿಗಳಲ್ಲಿ ಕವಲು ಟೊಂಗೆಗಳನ್ನು ತೆಗೆದು ನಂತರ ಅವುಗಳಿಗೆ 1.2-1.5 ಸೆಂ. ಮೀ. ಉದ್ದದ ಕೋಲುಗಳನ್ನು ಆಧಾರಕ್ಕಾಗಿ ಕೊಡಬೇಕು ಇದರಿಂದ ಒಳ್ಳೆಯ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯ. ಉಳಿದ ಶೇ. 50 ರಷ್ಟು ಸಾರಜನಕವನ್ನು ನಾಟಿ ಮಾಡಿದ 4 ವಾರಗಳ ನಂತರ ಮೇಲುಗೊಬ್ಬರವಾಗಿ ಕೊಟ್ಟು ಮಣ್ಣನ್ನು ಏರಿಸಿ, ಭೂಮಿಯನ್ನು ಕಳೆರಹಿತವಾಗಿ ಇಡಬೇಕು.

ಕೊಯ್ದು ಮತ್ತು ಇಳುವರಿ: 

ನಾಟಿ ಮಾಡಿದ 60-65 ದಿನಗಳ ನಂತರ ಈ ಬೆಳೆಯು ಕೊಯ್ಲುಗೆ ಸಿದ್ಧವಾಗುತ್ತದೆ. ತಳಿ ಹಾಗೂ ಕಾಲಕ್ಕಗನುಸಾರವಾಗಿ 6-8 ವಾರಗಳವರೆಗೆ ಕೊಯ್ದು ಮುಂದುವರೆಯುವದು. ಪ್ರತಿ ಹೆಕ್ಟೇರಿಗೆ ಸುಧಾರಿತ ತಳಿಗಳಲ್ಲಿ 25-30 ಟನ್ ಹಣ್ಣುಗಳನ್ನು ಪಡೆಯಬಹುದು. ಸಂಕರಣ ತಳಿಗಳಲ್ಲಿ 60-75 ಟನ್ ಹಣ್ಣುಗಳನ್ನು ಪಡೆಯಬಹುದು.

ಮಾಹಿತಿ ಕೃಪೆ: ವಿಜಯಕರ್ನಾಟಕ & ಸಮಗ್ರ ತೋಟಗಾರಿಕೆ ಕೈಪಿಡಿ

karnataka Dam water level: ಇಂದಿನ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳ ಹರಿವು ಮತ್ತು ಹೊರ ಅರಿವು?

0

ಚುರುಕುಗೊಂಡ ಮಳೆಯಿಂದಾಗಿ ರಾಜ್ಯದ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಏರಿಕೆಯಾಗಿದ್ದು ಯಾವ ಡ್ಯಾಮ್ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ(karnataka Dam water level) ಒಳಹರಿವು ಮತ್ತು ಹೊರಹರಿವು ಎಷ್ಟಿದೆ?(Inflows and Outflows) ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಭಾರಿ ತಡವಾಗಿ ಆರಂಭವಾದ ಮುಂಗಾರು ಮಳೆಯು(Monsoon) ಕಳೆದ 2 ವಾರದಿಂದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಉತ್ತಮವಾಗಿ ಅಗಿದ್ದು, ರಾಜ್ಯದ(Karnataka) ಕೆಲವು ಪ್ರಮುಖ ಜಲಾಶಯಗಳ ಒಳಹರಿವು ಏರಿಕೆಯಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಪಟ್ಟಿ ಹೀಗಿದೆ(karnataka Dams):

ಆಲಮಟ್ಟಿ ಜಲಾಶಯ (Almatti Dam), ಭದ್ರಾ ಜಲಾಶಯ (Bhadra Dam), ಹೇಮಾವತಿ ಜಲಾಶಯ (Hemavathi Dam), ಕೆಆರ್​ಎಸ್​ ಜಲಾಶಯ (KRS Dam), ತುಂಗಭದ್ರಾ ಜಲಾಶಯ (Tungabhadra Dam),ಮಲಪ್ರಭಾ ಜಲಾಶಯ (Malaprabha Dam), ಲಿಂಗನಮಕ್ಕಿ ಜಲಾಶಯ (Linganamakki Dam), ಕಬಿನಿ ಜಲಾಶಯ (Kabini Dam), ಘಟಪ್ರಭಾ ಜಲಾಶಯ (Ghataprabha Dam),  ವರಾಹಿ ಜಲಾಶಯ (Varahi Dam), ಹಾರಂಗಿ ಜಲಾಶಯ (Harangi Dam)​​, ಸೂಫಾ ಜಲಾಶಯ(Supa Dam), ನಾರಾಯಣಪುರ ಜಲಾಶಯ(Narayanapura Dam)

11 ಜುಲೈ 2023ಕ್ಕೆ ಜಲಾಶಯಗಳ ನೀರಿನ ಮಟ್ಟ (ಮೀಟರ್ ಗಳಲ್ಲಿ)-karnataka Dam water level:

ಆಲಮಟ್ಟಿ- 519.6
ಭದ್ರಾ- 643.96 
ಹೇಮಾವತಿ- 881.42
ಕೆಆರ್​ಎಸ್ – 26.64
ತುಂಗಭದ್ರಾ – 482.12
ಮಲಪ್ರಭಾ- 622.72
ಲಿಂಗನಮಕ್ಕಿ- 533.95
ಘಟಪ್ರಭಾ- 635.49
ಕಬಿನಿ- 691.43
ವರಾಹಿ- 573.02
ಹಾರಂಗಿ- 865.42
ಸೂಫಾ- 527.28
ನಾರಾಯಣಪುರ: 492.25

ನೀರಿನ ಸಂಗ್ರಹಣೆ ಮತ್ತು ಒಟ್ಟು ಸಾಮರ್ಥ್ಯ(ಟಿಎಂಸಿ ಗಳಲ್ಲಿ)(11-07-2023):

ಆಲಮಟ್ಟಿ: ಇಂದಿನ ನೀರಿನ ಸಂಗ್ರಹಣೆ- 18.94 ಒಟ್ಟು ಸಾಮರ್ಥ್ಯ- 123.08

ಭದ್ರಾ: ಇಂದಿನ ನೀರಿನ ಸಂಗ್ರಹಣೆ- 27.46 ಒಟ್ಟು ಸಾಮರ್ಥ್ಯ- 71.54 

ಹೇಮಾವತಿ: ಇಂದಿನ ನೀರಿನ ಸಂಗ್ರಹಣೆ- 15.52 ಒಟ್ಟು ಸಾಮರ್ಥ್ಯ-  34.31

ಕೆಆರ್​ಎಸ್: ಇಂದಿನ ನೀರಿನ ಸಂಗ್ರಹಣೆ- 14.45 ಒಟ್ಟು ಸಾಮರ್ಥ್ಯ-  49.43

ತುಂಗಭದ್ರಾ: ಇಂದಿನ ನೀರಿನ ಸಂಗ್ರಹಣೆ- 5.42 ಒಟ್ಟು ಸಾಮರ್ಥ್ಯ-  105.79

ಮಲಪ್ರಭಾ: ಇಂದಿನ ನೀರಿನ ಸಂಗ್ರಹಣೆ- 6.80  ಒಟ್ಟು ಸಾಮರ್ಥ್ಯ-  37.78

ಲಿಂಗನಮಕ್ಕಿ: ಇಂದಿನ ನೀರಿನ ಸಂಗ್ರಹಣೆ- 19.89 ಒಟ್ಟು ಸಾಮರ್ಥ್ಯ- 151.75 

ಘಟಪ್ರಭಾ: ಇಂದಿನ ನೀರಿನ ಸಂಗ್ರಹಣೆ-5.59  ಒಟ್ಟು ಸಾಮರ್ಥ್ಯ- 51.00

ಕಬಿನಿ: ಇಂದಿನ ನೀರಿನ ಸಂಗ್ರಹಣೆ- 11.00 ಒಟ್ಟು ಸಾಮರ್ಥ್ಯ- 19.52 

ವರಾಹಿ: ಇಂದಿನ ನೀರಿನ ಸಂಗ್ರಹಣೆ- 4.03 ಒಟ್ಟು ಸಾಮರ್ಥ್ಯ- 31.10 

ಹಾರಂಗಿ: ಇಂದಿನ ನೀರಿನ ಸಂಗ್ರಹಣೆ-  4.11 ಒಟ್ಟು ಸಾಮರ್ಥ್ಯ- 8.55

ಸೂಫಾ: ಇಂದಿನ ನೀರಿನ ಸಂಗ್ರಹಣೆ- 33.20 ಒಟ್ಟು ಸಾಮರ್ಥ್ಯ- 145.33

ನಾರಾಯಣಪುರ: ಇಂದಿನ ನೀರಿನ ಸಂಗ್ರಹಣೆ- 14.11 ಒಟ್ಟು ಸಾಮರ್ಥ್ಯ- 33.31

ಇದನ್ನೂ ಓದಿ: Aadhaar bank link status: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ತಿಳಿಯುವುದೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಒಳಹರಿವು ಮತ್ತು ಹೊರಹರಿವು-ಕ್ಯೂಸೆಕ್ಸ್ ಗಳಲ್ಲಿ(11-07-2023):

ಆಲಮಟ್ಟಿ: ಒಳಹರಿವು- 0 , ಹೊರಹರಿವು- 561

ಭದ್ರಾ: ಒಳಹರಿವು- 823  ಹೊರಹರಿವು-226

ಹೇಮಾವತಿ: ಒಳಹರಿವು- 2191  ಹೊರಹರಿವು- 200

ಕೆಆರ್​ಎಸ್: ಒಳಹರಿವು- 7624 ಹೊರಹರಿವು- 382

ತುಂಗಭದ್ರಾ: ಒಳಹರಿವು- 17,761 ಹೊರಹರಿವು- 318

ಮಲಪ್ರಭಾ: ಒಳಹರಿವು- 0, ಹೊರಹರಿವು-194

ಲಿಂಗನಮಕ್ಕಿ: ಒಳಹರಿವು- 3,997, ಹೊರಹರಿವು- 0

ಘಟಪ್ರಭಾ: ಒಳಹರಿವು- 6,905, ಹೊರಹರಿವು- 87

ಕಬಿನಿ: ಒಳಹರಿವು- 4,485, ಹೊರಹರಿವು- 800

ವರಾಹಿ: ಒಳಹರಿವು- 1,283, ಹೊರಹರಿವು- 0

ಹಾರಂಗಿ: ಒಳಹರಿವು- 1,343, ಹೊರಹರಿವು- 50

ಸೂಫಾ: ಒಳಹರಿವು- 4,818, ಹೊರಹರಿವು- 4,151

ನಾರಾಯಣಪುರ: ಒಳಹರಿವು- 0, ಹೊರಹರಿವು- 144

Aadhaar bank link status: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ತಿಳಿಯುವುದೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

0

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದಿಯೋ ಇಲ್ಲವೋ? ಮತ್ತು ಲಿಂಕ್ ಅಗಿದ್ದರೆ ಯಾವ ಬ್ಯಾಂಕ್ ಹಾಗೂ  ಖಾತೆಗೆ ಅಗಿದೆ ಎಂದು ಹೇಗೆ ತಿಳಿಯಬವುದು?(aadhaar bank link status) ಆಧಾರ್ ಕಾರ್ಡ ಕುರಿತು ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. 

ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಸವಲತ್ತು ಪಡೆಯಲು ಆಧಾರ್ ಕಾರ್ಡ(Adhar card) ಸರ್ವೇ ಸಾಮಾನ್ಯವಾಗಿ ಸಲ್ಲಿಸಬೇಕಾಗುತ್ತದೆ ಇದರ ಜೊತೆಗೆ ಸರಕಾರಿ ಯೋಜನೆಗಳ ಸಹಾಯಧನದ ಹಣವನ್ನು ನೇರವಾಗಿ ಫಲಾನುಭವಿ ಖಾತೆಗೆ ವರ್ಗಾವಣೆ ಮಾಡಿದಾಗ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ ಮಾತ್ರ ಫಲಾನುಭವಿ ಖಾತೆಗೆ ಹಣ ಜಮಾ ಅಗುತ್ತದೆ ಇಲ್ಲವಾದಲ್ಲಿ ವರ್ಗಾವಣೆ ಅಗಿರುವುದಿಲ್ಲ.

ರಾಜ್ಯ ಸರಕಾರದ ಸಧ್ಯದ ಅನೇಕ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ದೊಡ್ಡ ಸಂಖ್ಯೆ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(adhar bank link status check) ಮಾಡಿಕೊಂಡಿರುವುದಿಲ್ಲ ಹೀಗಾಗಿ ಈ ಮಾಹಿತಿಯನ್ನು ನಿಮ್ಮ ಅಪ್ತರಿಗೂ ಶೇರ್ ಮಾಡಿ ಅವರಿಗೂ ತಿಳಿಸಿ ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು.

ಆಧಾರ್(adhar) ಎಂದರೇನು?

ಪ್ರಾಧಿಕಾರ ಸೆಕ್ಷನ್ 2ರ ವಿವರಣೆಯ ಅನ್ವಯ ಸೂಚಿಸಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾದ ನಂತರ ಯು.ಐ.ಡಿ.ಐ.ಎ ಭಾರತ ನಿವಾಸಿಗಳಿಗೆ ನೀಡುವ ವಿಶಿಷ್ಟ ಗುರುತಿನ 12 ಅಂಕೆಗಳ ಸಂಖ್ಯೆ ಈ “ಆಧಾರ್”

ಆಧಾರ್ ಯಾರು ಪಡೆಯಬವುದು?

ಯಾವುದೇ ವ್ಯಕ್ತಿ, ಯಾವುದೇ ವಯೋಮಾನ/ಲಿಂಗಳಿರಲಿ ಭಾರತದ ನಿವಾಸಿ ಅಥವಾ ಅನಿವಾಸೀ ಭಾರತೀಯ ಸಹ ಆಧಾರ್ ಸಂಖ್ಯೆಯನ್ನು ಹೊಂದಲು ನೋಂದಣಿ ಮಾಡಿಕೊಳ್ಳಬವುದು. ಪ್ರತಿ ವ್ಯಕ್ತಿಗೆ ಒಂದೇ  ಒಂದು ಆಧಾರ್ ಸಂಖ್ಯೆನ್ನು ನೀಡಲಾಗುತ್ತದ್ದು ಸಂಖ್ಯೆಯ ಅನನ್ಯತೆಯನ್ನು ನಕಲು ಮಾಡಲಾಗದ ಡೆಮೊಗ್ರಾಫಿಕ್ ಹಾಗೂ ಬಯೋಮೆಟ್ರಿಕ್ ಡಿ ಡುಪ್ಲಿಕೇಷನ್ ಪ್ರಕ್ರಿಯೆಯಿಂದ ಸಾಧಿಸಲಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವ ವಿಧಾನ-how to check aadhar link to bank account:

https://resident.uidai.gov.in/bank-mapper ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡನ 12 ಅಂಕಿಯ ಸಂಖ್ಯೆಯನ್ನು “Aadhaar Number” ಕಾಲಂನಲ್ಲಿ ನಮೂದಿಸಬೇಕು ನಂತರ ಇದರ ಕೆಳಗೆ ಇರುವ “Enter Security code” ನಲ್ಲಿ ಕ್ಯಾಪ್ಚರ್ ಕೋಡ ನಮೂದಿಸಿ “Send OTP” ಮೇಲೆ ಕ್ಲಿಕ್ ಮಾಡಿ ಅದಾದ ಬಳಿಕ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ “Submit” ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ಕೊನೆಯಲ್ಲಿ ನಿಮ್ಮ ಆಧಾರ್ ನಂಬರ್ ಯಾವ ಬ್ಯಾಂಕ್ ಗೆ ನೊಂದಣಿ ಅಗಿದ್ದರೆ “Congratulation Your Adhaar -Bank Mapping hs been done” ಎಂದು ತೋರಿಸುತ್ತದೆ ಇದರ ಜೊತೆಗೆ ಯಾವ ಬ್ಯಾಂಕ್ ಗೆ ಲಿಂಕ್ ಅಗಿದೆ ಎಂದು ಅದರ ಹೆಸರು ಸಹ ತೋರಿಸುತ್ತದೆ.

ಮತ್ತು  ಕೆಳಗೆ  “Bank seeding status” ಕಾಲಂನಲ್ಲಿ “Active” ಎಂದು ಗೋಚರಿಸಬೇಕು, “inactive” ಎಂದು ಗೋಚರಿಸಿದರೆ ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಆಧಾರ‍ ಕಾರ್ಡ ಪ್ರತಿ ನೀಡಿ  Active ಮಾಡಿಕೊಳ್ಳಬೇಕು.

ಇದನ್ನೂ ಓದಿ:  PMFME scheme: ಸ್ವ-ಉದ್ಯೋಗ ಆರಂಭಿಸಲು ಶೇ 35 % ಸಬ್ಸಿಡಿ ಜೊತೆ 15 ಲಕ್ಷದವರೆಗೆ ಸಹಾಯಧನ.


ಹೊಸ ಆಧಾರ್ ಮತ್ತು ಆಧಾರ್ ಅಪ್ಡೇಟ್ ಗಳನ್ನು  ಎಲ್ಲಿ ಮಾಡಿಸಬೇಕು?

ನಿಮ್ಮ ಹತ್ತಿರದ ನಾಡ ಕಚೇರಿ/ನೆಮ್ಮದಿ ಕೇಂದ್ರ , ಆಧಾರ್ ಕೇಂದ್ರಗಳಲ್ಲಿ ಹೊಸ ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸಬವುದು ಮತ್ತು ಇತರೆ ಆಧಾರ್ ಅಪ್ಡೇಟ್ ಗಳನ್ನು ಮಾಡಿಸಿಕೊಳ್ಳಬವುದು.

ನಿಮ್ಮ ಮೊಬೈಲ್ ನಲ್ಲೇ ಆಧಾರ್ ಡೌನ್ಲೋಡ್ ಮಾಡಬವುದು:

ನಿಮ್ಮ ಬಳಿ ಆಧಾರ‍ ಮೂಲ ಪ್ರತಿ ಇಲ್ಲದೇ ಇರುವ ಸಂದರ್ಭದಲ್ಲಿ https://myaadhaar.uidai.gov.in/genricDownloadAadhaar  ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ಸಂಖ್ಯೆಗೆ ಓಟಿಪಿ ಪಡೆದು ನಿಮ್ಮ ಮೊಬೈಲ್ ನಲ್ಲೇ ಆಧಾರ‍ ಕಾರ್ಡ ಡೌನ್ಲೋಡ ಮಾಡಿಕೊಳ್ಳಬವುದು. 

ಆಧಾರ್ ಉಚಿತ ಸಹಾಯವಾಣಿ ಸಂಖ್ಯೆ-Aadhar helpline number: 

ಆಧಾರ್ ಕಾರ್ಡ ಸೇವೆಗಳ ಕುರಿತು ಪ್ರಶ್ನೊತ್ತರಗಳಿಗೆ ಉಚಿತ ಸಹಾಯವಾಣಿ 1947 ಸಂಖ್ಯೆಗೆ ಕರೆ ಮಾಡಿ ತಿಳಿಯಬವುದು.

ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು:

ಆಧಾರ್ ವೆಬ್ಸೈಟ್(adhar card website): https://resident.uidai.gov.in/