Yuva nidhi Application-ನಾಳೆಯಿಂದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ದಾಖಲೆಯಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

December 15, 2023 | Siddesh

ರಾಜ್ಯ ಸರಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ನಾಳೆಯಿಂದ ಅವಕಾಶ ಮಾಡಿಕೊಡಲಾಗಿದೆ. 

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬವುದಾಗಿದೆ.

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? ಯಾರು ಅರ್ಜಿ ಸಲ್ಲಿಸಲು ಬರುವುದಿಲ್ಲ, ಅರ್ಜಿ ಸಲ್ಲಿಸಲು ನೀವು ಸಿದ್ದಪಡಿಸಿಕೊಳ್ಳಬೇಕಾದ ದಾಖಲಾತಿಗಳೇನು? ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: PM-Vishwakarma Yojana-ಸ್ವ-ಉದ್ಯೋಗ ಆರಂಭಿಸಲು ಈ ಯೋಜನೆಯಡಿ ಯಾವುದೇ ಗ್ಯಾರಂಟಿಯಿಲ್ಲದೇ 3 ಲಕ್ಷ ಸಾಲ ಸಿಗುತ್ತದೆ!

Yuva nidhi yojana amount-ಈ ಯೋಜನೆಯಡಿ ಸಿಗುವ ಸಹಾಯಧನ ವಿವರ ಹೀಗಿದೆ:

2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವೀಧರರಾದವರಿಗೆ ಮಾಸಿಕ 3000 ರೂ ಡಿಪ್ಲೊಮಾ ತೇರ್ಗಡೆಯಾದವರಿಗೆ 1500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ.

Yuva nidhi yojana application-ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?

ನಿರುದ್ಯೋಗ ಭತ್ಯೆ ಪಡೆಯಲು ಬಯಸುವವರು 2022-23ನೇ ಸಾಲಿನಲ್ಲಿ ಪದವಿ/ ಡಿಪ್ಲೊಮಾ ತೇರ್ಗಡೆಯಾಗಿರಬೇಕು. 
ಕರ್ನಾಟಕದಲ್ಲಿಕನಿಷ್ಠ 6 ವರ್ಷದವರೆಗೆ ಪದವಿ/ ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿಕರ್ನಾಟಕದ ವಾಸಿಯಾಗಿರಬೇಕು.

ಇದನ್ನೂ ಓದಿ: Gruhalakshmi Camp-ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಹಣ ಬರದವರು ತಪ್ಪದೇ ಈ ದಿನ ನಿಮ್ಮ ಗ್ರಾಮ ಪಂಚಾಯತ್ ಭೇಟಿ ಮಾಡಿ.

ಯಾರು ಅರ್ಜಿ ಸಲ್ಲಿಸಲು ಬರುವುದಿಲ್ಲ:

  • ಸರಕಾರಿ, ಸರಕಾರಿ ಅನುದಾನಿತ ಸಂಸ್ಥೆ/ ಖಾಸಗಿ ವಲಯಗಳಲ್ಲಿಉದ್ಯೋಗದಲ್ಲಿರುವ ಅಭ್ಯರ್ಥಿಗಳು. 
  • ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳು. 
  • ವಿದ್ಯಾಭ್ಯಾಸವನ್ನು ಮುಂದುವರಿಸುವ ಅಭ್ಯರ್ಥಿಗಳು.

Yuva nidhi documents- ಈ ದಾಖಲೆಯಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ:

1) ಅರ್ಜಿದಾರರ ಆಧಾರ ಕಾರ್ಡ
2) ಮೊಬೈಲ್ ನಂಬರ, ಇಮೇಲ್‌ ಐಡಿ 
3) SSLC, PUC ಮಾರ್ಕ್ಸ್ ಕಾರ್ಡ
4) ಡಿಪ್ಲೊಮಾ/ಡಿಗ್ರಿ ಕೊನೆಯ ಮಾರ್ಕ್ಸ್ ಕಾರ್ಡ
5) ಆರು ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ದಾಖಲೆಗಳನ್ನು ಕೊಡಬೇಕು
  * ಡಿಗ್ರಿ ಮಾರ್ಕ್ಸ ಕಾರ್ಡ
  * ಡಿಪ್ಲೊಮಾ ಮಾರ್ಕ್ಸ ಕಾರ್ಡ
  * ರೇಷನ ಕಾರ್ಡ
  * CET ನಂಬರ
6) ಅಂಗವಿಕಲ ಪ್ರಮಾಣ ಪತ್ರ. ( ಇದ್ದರೆ ಮಾತ್ರ)

ಇದನ್ನೂ ಓದಿ: 1st installment-ಮೊದಲ ಕಂತಿನ ರೂ 2,000 ಹಣ ಬರ ಪರಿಹಾರ‍ ವರ್ಗಾವಣೆ ಪ್ರಾರಂಭ! ನಿಮಗೆ ಜಮಾ ಅಗಿದಿಯಾ? ಚೆಕ್ ಮಾಡಿ.

Yuva nidhi application date-ಅರ್ಜಿ ಸಲ್ಲಿಕೆ ಆರಂಭ ದಿನಾಂಕ:

ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯು ನಾಳೆ ಅಂದರೆ 26 ಡಿಸೆಂಬರ್ 2023 ರಿಂದ ಪ್ರಾರಂಭವಾಗಲಿದ್ದು ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ.

ಗಮನಿಸಬೇಕಾದ ಪ್ರಮುಖ ಅಂಶಗಳು:

ಅಭ್ಯರ್ಥಿಯ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೊತೆ ಲಿಂಕ್ ಆಗಿರಬೇಕು 
ಅಭ್ಯರ್ಥಿಯು ಸೇವಾಸಿಂಧು ಪೋರ್ಟಲ್‌ನಲ್ಲಿ ನಿರುದ್ಯೋಗಿ ಸ್ಥಿತಿ ಬಗ್ಗೆ ಪ್ರತಿ ತಿಂಗಳ 25 ಅಥವಾ ಅದಕ್ಕಿಂತ ಮೊದಲು ಆಧಾರ್‌ ಒಟಿಪಿ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು ಈ ದಾಖಲೆಯಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: LPG cylinder Ekyc-ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ಡಿ,31 ರ ಒಳಗಾಗಿ ಇ-ಕೆವೈಸಿ ವೈರಲ್ ಸುದ್ದಿ ಕುರಿತು ಅಧಿಕಾರಿಗಳಿಂದ ಸ್ಪಷ್ಟನೆ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: