Home Blog Page 83

Grama panchayat: ನಿಮ್ಮ ಗ್ರಾಮ ಪಂಚಾಯತಿಯ ಅಧಿಕಾರಿ,ಅಧ್ಯಕ್ಷ, ಸದಸ್ಯರುಗಳ ಮೊಬೈಲ್ ಸಂಖ್ಯೆ ಸಹಿತ ಎಲ್ಲಾ ಮಾಹಿತಿ ಪಡೆಯುವ ವೆಬ್ಸೈಟ್ ಲಿಂಕ್.

0

ಸಾರ್ವಜನಿಕರು ರಾಜ್ಯ ಸರಕಾರದ ಮಾಹಿತಿ ಕಣಜ (Mahiti kanaja website), ಪಂಚತಂತ್ರ(panchatantra), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(RDPR website)  ಜಾಲತಾಣ ಭೇಟಿ ಮಾಡಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಗ್ರಾಮ ಪಂಚಾಯತಿಯಲ್ಲಿ(Grama panchayath) ಕಾರ್ಯನಿರ್ವಹಿಸುವ ಅಧಿಕಾರಿಗಳ ಮತ್ತು ಅಧ್ಯಕ್ಷರು, ಸದಸ್ಯರುಗಳ ಮೊಬೈಲ್ ನಂಬರ್ ಗಳನ್ನು ಮತ್ತು ಯೋಜನೆ(Grama panchayat yojanegalu), ಇತ್ಯಾದಿ ಮಾಹಿತಿಯನ್ನು ಪಡೆಯಬವುದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಕುಂದು-ಕೊರತೆ ಉಂಟಾದ ಸಂದರ್ಭದಲ್ಲಿ ಅಥವಾ ಲಭ್ಯ ಫಲಾನುಭವಿಗಳ ಯೋಜನೆಗಳ ಕುರಿತು ಮಾಹಿತಿ ತಿಳಿಯಲು ತುರ್ತು ಸಮಯದಲ್ಲಿ ನಿಮ್ಮ ಬಳಿ ನಿಮ್ಮ ಭಾಗದ ಗ್ರಾಮ ಪಂಚಾಯತಗೆ ಸಂಬಂಧಪಟ್ಟ ಅಧಿಕಾರಿ, ಚುನಾಯಿತ ಪ್ರತಿನಿಧಿಗಳ ಮತ್ತು ಸಿಬ್ಬಂದಿಗಳ ಮೊಬೈಲ್ ಸಂಖ್ಯೆಯನ್ನು ಮಾಹಿತಿ ಕಣಜ ವೆಬ್ಸೈಟ್ ನಲ್ಲಿ ಪಡೆಯಬವುದು.

ಯಾವೆಲ್ಲ ಮೊಬೈಲ್ ಸಂಖ್ಯೆಗಳು ಲಭ್ಯ: ರಾಜ್ಯ ಸರಕಾರದ ಈ ಮಾಹಿತಿ ಕಣಜ ಪೋರ್ಟಲ್ ನಿಮ್ಮ ಗ್ರಾಮ ಪಂಚಾಯತಿಯ 1) ಅಧ್ಯಕ್ಷ 2) ಸದಸ್ಯರು 3) ಬಿಲ್ ಕಲೆಕ್ಟರ್ 4) ಕಂಪ್ಯೂಟರ್ ಅಪರೇಟರ್ 5) ಪಂಚಾಯತ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು ಇಲ್ಲಿ ಲಭ್ಯ.

Grama panchayat mobile numbers- ಗ್ರಾಮ ಪಂಚಾಯತಿನ ಮೊಬೈಲ್ ಸಂಖ್ಯೆಗಳನ್ನು ಪಡೆಯುವ ವಿಧಾನ:

Step- 1: ಸಾರ್ವಜನಿಕರು ಈ https://mahitikanaja.karnataka.gov.in/ ಲಿಂಕ್ ಮೇಲೆ ಮಾಹಿತಿ ಕಣಜ ವೆಬ್ಸೈಟ್ ಭೇಟಿ ಮಾಡಬೇಕು.
Step- 2: ನಂತರ ಗ್ರಾಮ ಪಂಚಾಯತಿ ಕಾರ್ಯನಿರ್ವಹಕರು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step- 3: ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿಕೊಂಡು “ಸಲ್ಲಿಸಿ” ಮೇಲೆ ಕ್ಲಿಕ್ ಮಾಡಬೇಕು.
Step- 4: ಇಲ್ಲಿ ನಿಮ್ಮ ಗ್ರಾಮ ಪಂಚಾಯತಿಯ ಅಧಿಕಾರಿಗಳ,ಅಧ್ಯಕ್ಷ, ಸದಸ್ಯರುಗಳ, ಸಿಬ್ಬಂದಿಗಳ ಹೆಸರು, ಮೊಬೈಲ್ ನಂಬರ್ ಮತ್ತು ಹುದ್ದೆ ಇಮೇಲ್ ಐಡಿ ವಿವರಗಳ ಪಟ್ಟಿ ಗೋಚರಿಸುತ್ತದೆ.

ಗಮನಿಸಿ: ಈ ಪುಟದಲ್ಲಿ ಮೊದಲ ಪೇಜ್ ನಲ್ಲಿ ಕೇಲವು ನಂಬರ್ ಮಾತ್ರ ತೋರಿಸುತ್ತದೆ ನೀವು ಈ ಪೇಜ್ ನ ಕೆಳಗೆ 1,2,3 ಎಂದು ಪುಟ ಸಂಖ್ಯೆ ನಮೂದಿಸಿರುತ್ತಾರೆ ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮೊಬೈಲ್ ಸಂಖ್ಯೆಗಳನ್ನು ಪಡೆಯಬವುದು.

ಇದನ್ನೂ ಓದಿ: Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

Grama panchayat schemes- ಗ್ರಾಮ ಪಂಚಾಯತಿಯ ಯೋಜನೆಗಳ ಮಾಹಿತಿಯನ್ನು ತಿಳಿಯುವುದು ಹೇಗೆ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(RDPR website) ಅಧಿಕೃತ ವೆಬ್ಸೈಟ್- https://rdpr.karnataka.gov.in/ ಭೇಟಿ ಮಾಡಿ ಗ್ರಾಮ ಪಂಚಾಯತಿಯ ಯೋಜನೆ, ನೂತನ ಅಧಿಸೂಚನೆ, ಯೋಜನೆ ಮಾರ್ಗಸೂಚಿ, ಸಹಾಯವಾಣಿ(grama panchayat helplines) ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಈ ಜಾಲಾತಾಣದಲ್ಲಿ ಪಡೆಯಬವುದು.

Panchatantra website link: ನಿಮ್ಮ ಗ್ರಾಮ ಪಂಚಾಯತಿಯ ಅಂಕಿ-ಸಂಖ್ಯೆ ಮಾಹಿತಿಯನ್ನು ಇಲ್ಲಿ ಪಡೆಯಬವುದು:

https://panchatantra.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಪಂಚತಂತ್ರ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಹೆಸರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮ ಪಂಚಾಯತಿಯ ಒಟ್ಟು ಅನುದಾನ, ಬೌಗೋಳಿಕ ನಕ್ಷೆ, ಸಲ್ಲಿಕೆಯಾದ ಅರ್ಜಿಗಳ ವಿವರ, ಗ್ರಾಮ ಪಂಚಾಯತಿಯಲ್ಲಿ ನಡೆದ ವಾರ್ಡ ಸಭೆ, ಸಾಮಾನ್ಯ ಸಭೆ, ಗ್ರಾಮ ಸಭೆ ಇತ್ಯಾಧಿ ಸಭೆಗಳ ದಿನಾಂಕ  ಚರ್ಚೆಯ ಮಾಹಿತಿಯ ವಿವರ ಇಲ್ಲಿ ಪಡೆಯಬವುದು.

ಆದಾಯ ಸಂಗ್ರಹ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹಳ್ಳಿವಾರು ಸಂಗ್ರಹವಾದ ಆದಾಯದ ವಿವರ ಗೋಚರಿಸುತ್ತದೆ.

Tomato farming: 30 ಗುಂಟೆಯಲ್ಲಿ ಟೊಮೆಟೊ ಬೆಳೆದು 5 ಲಕ್ಷ ಆದಾಯ ಪಡೆದ ರೈತ!

0

ಟೊಮೆಟೊ ಟೊಮೆಟೊ.. ಸಧ್ಯ ಮಾರುಕಟ್ಟೆಯಲ್ಲಿ ದರ ವಿಚಾರದಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿರುವ ತರಕಾರಿ ಈ ಕೆಂಪು ಸುಂದರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಅನೇಕ ದಿನಗಳಿಂದ ಟೊಮೆಟೊ ಬೆಳೆದು ನಷ್ಟ ಅನುಭವಿಸಿದ  ರೈತರಿಗೆ ಈ ಭಾರಿ ಉತ್ತಮ ಆದಾಯು ಸಿಗುತ್ತಿದೆ. ಈ ಹಿಂದಿನ ಎಂದು ಸಿಗದ ಬೆಲೆ ಈಗ ಮಾರುಕಟ್ಟೆಯಲ್ಲಿ ಟೊಮೆಟೊಗೆ ಸಿಗುತ್ತಿದೆ ಎನ್ನುತ್ತಾರೆ ರೈತ ಬಾಂಧವರು.

ಚಿತ್ರದುರ್ಗ(chitradurga) ಜಿಲ್ಲೆಯ ಸೀಗೆಹಳ್ಳಿ ಗ್ರಾಮದ ಜೆ ರಂಗಸ್ವಾಮಿ, ರೈತ 30 ಗುಂಟೆಯಲ್ಲಿ ಟೊಮೆಟೊ(Tomato farm) ಬೆಳೆದು 5 ಲಕ್ಷ ಆದಾಯ ಪಡೆದಿದ್ದಾರೆ. ಕಳೆದ ಎರಡು-ಮೂರು ತಿಂಗಳ ಹಿಂದೆ ಕೆಜಿಗೆ 2 ರೂ ಗು ಕೆಳದ ಟೊಮೆಟೊ ಈಗ 150 ರೂ ಗಡಿ ದಾಟಿದೆ ಈಗಾಗಿ ಸಧ್ಯ ಈ ಬೆಳೆ ಬೆಳೆದ ರೈತರಿಗೆ ಒಳ್ಳೆಯ ಲಾಭ ದೊರೆಯುತ್ತಿದೆ. ಈ ರೈತರು 30 ಗುಂಟೆಯಲ್ಲಿ  ಜಾಗದಲ್ಲಿ ವೆಲ್ಕಂ ತಳಿಯ 6,500 ಸಾವಿರ ಟೊಮೆಟೊ ಸಸಿಗಳನ್ನು ಸ್ಥಳೀಯ ನರ್ಸರಿಯಿಂದ  ತೆಗೆದುಕೊಂಡು ಬಂದು ನಾಟಿ ಮಾಡಿದ್ದೆವು ಇಲ್ಲಿಯವರೆಗೆ 5-6 ಭಾರಿ ಕೊಯ್ಲು ಮಾಡಿದ್ದೇವೆ ಸರಿ ಸೂಮಾರು 5 ಲಕ್ಷ ಆದಾಯ ದೊರೆತ್ತಿದೆ ಎಂದು ತಿಳಿಸಿದ್ದಾರೆ.

ಈ ರೈತರಿಗೆ ಒಟ್ಟು 4 ಎಕರೆ ಜಮೀನಿದ್ದು ಇದರಲ್ಲಿ ಒಂದು ಎಕರೆ ಅಡಿಕೆ, ಬಾಕಿ 30 ಗುಂಟೆಯಲ್ಲಿ ಟೊಮೆಟೊ(Tomato farming), 2.10 ಎಕರೆಯಲ್ಲಿ ಇತರೆ ಬೆಳೆಗಳನ್ನು ಬೆಳೆದಿದ್ದಾರೆ.ಇಲ್ಲಿಯವರೆಗೆ ಟೊಮೆಟೊ ಬೆಳೆಯಲು 50 ಸಾವಿರ ಖರ್ಚು ಬಂದಿದ್ದು ನಂತರ ಟೊಮೆಟೊ ಸಂಪೂರ್ಣ ಕಟಾವದ ಬಳಿದೆ ಇದೆ ಜಮೀನಿನಲ್ಲಿ ಬಳ್ಳಿ ಬೀನ್ಸ್ ಹಾಕುತ್ತೆವೆ ಅಗ ಇದೇ ಕೋಲು ಇತ್ಯಾದಿ ಪರಿಕರಗಳು ನಮಗೆ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದರು. 

ಈ ವೆಲ್ಕಂ ತಳಿಯು ಬೇಗ ಹಾಳಗುವುದಿಲ್ಲ ಇನ್ನೂ ಜಮೀನಿನಲ್ಲಿ ಬೆಳೆಯಿದ್ದು ಇದೇ ದರ ಇದಲ್ಲಿ ಇನ್ನು 2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರೈತ ಜೆ ರಂಗಸ್ವಾಮಿ.

ಜೆ ರಂಗಸ್ವಾಮಿ,ರೈತರ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಟೊಮೆಟೊ(Tomato rate) ಇಷ್ಟು ಬೆಲೆ ಏರಿಕೆಗೆ ಕಾರಣವೇನು?

ನಮ್ಮ ದೇಶದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಜನವರಿ-ಫೆಬ್ರುವರಿಯಲ್ಲಿ ತಿಂಗಳಲ್ಲಿ ನಾಟಿ ಮಾಡಿದ ಟೊಮೆಟೊ ಬೆಳೆಯು ಜೂನ್-ಜುಲೈನಲ್ಲಿ ಮಾರುಕಟ್ಟೆಗೆ ಬರಬೇಕಿತ್ತು. ಹೆಚ್ಚು ಸಮಯದವರೆಗೆ ಚಳಿ ಅಧಿಕ ಬೇಸಿಗೆ,ತಾಪಮಾಣದಿಂದ ಮತ್ತು ಮುಂಗಾರು ಮಳೆ ವಿಳಂಬದ ಕಾರಣ ನಿರೀಕ್ಷಿತ ಪ್ರಮಾಣದ ಇಳುವರಿ ಬರದಿರುವುದು ಸಹ ಬೆಲೆ ಏರಿಕೆಗೆ ಕಾರಣ. ಇದರ ಜೊತೆಗೆ ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ, ಆಂಧ್ರಪ್ರದೇಶದ ಟೊಮೆಟೊ ತಾಕುಗಳಲ್ಲಿ ಬಿಳಿ ನೋಣ ಭಾದೆ ಮತ್ತು ಶಿಲೀಂಧ್ರ ರೋಗಗಳು ಕಾಣಿಸಿಕೊಂಡ ಕಾರಣ ಇಳುವರಿ ಕಡಿಮೆಯಾಗಿರುತ್ತದೆ. ಇದೇ ಸಮಯದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಟೊಮೆಟೊ ಬೆಳೆಗಳಿಗೂ ಶಿಲೀಂಧ್ರ ರೋಗಗಳಿಗೆ ತುತ್ತಾಗಿವೆ. ಮಧ್ಯ ಭಾರತ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಅಕಾಲಿಕ ಮಳೆಯ ಕಾರಣದಿಂದ ಟೊಮೆಟೊ ಬೆಳೆ ನಾಶವಾಗಿದೆ. ಒಟ್ಟಾರೆಯಾಗಿ ಟೊಮೆಟೊ ಇಳುವರಿ ಕಡಿಮೆಯಾಗಿದ್ದರಿಂದ, ಬೆಲೆಯು ಅಧಿಕ ಪ್ರಮಾಣದಲ್ಲಿ ಒಂದೇ ಭಾರಿಗೆ ಏರಿಕೆಯಾಗಿದೆ.

ನಮ್ಮ ದೇಶದಲ್ಲಿ ಟೊಮೆಟೊ ಬೆಳೆಯುವ ಟಾಪ್ 10 ರಾಜ್ಯಗಳು(29-06-2023 ರ ದರ ವಿವರ)-Top 10 tomato producing states in india. 

1. ಮಧ್ಯ ಪ್ರದೇಶ(Madhyapradesh) : ಟೊಮೆಟೊ ದರ: 80-100 ರೂ. , ವಾರ್ಷಿಕ ಉತ್ಪಾದನೆ: 2,970 ಸಾವಿರ ಟನ್ ಉತ್ಪಾದನಾ ಪಾಲು: 14.63%

2. ಆಂಧ್ರಪ್ರದೇಶ(Andhrapradesh): ಟೊಮೆಟೊ ದರ: 50-70 ರೂ. ವಾರ್ಷಿಕ ಉತ್ಪಾದನೆ: 2,217 ಸಾವಿರ ಟನ್ ಉತ್ಪಾದನಾ ಪಾಲು: 10.92%

3. ಕರ್ನಾಟಕ(Karnataka): ದರ: 70-99 ರೂ. ವಾರ್ಷಿಕ ಉತ್ಪಾದನೆ: 2,077 ಸಾವಿರ ಟನ್ ಉತ್ಪಾದನಾ ಪಾಲು: 10.23%

4. ತಮಿಳುನಾಡು(Tamilnadu): ಟೊಮೆಟೊ ದರ: 75-95 ರೂ. ವಾರ್ಷಿಕ ಉತ್ಪಾದನೆ: 1489 ಸಾವಿರ ಟನ್, ಉತ್ಪಾದನಾ ಪಾಲು:7.34%

5. ಓಡಿಶಾ(Odisha): ಟೊಮೆಟೊ ದರ: 75-95 ರೂ, ವಾರ್ಷಿಕ ಉತ್ಪಾದನೆ: 1,432 ಸಾವಿರ ಟನ್, ಉತ್ಪಾದನಾ ಪಾಲು: 7.06%

6. ಗುಜರಾತ್(Gujarat): ದರ : 80-100 ರೂ. ವಾರ್ಷಿಕ ಉತ್ಪಾದನೆ: 1,395 ಸಾವಿರ ಟನ್ ಉತ್ಪಾದನಾ ಪಾಲು: 6.87%

7. ಪಶ್ಚಿಮ ಬಂಗಾಳ(West bengal): ಟೊಮೆಟೊ ದರ: 80-100 ರೂ, ವಾರ್ಷಿಕ ಉತ್ಪಾದನೆ: 1,284 ಸಾವಿರ ಟನ್ ಉತ್ಪಾದನಾ ಸಾಲು: 6.33%

8. ಛತ್ತೀಸಗಡ(chhattisgarh): ಟೊಮೆಟೊ ದರ: 70-90 ರೂ. ವಾರ್ಷಿಕ ಉತ್ಪಾದನೆ: 1,149 ಸಾವಿರ ಟನ್,ಉತ್ಪಾದನಾ ಪಾಲು: 5.66%

9. ಮಹಾರಾಷ್ಟ್ರ(Maharashtra): ಟೊಮೆಟೊ ದರ: 75-96 ರೂ. ವಾರ್ಷಿಕ ಉತ್ಪಾದನೆ: 1125 ಸಾವಿರ ಟನ್, ಉತ್ಪಾದನಾ ಸಾಲು: 5.54%

10. ಬಿಹಾರ(Bihar): ಟೊಮೆಟೊ ದರ: 60-80 ರೂ.  ವಾರ್ಷಿಕ ಉತ್ಪಾದನೆ: 951 ಸಾವಿರ ಟನ್ ,ಉತ್ಪಾದನಾ ಪಾಲು: 4.68%

(2021-22ರ ಅಂಕಿಅಂಶ, ಕೃಪೆ: ರಾಷ್ಟ್ರೀಯ ತೋಟಗಾರಿಕಾ ಮಂಡಳಿ-National Horticulture board)

ಇದನ್ನೂ ಓದಿ: Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

How to Grow Tomatoes-ಟೊಮೆಟೊ ಬೆಳೆಯುವ ವಿಧಾನ:

ಟೊಮ್ಯಾಟೊ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ ಜನಪ್ರಿಯ ತರಕಾರಿಯಾಗಿದೆ. ಈ ತರಕಾರಿಯು ಎ, ಬಿ ಹಾಗೂ ಸಿ. ಜೀವಸತ್ವಗಳನ್ನು ಒದಗಿಸುತ್ತದೆ.

ಟೊಮೆಟೊ ಬೆಳೆಯಲು ಸೂಕ್ತ ಮಣ್ಣು : 

ಇದನ್ನು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಗೋಡುಮಣ್ಣು ಈ ಬೆಳೆಗೆ ಸೂಕ್ತ ತಗ್ಗುಪ್ರದೇಶ, ನೀರು ನಿಲ್ಲುವ ಮತ್ತು ಆಮ್ಲಯುಕ್ತ ಮಣ್ಣಿನ ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ. ಉತ್ತಮ ಬೆಳೆಗೆ ಮಣ್ಣಿನ ರಸಸಾರ 6 ರಿಂದ 7 ಇರಬೇಕು. ಸೊರಗು ರೋಗಪೀಡಿತ ಮಣ್ಣು ಸೂಕ್ತವಲ್ಲ.

ಬಿತ್ತನೆ ಕಾಲ : 

ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಅಂದರೆ, ಜೂನ್-ಜುಲೈ, ಅಕ್ಟೋಬರ್-ನವಂಬರ್ ಮತ್ತು ಜನೆವರಿ- ಫೆಬ್ರುವರಿಯಲ್ಲಿ ಬೆಳೆಯಬಹುದು. ವಾರ್ಷಿಕ ಮಳೆ ಪ್ರಮಾಣ 75 ರಿಂದ 90 ಸೆಂ.ಮೀ. ಇರುವಲ್ಲಿ ಹಾಗೂ ಜುಲೈನಿಂದ ಅಕ್ಟೋಬರ್‌ವರೆಗೆ ನಿರ್ದಿಷ್ಟ ಮಳೆ ಬೀಳುವ ಪ್ರದೇಶಗಳಲ್ಲಿ ಈ ಬೆಳೆಯನ್ನು ಫಲಪ್ರದವಾಗಿ ಬೆಳೆಯಬಹುದು. ಹೆಚ್ಚು ಮಳೆ ಬೀಳುವ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಬೆಳೆ ಉತ್ತಮ ಇಳುವರಿ ಕೊಡುವುದಿಲ್ಲ. ಬೇಸಿಗೆಯಲ್ಲಿ (ಜನವರಿ- ಫೆಬ್ರವರಿ) ಎಲೆ ಮುದುಡು ರೋಗಕ್ಕೆ ತುತ್ತಾಗುವುದರಿಂದ ಅವಶ್ಯವಿರುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಸಿಮಡಿಯಿಂದಲೇ ಪ್ರಾರಂಭಿಸಬೇಕು. ಮಳೆಯಾಶ್ರಿತ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲು ಜುಲೈ ಮಧ್ಯದಿಂದ ಅಗಸ್ಟ್ ಮಧ್ಯದವರೆಗೂ ಉತ್ತಮ ಕಾಲ.

ನಾಟಿ ಮಾಡುವ ವಿಧಾನ : 

ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು, ಹದಮಾಡಿ, ನಿರ್ದಿಷ್ಟಪಡಿಸಿದ ಪೂರ್ಣ ಪ್ರಮಾಣದ ಕೊಟ್ಟಿಗೆ/ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ 90 ಸೆಂ. ಮೀ. ಅಂತರದಲ್ಲಿ ಸಾಲು (ಹರಿ)ಗಳನ್ನು ಮಾಡಿ, ಶಿಫಾರಸ್ಸು ಮಾಡಿದ ಶೇ 50 ರಷ್ಟು ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ, ಪೊಟ್ಯಾಷ್ ಗೊಬ್ಬರವನ್ನು ಮಣ್ಣಿನಲ್ಲಿ ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ತೆಳುವಾಗಿ ನೀರನ್ನು ಒದಗಿಸಿ 45 ಸೆಂ. ಮೀ. ಅಂತರದಲ್ಲಿ ಸಾಲಿನ ಒಂದು ಪಕ್ಕದಲ್ಲಿ ಪ್ರತಿ ಗುಣಿಗೆ ಒಂದು ಸಸಿಯಂತೆ ನಾಟಿ ಮಾಡಬೇಕು.

ನಾಟಿ ಮಾಡುವಾಗ ಪ್ರತಿ 16 ಟೊಮ್ಯಾಟೊ ಸಾಲುಗಳಿಗೆ 1 ಸಾಲು ಆಫ್ರಿಕನ್ ಚೆಂಡು ಹೂವನ್ನು ನಾಟಿಮಾಡಬೇಕು. ಸಾಮಾನ್ಯವಾಗಿ 40 ದಿನ ಬೆಳೆದ ಚೆಂಡು ಹೂವಿನ ಸಸಿಗಳನ್ನು ಹಾಗೂ 25 ದಿನ ಬೆಳೆದ ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡಲು ಬಳಸಬೇಕು, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 250 ಕಿ.ಗ್ರಾಂ ಪ್ರಮಾಣದಲ್ಲಿ ಎಣ್ಣೆಯಿರುವ ಬೇವಿನ ಹಿಂಡಿಯನ್ನು ಮತ್ತು 5 ಟನ್ ಹಸಿರೆಲೆಗೊಬ್ಬರವನ್ನು ಹಾಕುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ.

ಗೊಬ್ಬರ ಪ್ರಮಾಣ ಪ್ರತಿ ಎಕರೆಗೆ:

ಗೊಟ್ಟಿಗೆ ಗೊಬ್ಬರ: 15 ಟನ್ 
ಸಾರಜನಕ: 100 ಕೆಜಿ
ರಂಜಕ: 100 ಕೆಜಿ
ಪೊಟ್ಯಾಷ್: 100 ಕೆಜಿ.

ಇದನ್ನೂ ಓದಿ: Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

ನೀರಾವರಿ ಮತ್ತು ಅಂತರ ಬೇಸಾಯ: 

ಹವಾಗುಣ ಮತ್ತು ಭೂಮಿಯ ಗುಣಧರ್ಮಕ್ಕನುಗುಣವಾಗಿ 5 ರಿಂದ 7 ದಿನಗಳಿಗೊಮ್ಮೆ ನೀರನ್ನು ಹಾಯಿಸಬೇಕು. ನಾಟಿ ಮಾಡಿದ ನಾಲ್ಕು ಐದು ವಾರಗಳ ನಂತರ 30 ಸೆಂ. ಮೀ. ಎತ್ತರದವರೆಗೆ ಬೆಳೆದ ಸಸಿಗಳಲ್ಲಿ ಕವಲು ಟೊಂಗೆಗಳನ್ನು ತೆಗೆದು ನಂತರ ಅವುಗಳಿಗೆ 1.2-1.5 ಸೆಂ. ಮೀ. ಉದ್ದದ ಕೋಲುಗಳನ್ನು ಆಧಾರಕ್ಕಾಗಿ ಕೊಡಬೇಕು ಇದರಿಂದ ಒಳ್ಳೆಯ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯ. ಉಳಿದ ಶೇ. 50 ರಷ್ಟು ಸಾರಜನಕವನ್ನು ನಾಟಿ ಮಾಡಿದ 4 ವಾರಗಳ ನಂತರ ಮೇಲುಗೊಬ್ಬರವಾಗಿ ಕೊಟ್ಟು ಮಣ್ಣನ್ನು ಏರಿಸಿ, ಭೂಮಿಯನ್ನು ಕಳೆರಹಿತವಾಗಿ ಇಡಬೇಕು.

ಕೊಯ್ದು ಮತ್ತು ಇಳುವರಿ: 

ನಾಟಿ ಮಾಡಿದ 60-65 ದಿನಗಳ ನಂತರ ಈ ಬೆಳೆಯು ಕೊಯ್ಲುಗೆ ಸಿದ್ಧವಾಗುತ್ತದೆ. ತಳಿ ಹಾಗೂ ಕಾಲಕ್ಕಗನುಸಾರವಾಗಿ 6-8 ವಾರಗಳವರೆಗೆ ಕೊಯ್ದು ಮುಂದುವರೆಯುವದು. ಪ್ರತಿ ಹೆಕ್ಟೇರಿಗೆ ಸುಧಾರಿತ ತಳಿಗಳಲ್ಲಿ 25-30 ಟನ್ ಹಣ್ಣುಗಳನ್ನು ಪಡೆಯಬಹುದು. ಸಂಕರಣ ತಳಿಗಳಲ್ಲಿ 60-75 ಟನ್ ಹಣ್ಣುಗಳನ್ನು ಪಡೆಯಬಹುದು.

ಮಾಹಿತಿ ಕೃಪೆ: ವಿಜಯಕರ್ನಾಟಕ & ಸಮಗ್ರ ತೋಟಗಾರಿಕೆ ಕೈಪಿಡಿ

karnataka Dam water level: ಇಂದಿನ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳ ಹರಿವು ಮತ್ತು ಹೊರ ಅರಿವು?

0

ಚುರುಕುಗೊಂಡ ಮಳೆಯಿಂದಾಗಿ ರಾಜ್ಯದ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಒಳ ಹರಿವು ಏರಿಕೆಯಾಗಿದ್ದು ಯಾವ ಡ್ಯಾಮ್ ನಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ(karnataka Dam water level) ಒಳಹರಿವು ಮತ್ತು ಹೊರಹರಿವು ಎಷ್ಟಿದೆ?(Inflows and Outflows) ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.

ಈ ಭಾರಿ ತಡವಾಗಿ ಆರಂಭವಾದ ಮುಂಗಾರು ಮಳೆಯು(Monsoon) ಕಳೆದ 2 ವಾರದಿಂದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಉತ್ತಮವಾಗಿ ಅಗಿದ್ದು, ರಾಜ್ಯದ(Karnataka) ಕೆಲವು ಪ್ರಮುಖ ಜಲಾಶಯಗಳ ಒಳಹರಿವು ಏರಿಕೆಯಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಪಟ್ಟಿ ಹೀಗಿದೆ(karnataka Dams):

ಆಲಮಟ್ಟಿ ಜಲಾಶಯ (Almatti Dam), ಭದ್ರಾ ಜಲಾಶಯ (Bhadra Dam), ಹೇಮಾವತಿ ಜಲಾಶಯ (Hemavathi Dam), ಕೆಆರ್​ಎಸ್​ ಜಲಾಶಯ (KRS Dam), ತುಂಗಭದ್ರಾ ಜಲಾಶಯ (Tungabhadra Dam),ಮಲಪ್ರಭಾ ಜಲಾಶಯ (Malaprabha Dam), ಲಿಂಗನಮಕ್ಕಿ ಜಲಾಶಯ (Linganamakki Dam), ಕಬಿನಿ ಜಲಾಶಯ (Kabini Dam), ಘಟಪ್ರಭಾ ಜಲಾಶಯ (Ghataprabha Dam),  ವರಾಹಿ ಜಲಾಶಯ (Varahi Dam), ಹಾರಂಗಿ ಜಲಾಶಯ (Harangi Dam)​​, ಸೂಫಾ ಜಲಾಶಯ(Supa Dam), ನಾರಾಯಣಪುರ ಜಲಾಶಯ(Narayanapura Dam)

11 ಜುಲೈ 2023ಕ್ಕೆ ಜಲಾಶಯಗಳ ನೀರಿನ ಮಟ್ಟ (ಮೀಟರ್ ಗಳಲ್ಲಿ)-karnataka Dam water level:

ಆಲಮಟ್ಟಿ- 519.6
ಭದ್ರಾ- 643.96 
ಹೇಮಾವತಿ- 881.42
ಕೆಆರ್​ಎಸ್ – 26.64
ತುಂಗಭದ್ರಾ – 482.12
ಮಲಪ್ರಭಾ- 622.72
ಲಿಂಗನಮಕ್ಕಿ- 533.95
ಘಟಪ್ರಭಾ- 635.49
ಕಬಿನಿ- 691.43
ವರಾಹಿ- 573.02
ಹಾರಂಗಿ- 865.42
ಸೂಫಾ- 527.28
ನಾರಾಯಣಪುರ: 492.25

ನೀರಿನ ಸಂಗ್ರಹಣೆ ಮತ್ತು ಒಟ್ಟು ಸಾಮರ್ಥ್ಯ(ಟಿಎಂಸಿ ಗಳಲ್ಲಿ)(11-07-2023):

ಆಲಮಟ್ಟಿ: ಇಂದಿನ ನೀರಿನ ಸಂಗ್ರಹಣೆ- 18.94 ಒಟ್ಟು ಸಾಮರ್ಥ್ಯ- 123.08

ಭದ್ರಾ: ಇಂದಿನ ನೀರಿನ ಸಂಗ್ರಹಣೆ- 27.46 ಒಟ್ಟು ಸಾಮರ್ಥ್ಯ- 71.54 

ಹೇಮಾವತಿ: ಇಂದಿನ ನೀರಿನ ಸಂಗ್ರಹಣೆ- 15.52 ಒಟ್ಟು ಸಾಮರ್ಥ್ಯ-  34.31

ಕೆಆರ್​ಎಸ್: ಇಂದಿನ ನೀರಿನ ಸಂಗ್ರಹಣೆ- 14.45 ಒಟ್ಟು ಸಾಮರ್ಥ್ಯ-  49.43

ತುಂಗಭದ್ರಾ: ಇಂದಿನ ನೀರಿನ ಸಂಗ್ರಹಣೆ- 5.42 ಒಟ್ಟು ಸಾಮರ್ಥ್ಯ-  105.79

ಮಲಪ್ರಭಾ: ಇಂದಿನ ನೀರಿನ ಸಂಗ್ರಹಣೆ- 6.80  ಒಟ್ಟು ಸಾಮರ್ಥ್ಯ-  37.78

ಲಿಂಗನಮಕ್ಕಿ: ಇಂದಿನ ನೀರಿನ ಸಂಗ್ರಹಣೆ- 19.89 ಒಟ್ಟು ಸಾಮರ್ಥ್ಯ- 151.75 

ಘಟಪ್ರಭಾ: ಇಂದಿನ ನೀರಿನ ಸಂಗ್ರಹಣೆ-5.59  ಒಟ್ಟು ಸಾಮರ್ಥ್ಯ- 51.00

ಕಬಿನಿ: ಇಂದಿನ ನೀರಿನ ಸಂಗ್ರಹಣೆ- 11.00 ಒಟ್ಟು ಸಾಮರ್ಥ್ಯ- 19.52 

ವರಾಹಿ: ಇಂದಿನ ನೀರಿನ ಸಂಗ್ರಹಣೆ- 4.03 ಒಟ್ಟು ಸಾಮರ್ಥ್ಯ- 31.10 

ಹಾರಂಗಿ: ಇಂದಿನ ನೀರಿನ ಸಂಗ್ರಹಣೆ-  4.11 ಒಟ್ಟು ಸಾಮರ್ಥ್ಯ- 8.55

ಸೂಫಾ: ಇಂದಿನ ನೀರಿನ ಸಂಗ್ರಹಣೆ- 33.20 ಒಟ್ಟು ಸಾಮರ್ಥ್ಯ- 145.33

ನಾರಾಯಣಪುರ: ಇಂದಿನ ನೀರಿನ ಸಂಗ್ರಹಣೆ- 14.11 ಒಟ್ಟು ಸಾಮರ್ಥ್ಯ- 33.31

ಇದನ್ನೂ ಓದಿ: Aadhaar bank link status: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ತಿಳಿಯುವುದೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಒಳಹರಿವು ಮತ್ತು ಹೊರಹರಿವು-ಕ್ಯೂಸೆಕ್ಸ್ ಗಳಲ್ಲಿ(11-07-2023):

ಆಲಮಟ್ಟಿ: ಒಳಹರಿವು- 0 , ಹೊರಹರಿವು- 561

ಭದ್ರಾ: ಒಳಹರಿವು- 823  ಹೊರಹರಿವು-226

ಹೇಮಾವತಿ: ಒಳಹರಿವು- 2191  ಹೊರಹರಿವು- 200

ಕೆಆರ್​ಎಸ್: ಒಳಹರಿವು- 7624 ಹೊರಹರಿವು- 382

ತುಂಗಭದ್ರಾ: ಒಳಹರಿವು- 17,761 ಹೊರಹರಿವು- 318

ಮಲಪ್ರಭಾ: ಒಳಹರಿವು- 0, ಹೊರಹರಿವು-194

ಲಿಂಗನಮಕ್ಕಿ: ಒಳಹರಿವು- 3,997, ಹೊರಹರಿವು- 0

ಘಟಪ್ರಭಾ: ಒಳಹರಿವು- 6,905, ಹೊರಹರಿವು- 87

ಕಬಿನಿ: ಒಳಹರಿವು- 4,485, ಹೊರಹರಿವು- 800

ವರಾಹಿ: ಒಳಹರಿವು- 1,283, ಹೊರಹರಿವು- 0

ಹಾರಂಗಿ: ಒಳಹರಿವು- 1,343, ಹೊರಹರಿವು- 50

ಸೂಫಾ: ಒಳಹರಿವು- 4,818, ಹೊರಹರಿವು- 4,151

ನಾರಾಯಣಪುರ: ಒಳಹರಿವು- 0, ಹೊರಹರಿವು- 144

Aadhaar bank link status: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ತಿಳಿಯುವುದೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

0

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದಿಯೋ ಇಲ್ಲವೋ? ಮತ್ತು ಲಿಂಕ್ ಅಗಿದ್ದರೆ ಯಾವ ಬ್ಯಾಂಕ್ ಹಾಗೂ  ಖಾತೆಗೆ ಅಗಿದೆ ಎಂದು ಹೇಗೆ ತಿಳಿಯಬವುದು?(aadhaar bank link status) ಆಧಾರ್ ಕಾರ್ಡ ಕುರಿತು ಇತರೆ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. 

ಸಾರ್ವಜನಿಕರು ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಸವಲತ್ತು ಪಡೆಯಲು ಆಧಾರ್ ಕಾರ್ಡ(Adhar card) ಸರ್ವೇ ಸಾಮಾನ್ಯವಾಗಿ ಸಲ್ಲಿಸಬೇಕಾಗುತ್ತದೆ ಇದರ ಜೊತೆಗೆ ಸರಕಾರಿ ಯೋಜನೆಗಳ ಸಹಾಯಧನದ ಹಣವನ್ನು ನೇರವಾಗಿ ಫಲಾನುಭವಿ ಖಾತೆಗೆ ವರ್ಗಾವಣೆ ಮಾಡಿದಾಗ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ ಮಾತ್ರ ಫಲಾನುಭವಿ ಖಾತೆಗೆ ಹಣ ಜಮಾ ಅಗುತ್ತದೆ ಇಲ್ಲವಾದಲ್ಲಿ ವರ್ಗಾವಣೆ ಅಗಿರುವುದಿಲ್ಲ.

ರಾಜ್ಯ ಸರಕಾರದ ಸಧ್ಯದ ಅನೇಕ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ದೊಡ್ಡ ಸಂಖ್ಯೆ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(adhar bank link status check) ಮಾಡಿಕೊಂಡಿರುವುದಿಲ್ಲ ಹೀಗಾಗಿ ಈ ಮಾಹಿತಿಯನ್ನು ನಿಮ್ಮ ಅಪ್ತರಿಗೂ ಶೇರ್ ಮಾಡಿ ಅವರಿಗೂ ತಿಳಿಸಿ ಆಧಾರ್ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು.

ಆಧಾರ್(adhar) ಎಂದರೇನು?

ಪ್ರಾಧಿಕಾರ ಸೆಕ್ಷನ್ 2ರ ವಿವರಣೆಯ ಅನ್ವಯ ಸೂಚಿಸಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾದ ನಂತರ ಯು.ಐ.ಡಿ.ಐ.ಎ ಭಾರತ ನಿವಾಸಿಗಳಿಗೆ ನೀಡುವ ವಿಶಿಷ್ಟ ಗುರುತಿನ 12 ಅಂಕೆಗಳ ಸಂಖ್ಯೆ ಈ “ಆಧಾರ್”

ಆಧಾರ್ ಯಾರು ಪಡೆಯಬವುದು?

ಯಾವುದೇ ವ್ಯಕ್ತಿ, ಯಾವುದೇ ವಯೋಮಾನ/ಲಿಂಗಳಿರಲಿ ಭಾರತದ ನಿವಾಸಿ ಅಥವಾ ಅನಿವಾಸೀ ಭಾರತೀಯ ಸಹ ಆಧಾರ್ ಸಂಖ್ಯೆಯನ್ನು ಹೊಂದಲು ನೋಂದಣಿ ಮಾಡಿಕೊಳ್ಳಬವುದು. ಪ್ರತಿ ವ್ಯಕ್ತಿಗೆ ಒಂದೇ  ಒಂದು ಆಧಾರ್ ಸಂಖ್ಯೆನ್ನು ನೀಡಲಾಗುತ್ತದ್ದು ಸಂಖ್ಯೆಯ ಅನನ್ಯತೆಯನ್ನು ನಕಲು ಮಾಡಲಾಗದ ಡೆಮೊಗ್ರಾಫಿಕ್ ಹಾಗೂ ಬಯೋಮೆಟ್ರಿಕ್ ಡಿ ಡುಪ್ಲಿಕೇಷನ್ ಪ್ರಕ್ರಿಯೆಯಿಂದ ಸಾಧಿಸಲಾಗಿದೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವ ವಿಧಾನ-how to check aadhar link to bank account:

https://resident.uidai.gov.in/bank-mapper ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡನ 12 ಅಂಕಿಯ ಸಂಖ್ಯೆಯನ್ನು “Aadhaar Number” ಕಾಲಂನಲ್ಲಿ ನಮೂದಿಸಬೇಕು ನಂತರ ಇದರ ಕೆಳಗೆ ಇರುವ “Enter Security code” ನಲ್ಲಿ ಕ್ಯಾಪ್ಚರ್ ಕೋಡ ನಮೂದಿಸಿ “Send OTP” ಮೇಲೆ ಕ್ಲಿಕ್ ಮಾಡಿ ಅದಾದ ಬಳಿಕ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ “Submit” ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ಕೊನೆಯಲ್ಲಿ ನಿಮ್ಮ ಆಧಾರ್ ನಂಬರ್ ಯಾವ ಬ್ಯಾಂಕ್ ಗೆ ನೊಂದಣಿ ಅಗಿದ್ದರೆ “Congratulation Your Adhaar -Bank Mapping hs been done” ಎಂದು ತೋರಿಸುತ್ತದೆ ಇದರ ಜೊತೆಗೆ ಯಾವ ಬ್ಯಾಂಕ್ ಗೆ ಲಿಂಕ್ ಅಗಿದೆ ಎಂದು ಅದರ ಹೆಸರು ಸಹ ತೋರಿಸುತ್ತದೆ.

ಮತ್ತು  ಕೆಳಗೆ  “Bank seeding status” ಕಾಲಂನಲ್ಲಿ “Active” ಎಂದು ಗೋಚರಿಸಬೇಕು, “inactive” ಎಂದು ಗೋಚರಿಸಿದರೆ ಒಮ್ಮೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ಆಧಾರ‍ ಕಾರ್ಡ ಪ್ರತಿ ನೀಡಿ  Active ಮಾಡಿಕೊಳ್ಳಬೇಕು.

ಇದನ್ನೂ ಓದಿ:  PMFME scheme: ಸ್ವ-ಉದ್ಯೋಗ ಆರಂಭಿಸಲು ಶೇ 35 % ಸಬ್ಸಿಡಿ ಜೊತೆ 15 ಲಕ್ಷದವರೆಗೆ ಸಹಾಯಧನ.


ಹೊಸ ಆಧಾರ್ ಮತ್ತು ಆಧಾರ್ ಅಪ್ಡೇಟ್ ಗಳನ್ನು  ಎಲ್ಲಿ ಮಾಡಿಸಬೇಕು?

ನಿಮ್ಮ ಹತ್ತಿರದ ನಾಡ ಕಚೇರಿ/ನೆಮ್ಮದಿ ಕೇಂದ್ರ , ಆಧಾರ್ ಕೇಂದ್ರಗಳಲ್ಲಿ ಹೊಸ ಆಧಾರ್ ಕಾರ್ಡಗೆ ಅರ್ಜಿ ಸಲ್ಲಿಸಬವುದು ಮತ್ತು ಇತರೆ ಆಧಾರ್ ಅಪ್ಡೇಟ್ ಗಳನ್ನು ಮಾಡಿಸಿಕೊಳ್ಳಬವುದು.

ನಿಮ್ಮ ಮೊಬೈಲ್ ನಲ್ಲೇ ಆಧಾರ್ ಡೌನ್ಲೋಡ್ ಮಾಡಬವುದು:

ನಿಮ್ಮ ಬಳಿ ಆಧಾರ‍ ಮೂಲ ಪ್ರತಿ ಇಲ್ಲದೇ ಇರುವ ಸಂದರ್ಭದಲ್ಲಿ https://myaadhaar.uidai.gov.in/genricDownloadAadhaar  ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ 12 ಅಂಕೆಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ಸಂಖ್ಯೆಗೆ ಓಟಿಪಿ ಪಡೆದು ನಿಮ್ಮ ಮೊಬೈಲ್ ನಲ್ಲೇ ಆಧಾರ‍ ಕಾರ್ಡ ಡೌನ್ಲೋಡ ಮಾಡಿಕೊಳ್ಳಬವುದು. 

ಆಧಾರ್ ಉಚಿತ ಸಹಾಯವಾಣಿ ಸಂಖ್ಯೆ-Aadhar helpline number: 

ಆಧಾರ್ ಕಾರ್ಡ ಸೇವೆಗಳ ಕುರಿತು ಪ್ರಶ್ನೊತ್ತರಗಳಿಗೆ ಉಚಿತ ಸಹಾಯವಾಣಿ 1947 ಸಂಖ್ಯೆಗೆ ಕರೆ ಮಾಡಿ ತಿಳಿಯಬವುದು.

ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು:

ಆಧಾರ್ ವೆಬ್ಸೈಟ್(adhar card website): https://resident.uidai.gov.in/

PMFME scheme: ಸ್ವ-ಉದ್ಯೋಗ ಆರಂಭಿಸಲು ಶೇ 35 % ಸಬ್ಸಿಡಿ ಜೊತೆ 15 ಲಕ್ಷದವರೆಗೆ ಸಹಾಯಧನ.

0

ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಮಾರಾಟ ಮಾಡುವುದರ ಬದಲಿಗೆ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ತಮ್ಮದೇ ಆದ ಸ್ವಂತ ಬ್ರಾಂಡ್ ನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಆಸಕ್ತ ಅಭ್ಯರ್ಥಿಗಳಿಗೆ ಸ್ವ-ಉದ್ಯೋಗ(self employment loan schemes) ಆರಂಭಿಸಲು ಅರ್ಥಿಕವಾಗಿ ನೆರವು ನೀಡುವ ದೇಸೆಯಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಕ್ಕೆ ಘಟಕಗಳ ನಿಯಮಬದ್ಧಗೊಳಿಸುವಿಕೆ (Pmfme yojane) ಯೋಜನೆಯಡಿ ಅರ್ಜಿ ಸಲ್ಲಿಸಿ  ಶೇ 35 % ಸಬ್ಸಿಡಿ  15 ಲಕ್ಷದವರೆಗೆ ಸಹಾಯಧನ ಪಡೆಯಬವುದು.

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಕ್ಕೆ ಘಟಕಗಳ ನಿಯಮಬದ್ಧಗೊಳಿಸುವಿಕೆ (PMFME scheme) ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿದೆ  ಪ್ರಾರಂಭಿಸಲು ಮತ್ತು ಹಾಲಿ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸಲು ಅವಕಾಶವಿರುತ್ತದೆ.

ವಯಸ್ಸಿನ ಮಿತಿ ಹಾಗೂ ವಿದ್ಯಾರ್ಹತೆ: 18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬವುದು. ಯಾವುದೇ ಕನಿಷ್ಠ ವಿದ್ಯಾರ್ಹತೆ ಇರುವುದಿಲ್ಲ.

ಇದರ ಜೊತೆಗೆ ಇತರೆ ಸರ್ಕಾರಿ ಯೋಜನೆಗಳಲ್ಲಿ ಶಾಯಧನ ಸಂಪರ್ಕಿತ ಬ್ಯಾಂಖ್ ಸಾಲ ಪಡೆದಿದ್ದರೂ ಸಹ ಅರ್ಹರು.

ಸಹಾಯಧನ ವಿವರ(Subsidy Details):

ಯೋಜನೆಯ ಲಾಭ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್(National Bank loan) ಅಥವಾ ಖಾಸಗಿ ಬ್ಯಾಂಕ್ ನಲ್ಲಿ ಲೋನ್ ಪಡೆಯುವುದು ಕಡ್ಡಾಯವಾಗಿರುತ್ತದೆ. ಕೇಂದ್ರ ಸರಕಾರ ಶೇ 35ರಷ್ಟು  ಗರಿಷ್ಠ ರೂ 15 ಲಕ್ಷಗಳು ಅಥವಾ ಶೇ 35ರಷ್ಟು ಸಹಾಯಧನ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು-How to apply?

ನಿಮ್ಮ ಹತ್ತಿರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅಥವಾ ಅರ್ಜಿ ಸಲ್ಲಿಸಲು ಈ ಯೋಜನೆಗೆ ಸಂಬಂಧಪಟ್ಟ ನಿಮ್ಮ ಜಿಲ್ಲೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ (ಪಿಎಂಎಪ್ಎಂಇ ಯೋಜನೆ)ಅವರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿ ಒದಗಿಸಿ ಅರ್ಜಿ ಸಲ್ಲಿಸಬೇಕು ಅಥವಾ ನೇರವಾಗಿ ಈ ವೆಬ್ಸೈಟ್ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು. ವೆಬ್ಸೈಟ್ ವಿಳಾಸ: pmfme.mofpi.gov.in

ಇದನ್ನೂ ಓದಿ: gruha joytio status check: ಗೃಹಜ್ಯೋತಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆಯೇ?ಮತ್ತು  ಅರ್ಜಿ ಸ್ಥಿತಿ ತಿಳಿಯುವುದು ಹೇಗೆ?

ಯಾರೆಲ್ಲ ಅರ್ಜಿ ಸಲ್ಲಿಸಬವುದು?

ವೈಯಕ್ತಿಕವಾಗಿ, ಸಹಕಾರಿ ಸಂಸ್ಥೆ, ಸ್ವ ಸಹಾಯ ಸಂಘ(SHG groups), ರೈತ ಉತ್ಪಾದಕ ಕಂಪನಿ(FPO)ಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬವುದು.


ಅಗತ್ಯ ದಾಖಲೆಗಳು ಮಾಹಿತಿ :-

ಚಾಲ್ತಿಯಲ್ಲಿರುವ ಉದ್ಯಮಕ್ಕೆ :-

1) ಆಧಾರ್ ಕಾರ್ಡ್

2) ಪಾನ್ ಕಾರ್ಡ್

3) ರೇಷನ್‌ ಕಾರ್ಡ್‌/ವಿದ್ಯುತ್‌ ಬಿಲೆ

4) ಹಿಂದಿನ 6 ತಿಂಗಳ ಬ್ಯಾಂಕ್ ಸ್ಟೇಟ್‌ ಮೆಂಟ್

5) ಉದ್ಯಮ ನಡೆಸುವ ಸ್ಥಳದ ಬಾಡಿಗೆ ಒಪ್ಪಂದದ ಪತ್ರ.

6) ಯಂತ್ರೋಪಕರಣಗಳ ಕೋಟೆಷನ್.

7) ಪಂಚಾಯತ ಪರವಾನಿಗೆ ಪತ್ರ

8) FSSAI ಮತ್ತು ಉದ್ಯಮ ಆಧಾರ


ಹೊಸ ಉದ್ಯಮಕ್ಕೆ: –

1) ಆಧಾರ್ ಕಾರ್ಡ್

2) ಪಾನ್ ಕಾರ್ಡ್

3) ರೇಷನ್‌ ಕಾರ್ಡ್‌/ವಿದ್ಯುತ್‌ ಬಿಲೆ

4) ಹಿಂದಿನ 6 ತಿಂಗಳ ಬ್ಯಾಂಕ್ ಸ್ಟೇಟ್‌ ಮೆಂಟ್

5) ಉದ್ಯಮ ನಡೆಸುವ ಸ್ಥಳದ ಬಾಡಿಗೆ ಒಪ್ಪಂದದ ಪತ್ರ.

6) ಯಂತ್ರೋಪಕರಣಗಳ ಕೋಟೆಷನ್.

7) ಪಂಚಾಯತ ಪರವಾನಿಗೆ ಪತ್ರ

8) FSSAI ಮತ್ತು ಉದ್ಯಮ ಆಧಾರ

ಉತ್ಪನ್ನ ಮಾರುಕಟ್ಟೆಗೆ ಮತ್ತು ಆಹಾರ ಸಂಸ್ಕರಣೆಗೆ ತಾಂತ್ರಿಕ ತರಬೇತಿ ನೀಡಲಾಗುತ್ತದೆ:

PMFME ಯೋಜನೆ ಅಡಿಯಲ್ಲಿ ನೀವು CFTRI ಸಂಸ್ಥೆ ಮೈಸೂರಿನಿಂದ ಅಗತ್ಯವಿರುವ ತಾಂತ್ರಿಕ ತರಬೇತಿಯನ್ನು ಪಡೆಯಬವುದು, ನೀವು ಒಂದು ಸಮಯದಲ್ಲಿ 30 ಜನರ ಗುಂಪಿನಲ್ಲಿ ಒಟ್ಟಿಗೆ ಸೇರಿದರೆ.  ಮಾರ್ಕೆಟಿಂಗ್ ಎನ್‌ಜಿಒಗಳು ಅಗತ್ಯವಿದ್ದರೆ ಲಿಂಕ್‌ಗಳನ್ನು ಒದಗಿಸಲಾಗುತ್ತದೆ.
ಆದ್ದರಿಂದ ಆಸಕ್ತರು PMFME ಯೋಜನೆಯಡಿಯಲ್ಲಿ ಉದ್ಯಮಿಗಳಾಗಲು ಇದು ಉತ್ತಮ ಅವಕಾಶವಾಗಿದೆ.

CFTRI, Mysore Website:  https://cftri.res.in/kweb/

gruha joytio status check: ಗೃಹಜ್ಯೋತಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆಯೇ?ಮತ್ತು ಅರ್ಜಿ ಸ್ಥಿತಿ ತಿಳಿಯುವುದು ಹೇಗೆ?

0

ರಾಜ್ಯ ಸರಕಾರದಿಂದ ಗೃಹ ಜ್ಯೋತಿ(gruhajoyti) ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ನೀವು ಸಲ್ಲಿಸಿದ ಅರ್ಜಿ ಸರಿಯಾಗಿದೆಯೇ? ಮತ್ತು ಅರ್ಜಿಯ ಸ್ಥಿತಿ(gruhajoyti application status check) ತಿಳಿಯುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಗೃಹಜ್ಯೋತಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆಯೇ?ಮತ್ತು  ಅರ್ಜಿ ಸ್ಥಿತಿ ತಿಳಿಯುವ ವಿಧಾನ- How to check gruha jyothi application status:

https://sevasindhugs.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ವೆಬ್ಸೈಟ್ ಭೇಟಿ ಮಾಡಿ ನಂತರ “ಗೃಹ ಜ್ಯೋತಿ”(Gruha joyti) ಯೋಜನೆಗೆ ಅರ್ಜಿ ಸಲ್ಲಿಸುವ ಮುಖಪುಟ ತೆರೆದುಕೊಳ್ಳುತ್ತದೆ, ನಂತರ ಇಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ ಮೇಲೆ ಕ್ಲಿಕ್ ಮಾಡಬೇಕು.

ಇದಾದ ನಂತರ ನಿಮ್ಮ ಇಂಧನ ಇಲಾಖೆಯ ವಿಭಾಗವನ್ನು ಆಯ್ಕೆಯನ್ನು ಮಾಡಿಕೊಳ್ಳಿ Bescom/mescom/Cesc/Hescom/Hresc/Gescom ಇದರಲ್ಲಿ ಒಂದನ್ನು ಆಯ್ಕೆ ಮಾಡಬೇಕು.

ನಂತರ “Enter Your Acccount ID” ಆಯ್ಕೆಯಲ್ಲಿ ನಿಮ್ಮ ಕರೆಂಟ್ ಬಿಲ್ ನಲ್ಲಿ ನಮೂದಿಸಿರುವ “ಗ್ರಾಹಕರ ಸಂಖ್ಯೆ/Account ID” ಹಾಕಿ “Check Status” ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ನಿಮ್ಮ ಅರ್ಜಿ ಸಲ್ಲಿಕೆಯಾಗಿದ್ದರೆ ನೀವು ಅರ್ಜಿ ಸಲ್ಲಿಸದ ದಿನಾಂಕದ ವಿವರ ಅರ್ಜಿ, ರೆಪ್ರೆನ್ಸ್ ನಂಬರ್, ಮತ್ತು ಅರ್ಜಿ ಸ್ಥಿತಿ/Status: “our application for GruhaJyothi Scheme is received and sent to ESCOM for processing” ಎಂದು ಗೊಚರಿಸುತ್ತದೆ.

“our application for GruhaJyothi Scheme is received and sent to ESCOM for processing” ಈ ರೀತಿ ಬಂದಲ್ಲಿ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ, ಅರ್ಜಿಯು ಪರಿಶೀಲನೆ ಹಂತದಲ್ಲಿದೆ ಎಂದು.

ಇದನ್ನೂ ಓದಿ: ಪ್ರಮುಖ ಸುದ್ದಿ: ಗೃಹಜ್ಯೋತಿ ಜುಲೈ 25 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಗಸ್ಟ್ ತಿಂಗಳ ವಿದ್ಯುತ್ ಉಚಿತ.

ಅರ್ಜಿ ಸಲ್ಲಿಕೆಯಾಗದಿದ್ದಲಿ ಈ ರೀತಿ ಬರುತ್ತದೆ:

ಗ್ರಾಹಕರ ಸಂಖ್ಯೆ/Account ID ಹಾಕಿದ ನಂತರ “Data Not Found. Please Register to GruhaJyothi Scheme!” ಎಂದು ಗೋಚರಿಸಿದರೆ, ಗೃಹಜ್ಯೋತಿ ಯೋಜನಗೆ ಅರ್ಜಿ ಸಲ್ಲಿಸಬೇಕು ಅಥವಾ ಈ ಹಿಂದೆ ಅರ್ಜಿ ಸಲ್ಲಿಸಿರುವುದು ಸರಿಯಾಗಿಲ್ಲ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ(Gruhajoyti helpline):

ಸಹಾಯವಾಣಿಗಳು- Gruha Joyti helpline numbers: 08022279954 / 8792662814 / 8792662816

ಗೃಹ ಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಯಾವುದೇ ಗೊಂದಲ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನಿಮಗೆ ತಿಳಿಯದಿದಲ್ಲಿ ಈ ಸಹಾಯವಾಣಿಗೆ ಸಂಪರ್ಕಿಸಬವುದು.

ಇದರ ಜೊತೆಗೆ ಅರ್ಜಿ ಸಲ್ಲಿಸುವಾಗ ಸರ್ವರ್ ಸಮಸ್ಯೆ ಇತರೆ ಕಾರಣಗಳಿಂದ ಅರ್ಜಿ ಸಲ್ಲಿಸಲ ಅಗದಿದ್ದಲ್ಲಿ ಮತ್ತು ಅರ್ಜಿ ಸ್ವಿಕೃತಿ ದೊರೆಯದಿದ್ದಲ್ಲಿ ಮೇಲೆ ನಮೂದಿಸಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸೂಕ್ತ ಸಲಹೆಯನ್ನು ಪಡೆಯಬವುದು.

Best vegetables for monsoon: ಮುಂಗಾರು ಹಂಗಾಮಿಗೆ ಸೂಕ್ತವಾದ ತರಕಾರಿ ಬೆಳೆ ಮತ್ತು ತಳಿ ಯಾವುವು?

0

ಬದಲಾಗುತ್ತಿರುವ ಹವಾಮಾನದಲ್ಲಿ ತರಕಾರಿ ಬೆಳೆ ಬೆಳೆಯಲು ರೈತರಿಗೆ ಅನೇಕ ಕಷ್ಟಕರ ಸನ್ನಿವೇಶಗಳು ಅಡ್ಡಬರುತ್ತಿವೆ ಉದಾಹರಣೆಗೆ ಬೇಸಿಗೆ ಅಲ್ಲಿ ಹೆಚ್ಚು ಬಿಸಿಲು ಮಳೆಗಾಲದಲ್ಲಿ ಒಂದೇ ಬಾರಿಗೆ ಹೆಚ್ಚು ಮಳೆ ಬಂದು ಬೆಳೆ ಹಾನಿಯಾಗುವುದು, ಅನೀರಿಕ್ಷಿತ ರೋಗ ಮತ್ತು ಕೀಟ ಭಾದೆಗಳು ಹೀಗೆ ಅನೇಕ ಸಮಸ್ಯೆಗಳಿಂದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ದಿನ ದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.

ಈಗ ರಾಜ್ಯದಲ್ಲಿ ಎಲ್ಲಾ ಭಾಗಕ್ಕೆ ಸ್ವಲ್ಪ ಪ್ರಮಾಣದಲ್ಲಿ ಮುಂಗಾರು ಮಳೆ ಅವರಿಸಿದ್ದು ಅನೇಕ ರೈತರು ಮೆಕ್ಕೆಜೋಳ ಇತರೆ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ ಇದರ ಜೊತೆಗೆ ತರಕಾರಿ ಬೆಳೆಯಲು ಅಸಕ್ತಿ ಹೊಂದಿರುವ  ರೈತರು ಯಾವ ತರಕಾರಿ ಬೆಳೆದರೆ ಸೂಕ್ತ ಮತ್ತು ಅ ಬೆಳೆಯಲ್ಲಿ ಯಾವ ತಳಿ ಆಯ್ಕೆ ಮಾಡಬೇಕು ಎಂದು ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಮುಂಗಾರು ಹಂಗಾಮಿಗೆ ಸೂಕ್ತವಾದ ತರಕಾರಿ ಬೆಳೆ ಮತ್ತು ತಳಿಗಳ ವಿವರ-Best vegetable seeds for monsoon:

ಟೊಮೆಟೋ(Tomato) – ಅರ್ಕ ರಕ್ಷಕ್, ಅರ್ಕಾ ಅಭೇದ , ಅಭಿನವ್, ಅಭಿಲಾಷ್, ಸಾಹೋ, ಶಕ್ಸಂ, 440, ಅನ್ಸಾಲ್, ಮೆಗದುತ, JK-811.

ಹಸಿ ಮೆಣಸಿನಕಾಯಿ(Green chili): ಆರ್ಕಾ ಹರಿತ, ಅರ್ಕ ಕ್ಯಾತಿ, ಸಿತಾರ್ ಗೋಲ್ಡ್ , ಸೋನಾಲ್, ಬಂಗಾರಂ,  syngenta -5531, ಅರಮರ್, DDLG.

ಒಣ ಮೆಣಸಿನಕಾಯಿ(Dry chili): syngenta -2043, syngenta -5531, indama-5,  Buyer-341

ಬದನೆ(eggplant): Mahyco-10,11, East-West,-Lalith, Meghan , Seminis -Manjari

ಉಳ್ಳಾಗಡ್ಡಿ/ಈರುಳ್ಳಿ(Onion): ಅರ್ಕ ಕಲ್ಯಾಣ್, ಭೀಮಾ ಸೂಪರ್, ಪಂಚಗಂಗಾ, N-53, ನಾಸಿಕ್ ರೆಡ್, ತೆಲಗಿ ಲೋಕಲ್. ಬಳ್ಳಾರಿ ರೆಡ್.
ಪ್ರೇಮಾ, ಮಾರ್ಷಲ್.

ಬೆಂಡೆ(Lady finger): ಅರ್ಕ ಅನಾಮಿಕ, ರಾಧಿಕಾ, ಸಾಹಿಬ್,ಶಕ್ತಿ, ಸಾಮ್ರಾಟ, ಮೋನಿಕಾ, etc

ಸೌತೆಕಾಯಿ(Cucumber): Dharwad green, chitra, Malini, ನೇತ್ರಾ, ಗಂಗೋತ್ರಿ,  ತ್ರಿಶಾ, ಸೈರಾ, ಜೆಬಾ, ಜಂಬೋ ಗ್ರೀನ್.

ಹಾಗಲಕಾಯಿ(Bitter gourd): ಶ್ರೇಯಾ, ಪ್ರಗತಿ, 1515, US, ಮೋನಿಕಾ, etc

ಸ್ವೀಟ್ ಕಾರ್ನ್(Sweet corn): ಶುಗರ್ -75, ಹೈ ಬ್ರಿಕ್ಸ್, 

ಡೊಣ್ಣೆ ಮೆಣಸಿನಕಾಯಿ(capsicum): ಇಂದ್ರಾ, ಬೆಳಗಾಂವ ಪಾಪ್ಟೆ, ಆಶಾ.

ಇದನ್ನೂ ಓದಿ: Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

ತರಕಾರಿ ಬೀಜಗಳನ್ನು(Vegetables seeds) ಎಲ್ಲಿ ಖರೀದಿ ಮಾಡಬೇಕು?

ರೈತರು ತಮ್ಮ ಹತ್ತಿರದ ಗೊಬ್ಬರ ಮತ್ತು ಬೀಜ ಮಾರಾಟ ಮಾಡುವ ಅಂಗಡಿಯಲ್ಲಿ ವಿಚಾರಣೆ ಮಾಡಿ ತರಕಾರಿ ಬೀಜಗಳನ್ನು ಖರೀದಿ ಮಾಡಬವುದು ಅಥವಾ ನೇರವಾಗಿ ಈ https://www.bighaat.com/collections/vegetables ಲಿಂಕ್ ಮೇಲೆ ಕ್ಲಿಕ್ ಮಾಡಿ ಬಿಗ್ ಹಾತ್(Big haat) ಅನ್ಲೈನ್ ಕೃಷಿ ಪರಿಕರ ಮಾರಾಟ ಅಂಗಡಿಯಲ್ಲಿ ಎಲ್ಲಾ ತರಹದ ತರಕಾರಿ ಬೀಜಗಳನ್ನು ಬುಕಿಂಗ್ ಮಾಡಿ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬವುದಾಗಿದೆ.

ಮಾಹಿತಿ ಕೃಪೆ: ಡಾ,ಮಹಾಂತೇಶ್ ಜೋಗಿ 
ಮೊಬೈಲ್ ಸಂಖ್ಯೆ-8105453873

Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

0

ಇತ್ತೀಚಿನ ದಿನಗಳಲ್ಲಿ, ಅತಿಯಾದ ಉಷಾಂಶದಿಂದ ಟಮೋಟೋ(Tomato bele) ಬೆಳೆಯಲ್ಲಿ ಬಿಳಿನೊಣದ ಹಾವಳಿ ಹೆಚ್ಚಾಗಿರುತ್ತದೆ. ಇದನ್ನು ತಡೆಗಟ್ಟಲು ಪ್ರತಿ ಎಕರೆಗೆ 10 ರಿಂದ 12 ಹಳದಿ ಅಂಟು ಬಲೆಳನ್ನು ಗಿಡದ ಎತ್ತರಕ್ಕಿಂತ 1 ಅಡಿ ಎತ್ತರದಲ್ಲಿ, ತೂಗು ಹಾಕುವುದು ಹಾಗೂ ಅವುಗಳನ್ನು 15 ದಿನಗಳಿಗೊಮ್ಮೆ ಬದಲಾಯಿಸುವುದು, ಆರಂಭಿಕ ಹಂತದಲ್ಲಿಯೇ ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ನಂಜಾಣು ರೋಗ ಹರಡುವಿಕೆಯನ್ನು ನಿಯಂತ್ರಿಸಬಹುದು.

Diafenthuran 1.2g / 1 ಲೀಟರ್ ನೀರಿಗೆ ಅಥವಾ Flupyridifuran 1ml / 1 1 ಲೀಟರ್ ನೀರಿಗೆ ಅಥವಾ Afidopyropen Inscalis 1ml / 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು, ಈ ಮೇಲಿನ ಕೀಟನಾಶಗಳನ್ನು 8 ರಿಂದ 10 ದಿನಗಳ ಅಂತರದಲ್ಲಿ ಸಿಂಪಡಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,(ಜಿಲ್ಲಾ ಪಂಚಾಯತ್), ಕೋಲಾರ ರವರು ಕೋರಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ, ಕೋಲಾರ(Kolar) ಜಿಲ್ಲೆಯ ಟೊಮಾಟೋ ಬೆಳೆಯಲ್ಲಿ ಬಿಳಿ ನೊಣ ಹಾಗೂ ಎಲೆ ಮುಟುರು ರೋಗದ ತೀವ್ರತೆಯು ಹೆಚ್ಚಾಗಿರುವುದರಿಂದ ಟೊಮಾಟೋ ಬೆಳೆಯಲ್ಲಿ ಬಿಳಿ ನೊಣ ಹಾಗೂ ಎಲೆ ಮುಟುರು ರೋಗದ ಸಮಗ್ರ ನಿರ್ವಹಣೆಗಾಗಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೋಲಾರ ರವರು ತಿಳಿಸಿರುವ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು,

1. ರೋಗಮುಕ್ತ, ಆರೋಗ್ಯವಂತ ಸಸಿಗಳನ್ನು ನಾಟಿಗೆ ಬಳಸುವುದು, 

2. ಸಸಿಮಡಿಗಳಲ್ಲಿ 40 ಮೇಷ್ ನೈಲಾನ್ ಪರದೆಯನ್ನು ಹಾಕುವುದು,

3. ಇಮಿಡಾಕೊಪ್ರಿಡ್ 70 WS (10 ಗ್ರಾಂ, ಪ್ರತಿ ಕೆ.ಜಿ, ಬೀಜಕೆ) ಕೀಟನಾಶಕದಿಂದ ಬೀಜೋಪಚಾರ ಮಾಡುವುದು.

4. ಮುಖ್ಯ ಬೆಳೆ ಕ್ಷೇತ್ರದಲ್ಲಿ, ಸಿಲ್ಮರ್ ಬಣ್ಣದ ಪ್ಲಾಸ್ಮಿಕ್ ಹೊದಿಕೆಯನ್ನು ಬಳಸಿ ಬಿಳಿ ನೊಣಗಳನ್ನು ಹಿಮ್ಮೆಟ್ಟಿಸುವುದು,

5. ಟೊಮಾಟೋ(Tomato sasi) ಸಸಿಗಳನ್ನು ನಾಟಿ ಮಾಡುವ 30 ದಿನಗಳ ಮುಂಚಿತವಾಗಿ ಹೊಲದ ಸುತ್ತಲೂ ಮಕ ಜೋಳ ಅಥವಾ ಸಜೆ ಅಥವಾ ಮೇವಿನ ಜೋಳವನ್ನು ತಡೆ ಬೆಳೆಯಾಗಿ 2 ರಿಂದ 3 ಸಾಲು ದಟ್ಟವಾಗಿ ಬೆಳೆಯುವುದು, ಇದರಿಂದ ಬಿಳಿ ನೊಣಗಳ ಹರಡುವಿಕೆ ಕುಂಠಿತವಾಗುವುದರಿಂದ ಎಲೆ ಮುಟುರು ರೋಗದ ಪ್ರಮಾಣ ಕಡಿಮೆಯಾಗುತ್ತದೆ.

6. ಪಾರ್ಥೇನಿಯಮ್, ಕಡೆ, ಮುಳ್ಳು, ಅಲ್ಪ ಭೇದಿ ಸೊಪ್ಪು, ಗಬ್ಬು ಸೊಪ್ಪು, ಸೀಮೆ ಎಣ್ಣೆ ಗಿಡ ಮುಂತಾದ ಕಳೆ ಗಿಡಗಳನ್ನು ಟೊಮಾಟೋ ಬೆಳೆಯಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಿತ್ತು ತೆಗೆಯುವುದು.

7. ಒಂದು ಬಾರಿ ಟೊಮಾಟೋ ಬೆಳೆದ ನಂತರ ಬಿಳಿ ನೊಣಗಳ ತೀವ್ರತೆ ಕಡಿಮೆಯಿರುವ ಪರ್ಯಾಯ ಬೆಳೆಗಳಾದ ಮೆಕ್ಕೆ ಜೋಳ, ಸಜ್ಜೆ, ರಾಗಿ, ಮುಂತಾದವುಗಳನ್ನು ಬೆಳೆಯುವುದು, 

8. ಪ್ರತಿ ಎಕರೆಗೆ 10 ರಿಂದ 12 ಹಳದಿ ಅಂಟು ಬಲೆಗಳನ್ನು(yellow sticky traps) ತೂಗುಹಾಕುವುದು ಹಾಗೂ ಅವುಗಳನ್ನು 15 ದಿನಗಳಿಗೊಮ್ಮೆ ಬದಲಾಯಿಸುವುದು.

ಇದನ್ನೂ ಓದಿ: ಪ್ರಮುಖ ಸುದ್ದಿ: ಗೃಹಜ್ಯೋತಿ ಜುಲೈ 25 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಗಸ್ಟ್ ತಿಂಗಳ ವಿದ್ಯುತ್ ಉಚಿತ.

9. ಆರಂಭಿಕ ಹಂತದಲ್ಲಿಯೇ ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ನಂಜಾಣು ರೋಗ ಹರಡುವಿಕೆಯನ್ನು ನಿಯಂತ್ರಣದಲ್ಲಿಡಬಹುದು,

10. Vegetable Special @5 ಗ್ರಾಂ/ ಲೀಟರ್ ಸಿಂಪಡಿಸುವುದರಿಂದ ಇಳುವರಿ ಕಡಿಮೆಯಾಗುವುದನ್ನು ತಡೆಯಬಹುದು.

11. ಬಿಳಿ ನೊಣಗಳನ್ನು ನಿಯಂತ್ರಣದಲ್ಲಿಡಲು ನಾಟಿ ಮಾಡಿದ 15 ದಿನಗಳ ನಂತರ ಇಮಿಡಾಕೊಪ್ರಿಡ್ 17.8 SL@ 0.4 ಮಿ.ಲೀ, ಅಥವಾ ಥೈಯೋಮಿತೋಗ್ರಾಮ್ 25 WG @ 0.3 ಗ್ರಾಂ ಅಥವಾ ಫಿಫೋನಿಲ್ 5% SC@1.5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು, Azadirachtin 1% @25 ಮಿಲಿ/ಲೀಟರ್ ಅನ್ನು ಇದರೊಂದಿಗೆ ಸಿಂಪಡಿಸುವುದು.

12. ನಾಟಿ ಮಾಡಿದ 40 ದಿನಗಳ ನಂತರ ಇಮಿಡಾಕ್ ಪ್ರಿಡ್ (imidacloprid)70% WG @ 2.0 ಗ್ರಾಂ/ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

ನಿಮ್ಮ ರೇಶನ್ ಕಾರ್ಡ್ ಸಕ್ರಿಯವಾಗಿರುವುದನ್ನು ತಿಳಿಯುವುದು ಹೇಗೆ? ಕುಟುಂಬದ ಮುಖ್ಯಸ್ಥರ ವಿವರ ತಿಳಿಯುವ ವಿಧಾನ.

0

ನಮ್ಮ ದೈನಂದಿನ ಜೀವನದಲ್ಲಿ ಆಧಾರ್ ಕಾರ್ಡ ನಂತರ ಅತ್ಯಗತ್ಯ ದಾಖಲೆಗಳಲ್ಲಿ ಒಂದಾದ ರೇಶನ್ ಕಾರ್ಡ ಕುರಿತು ಈ ಅಂಕಣದಲ್ಲಿ ಕೆಲವು ಮಾಹಿತಿಯನ್ನು ವಿವರಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಅನೇಕ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ರೇಶನ್ ಕಾರ್ಡ ಸಲ್ಲಿಸುವುದು ಅತ್ಯಗತ್ಯ್ ಉದಾಹರಣೆ ಯೋಜನೆಗಳು ಹೀಗಿವೆ ಗೃಹ ಲಕ್ಷ್ಮೀ, ಆರೋಗ್ಯ ಸಂಬಂಧಿಸಿದ ವಿಮೆ ಯೋಜನೆಗಳು- ಯಶಸ್ವಿನಿ  ಯೋಜನೆ ಇತ್ಯಾದಿ, ನರೇಗಾ ಯೋಜನೆಯಡಿ ಜಾಬ್ ಕಾರ್ಡ ಪಡೆಯಲು ಬಿ. ಪಿ. ಎಲ್ ಕಾರ್ಡ ಒದಗಿಸಬೇಕಾಗುತ್ತದೆ ಹೀಗೆ ಅನೇಕ ಯೋಜನೆಗಳಿಗೆ ರೇಶನ್ ಕಾರ್ಡ ಅವಶ್ಯಕ.

ಅದ್ದರಿಂದ ನಿಮ್ಮ ರ‍ೇಶನ್ ಕಾರ್ಡನಲ್ಲಿ ಎಷ್ಟ ಜನ ಮನೆ ಸದಸ್ಯರ ಹೆಸರು ಇದೆ? ಕಾರ್ಡ ಸಕ್ರಿಯವಾಗಿದಿಯೇ? ರ‍ೇಶನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಯಾರದ್ದು ಇದೆ ಎಂದು ತಿಳಿಯುವ ವಿಧಾನದ ಹೇಗೆ ಎಂದು ಈ ಕೆಳಗೆ ವಿವರಿಸಲಾಗಿದೆ.

ರೇಶನ್ ಕಾರ್ಡ್ ಸಕ್ರಿಯವಾಗಿರುವುದನ್ನು ತಿಳಿಯುವ ವಿಧಾನ:

ರಾಜ್ಯ ಸರಕಾರದ ಅಧಿಕೃತ ಮಾಹಿತಿಯನ್ನು ಒದಗಿಸುವ ಮಾಹಿತಿ ಕಣಜ ಜಾಲಾತಾಣ ಈ https://mahitikanaja.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ರೇಶನ್ ಕಾರ್ಡ/ಪಡಿತರ ಚೀಟಿಯ 12 ಅಂಕಿಯ ಸಂಖ್ಯೆಯನ್ನು ನಮೂದಿಸಿ “ಸಲ್ಲಿಸಿ” ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕಾರ್ಡ ಸ್ಥಿತಿ ವಿಭಾಗದಲ್ಲಿ “ಸಕ್ರಿಯ” ಎಂದು ಗೋಚರಿಸಿದ್ದರೆ ನಿಮ್ಮ ರೇಶನ್ ಕಾರ್ಡ ಸಕ್ರಿಯವಾಗಿದೆ ಎಂದು.

ಕುಟುಂಬದ ಮುಖ್ಯಸ್ಥರ ವಿವರ ತಿಳಿಯುವ ವಿಧಾನ:

ಮಾಹಿತಿ ಕಣಜ ವೆಬ್ಸೈಟ್ ನ https://mahitikanaja.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಿಲ್ಲೆ ಮತ್ತು ರೇಶನ್ ಕಾರ್ಡ್ ನಂಬರ್ ಹಾಕಿ ವಿವರ ಪಡೆದ ನಂತರ ಕುಟುಂಬ ಸದಸ್ಯರ ವಿವರಗಳು ವಿಭಾಗದಲ್ಲಿ ಮೊದಲಿಗೆ ತೋರಿಸುವ ಹೆಸರಿನ ಮುಂದೆ ಕುಟುಂಬದ ಮುಖ್ಯಸ್ಥರು ಎಂದು ನಮೂದಿಸಿರುತ್ತದೆ.

ಇದರ ಜೊತೆಗೆ ರೇಶನ್ ಕಾರ್ಡನಲ್ಲಿ ಎಷ್ಟು ಜನ ಇದ್ದರೆ ಮತ್ತು ಅವರ ಜನ್ಮ ದಿನಾಂಕ ವಯಸ್ಸು ಇತ್ಯಾದಿ ಮಾಹಿತಿ ಇಲ್ಲಿ ಗೋಚರಿಸುತ್ತದೆ.

ಇದನ್ನೂ ಓದಿ: ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸರ್ವೆ ನಂಬರ್ ಸಹಿತ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

ರೇಶನ್ ಕಾರ್ಡ ನಂಬರ್ ಎಲ್ಲಿ ಇರುತ್ತದೆ:

ನಿಮ್ಮ ಪಡಿತರ ಚೀಟಿ ಅಥವಾ ರೇಶನ್ ಕಾರ್ಡನ ಮುಖ ಪುಟದ ಬಲ ಬದಿಯಲ್ಲಿ ಪಡಿತರ ಚೀಟಿಯ ಸಂಖ್ಯೆ/Ration card no ಕಾಲಂ ನ ಮುಂದೆ 12 ಅಂಕಿಯ  ರೇಶನ್ ಕಾರ್ಡ ನಂಬರ್ ನಮೂದಿಸಲಾಗಿರುತ್ತದೆ.

ಚಿತ್ರ ಸಹಿತ ವಿವರಣ:

ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!

ರೇಷ್ಮೆ ಕೃಷಿ ಮಾಡಲು 1 ಎಕರೆ ಪ್ರದೇಶದಲ್ಲಿ ಹೊಸ ಹಿಪ್ಪು ನೇರಳೆ ತೋಟ ಸ್ಥಾಪನೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಥಿಕವಾಗಿ ಸಹಾಯಧನವನ್ನು ಪಡೆಯಬವುದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ:

ಆಸಕ್ತ ರೈತರು ತಮ್ಮ ಭಾಗದ ಗ್ರಾಮ ಪಂಚಾಯತ ಭೇಟಿ ಮಾಡಿ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿ ಬೇಕಾಗುತ್ತದೆ. ನಂತರ ತಾಲ್ಲೂಕಿನ ರೇಷ್ಮೆ ಇಲಾಖೆಯ ಕಚೇರಿ ಭೇಟಿ ಮಾಡಿ ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಬೇಕಾಗುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕು.

ಕಾಮಗಾರಿ ಅನುಷ್ಥಾನ ವಿಧಾನ:

ಗ್ರಾಮ ಪಂಚಾಯತಿಯಲ್ಲಿ ಕ್ರಿಯಾ ಯೋಜನೆ ಅನುಮೋದನೆ ಅದ ನಂತರ ರೇಷ್ಮೆ ಇಲಾಖೆ ಅಧಿಕಾರಿಗಳು ಫಲಾನುಭವಿ ರೈತರಿಂದ ಅಗತ್ಯ ದಾಖಲಾತಿ ಪಡೆದು ಕಾಮಕಾರಿ ಆರಂಭಿಸಲು ವರ್ಕ್ ಆರ್ಡರ್ ಕೊಡುತ್ತಾರೆ.

2023-24 ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 1 ಎಕರೆ ಪ್ರದೇಶದಲ್ಲಿ ಹೊಸ ಹಿಪ್ಪು ನೇರಳೆ ತೋಟ ಸ್ಥಾಪನೆಗೆ ಬೇಕಾಗುವ ದಾಖಲಾತಿಗಳು ವಿವರ:

1. ಚಾಲ್ತಿ ಆರ್.ಟಿ.ಸಿ ಉತ್ತಾರ

2. ಆಧಾರ ಕಾರ್ಡ ಝರಾಕ್ಸ್‌ ಪ್ರತಿ

3. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್‌ ಪ್ರತಿ

4. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಇಲಾಖೆಗಳ ಮತ್ತು ಗ್ರಾಮ ಪಂಚಾಯತ್ 04 ಎನ್.ಓ.ಸಿ ಪತ್ರ.

5. ರೂ. 20 ಖಾಲಿ ಬಾಂಡ ( 1st ಪಾರ್ಟಿ- ಫಲಾನುಭವಿ 2nd ಪಾರ್ಟಿ ರೇಷ್ಮೆ ಇಲಾಖೆ)

6. ಜಾತಿ ಪ್ರಮಾಣ ಪತ್ರ (ಎಸ್.ಸಿ – ಎಸ್.ಟಿ ವರ್ಗದವರಿಗೆ ಮಾತ್ರ)

7. ಸಣ್ಣ ಹಿಡುವಳಿ ಪತ್ರ ( ಸಾಮಾನ್ಯ ವರ್ಗದವರಿಗೆ ಮಾತ್ರ)

8. ಜಂಟಿ ಖಾತೆ ಇದ್ದಲ್ಲಿ ರೂ.20 ಬಾಂಡ್ ಫಲಾನುಭವಿ ಬಿಟ್ಟು ಉಳಿದವರ ಒಪ್ಪಿಗೆ ಪತ್ರ (ನೋಟರಿ ಆಗಬೇಕು)

9. ಫಲಾನುಭವಿಯ ಜಾಬ್ ಕಾರ್ಡ ಝರಾಕ್ಸ್‌ ಪ್ರತಿ

10. ಪಾರ್ಮ್‌ ನಂ – 6 

11. ಹಿಪ್ಪು ನೇರಳೆ ತೋಟದ 2 ಹಂತದ ಪೋಟೋ.

12. ಫಲಾನುಭವಿ ನಿಂತಿರುವ ಖಾಲಿ ಜಮೀನಿನ ಪೋಟೋ.


ಇದನ್ನೂ ಓದಿ: ಕರ್ನಾಟಕ ಮಳೆ ಮುನ್ಸೂಚನೆ | 29-06-2023

13. ಕೂಲಿ ಆಳುಗಳಿಂದ ರೇಷ್ಮೆ ಸಸಿ ನಾಟಿ ಮಾಡುತ್ತಿರುವ ಪೋಟೊ (ಸೂಚನೆ : ಕಡ್ಡಿ ನಾಟಿ ಮಾಡುತ್ತಿರುವ ಪೋಟೊ ತೆಗೆಯಬೇಡಿರಿ)

14. ಗ್ರಾಮ ಪಂಚಾಯತ್ ಕ್ರೀಯಾ ಯೋಜನೆ ಪತ್ರ.

ರೇಷ್ಮೆ ಇಲಾಖೆ ಸಹಾಯವಾಣಿ: 9900881100

ನರ‍ೇಗಾ ಯೋಜನೆ ಸಹಾಯವಾಣಿ: 1800-425-8666

ರೇಷ್ಮೆ ಇಲಾಖೆ ವೆಬ್ಸೈಟ್: https://sericulture.karnataka.gov.in/